Jana Nayagan: ವಿಜಯ್ 'ಜನ ನಾಯಗನ್' ರಿಲೀಸ್ ಆಗೋದು ಡೌಟ್.. ಇದೆಲ್ಲ ಡಿಎಂಕೆ ಕೈವಾಡವೇ?

ದಳಪತಿ ವಿಜಯ್ ನಟಿಸಿರುವ ಕೊನೆಯ ಸಿನಿಮಾ 'ಜನ ನಾಯಗನ್' ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಕೊನೆಯ ಸಿನಿಮಾವನ್ನು ಚಿತ್ರತಂಡ ಭರ್ಜರಿಯಾಗಿಯೇ ಪ್ರಚಾರ ಮಾಡುತ್ತಿದೆ. ಮಲೇಷ್ಯಾದಲ್ಲಿ ಆಡಿಯೋ ರಿಲೀಸ್ ಮಾಡಿದ ಬಳಿಕ ಈ ಸಿನಿಮಾ ನೋಡುವುದಕ್ಕೆ ವಿಜಯ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೇ ರಿಲೀಸ್ ಆಗೇ ಬಿಡುತ್ತೆ ಅಂದುಕೊಂಡಿದ್ದ ಫ್ಯಾನ್ಸ್ ಶಾಕ್ ಆಗುವಂತಹ ಸುದ್ದಿಯೊಂದು ಹರಿದಾಡುತ್ತಿದೆ.

'ಜನ ನಾಯಗನ್' ವಿಜಯ್ ಕೊನೆಯ ಸಿನಿಮಾ ಆಗಿದ್ದರಿಂದ ಎಲ್ಲರ ಕಣ್ಣು ಈ ಸಿನಿಮಾ ಮೇಲಿದೆ. ಜೊತೆಗೆ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದರಿಂದ ಆಡಳಿತ ಪಕ್ಷ ಡಿಎಂಕೆಯನ್ನು ಎದುರಾಕಿಕೊಂಡಿದ್ದಾರೆ. ತಮ್ಮ ರಾಜಕೀಯ ಸಮಾವೇಶದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಅವರ ಸಿನಿಮಾಗೆ ಸಾಕಷ್ಟು ಅಡೆತಡೆಗಳಾಗುತ್ತಿವೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

Thalapathy Vijay Jana Nayagan failed to secure censor release may get postpone

ಇದಕ್ಕೆ ಪ್ರತಿಯಾಗಿ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್' ಈಗಾಗಲೇ ಅನೌನ್ಸ್ ಮಾಡಿದ ರಿಲೀಸ್‌ ಡೇಟ್‌ಗೆ ಬಿಡುಗಡೆಯಾಗೋದು ಅನುಮಾನ ಎನ್ನಲಾಗಿದೆ. ಅದಕ್ಕೆ ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಕಡೆಗೆ ಬೆರಳು ಮಾಡಿ ತೋರಿಸಲಾಗುತ್ತಿದೆ. ಅಷ್ಟಕ್ಕೂ ಜನವರಿ 9ಕ್ಕೆ 'ಜನ ನಾಯಗನ್' ರಿಲೀಸ್ ಆಗುತ್ತಾ? ಇಲ್ವಾ? ಏನಿದು ಗೊಂದಲ? ತಿಳಿಯುವುದಕ್ಕೆ ಮುಂದೆ ಓದಿ.

'ಜನ ನಾಯಗನ್' Vs 'ಪರಾಶಕ್ತಿ'

ದಳಪತಿ ವಿಜಯ್ 'ಜನ ನಾಯಗನ್' ಸಿನಿಮಾದ ಎದುರು ತಮಿಳಿನ ಮತ್ತೊಬ್ಬ ಹೀರೋ ಶಿವಕಾರ್ತಿಕೇಯನ್ ಸಿನಿಮಾ 'ಪರಾಶಕ್ತಿ' ಕೂಡ ರಿಲೀಸ್ ಆಗುತ್ತಿದೆ. ಈ ವಿಷಯಕ್ಕೆ ಇಬ್ಬರು ಅಭಿಮಾನಿಗಳ ಮಧ್ಯೆ ಸೋಶಿಯಲ್ ಮೀಡಿಯಾಗಳಲ್ಲಿ ಕಿತ್ತಾಟ ಶುರುವಾಗಿದೆ. ಇನ್ನೊಂದು ಕಡೆ ರೊಚ್ಚಿಗೆದ್ದಿರುವ ವಿಜಯ್ ಅಭಿಮಾನಿಗಳು ತಮಿಳುನಾಡಿನ ಕೆಲವೆಡೆ 'ಪರಾಶಕ್ತಿ' ಸಿನಿಮಾದ ಪೋಸ್ಟರ್ ಅನ್ನು ಕಿತ್ತು ಹಾಕಿರುವ ಬಗ್ಗೆ ವರದಿಗಳಾಗಿವೆ. ಈಗ ಈ ಎರಡೂ ಸಿನಿಮಾಗಳಿಗೂ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ ಎಂಬ ಸುದ್ದಿ ಹರಿದಾಡಿತ್ತು.

ಏನಿದು ಸೆನ್ಸಾರ್ ಸಮಸ್ಯೆ?

ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಹಾಗೂ ಪರಾಶಕ್ತಿ ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿವೆ. ಹೀಗಾಗಿ ಎರಡೂ ಸಿನಿಮಾಗಳಿಗೂ ಸೆನ್ಸಾರ್ ಆಗಬೇಕಿದೆ. ಆದರೆ, ಮೊದಲು 'ಜನ ನಾಯಗನ್' ಹಾಗೂ 'ಪರಾಶಕ್ತಿ' ಈ ಎರಡೂ ಸಿನಿಮಾಗಳೂ ಸೆನ್ಸಾರ್ ಸರ್ಟಿಫಿಕೇಟ್ ಪಡೆಯುವಲ್ಲಿ ವಿಫಲವಾಗಿದ್ದು, ರಿಲೀಸ್ ಪೋಸ್ಟ್‌ಪೋನ್ ಆಗಬಹುದೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಹಾಗಿದ್ದರೆ, ಎರಡೂ ಸಿನಿಮಾಗಳ ರಿಲೀಸ್ ಮುಂದೂಡಲ್ಪಡುತ್ತಾ?

Thalapathy Vijay Jana Nayagan failed to secure censor release may get postpone

'ಪರಾಶಕ್ತಿ' ಕ್ಲಿಯರ್.. 'ಜನ ನಾಯಗನ್' ಕಥೆಯೇನು?

ಸಿನಿಮಾಗೆ ಸೆನ್ಸಾರ್‌ ಸರ್ಟಿಫಿಕೇಟ್ ಸಿಗುವವರೆಗೂ ಅಡ್ವಾನ್ಸ್ ಬುಕಿಂಗ್ ಅನ್ನು ಓಪನ್ ಮಾಡುವಂತಿಲ್ಲ. ಹೀಗಾಗಿ ಎರಡೂ ಸಿನಿಮಾಗಳು ಸೆನ್ಸಾರ್ ಸರ್ಟಿಫಿಕೇಟ್‌ಗಾಗಿ ಕಾಯುತ್ತಿದ್ದವು. ಆದರೆ, ಇಂದು (ಜನವರಿ 5) ಸಂಜೆಯವರೆಗೂ ಎರಡೂ ಸಿನಿಮಾಗಳೂ ರಿಲೀಸ್ ಡೇಟ್‌ ಅನ್ನು ಮುಂದೂಡುತ್ತವೆ ಎಂಬ ಮಾತು ಕೇಳಿ ಬಂದಿದ್ದವು. ಆದ್ರೀಗ ದಿಢೀರನೇ 'ಪರಾಶಕ್ತಿ' ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಹಾಗಿದ್ದರೆ, 'ಜನ ನಾಯಗನ್' ಕಥೆಯೇನು? ಇದೊಂದು ಹುನ್ನಾರವೇ?

ಡಿಎಂಕೆ ಕೈ ವಾಡವೇ?

ದಳಪತಿ ವಿಜಯ್ ರಾಜಕೀಯ ಪಕ್ಷ ಹುಟ್ಟಾಕಿ ಅಖಾಡಕ್ಕೆ ಇಳಿದ ದಿನದಿಂದ ಆಡಳಿತ ಪಕ್ಷ ಡಿಎಂಕೆ ವಿರುದ್ಧ ಸಮರ ಸಾರುತ್ತಲೇ ಇದ್ದಾರೆ. ಇದು ಡಿಎಂಕೆ ಮುಖಂಡರ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ ವಿಜಯ್ ಸಿನಿಮಾಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಕಾರಣಕ್ಕೆ ವಿಜಯ್ ಆಡಿಯೋ ರಿಲೀಸ್ ಅನ್ನು ಮಲೇಷ್ಯಾದಲ್ಲಿ ಮಾಡಿದ್ದರು. ಈಗ ಸೆನ್ಸಾರ್ ಡಿಲೇ ಆಗುವುದಕ್ಕೆ ಇದೇ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ವಿಜಯ್ ಹಾಗೂ ಚಿತ್ರತಂಡ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

More from Filmibeat

English summary
Thalapathy Vijay Jana Nayagan failed to secure censor release may get postpone.
Read more about: vijay censor tamil movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X