For Quick Alerts
  ALLOW NOTIFICATIONS  
  For Daily Alerts

  ಅಜಿತ್- ಶಾಲಿನಿ ಪ್ರೇಮ ಪ್ರಸಂಗಕ್ಕೆ ಕಾರಣವಾಗಿದ್ದು ಆ ಒಂದು ದುರಂತ ಘಟನೆ

  |

  ಕಾಲಿವುಡ್‌ನ ಅತ್ಯಂತ ಮುದ್ದಾದ ಜೋಡಿಗಳಲ್ಲಿ ತಲಾ ಅಜಿತ್ ಮತ್ತು ಶಾಲಿನಿ ಜೋಡಿ ಒಂದು. ಅವರ ಪ್ರೇಮಕಥೆ ಸಾಕಷ್ಟು ಸುದ್ದಿಯಾಗಿತ್ತು. ಚಿತ್ರರಂಗದಲ್ಲಿ ಪ್ರೇಮ ವಿವಾಹವಾಗಿ ಯಶಸ್ವಿಯಾಗಿ ಸಾಂಸಾರಿಕ ಬದುಕು ಸಾಗಿಸುತ್ತಿರುವ ಈ ಜೋಡಿ ಅನೇಕರಿಗೆ ಮಾದರಿ. ನೈಜ ಪ್ರೇಮ ಎನ್ನುವುದು ಈಗಲೂ ಅಸ್ತಿತ್ವದಲ್ಲಿದೆ ಎಂಬ ನಂಬಿಕೆ ಮೂಡಿಸುವಂತಿದ್ದಾರೆ ಅಜಿತ್ ಮತ್ತು ಶಾಲಿನಿ.

  ನಟಿ ಶ್ರೀದೇವಿಯ ದೊಡ್ಡ ಕನಸನ್ನು ನನಸು ಮಾಡಿದ ಪತಿ ಬೋನಿ ಕಪೂರ್ | Sridevi | FILMIBEAT KANNADA

  ಇವರಿಬ್ಬರ ಲವ್ ಕಹಾನಿ ಸಾಕಷ್ಟು ಆಸಕ್ತಿಕರವಾಗಿದೆ. ಇದು ಮೊದಲ ನೋಟದ ಪ್ರೀತಿಯಲ್ಲ. ಆದರೆ ಸಾಮಾನ್ಯ ಪ್ರೇಮ ಪ್ರಕರಣವೂ ಅಲ್ಲ. ಕೇರಳ ಮೂಲದವರಾದ ಶಾಲಿನಿ ಮೊದಲು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದವರು, ಬಳಿಕ ತಮಿಳಿಗೆ ಎಂಟ್ರಿ ಕೊಟ್ಟಿದ್ದರು. ಅವರ ಮತ್ತು ಅಜಿತ್ ಪ್ರೇಮಾಂಕುರಕ್ಕೆ ಕಾರಣವಾಗಿದ್ದು 'ಅಮರ್ಕಳಂ' ಚಿತ್ರದ ದುರಂತ ಸನ್ನಿವೇಶ. ಮುಂದೆ ಓದಿ...

  ಖಾಸಗಿ ವಿಡಿಯೋ ವೈರಲ್ ವಿವಾದ: ಪ್ರತಿಕ್ರಿಯೆ ನೀಡಿದ ನಟಿ ಲೋಸ್ಲಿಯಾ

  ಶಾಲಿನಿ ಕೈಗೆ ಗಾಯ

  ಶಾಲಿನಿ ಕೈಗೆ ಗಾಯ

  'ಅಮರ್ಕಳಂ' ಚಿತ್ರೀಕರಣದ ವೇಳೆ ಅಜಿತ್ ಚಾಕು ಹಿಡಿದು ಶಾಲಿನಿಗೆ ಬೆದರಿಸುವ ಸನ್ನಿವೇಶವಿತ್ತು. ಆದರೆ ಅದರಲ್ಲಿ ಶಾಲಿನಿ ಅವರ ಕೈಗೆ ಚಾಕು ತಗುಲಿ ನಿಜಕ್ಕೂ ತೀವ್ರ ಗಾಯವಾಗಿತ್ತು. ಅದರಿಂದ ಅಜಿತ್ ಬಹಳ ನೊಂದುಕೊಂಡರು. ಚಿತ್ರೀಕರಣದುದ್ದಕ್ಕೂ ಶಾಲಿನಿ ಅವರ ಕಾಳಜಿ ಮಾಡಿದರು. ಈ ಕಾಳಜಿ, ಆರೈಕೆ ಕೊನೆಗೆ ಇಬ್ಬರ ಪ್ರೇಮಕ್ಕೆ ತಿರುಗಿತು.

  ಆದರೆ ಅವರು ಮೊದಲು ಭೇಟಿಯಾಗಿದ್ದು ಈ ಚಿತ್ರದ ಮೂಲಕವೇನಲ್ಲ. 'ಕಾದಲಕ್ಕು ಮರಿಯಾದೈ' ಚಿತ್ರದ ಬಳಿಕ ಶಾಲಿನಿ ತಮ್ಮ 12ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆಗ 'ಅಮರ್ಕಳಂ' ಚಿತ್ರಕ್ಕಾಗಿ ಅವರನ್ನು ಸಂಪರ್ಕಿಸಲಾಗಿತ್ತು.

  ಶಾಲಿನಿಗಾಗಿ ಪಟ್ಟು ಹಿಡಿದ ನಿರ್ದೇಶಕ

  ಶಾಲಿನಿಗಾಗಿ ಪಟ್ಟು ಹಿಡಿದ ನಿರ್ದೇಶಕ

  ಆದರೆ ಓದಿನ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ತೀರ್ಮಾನಿಸಿದ್ದ ಶಾಲಿನಿ, ಸಿನಿಮಾದ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ಹಾಗೆಂದು ನಿರ್ದೇಶಕ ಶರಣ್ ಸುಮ್ಮನೆ ಬಿಡಲು ಸಿದ್ಧರಿರಲಿಲ್ಲ. ಅಜಿತ್ ಎದುರು ಶಾಲಿನಿ ಅವರನ್ನೇ ನಾಯಕಿಯನ್ನಾಗಿ ಹಾಕಿಕೊಳ್ಳಬೇಕು ಎಂದು ಪಟ್ಟುಹಿಡಿದಿದ್ದರು. ಈ ಆಫರ್‌ಅನ್ನು ಅವರು ತಿರಸ್ಕರಿಸಿದ ಬಳಿಕ ಅಜಿತ್ ಸ್ವತಃ ಅವರಿಗೆ ಕರೆ ಮಾಡಿ ನಿರ್ಧಾರದ ಬಗ್ಗೆ ಕೇಳಿದ್ದರು.

  "ಕಾಲಿವುಡ್ ಹೆಮ್ಮೆ ವಿಕ್ರಮ್": ಚಿಯಾನ್ ವಿಕ್ರಮ್ ನಿವೃತ್ತಿ ವದಂತಿ ಬೆನ್ನಲೆ ಫ್ಯಾನ್ಸ್ ಟ್ರೆಂಡ್

  ಮನವೊಲಿಸಿದ ಅಜಿತ್

  ಮನವೊಲಿಸಿದ ಅಜಿತ್

  ಓದಿಗೆ ಆದ್ಯತೆ ನೀಡಲು ಶಾಲಿನಿ ಬಯಸಿದ್ದರು. ಕೊನೆಗೆ ಒಂದು ನಿರ್ಧಾರಕ್ಕೆ ಬಂದ ಅಜಿತ್ ಮತ್ತು ಶರಣ್, ಅವರ ಪರೀಕ್ಷೆಗಳು ಪೂರ್ಣಗೊಂಡ ಬಳಿಕವೇ ಶೂಟಿಂಗ್ ಆರಂಭಿಸುವುದಾಗಿ ತಿಳಿಸಿದರು. ಅದರ ನಡುವೆ ಅಜಿತ್ ಅವರ 'ಕಾದಲ್ ಮನ್ನನ್' ಚಿತ್ರದ ಪ್ರೀಮಿಯರ್‌ನಲ್ಲಿ ಶಾಲಿನಿ ಪಾಲ್ಗೊಂಡಿದ್ದರು.

  ಅಜಿತ್ ಕಾಮೆಂಟ್‌ಗೆ ಸಿಟ್ಟಾಗಿದ್ದ ಶಾಲಿನಿ

  ಅಜಿತ್ ಕಾಮೆಂಟ್‌ಗೆ ಸಿಟ್ಟಾಗಿದ್ದ ಶಾಲಿನಿ

  2010ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಶಾಲಿನಿ, ಈ ಪ್ರೀಮಿಯರ್ ಶೋದಲ್ಲಿ ಅಜಿತ್ ಜತೆ ಭೇಟಿಯ ಸಂದರ್ಭದ ಬಗ್ಗೆ ಮಾತನಾಡಿದ್ದರು. ತಮ್ಮ ಹೇರ್ ಸ್ಟೈಲ್ ಬಗ್ಗೆ ಅಜಿತ್ ಕಾಮೆಂಟ್ ಮಾಡಿದ್ದು ಅವರಿಗೆ ಕಸಿವಿಸಿ ಉಂಟುಮಾಡಿತ್ತಂತೆ. 'ನನ್ನ ತಲೆಗೂದಲನ್ನು ಕರ್ಲಿಯಾಗಿಸಿಕೊಂಡಿದ್ದೆ. ನನ್ನ ಕೈ ಕುಲುಕಿದ ಅಜಿತ್, ಗುಂಗುರು ಕೂದಲು ಹೊಂದಿಕೆಯಾಗುವುದಿಲ್ಲ ಎಂದರು. ಅದು ನನ್ನನ್ನು ಕೆರಳಿಸಿತ್ತು. ನನ್ನ ಮುಖ ನೋಡಿದ ಅವರು ಕೂಡಲೇ, 'ದಯವಿಟ್ಟು ತಪ್ಪು ತಿಳಿಯಬೇಡಿ, 'ಕಾದಲುಕ್ಕು ಮರಿಯಾದೈ' ಚಿತ್ರದಲ್ಲಿ ಮುಕ್ತವಾಗಿ ಹಾರಾಡುತ್ತಿದ್ದ ನಿಮ್ಮ ಕೂದಲು ನಿಜಕ್ಕೂ ಚೆನ್ನಾಗಿತ್ತು' ಎಂದರು. ಅವರ ಪ್ರಾಮಾಣಿಕ ಮಾತುಗಳನ್ನು ನಾನು ಮೆಚ್ಚಿಕೊಂಡಿದ್ದೆ' ಎಂದು ತಿಳಿಸಿದ್ದಾರೆ.

  ನಾನೊಂದು ನದಿ, ಸಾಗರ ಸಿಕ್ಕಿತು

  ನಾನೊಂದು ನದಿ, ಸಾಗರ ಸಿಕ್ಕಿತು

  'ಅಮರ್ಕಳಂ' ಬಿಡುಗಡೆಯ ಬಳಿಕ ಈ ಜೋಡಿ ತಾವು ಪರಸ್ಪರ ಪ್ರೀತಿಸುತ್ತಿರುವುದನ್ನು ಹೇಳಿಕೊಂಡಿತು. 1999ರಲ್ಲಿ ಸಂದರ್ಶನವೊಂದರಲ್ಲಿ ಅಜಿತ್, ತಮ್ಮ ಮತ್ತು ಶಾಲಿನಿ ಸಂಬಂಧದ ಬಗ್ಗೆ ಮಾತನಾಡಿದ್ದರು. 'ನಾನು ನದಿಯಂತೆ. ನನ್ನ ಬದುಕು ಅನೇಕ ತಿರುವುಗಳನ್ನು ಪಡೆದುಕೊಂಡಿದೆ. ಅನೇಕ ಬಂಡೆಗಳಿಗೆ ಡಿಕ್ಕಿ ಹೊಡೆದಿದೆ. ನನ್ನ ಹೆಗಲ ಮೇಲೆ ಅನೇಕ ಸಂಗತಿಗಳನ್ನು ಹೊತ್ತು ಸಾಗಿದ್ದೇನೆ. ಈಗ ನನಗಾಗಿ ಸಾಗರವೊಂದನ್ನು ಕಂಡಿದ್ದೇನೆ. ಇದು ನನಗೆ ಸಹಾಯ ಮಾಡಲಿದೆ ಮತ್ತು ನನ್ನ ಉತ್ಸಾಹವನ್ನು ಹೆಚ್ಚಿಸಲಿದೆ ಎಂದು ನಂಬಿದ್ದೇನೆ' ಎಂದಿದ್ದರು.

  ಖ್ಯಾತ ಉದ್ಯಮಿ ಜೊತೆ ಮದುವೆ ವದಂತಿ: ಗರಂ ಆದ ಕೀರ್ತಿ ಸುರೇಶ್

  ನಟನೆ ಸಾಕು ಎಂದು ನಿರ್ಧರಿಸಿದ ಶಾಲಿನಿ

  ನಟನೆ ಸಾಕು ಎಂದು ನಿರ್ಧರಿಸಿದ ಶಾಲಿನಿ

  2000ರಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿರಿಸಿದರು. ಅವರ ಮದುವೆಗೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ಮದುವೆ ನಂತರ ಶಾಲಿನಿ ನಟನೆಗೆ ಗುಡ್ ಬೈ ಹೇಳಲು ನಿರ್ಧರಿಸಿದರು. 'ನಟನೆಯನ್ನು ಎಂಜಾಯ್ ಮಾಡಿದ್ದೆ. ಆದರೆ ಅಜಿತ್ ಹೆಚ್ಚು ಉತ್ತೇಜನ ನೀಡುತ್ತಿದ್ದರು. ವೃತ್ತಿ ತೊರೆಯುವುದರ ಬಗ್ಗೆ ಮತ್ತೆ ಯೋಚಿಸುವುದಿಲ್ಲ. ಮನೆ ಮತ್ತು ವೃತ್ತಿ ಬದುಕು ಎರಡನ್ನೂ ನಿಭಾಯಿಸಬಲ್ಲಂತಹ ವ್ಯಕ್ತಿ ನಾನಲ್ಲ. ನನ್ನ ಆದ್ಯತೆಗಳ ಬಗ್ಗೆ ನನಗೆ ಸ್ಪಷ್ಟತೆಯಿದೆ' ಎಂದು ಶಾಲಿನಿ ಹೇಳಿದ್ದರು.

  20 ವರ್ಷದ ಸಾಂಸಾರಿಕ ಬದುಕು

  20 ವರ್ಷದ ಸಾಂಸಾರಿಕ ಬದುಕು

  ಈ ಜೋಡಿಯ ವೈವಾಹಿಕ ಬದುಕಿಗೆ ಈಗ 20 ವರ್ಷ. ಅನೋಷ್ಕಾ ಮತ್ತು ಆದ್ವಿಕ್ ಎಂಬ ಮಕ್ಕಳಿದ್ದಾರೆ. ಮದುವೆಯಾಗಿ ಎರಡು ದಶಕಗಳಾದರೂ ಅಜಿತ್ ಮತ್ತು ಶಾಲಿನಿ ನಡುವಿನ ಪ್ರೀತಿ, ಬಾಂಧವ್ಯ ಕೊಂಚವೂ ಸಡಿಲವಾದ ಗಾಳಿಸುದ್ದಿ ಕೂಡಹರಿದಾಡಿರಲಿಲ್ಲ. ಈ ಜೋಡಿ ಅನೇಕರಿಗೆ ಮಾದರಿ.

  English summary
  A tragic incident lead to the fairytale love story of Kollywood hero Thala Ajith and Shalini. Here is the details how it was happen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X