ರಜನಿಕಾಂತ್ ಮಾಜಿ ಅಳಿಯ ಧನುಷ್ ಒಟ್ಟು ಆಸ್ತಿ ಎಷ್ಟು? ಬಂಗಲೆ, ಕಾರುಗಳು ಬಲು ದುಬಾರಿ!
ನಟ ಧನುಷ್ ಈಗ ಕೇವಲ ತಮಿಳು ನಟನಷ್ಟೇ ಅಲ್ಲ. ರಜನಿಕಾಂತ್ ಮಾಜಿ ಅಳಿಯ ಈಗ ಗ್ಲೋಬಲ್ ಸ್ಟಾರ್. ಇತ್ತೀಚೆಗಷ್ಟೇ ಧನುಷ್ ಅಭಿನಯದ ಹಾಲಿವುಡ್ ಸಿನಿಮಾ ಬಿಡುಗಡೆಯಾಗಿತ್ತು. ಸುಮಾರು 20 ವರ್ಷಗಳ ಕಾಲ ಬೇರೆ ಬೇರೆ ಭಾಷೆಯಲ್ಲಿ ನಟಿಸಿದ ಬಳಿಕ ಧನುಷ್ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಇಂದು ( ಜುಲೈ 28) ಧನುಷ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 39ನೇ ವಸಂತಕ್ಕೆ ಕಾಲಿಟ್ಟಿರುವ ಧನುಷ್ ಅಭಿನಯಕ್ಕೆ ಮೆಚ್ಚದವರೇ ಇಲ್ಲ. ಕೇವಲ ತನ್ನ ಪ್ರತಿಭೆಯಿಂದ ಗ್ಲೋಬಲ್ ಸ್ಟಾರ್ ಆಗಿ ಬೆಳೆದು ನಿಂತಿರುವ ಧನುಷ್ ಈಗ ವಿಶ್ವದ ಪ್ರಭಾವಿ ನಟರಲ್ಲಿ ಒಬ್ಬರು.
ಧನುಷ್ ಕೇವಲ ನಟನಷ್ಟೇ ಅಲ್ಲ. ಸಿನಿಮಾರಂಗದಲ್ಲಿ ನಿರ್ಮಾಪಕನಾಗಿ, ನಟನಾಗಿ ಮತ್ತು ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಕೋಟ್ಯಾಂತರ ಮಂದಿಯ ಹೃದಯ ಕದ್ದಿರುವ ಧನುಷ್ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಇಬ್ಬರು. ಇವರ ಬಳೀ ಇರುವ ಬಂಗಲೆ ಹಾಗೂ ಕಾರುಗಳ ಕಲೆಕ್ಷನ್ ಇದಕ್ಕೆ ಸಾಕ್ಷಿ. ಈಗಾಗಲೇ ಧನುಷ್ ಸಂಭಾವನೆ ಹಾಗೂ ಒಟ್ಟು ಆಸ್ತಿಯ ಮೌಲ್ಯದ ಬಗ್ಗೆ ಹಲವು ವರದಿಗಳು ಬಂದಿದ್ದು, ಅವುಗಳ ಆಧಾರದ ಮೇಲೆ ವರದಿಯಾದ ಆಸ್ತಿಯ ಮೌಲ್ಯ ಹೀಗಿದೆ.

ಧನುಷ್ ಒಂದು ದಿನದ ಸಂಭಾವನೆ ಎಷ್ಟು?
ಧನುಷ್ ಮೂಲ ಆದಾಯ ಸಿನಿಮಾ. ವರ್ಷದಿಂದ ವರ್ಷಕ್ಕೆ ಧನುಷ್ ಸಂಭಾವನೆ ಹೆಚ್ಚಾಗುತ್ತಲೇ ಇದೆ. ಸದ್ಯಕ್ಕೀಗ ಧನುಷ್ ಒಂದು ಸಿನಿಮಾಗೆ 7 ಕೋಟಿಯಿಂದ 8 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಇದರೊಂದಿಗೆ ಜಾಹೀರಾತಿನಿಂದಲೂ ಕೋಟಿಯಲ್ಲಿ ಹಣ ಪಡೆಯುತ್ತಾರೆ. ಒಂದು ಜಾಹೀರಾತಿಗೆ ಸುಮಾರು 2 ಕೋಟಿಯಿಂದ 3 ಕೋಟಿ ರೂ.ಅಷ್ಟು ಹಣ ಗಳಿಕೆ ಮಾಡುತ್ತಾರೆ. ಅಲ್ಲದೆ ಅವರದ್ದೇ ವಂಡರ್‌ಬಾರ್ ನಿರ್ಮಾಣ ಸಂಸ್ಥೆಯಿಂದ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದಲೂ ಹಣಗಳಿಸುತ್ತಿದ್ದಾರೆ. ಈಗಾಗಲೇ ಹಲವೆಡೆ ವರದಿಯಾಗಿರುವ ಪ್ರಕಾರ, ವರ್ಷಕ್ಕೆ 160 ಕೋಟಿ ರೂ. ಆದಾಯ ಬರಲಿದೆ.

2022ರ ವರೆಗೆ ಧನುಷ್ ಒಟ್ಟು ಆಸ್ತಿ ಎಷ್ಟು?
2022ರವರೆಗೆ ಸೂಪರ್‌ಸ್ಟಾರ್ ರಜನಿಕಾಂತ್ ಮಾಜಿ ಅಳಿಯ ಧನುಷ್ ಒಟ್ಟು ಆಸ್ತಿ 160 ಕೋಟಿ ರೂ. ಎಂದು ವರದಿಯಾಗಿದೆ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಧನುಷ್ ಕೂಡ ಒಬ್ಬರಾಗಿದ್ದು, ಒಂದು ತಿಂಗಳಿಗೆ ಸುಮಾರು 1 ಕೋಟಿ ರೂ. ಆದಾಯವಿದೆ ಎನ್ನಲಾಗಿದೆ. ಇದರೊಂದಿಗೆ ದುಬಾರಿ ಬಂಗಲೆ ಹಾಗೂ ಕಾರುಗಳ ದೊಡ್ಡ ಪಟ್ಟಿನೇ ಇದೆ.

ಧನುಷ್ ಬಳಿಕ ದುಬಾರಿ ಕಾರು ಹಾಗು ಬಂಗಲೆ
ಧನುಷ್ ಬಳಿಕ ದುಬಾರಿ ಬಂಗಲೆಗಳು ಹಾಗೂ ಕಾರುಗಳಿವೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಪತ್ನಿ ಐಶ್ವರ್ಯಾ ರಜನಿಕಾಂತ್‌ಗೆ ವಿಚ್ಛೇದನ ನೀಡುವುದಕ್ಕೂ ಮುನ್ನ ಮಾವನ ಮನೆಯ ಏರಿಯಾ ಪೋಯಿಸ್ ಗಾರ್ಡನ್‌ನಲ್ಲಿಯೇ ದುಬಾರಿ ಬಂಗಲೆ ಕಟ್ಟಿಸುತ್ತಿದ್ದರು. ಇದರ ಬೆಲೆ ಸುಮಾರು 20 ಕೋಟಿ ರೂ.ಗೂ ಅಧಿಕ ಎನ್ನಲಾಗಿದೆ. ಹಾಗೇ ದುಬಾರಿ ಕಾರುಗಳು ಕೂಡ ಇವರ ಬಳಿ ಇವೆ ಎಂದು ಕೋಯ್ ಮೋಯ್ ವರದಿ ಮಾಡಿದೆ.
ಧನುಷ್ ಬಳಿ ಇರುವ ಕಾರುಗಳು
ಜಾಗ್ವರ್ ಎಕ್ಸ್‌ಇ 45 ಲಕ್ಷ ರೂ.
ಫೋರ್ಡ್ ಮಸ್ಟಂಗ್ 75 ಲಕ್ಷ ರೂ.
ಔಡಿ 8 1.65 ಕೋಟಿ ರೂ.
ಬೆಂಟ್ಲಿ ಕಾಂಟಿನೆಂಟಲ್ 3.40 ಕೋಟಿ ರೂ.
ರೊಲ್ಸ್ ರಾಯ್ಸ್ ಗೋಸ್ಟ್ 7 ಕೋಟಿ ರೂ.

ಹಾಲಿವುಡ್ ಸಿನಿಮಾ ಸಂಭಾವನೆ ಎಷ್ಟು?
ಧನುಷ್ ಅಭಿನಯದ ಹಾಲಿವುಡ್ ಸಿನಿಮಾ 'ದಿ ಗ್ರೇ ಮ್ಯಾನ್' ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿದೆ. ಮೂಲಗಳ ಪ್ರಕಾರ, ಈ ಸಿನಿಮಾಗಾಗಿ ಧನುಷ್ ಪಡೆದ ಸಂಭಾವನೆ ಬರೋಬ್ಬರಿ 4 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಇದೇ ವೇಳೆ ಧನುಷ್‌ಗೆ ಸೂಪರ್‌ಸ್ಟಾರ್ ಪಟ್ಟ ಕೊಟ್ಟ ಸಿನಿಮಾ ನೆನಪಿಸಿಕೊಳ್ಳಲೇಬೇಕು. 'ತಿರುಡಾ ತಿರುಡಿ', 'ಥಿರುವಿಲಯಾದಲ್ ಆರಂಭಂ', 'ಪೊಲ್ಲಾದವನ್, ವಡಾ ಚೆನ್ನೈ' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿವೆ.


Click it and Unblock the Notifications











