GOAT Box Office Day 2: 2ನೇ ದಿನ ವಿಜಯ್ ಸಿನಿಮಾ 'ಗೋಟ್' ಕಲೆಕ್ಷನ್‌ ಹೇಗಿದೆ? ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ದಳಪತಿ ವಿಜಯ್ 'ಗೋಟ್' (GOAT) ಸಿನಿಮಾ ರಿಲೀಸ್ ಆಗಿ ಇಂದಿಗೆ (ಸೆಪ್ಟೆಂಬರ್ 7) ಮೂರನೇ ದಿನಕ್ಕೆ ಕಾಲಿಟ್ಟಿದೆ. ವಿಜಯ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಈ ಸಿನಿಮಾಗೆ ಕಳೆದ ಎರಡು ದಿನಗಳಲ್ಲಿ ಡಿಸೆಂಟ್ ಕಲೆಕ್ಷನ್ ಆಗಿದೆ. ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದು, ಅವರ ಫ್ಯಾನ್ಸ್‌ಗೆ ಡಬಲ್ ಎಂಟರ್‌ಟೈನ್ಮೆಂಟ್ ಸಿಕ್ಕಿದೆ. ಈ ಕಾರಣಕ್ಕೆ ದಕ್ಷಿಣ ಭಾರತದಲ್ಲಿ ಬಾಕ್ಸಾಫೀಸ್‌ನಲ್ಲಿ ವಿಜಯ್ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ.

'ಗೋಟ್' ಸಿನಿಮಾ ಐದು ಭಾಷೆಯಲ್ಲಿ ತೆರೆಕಂಡಿತ್ತು. ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದೆ. ಆದರೆ, ದಕ್ಷಿಣ ಭಾರತದಲ್ಲಿ ಈ ಸಿನಿಮಾಗೆ ರೆಸ್ಪಾನ್ಸ್ ಸಿಕ್ಕಷ್ಟು ಹಿಂದಿ ಬೆಲ್ಟ್‌ನಲ್ಲಿ ವಿಜಯ್ ಸಿನಿಮಾ ಕಲೆಕ್ಷನ್ ಮಾಡುತ್ತಿಲ್ಲ. ವೆಂಕಟ್ ಪ್ರಭು ನಿರ್ದೇಶಿಸಿರುವ ಈ ಸಿನಿಮಾ ಸದ್ಯ ತಮಿಳುನಾಡು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.

Thalapathy Vijay movie GOAT box office collection day 2 Karnatara report

ಮೊದಲ ದಿನ 'ಗೋಟ್' ಕರ್ನಾಟಕದಲ್ಲಿ ಕೂಡ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಮಾಹಿತಿ ನೀಡಿದ್ದರು. ಆದರೆ, ಎರಡನೇ ದಿನ ಕರ್ನಾಟಕದಲ್ಲಿ ಈ ಸಿನಿಮಾ ಅಂದಾಜು ಶೇ.60ರಷ್ಟು ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆ. ದಳಪತಿ ವಿಜಯ್ ಸಿನಿಮಾ ಎರಡನೇ ದಿನ ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಗೋಟ್' 2ನೇ ದಿನ ಗಳಿಸಿದ್ದೆಷ್ಟು?

ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ದಿನವೇ ಇನ್ನು ಕೇವಲ ಎರಡು ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದಿದ್ದರು. ಅದಲ್ಲಿಂದ ಅವರ ಅಭಿಮಾನಿಗಳಿಗೆ ಒಂದ್ಕಡೆ ಖುಷಿ. ಇನ್ನೊಂದು ಕಡೆ ದು:ಖ. ಮೊದಲನೇ ದಿನ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿತ್ತು. ಅದೇ ಎರಡನೇ ದಿನ ವಿಶ್ವದಾದ್ಯಂತ ಶೇ.52ರಷ್ಟು ಕಲೆಕ್ಷನ್ ಡ್ರಾಪ್‌ ಆಗಿದೆ. ಇನ್ನು ಎರಡನೇ ದಿನ ವಿಶ್ವದಾದ್ಯಂತ 47.5 ಕೋಟಿ ರೂಪಾಯಿ (Gross)ಗಳಿಕೆ ಕಂಡಿದೆ ಎಂದು ವಿತರಕರ ವಲಯದಲ್ಲಿ ಹರಿದಾಡುತ್ತಿರುವ ಲೆಕ್ಕ.

Thalapathy Vijay movie GOAT box office collection day 2 Karnatara report

ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್?

ಇನ್ನು ದಳಪತಿ ವಿಜಯ್‌ಗೆ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ವಿಜಯ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತೆ. 'ಗೋಟ್' ಕೂಡ ಗಳಿಕೆಯಲ್ಲೇನಿ ಹಿಂದೆ ಬಿದ್ದಿಲ್ಲ. ಕರ್ನಾಟಕದಲ್ಲಿ ಮೊದಲನೇ ದಿನ 12 ಕೋಟಿ ರೂಪಾಯಿ (Gross) ಗಳಿಸಿದ್ದರೆ, ಎರಡನೇ ದಿನ 5 ಕೋಟಿ ರೂಪಾಯಿ (Gross)ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯದಲ್ಲಿ ಚರ್ಚೆ. ಇಲ್ಲೂ ಕೂಡ ಎರಡನೇ ದಿನ ಶೇ.55ರಷ್ಟು ಡ್ರಾಪ್ ಕಂಡಿದೆ.

ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್?

'ಗೋಟ್' ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. 2ನೇ ದಿನ ತಮಿಳುನಾಡಿನಲ್ಲಿ 23 ಕೋಟಿ ರೂಪಾಯಿ (Gross), ಆಂಧ್ರ-ತೆಲಂಗಾಣದಿಂದ 11 ಕೋಟಿ (Gross), ಕೇರಳದಿಂದ 1.5 ಕೋಟಿ (Gross), ಹಿಂದಿ ಬೆಲ್ಡ್ ಹಾಗೂ ವಿದೇಶಗಳಿಂದ ಆದ ಕಲೆಕ್ಷನ್ 7 ಕೋಟಿ ರೂಪಾಯಿ (Gross)ಎಂದು ವಿತರಕರು ಕೊಡುತ್ತಿರುವ ಲೆಕ್ಕ.

ವೀಕೆಂಡ್ ಕಲೆಕ್ಷನ್ ಹೇಗಾಗುತ್ತೆ?

ದಳಪತಿ ವಿಜಯ್ ಸಿನಿಮಾ 'ಗೋಟ್' ಇಂದು (ಸೆಪ್ಟೆಂಬರ್ 7) ಮತ್ತು ನಾಳೆ (ಸೆಪ್ಟೆಂಬರ್ 8) ಅತೀ ಹೆಚ್ಚು ಕಲೆಕ್ಷನ್ ಮಾಡಬೇಕಿದೆ. ಬಾಕ್ಸಾಫೀಸ್‌ ಹೊಸ ದಾಖಲೆ ಬರೆಯಬೇಕು ಅಂತಾದರೆ, ಈ ಎರಡು ದಿನ ತುಂಬಾನೇ ಮುಖ್ಯ. ಯಾಕಂದ್ರೆ ಮತ್ತೆ ಚಿತ್ರತಂಡ ದೊಡ್ಡ ಮಟ್ಟದ ಕಲೆಕ್ಷನ್ ನೋಡುವುದಕ್ಕೆ ಮತ್ತೊಂದು ವೀಕೆಂಡ್ ವರೆಗೂ ಕಾಯಲೇಬೇಕು. ಅಲ್ಲದೆ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಎರಡನೇ ವಾರ ಜನರ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದು ಸದ್ಯಕ್ಕಂತೂ ಕುತೂಹಲ.

More from Filmibeat

English summary
Thalapathy Vijay movie GOAT box office collection day 1 Karnatara report:
Read more about: vijay box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X