ಇನ್‌ಸ್ಟಾಗ್ರಾಂಗೆ ತಮಿಳು ನಟ ವಿಜಯ್ ಗ್ರ್ಯಾಂಡ್ ಎಂಟ್ರಿ: "ಮಣ್ಣಿಗೆ ಹೋಗುವವರೆಗೂ ದಳಪತಿಗೆ ಈ ಜೀವ" ಎಂದ ಫ್ಯಾನ್ಸ್

ಭಾನುವಾರ(ಏಪ್ರಿಲ್ 2) ದಳಪತಿ ವಿಜಯ್‌ ತಮ್ಮ ಅಭಿಮಾನಿಗಳಿಗೆ ಕುಣಿದು ಕುಪ್ಪಳಿಸೋ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. 'ವಾರಿಸು' ಸಿನಿಮಾ ಬಳಿಕ ಸೈಲೆಂಟ್‌ ಆಗಿ ತಮ್ಮ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿರೋ ತಮಿಳಿನ ಸ್ಟಾರ್ ನಟ ಸಂಡೇ ಕಿಕ್ ಕೊಟ್ಟಿದ್ದಾರೆ.

ದಳಪತಿ ವಿಜಯ್ ಅಭಿಮಾನಿಗಳ ಖುಷಿಗೆ ಕಾರಣವಿದೆ. ಅದೇನಂದ್ರೆ, ವಿಜಯ್ ಇಂದು (ಏಪ್ರಿಲ್ 2) ಇನ್‌ಸ್ಟಾಗ್ರಾಂ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿವರೆಗೂ ಇನ್‌ಸ್ಟಾಗ್ರಾಂನಲ್ಲಿ ದಳಪತಿ ವಿಜಯ್ ಇರಲಿಲ್ಲ. ಈಗ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ಅಭಿಮಾನಿಗಳು ಫಾಲೋ ಬಟನ್ ಒತ್ತುತ್ತಲೇ ಇದ್ದಾರೆ.

Thalapathy Vijay Entered Instagram here is his first post

ಇನ್‌ಸ್ಟಾಗ್ರಾಂಗೆ ದಳಪತಿ ವಿಜಯ್ ಎಂಟ್ರಿ

ದಳಪತಿ ವಿಜಯ್ ಸೋಶಿಯಲ್ ಮೀಡಿಯದಲ್ಲಿ ಅಷ್ಟಾಗಿ ಆಕ್ಟಿವ್ ಇಲ್ಲ. ಸದಾ ಸಿನಿಮಾದಲ್ಲಿ ಬ್ಯುಸಿಯಾಗಿರೋ ನಟ, ಅಭಿಮಾನಿಗಳನ್ನು ನೇರವಾಗಿ ಭೇಟಿಯಾಗುತ್ತಾರೆ. ಆದ್ರೀಗ ವಿಜಯ್ ಮನಸ್ಸು ಬದಲಿಸಿದ್ದು, ಇನ್‌ಸ್ಟಾಗ್ರಾಂನಲ್ಲಿ ಅಕೌಂಟ್ ಓಪನ್ ಮಾಡಿದ್ದಾರೆ. ಎಂಟ್ರಿ ಕೊಡುತ್ತಿದ್ದಂತೆ ಸುಮಾರು 9 ಲಕ್ಷಕ್ಕೂ ಅಧಿಕ ಮಂದಿ ಇವರನ್ನು ಫಾಲೋ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಅತಿ ಕಡಿಮೆ ಸಮಯದಲ್ಲಿ ಸುಮಾರು 9 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್‌ ಅನ್ನು ಪಡೆದುಕೊಂಡು ನಟ ವಿಜಯ್. ಹೀಗೆ ಮುಂದುವರೆದರೆ ದಳಪತಿ ವಿಜಯ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ವಿಷಯದಲ್ಲೂ ಹೊಸ ದಾಖಲೆಯನ್ನು ಬರೆಯಬಹುದು. ಸದ್ಯಕ್ಕಿರೋ ಕ್ರೇಜ್ ನೋಡಿದರೆ, 24 ಗಂಟೆಗಳಲ್ಲಿ ಒಂದೂವರೆ ಎರಡು ಮಿಲಿಯನ್ ಫಾಲೋವರ್ಸ್ ಸಿಗಬಹುದು ಅನ್ನೋ ನಿರೀಕ್ಷೆಯಿದೆ.

ಮೊದಲ ಇನ್‌ಸ್ಟಾ ಪೋಸ್ಟ್ ಏನು?

ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಮೊದಲ ಪೋಸ್ಟ್ ಇಂಟ್ರೆಸ್ಟಿಂಗ್ ಆಗಿದೆ. ತನ್ನ ಸ್ಟಾಲ್ಟ್‌ ಅಂಡ್ ಪೆಪ್ಪರ್ ಲುಕ್ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ "ಹೆಲೋ ನನ್ಬಾಸ್ ಮತ್ತು ನಾನ್ಬಿಸ್" ಎಂದು ಬರೆದುಕೊಂಡಿದ್ದಾರೆ. ಇದು ದಳಪತಿ ವಿಜಯ್ ಅವರ ಅಧಿಕೃತ ಖಾತೆಯಾಗಿದ್ದರೂ, ಇದನ್ನು ಸ್ಟಾರ್ ನಟರ ಸಿಬ್ಬಂದಿಗಳು ಹ್ಯಾಂಡಲ್ ಮಾಡುತ್ತಾರೆ.

Thalapathy Vijay Entered Instagram here is his first post

ಈ ಹಿಂದೆ ವಿಜಯ್ ಟ್ವಿಟರ್ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದರು. ಆದರೆ, ಇತ್ತೀಚೆಗೆ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಅವರ ತಂಡ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್ ಎರಡನ್ನೂ ಹ್ಯಾಂಡಲ್ ಮಾಡಲಿದೆ. ಇದರಲ್ಲಿ ದಳಪತಿಯ ಸಿನಿಮಾಗಳು, ಪೋಸ್ಟರ್‌ಗಳನ್ನು ಹಂಚಿಕೊಳ್ಳಲಾಗುತ್ತೆ. ದಳಪತಿ ಇನ್‌ಸ್ಟಾಗ್ರಾಂ ಎಂಟ್ರಿ ಕೊಟ್ಟಿದ್ದಕ್ಕೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ.

ಏನಂತಿದ್ದಾರೆ ಫ್ಯಾನ್ಸ್?

ದಳಪತಿ ವಿಜಯ್ ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. " ಕೊನೆಗೂ ದಳಪತಿ ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟೇ ಬಿಟ್ರು" ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಇನ್ನೊಬ್ರು " ಹುಟ್ಟಿನಿಂದ ಮಣ್ಣಿಗೆ ಹೋಗುವವರೆಗೂ 💯 ದಳಪತಿಗೆ ಜೀವ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. "ಅಣ್ಣಾ ಎಂಟ್ರಿ ಕೊಟ್ಟಿದ್ದಾರೆ ವಿಸಲ್ ಹಾಕ್ರಿ" ಅಂತ ಮತ್ತೊಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾನೆ.

ದಳಪತಿ ವಿಜಯ್ ಸದ್ಯಕ್ಕೀಗ ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿರುವ 'ಲಿಯೋ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಅಟ್ಲಿ ಜೊತೆ ನಾಲ್ಕನೇ ಬಾರಿ ಜೊತೆಯಾಗುತ್ತಿದ್ದಾರೆ. ವಿಜಯ್‌ ಹಾಗೂ ನಿರ್ಮಾಪಕರಿಗೆ ಕಥೆ ಇಷ್ಟ ಆಗಿದ್ದು, ಶೀಘ್ರದಲ್ಲಿಯೇ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. 'ಬಿಗಿಲ್', 'ಮರ್ಸಲ್' ಹಾಗೂ 'ಥೇರಿ' ಬಳಿಕ ನಾಲ್ಕನೇ ಬಾರಿ ಒಂದಾಗಲಿದ್ದಾರೆ.

More from Filmibeat

English summary
Thalapathy Vijay Entered Instagram here is his first post. He Wrote “Hello Nanbas and Nanbis", Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X