Vijay - Rashmika Movie: ವಿಜಯ್-ರಶ್ಮಿಕಾ ಸಿನಿಮಾಗೆ ಮುಹೂರ್ತ, ದಿಲ್ ರಾಜು- ವಂಶಿ ಪ್ರಾಜೆಕ್ಟ್ ಆರಂಭ

ಎಲ್ಲಿ ನೋಡಿದರೂ ರಶ್ಮಿಕಾ ಮಂದಣ್ಣ ಬಗ್ಗೆನೇ ಸುದ್ದಿ. ಉತ್ತರಕ್ಕೆ ಹೋದರೂ ರಶ್ಮಿಕಾ ಮಂದಣ್ಣ. ದಕ್ಷಿಣಕ್ಕೆ ಬಂದರೂ ರಶ್ಮಿಕಾ ಮಂದಣ್ಣ. ಅಸಲಿಗೆ ಈ ಕಿರಿಕ್ ಬೆಡಗಿ ಹೋದಲ್ಲೆಲ್ಲಾ ತನ್ನದೇ ಬ್ರ್ಯಾಂಡ್ ಹುಟ್ಟಾಕುತ್ತಿದ್ದಾರೆ. ಇನ್ನೊಂದು ಕಡೆ ದಳಪತಿ ವಿಜಯ್ ಸಿನಿಮಾಗಳು ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿವೆ.

ಸೂಪರ್‌ಸ್ಟಾರ್ ವಿಜಯ್ ಟಾಲಿವುಡ್‌ ಚಿತ್ರರಂಗದಲ್ಲಿ ಸೋಲಿಲ್ಲದ ಸರದಾರ ಎಂಬುದು ಸಾಬೀತಾಗಿದೆ. 'ಮಾಸ್ಟರ್', 'ಬಿಗಿಲ್', 'ಸರ್ಕಾರ್', 'ಮರ್ಸೆಲ್' ಬಾಕ್ ಟು ಬ್ಯಾಕ್ ನಾಲ್ಕು ಸಿನಿಮಾಗಳ ಬ್ಲಾಕ್‌ಬಸ್ಟರ್ ಹಿಟ್ ಆಗಿವೆ. ಕಳೆದ ಆರು ವರ್ಷಗಳಿಂದ ವಿಜಯ್ ಅಭಿನಯದ ಒಂದೇ ಒಂದು ಸಿನಿಮಾ ಕೂಡ ಸೋತಿಲ್ಲ.

ಇನ್ನೊಂದು ಕಡೆ ಟಾಲಿವುಡ್‌ನ ಸ್ಟಾರ್ ಡೈರೆಕ್ಟರ್ ವಂಶಿ ಪೈಡಿಪಲ್ಲಿ. ಮತ್ತೊಂದು ಕಡೆ ಸ್ಟಾರ್ ನಿರ್ಮಾಪಕ ದಿಲ್ ರಾಜು. ಈ ನಾಲ್ವರೂ ಸೇರಿ ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲೂ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದೇ ಸಿನಿಮಾದ ಮುಹೂರ್ತ ಇಂದು (ಏಪ್ರಿಲ್ 06) ಅದ್ಧೂರಿಯಾಗಿ ಸೆಟ್ಟೇರಿದೆ.

Recommended Video

ದಾಖಲೆ ಮೇಲೆ ದಾಖಲೆ ಬರೀತಾ ಇದೆ 'KGF2' | Yash | Raveena Tandon | Sanjay Dutt | Prashanth Neel
ರಶ್ಮಿಕಾ-ವಿಜಯ್ ಸಿನಿಮಾಗೆ ಚಾಲನೆ

ರಶ್ಮಿಕಾ-ವಿಜಯ್ ಸಿನಿಮಾಗೆ ಚಾಲನೆ

ದಳಪತಿ ವಿಜಯ್ ಅಭಿನಯದ 66ನೇ ಸಿನಿಮಾಗೆ ಅಧಿಕೃತ ಚಾಲನೆ ಸಿಕ್ಕಿದೆ. ಇಂದು ( ಏಪ್ರಿಲ್ 06) ರಶ್ಮಿಕಾ ಹಾಗೂ ವಿಜಯ್ ಕಾಂಬಿನೇಷನ್ ಮೊದಲ ಸಿನಿಮಾ ಗ್ರ್ಯಾಂಡ್ ಆಗಿ ಮುಹೂರ್ತ ಕಂಡಿದೆ. ಇಲ್ಲಿವರೆಗೂ ಕೇವಲ ಊಹಾ-ಪೋಹಗಳಿತ್ತು. ಅದಕ್ಕೀಗ ಅಧಿಕೃತ ಚಾಲನೆ ಸಿಕ್ಕಿದೆ. ಈ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಲು ದಳಪತಿ ವಿಜಯ್ ಅಖಾಡಕ್ಕಿಳಿದಿದ್ದಾರೆ. ಈ ಮೂಲಕ ಟಾಲಿವುಡ್‌ ಬಾಕ್ಸಾಫೀಸ್‌ಗೂ ಲಗ್ಗೆ ಇಡುವುದಕ್ಕೆ ಸಜ್ಜಾಗಿದ್ದಾರೆ.

ರಶ್ಮಿಕಾಗೀದು 2ನೇ ತಮಿಳು ಸಿನಿಮಾ

ರಶ್ಮಿಕಾಗೀದು 2ನೇ ತಮಿಳು ಸಿನಿಮಾ

ವಿಜಯ್ ದಳಪತಿ ಜೊತೆ ಸಿನಿಮಾ ಮಾಡಬೇಕು ಅನ್ನೋದು ರಶ್ಮಿಕಾ ಮಂದಣ್ಣ ಕನಸಾಗಿತ್ತು. ಈ ಹಿಂದೆ ಹಲವು ಸಂದರ್ಭಗಳಲ್ಲಿ ರಶ್ಮಿಕಾ ಮಂದಣ್ಣ ತನ್ನ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ವಿಜಯ್ ಜೊತೆ ನಟಿಸುವ ಅವಕಾಶ ಒದಗಿ ಬಂದಿದೆ. ಅಂದ್ಹಾಗೆ ರಶ್ಮಿಕಾ ಮಂದಣ್ಣಗೆ ಇಂದು ಎರಡನೇ ತಮಿಳು ಸಿನಿಮಾ. ಈ ಹಿಂದೆ ಕಾರ್ತಿ ಅಭಿನಯದ 'ಸುಲ್ತಾನ್' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಈಗ ತಮಿಳಿನ ಬಾಕ್ಸಾಫೀಸ್ ಬಾದ್‌ಷಾ ವಿಜಯ್ ಜೊತೆ ರಶ್ಮಿಕಾ ಬಣ್ಣ ಹಚ್ಚಲಿದ್ದಾರೆ.

ವಂಶಿ-ದಿಲ್ ರಾಜು ಕಥೆಯೇನು?

ವಂಶಿ-ದಿಲ್ ರಾಜು ಕಥೆಯೇನು?

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸಿದ 'ಮಹರ್ಷಿ' ಚಿತ್ರದ ನಿರ್ದೇಶಕ ವಂಶಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದರೊಂದಿಗೆ ತೆಲುಗು ನಿರ್ಮಾಪಕ ದಿಲ್ ರಾಜು ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ವಂಶಿ ಹಲವು ದಿನಗಳಿಂದ ಮಹೇಶ್ ಬಾಬು ಹಾಗೂ ರಾಮ್ ಚರಣ್ ಡೇಟ್ಸ್‌ಗಾಗಿ ಕಾಯುತ್ತಿದ್ದರು. ಆದರೆ, ಇಬ್ಬರೂ ನಟರೂ ಬ್ಯುಸಿ ಇದ್ದಿದ್ದರಿಂದ ವಂಶಿ ಹಾಗೂ ದಿಲ್ ರಾಜು ಜೊತೆ ಸೇರಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

ವಂಶಿ ಕಥೆ ಕೇಳಿ ಥ್ರಿಲ್ ಆದ ದಳಪತಿ

ವಂಶಿ ಕಥೆ ಕೇಳಿ ಥ್ರಿಲ್ ಆದ ದಳಪತಿ

ಕಳೆದ ವರ್ಷ ದೀಪಾವಳಿಗೆ ನಿರ್ದೇಶಕ ವಂಶಿ, ದಳಪತಿ ವಿಜಯ್‌ಗೆ ಕಥೆ ಕೇಳಿದ್ದರು. ಈ ಕಥೆ ಕೇಳಿ ಥ್ರಿಲ್ ಆಗಿದ್ದ ವಿಜಯ್ 20 ವರ್ಷಗಳಿಂದ ಇಂತಹದ್ದೊಂದು ಕಥೆ ಕೇಳಿಲ್ಲ ಎಂದು ಹೇಳಿದ್ದರು. ಇಂದು( ಏಪ್ರಿಲ್ 06) ಈ ಸಿನಿಮಾ ಮುಹೂರ್ತ ಕಂಡಿದೆ. ಸದ್ಯ ದಳಪತಿ ವಿಜಯ್ ಅಭಿನಯಿಸಿದ ಸಿನಿಮಾ 'ಬೀಸ್ಟ್' ಏಪ್ರಿಲ್ 13ರಂದು ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ. 'ಕೆಜಿಎಫ್ 2' ಟಕ್ಕರ್ ಕೊಡಲು ಸಜ್ಜಾಗಿರುವ ಈ ಸಿನಿಮಾಗೆ ರೆಸ್ಪಾನ್ಸ್ ಹೇಗೆ ಸಿಗಿರುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

More from Filmibeat

English summary
Thalapathy Vijay 66th Movie With Rashmika Mandanna Goes On Floor Dill Raju producer. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X