GOAT box office Day 1: ಮೊದಲ ದಿನವೇ ಬಾಕ್ಸಾಫೀಸ್ ದೋಚಿದ ವಿಜಯ್; ಕರ್ನಾಟದಲ್ಲಿ 'ಗೋಟ್' ಗಳಿಕೆ ಎಷ್ಟು?

ದಳಪತಿ ವಿಜಯ್ ನಟನೆಯ 'ಗೋಟ್' ಸಿನಿಮಾ ನಿನ್ನೆ (ಸೆಪ್ಟೆಂಬರ್ 5) ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ವಿಶ್ವದಾದ್ಯಂತ ತೆರೆಕಂಡಿರುವ ಈ ಸಿನಿಮಾಗೆ ಮೊದಲ ದಿನ ಸಖತ್ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ವಿಜಯ್ ಸಿನಿಮಾ 'ಗೋಟ್' (GOAT) ಅಕ್ಷರಶ: ಲೂಟಿ ಮಾಡಿದೆ. ಕರ್ನಾಟಕದಲ್ಲೂ ಕನ್ನಡ ಸಿನಿಮಾಗೆ ಸಿಗದ ರೆಸ್ಪಾನ್ಸ್ ಸಿಕ್ಕಿದೆ.

ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಮೇಲೆ ಇನ್ನು ಎರಡೇ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಅನೌನ್ಸ್ ಮಾಡಿದ್ದರು. ಅದರಲ್ಲೊಂದು ಸಿನಿಮಾ 'ಗೋಟ್'. ಹೀಗಾಗಿ ವಿಜಯ್ ಅಭಿಮಾನಿಗಳಿಗೆ 'ಗೋಟ್' ಸೆಂಟಿಮೆಂಟ್. ಈ ಕಾರಣಕ್ಕೆ ಈ ಸಿನಿಮಾ ಬಾಕ್ಸಾಫೀಸ್ ಒಳ್ಳೆಯ ಕಲೆಕ್ಷನ್ ಮಾಡುತ್ತೆ ಅನ್ನೋ ನಿರೀಕ್ಷೆಯಂತೂ ಇತ್ತು. ಆ ನಿರೀಕ್ಷೆಯಂತೆ 'ಗೋಟ್' ಬಾಕ್ಸಾಫೀಸ್‌ನಲ್ಲಿ ಹಬ್ಬವನ್ನೇ ಮಾಡಿದೆ.

Vijay movie GOAT box office collection day 1

2024ರಲ್ಲಿ ತಮಿಳು ಚಿತ್ರರಂಗಕ್ಕೆ ಅತೀ ದೊಡ್ಡ ಓಪನಿಂಗ್ ಕೊಟ್ಟ ಸಿನಿಮಾ 'ಗೋಟ್'. ಮೊದಲ ದಿನ ಈ ಸಿನಿಮಾ ಭಾರತದಾದ್ಯಂತ ಸುಮಾರು 55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಮೂಲಕ ಮೊದಲ ದಿನವೇ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ವಿಜಯ್ ಮೂರನೇ ಸಿನಿಮಾ ಅನ್ನೋ ಪಟ್ಟಿ ಸೇರಿಕೊಂಡಿದೆ. ಅಷ್ಟೇ ಅಲ್ಲದೆ ಕರ್ನಾಟಕದಲ್ಲೂ 'ಗೋಟ್' ಕಲೆಕ್ಷನ್ ಕಮ್ಮಿಯೇನಿಲ್ಲ.

ಭಾರತದ ಬಾಕ್ಸಾಫೀಸ್‌ನಲ್ಲಿ 'ಗೋಟ್' ಗಳಿಕೆ ಎಷ್ಟು?

ದಳಪತಿ ವಿಜಯ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತವನ್ನೇ ಕಲೆ ಹಾಕುತ್ತೆ ಅನ್ನೋ ನಿರೀಕ್ಷೆ ಇದ್ದೇ ಇತ್ತು. ಯಾಕಂದ್ರೆ ಅಡ್ವಾನ್ಸ್ ಬುಕಿಂಗ್‌ಗೆ ಸೂಪರ್‌ ರೆಸ್ಪಾನ್ಸ್ ಸಿಕ್ಕಿತ್ತು. 'ಗೋಟ್' ಸಿನಿಮಾ ಮೊದಲ ಭಾರತದಾದ್ಯಂತ ಸುಮಾರು 55 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಇನ್ನು ಸಿನಿಮಾಗಳ ಬಾಕ್ಸಾಫೀಸ್ ಟ್ರ್ಯಾಕ್ ಮಾಡುವ sacnilk ಮೊದಲ ದಿನ 43 ಕೋಟಿ ರೂಪಾಯಿ ( ಕಲೆಕ್ಷನ್ ಆಗಿದೆ ಎಂದು ಹೇಳಿದೆ. ಆದರೆ, ತಮಿಳು ಚಿತ್ರರಂಗದಲ್ಲಿ ಈ ಸಿನಿಮಾ ಕೇವಲ ತಮಿಳುನಾಡಿನಲ್ಲೇ 48 ಕೋಟಿ ರೂಪಾಯಿ (Gross)ಕಲೆಕ್ಷನ್ ಆಗಿದೆ ಎನ್ನಲಾಗಿದೆ.

ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್?

ದಳಪತಿ ವಿಜಯ್ ಸಿನಿಮಾ 'ಗೋಟ್' ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ದಕ್ಷಿಣ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಭರ್ಜರಿ ಗಳಿಕೆ ಕಂಡಿದೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ರಿಪೋರ್ಟ್. ತಮಿಳುನಾಡಿನಲ್ಲಿಯೇ ಈ ಸಿನಿಮಾ 48 ಕೋಟಿ ರೂಪಾಯಿ (Gross) ಗಳಿಸಿದ್ದು, ಆಂಧ್ರ ತೆಲಂಗಾಣದಲ್ಲಿ 29 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದೆ ಅಂತ ಲೆಕ್ಕ ಹಾಕಿದ್ದಾರೆ. ಹಾಗೇ ಕೇರಳದಲ್ಲಿ 3 ಕೋಟಿ ರೂಪಾಯಿ (Gross) ಕಲೆಕ್ಷನ್ ಆಗಿದೆ.

Vijay movie GOAT box office collection day 1

ಕರ್ನಾಟಕದ ಕಲೆಕ್ಷನ್ ಎಷ್ಟು?

'ಗೋಟ್' ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಸುಮಾರು 13 ಕೋಟಿ (Gross) ಕಲೆಕ್ಷನ್ ಆಗಿದೆ ಅನ್ನೋದು ಬಲ್ಲ ಮೂಲಗಳಿಂದ ಸಿಕ್ಕಿರುವ ಮಾಹಿತಿ. ಇನ್ನು ವಿತರಕರ ವಲಯದಲ್ಲಿ ಈ ಸಿನಿಮಾ ಅಂದಾಜು 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರಬಹುದೆಂದು ಅಂದಾಜು ಹಾಕಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚು ಕಲೆಕ್ಷನ್ ಆಗಿದ್ದು, ಊರ್ವಶಿ ಚಿತ್ರಮಂದಿರಲ್ಲಿ 13 ಲಕ್ಷ ರೂ., ಪೂರ್ಣಿಮಾ 11 ಲಕ್ಷ ರೂ. ಹಾಗೂ ಮುಕುಂದದಲ್ಲಿ 13 ಲಕ್ಷ ರೂ. ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಆದರೆ, ಅಧಿಕೃತವಾಗಿ ಈ ಸಿನಿಮಾದ ಕಲೆಕ್ಷನ್ ಇನ್ನೂ ಚಿತ್ರತಂಡದಿಂದ ರಿವೀಲ್ ಆಗಬೇಕಿದೆ.

ಹಿಂದಿ+ವರ್ಲ್ಡ್‌ ವೈಡ್ ಕಲೆಕ್ಷನ್

ಇನ್ನು ಹಿಂದಿ ಬೆಲ್ಡ್‌ನಲ್ಲಿ ದಳಪತಿ ವಿಜಯ್ ಸಿನಿಮಾ ಅಷ್ಟಕ್ಕಾಗಿ ಸದ್ದು ಮಾಡಿಲ್ಲ. ಆದರೆ, ವಿದೇಶಗಳಲ್ಲೂ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಹಿಂದಿ ಹಾಗೂ ವಿದೇಶದ ಬಾಕ್ಸಾಫೀಸ್‌ನಿಂದ 13 ಕೋಟಿ ರೂಪಾಯಿ (Gross) ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಆದರೆ, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಎರಡನೇ ದಿನ ಈ ಕಲೆಕ್ಷನ್ ಡ್ರಾಪ್ ಆಗುವ ಸಾಧ್ಯತೆಯಿದೆ.

ಸೂಚನೆ: ಈ ಬಾಕ್ಸಾಫೀಸ್ ವರದಿಯನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಚಿತ್ರತಂಡ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.

More from Filmibeat

English summary
Thalapathy Vijay movie GOAT box office collection day 1 Karnatara report
Read more about: vijay box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X