ಸೌತ್‌ನಲ್ಲಿ 'ಮಹಾನಟಿ' ಫುಲ್ ಬ್ಯುಸಿ: ಕೀರ್ತಿ ಸುರೇಶ್ ಸಂಪಾದಿಸಿದ ಆಸ್ತಿಯ ಮೌಲ್ಯವೆಷ್ಟು?

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ. ದಳಪತಿ ವಿಜಯ್ ಜೊತೆ ಕೀರ್ತಿ ಸುರೇಶ್ ವಿವಾಹವಾಗುತ್ತಾರೆ ಅನ್ನೋದ್ರಿಂದ ಹಿಡಿದು ಬಾಲ್ಯ ಗೆಳೆಯನ ಮದುವೆವರೆಗೂ ಸುದ್ದಿಯಲ್ಲಿದ್ದರು. ಕೀರ್ತಿ ತಾಯಿ ಹೇಳಿಕೆ ನೀಡಿದ ಬಳಿಕ ಈ ಎಲ್ಲಾ ಗಾಳಿಸುದ್ದಿಗಳೀಗ ತಣ್ಣಗಾಗಿದೆ.

ಕೀರ್ತಿ ಸುರೇಶ್ ಮಲಯಾಳಂ ನಿರ್ದೇಶಕ ಜಿ ಸುರೇಶ್ ಕುಮಾರ್ ಹಾಗೂ ನಟಿ ಮೇನಕಾ ಪುತ್ರಿ. 2000ದಲ್ಲಿಯೇ ಮಲಯಾಳಂ ಸಿನಿಮಾ 'ಪೈಲಟ್‌'ನಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಲೀಡ್ ಹೀರೊಯಿನ್ ಆಗಿ ಯಶಸ್ಸು ಕಂಡಿದ್ದಾರೆ.

ಅತೀ ಕಡಿಮೆ ಸಮಯದಲ್ಲಿ ರಜನಿಕಾಂತ್, ಮಹೇಶ್ ಬಾಬು, ನಾನಿ, ನಿತೀನ್, ದುಲ್ಖರ್ ಸಲ್ಮಾನ್, ದಳಪತಿ ವಿಜಯ್, ಸೂರ್ಯ, ಕಾರ್ತಿ, ಧನುಷ್ ಅಂತಹ ಸ್ಟಾರ್ ನಟರೊಂದಿಗೆ ನಟಿಸಿ ಗೆದ್ದಿದ್ದಾರೆ. ಇತ್ತೀಚೆಗೆ ಸಾಲು ಸಾಲು ಸಿನಿಮಾಗಳು ಸೋತಿದ್ದರೂ, ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಗ್ರೀನ್ ಸಿಗ್ನಲ್ ಕೊಟ್ಟ ಸಿನಿಮಾವೊಂದಕ್ಕೆ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಅನ್ನೋ ಸುದ್ದಿಯಿದೆ. ಹಾಗಿದ್ರೆ, ಕೀರ್ತಿ ಸುರೇಶ್ ಸಂಪಾದನೆ ಏನು? ಈ ನಟಿಯ ಬಳಿ ಇರುವ ಆಸ್ತಿ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಮಹಾನಟಿ' ಬಳಿ ಇರುವ ಆಸ್ತಿ ಎಷ್ಟು?

'ಮಹಾನಟಿ' ಬಳಿ ಇರುವ ಆಸ್ತಿ ಎಷ್ಟು?

ಕೀರ್ತಿ ಸುರೇಶ್‌ಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟ ಸಿನಿಮಾ 'ಮಹಾನಟಿ'. ಈ ಸಿನಿಮಾ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿದೆ. ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. 2022ರಲ್ಲಿ ಹೊತ್ತಿಗೆ ಕೀರ್ತಿ ಸುರೇಶ್ ಬಳಿಕ ಅಂದಾಜು 30 ಕೋಟಿ ರೂ. ಆಸ್ತಿ ಹೊಂದಿದ್ದಾರೆಂದು ಪ್ರಮುಖ ವೆಬ್‌ಸ್ಟೈಟ್‌ಗಳು ವರದಿ ಮಾಡಿವೆ. ಸಿನಿಮಾ, ಜಾಹೀರಾತು ಸೇರಿದಂತೆ ಹಲವು ಮೂಲಗಳಿಂದ ಇಷ್ಟು ಆಸ್ತಿ ಸಂಪಾದಿಸಿದ್ದಾರೆ.

ಕೀರ್ತಿ ಸುರೇಶ್ ಒಂದು ಸಿನಿಮಾ ಸಂಭಾವನೆ ಎಷ್ಟು?

ಕೀರ್ತಿ ಸುರೇಶ್ ಒಂದು ಸಿನಿಮಾ ಸಂಭಾವನೆ ಎಷ್ಟು?

ಕೀರ್ತಿ ಸುರೇಶ್ ಸಾಮಾನ್ಯವಾಗಿ ಒಂದು ಸಿನಿಮಾಗೆ 2 ರಿಂದ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆಂದು ಅಂದಾಜಿಸಲಾಗಿದೆ. ಸದ್ಯ ನಾನಿ ಜೊತೆ ನಟಿಸುತ್ತಿರುವ 'ದಸಾರ' ಸಿನಿಮಾಗೆ ಕೀರ್ತಿ ಸುಮಾರು 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆಂದು ವರದಿಯಾಗಿದೆ. ಹೀಗಾಗಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಕೀರ್ತಿ ಸುರೇಶ್ ಪ್ರಮುಖ ಸ್ಥಾನದಲ್ಲಿದ್ದಾರೆ.

ಕೀರ್ತಿ ಬಳಿ ದುಬಾರಿ ಕಾರುಗಳು

ಕೀರ್ತಿ ಬಳಿ ದುಬಾರಿ ಕಾರುಗಳು

ಕೀರ್ತಿ ಸುರೇಶ್ ಗ್ಯಾರೇಜ್‌ನಲ್ಲಿ ದುಬಾರಿ ಕಾರುಗಳಿವೆ. ಕೀರ್ತಿ ಬಳಿಕ ವೋಲ್ವೋ ಎಸ್ 90 ಕಾರಿದೆ. ಇದರ ಬೆಲೆ 60 ಲಕ್ಷ ರೂ., ಸುಮಾರು 1.38 ಕೋಟಿ ರೂ. ಬೆಲೆಯ ಬಿಎಂಡ್ಲ್ಯೂ 7 ಸಿರೀಸ್ 730 ಎಲ್‌ಡಿ ಇದೆ. 81 ಲಕ್ಷದ ಮರ್ಸಿಡೀಸ್ ಬೆನ್ಜ್ ಎಎಂಜಿ, 25 ಲಕ್ಷದ ಟೊಯೋಟಾ ಇನೋವಾ ಕ್ರಿಸ್ಟಾ ಕಾರುಗಳಿವೆ.

ಐಶಾರಾಮಿ ಫ್ಲ್ಯಾಟ್

ಕೀರ್ತಿ ಸುರೇಶ್ ಹಲವು ಪ್ರಾಪರ್ಟಿಗಳಿಗೆ ಹಣ ಹೂಡಿಕೆ ಮಾಡಿದ್ದಾರೆ. ಚೈನ್‌ನಲ್ಲಿ ಐಶಾರಾಮಿ ಫ್ಲ್ಯಾಟ್‌ ಇದೆ. ಇದರಲ್ಲಿ ಕೀರ್ತಿ ಸುರೇಶ್ ತಮ್ಮ ಪೋಷಕರೊಂದಿಗೆ ವಾಸವಿದ್ದಾರೆ. ತೆಲುಗು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿರೋದ್ರಿಂದ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ದುಬಾರಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ.

ಜಾಹೀರಾತುಗಳಿಂದ ಸಂಪಾದನೆ

ಜಾಹೀರಾತುಗಳಿಂದ ಸಂಪಾದನೆ

'ಮಹಾನಟಿ' ಹಲವು ಜಾಹೀರಾತುಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಸದ್ಯ ರಿಲಯನ್ಸ್ ಟ್ರೆಂಡ್ಸ್, ಉಶಾ ಇಂಟರ್‌ನ್ಯಾಷನಲ್, ಜೋಸ್ ಅಲುಕ್ಕಾಸ್ ಸೇರಿದಂತೆ ಹಲವು ಬ್ರ್ಯಾಂಡ್ ರಾಯಬಾರಿಯಾಗಿದ್ದರು. ಮೂಲಗಳ ಪ್ರಕಾರ, ಒಂದು ಜಾಹೀರಾತಿಗೆ 15 ಲಕ್ಷದಿಂದ ಸುಮಾರು 20 ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ಕೀರ್ತಿ ಬಳಿಕ ಬಿಗ್ ಸಿನಿಮಾ

ಕೀರ್ತಿ ಬಳಿಕ ಬಿಗ್ ಸಿನಿಮಾ

ಕೀರ್ತಿ ಸುರೇಶ್ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆ 'ಭೋಲಾ ಶಂಕರ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಏಪ್ರಿಲ್‌ 2023ರಲ್ಲಿ ರಿಲೀಸ್ ಆಗಲಿದೆ. ಅಲ್ಲದೆ ನಾನಿಯ 'ದಸಾರ'ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಾರ್ಚ್ 30ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

More from Filmibeat

English summary
Telugu Tamil Actress Keerthy Suresh Net Worth,Salary,Property,Cars Details, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X