'ಬಾಸ್' ಅಲ್ಲ.. 'ಪಝಲ್' ಅಲ್ಲ.. ದಳಪತಿ ವಿಜಯ್ 68ನೇ ಸಿನಿಮಾ ಟೈಟಲ್ ಏನು?

ಕಳೆದ ಕೆಲವು ದಿನಗಳಿಂದ ದಳಪತಿ ವಿಜಯ್ ನಟಿಸುತ್ತಿರುವ 68ನೇ ಸಿನಿಮಾದ ಟೈಟಲ್‌ ಬಗ್ಗೆ ಸುದ್ದಿಗಳು ಓಡಾಡಿದ್ದವು. ಕೆಲವರು ಸೋಶಿಯಲ್ ಮೀಡಿಯಾದ ಸಿನಿಮಾದ ಟೈಟಲ್ ಅನ್ನೂ ರಿವೀಲ್ ಮಾಡಿದ್ದರು. ಕೆಲವರು 'ಬಾಸ್' ಎಂದರೆ, ಇನ್ನೊಬ್ಬರು ಕೆಲವರು 'ಪಝಲ್' ಎಂದು ಸುದ್ದಿ ಹಬ್ಬಿಸುತ್ತಿದ್ದರು.

ಈ ಕಾರಣಕ್ಕೆ ದಳಪತಿ ವಿಜಯ್ 68ನೇ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಅರ್ಚನಾ ಕಲ್ಪಾತಿ ಈ ಎಲ್ಲಾ ಸುದ್ದಿಗಳಿಗೂ ಸ್ಪಷ್ಟನೆ ನೀಡಿದ್ದಾರೆ. ಬಾಸ್ ಹಾಗೂ ಪಝಲ್ ಇವೆರಲ್ಲಿ ದಳಪತಿ ವಿಜಯ್ 68ನೇ ಸಿನಿಮಾದ ಟೈಟಲ್ ಏನು ಅಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

Thalapathy Vijay 68th Movie title producer Archana Kalpathi clears the air

ಅಂದ್ಹಾಗೆ ದಳಪತಿ ವಿಜಯ್ ಸಿನಿಮಾವನ್ನು ಜನಪ್ರಿಯ ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. ಈ ಬಾರಿ ವಿಜಯ್ ಜೊತೆ ಸ್ಟಾರ್ ನಟ ಪ್ರಶಾಂತ್, ಪ್ರಭುದೇವ, ಮೋಹನ್, ಜಯರಾಮ್, ಮೀನಾಕ್ಷಿ ಚೌಧರಿ, ಸ್ನೇಹಾ, ಲೈಲಾ, ಅಜ್ಮಲ್, ಪ್ರೇಮ್‌ಜಿ, ವೈಭವ್ ಮುಂತಾದವರು ನಟಿಸಿದ್ದಾರೆ. ಈ ಕಾರಣಕ್ಕೆ ಬಹುತಾರಾಗಣದ ಸಿನಿಮಾ ದಳಪತಿ 68 ಟೈಟಲ್‌ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

ಸೋಶಿಯಲ್ ಮೀಡಿಯಾದಲ್ಲಿ ದಳಪತಿ ವಿಜಯ್‌ಗೆ ಆಗದವರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ 'ಬಾಸ್' ಹಾಗೂ 'ಪಝಲ್' ಈ ಎರಡೂ ಟೈಟಲ್‌ ತನ್ನ ಬಳಿಕ ಇಲ್ಲ ಎಂದು ನಿರ್ಮಾಪಕಿ ಅರ್ಚನಾ ಕಲ್ಪಾತಿ ಪೋಸ್ಟ್ ಮಾಡುವ ಮೂಲಕ ವಿಜಯ್ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Thalapathy Vijay 68th Movie title producer Archana Kalpathi clears the air

ವಿಜಯ್ 68ನೇ ಸಿನಿಮಾ ಬಗ್ಗೆ ನಿರ್ಮಾಪಕಿ ಕ್ಲಾರಿಟಿ ಕೊಡುತ್ತಿದ್ದಂತೆ ಹೊಸ ಸುದ್ದಿಯೊಂದು ಸದ್ದು ಮಾಡುವುದಕ್ಕೆ ಶುರು ಮಾಡಿದೆ. ವಿಜಯ್ ಸಿನಿಮಾದ ಟೈಟಲ್ ಎಂ ಅಕ್ಷರದಿಂದ ಶುರುವಾಗುತ್ತಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರೊಂದಿಗೆ ಅಭಿಮಾನಿಗಳು 'ಬಾಸ್' ಅಂತ ಟೈಟಲ್ ಮಾಡಿ ಫ್ಯಾನ್ ಮೇಡ್ ಟೈಟಲ್ ಅನ್ನು ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಈ ವಿಷಯ ತಲುಪುತ್ತಿದ್ದಂತೆ ಎಚ್ಚೆತ್ತುಕೊಂಡು ನಿರ್ಮಾಪಕಿ ಟೈಟಲ್ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಕಾಲಿವುಡ್ ಮೂಲಗಳ ಪ್ರಕಾರ, ದಳಪತಿ ವಿಜಯ್ 68ನೇ ಸಿನಿಮಾದ ಟೈಟಲ್ ಅನ್ನು ಡಿಸೆಂಬರ್ 31ರ ಸಂಜೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಕೊಡುಗೆ ನೀಡುವ ಸಲುವಾಗಿ ಟೈಟಲ್ ರಿಲೀಸ್ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ. ಇದೊಂದು ವೈಜ್ಞಾನಿಕ ಕೌಟುಂಬಿಕ ಕಥೆ ಎಂದು ಹೇಳಲಾಗುತ್ತಿದೆ. ನಿರ್ದೇಶಕ ವೆಂಕಟ್ ಪ್ರಭು ವಿಜಯ್‌ಗಾಗಿ ಡಿ ಏಜಿಂಗ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Thalapathy Vijay 68th Movie title not boss or puzzle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X