GOAT Box Office Day 4; 4ನೇ ದಿನ 'ಗೋಟ್' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ವಿಶ್ವದಾದ್ಯಂತ ಗಳಿಕೆ ಹೇಗಿದೆ?

ದಳಪತಿ ವಿಜಯ್ ಸಿನಿಮಾ 'ಗೋಟ್' (GOAT) ರಿಲೀಸ್‌ ಆಗಿ ಇಂದಿಗೆ (ಸೆಪ್ಟೆಂಬರ್9) ಐದನೇ ದಿನಕ್ಕೆ ಕಾಲಿಟ್ಟಿದೆ. ವೆಂಕಟ್ ಪ್ರಭು ನಿರ್ದೇಶಿಸಿದ ಈ ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ ಬಾಕ್ಸಾಫೀಸ್‌ನಲ್ಲಿ ಅದ್ಭುತ ಕಲೆಕ್ಷನ್ ಮಾಡುತ್ತಿದೆ. ದಳಪತಿ ವಿಜಯ್ ಡಬಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳನ್ನು ಥಿಯೇಟರ್‌ಗೆ ಸೆಳೆಯುತ್ತಿದೆ.

'ಗೋಟ್' ಅಂದರೆ, 'ಗ್ರೇಟೆಸ್ಟ್ ಆಫ್ ಆಲ್‌ ಟೈಮ್' (GOAT) ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಾಕಿತ್ತು. ದಳಪತಿ ವಿಜಯ್ ನಟಿಸುತ್ತಿರುವ ಕೊನೆಯ ಸಿನಿಮಾಗಳಲ್ಲಿ ಇದೂ ಒಂದಾಗಿದ್ದರಿಂದ ಅವರ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಮೊದಲ ನಾಲ್ಕು ದಿನ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬ್ಯುಸಿನೆಸ್ ಮಾಡಿದೆ.

Thalapathy Vijay movie GOAT box office collection day 4 Karnatara report

'ಗೋಟ್' ಆಕ್ಷನ್ ಕಮ್ ಸೆಂಟಿಮೆಂಟ್ ಸಿನಿಮಾ. ಈ ಕಾರಣಕ್ಕೆ ಮೊದಲ ನಾಲ್ಕು ದಿನ ಮಾಸ್ ಸಿನಿಮಾ ಪ್ರಿಯರಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ. ಸದ್ಯ ಮೊದಲ ವೀಕೆಂಡ್‌ 'ಗೋಟ್‌' ಸಿನಿಮಾಗೆ ಗಣೇಶ ಚತುರ್ಥಿಯ ರಜೆ ಸಿಕ್ಕಿತ್ತು. ಅಸಲಿ ಆಟ ಇಂದಿನಿಂದ (ಸೆಪ್ಟೆಂಬರ್ 9) ಶುರುವಾಗುತ್ತೆ. ಏನೇ ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾದ ಗಳಿಕೆ ಎಷ್ಟು? ಅದರಲ್ಲೂ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ದೋಚಿದ್ದೆಷ್ಟು? ತಿಳಿಯಲು ಮುಂದೆ ಓದಿ.

'ಗೋಟ್' ಕರ್ನಾಟಕ ಕಲೆಕ್ಷನ್ ಎಷ್ಟು?

ಕರ್ನಾಟಕ ಬಾಕ್ಸಾಫೀಸ್‌ನಲ್ಲಿ 'ಗೋಟ್' ಸಿನಿಮಾದ ಪರ್ಫಾಮೆನ್ಸ್ ಜೋರಾಗಿದೆಯೇ ಇದೆ. ಮೊದಲ ನಾಲ್ಕು ದಿನಗಳಲ್ಲಿ ಕನ್ನಡದ ಸೂಪರ್‌ ಸ್ಟಾರ್ ಸಿನಿಮಾಗಳು ಕಲೆಕ್ಷನ್ ಮಾಡುವಂತೆ ಗಳಿಕೆ ಮಾಡಿರೋದು ವಿಶೇಷ. ಕರ್ನಾಟಕದಲ್ಲಿ ಈ ಸಿನಿಮಾದ ತಮಿಳು ವರ್ಷನ್ 190 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ತೆಲುಗು ವರ್ಷನ್ 80 ಸ್ಕ್ರೀನ್ ಹಾಗೂ ಹಿಂದಿ ವರ್ಷನ್ 35 ಸ್ಕ್ರೀನ್, ಕನ್ನಡ ಬೆರೆಳೆಣಿಕೆಯಷ್ಟು ಸ್ಕ್ರೀನ್ ರಿಲೀಸ್ ಆಗಿದೆ. ನಾಲ್ಕನೇ ದಿನ ಅಂದರೆ, ನಿನ್ನೆ ಭಾನುವಾರ (ಸೆಪ್ಟೆಂಬರ್ 8) ಗೋಟ್ ಕರ್ನಾಟಕದಲ್ಲಿ 4.6 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ವಿತರಕರ ವಲಯದಲ್ಲಿ ಹಾಕಿರುವ ಲೆಕ್ಕ.

Thalapathy Vijay movie GOAT box office collection day 4 Karnatara report

ಕರ್ನಾಟಕದ ನಾಲ್ಕು ದಿನಗಳ ಕಲೆಕ್ಷನ್ ಹೇಗಿದೆ?

ಕರ್ನಾಟಕದಲ್ಲಿ ಸುಮಾರು 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಗೋಟ್' ಸಿನಿಮಾ ರಿಲೀಸ್ ಆಗಿತ್ತು. ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾ 25.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 'ಗೋಟ್' ಮೊದಲ ದಿನ 12.8 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ರೆ, ಶುಕ್ರವಾರ 4 ಕೋಟಿ ರೂಪಾಯಿ, ಶನಿವಾರ 4.1 ಕೋಟಿ ರೂಪಾಯಿ ಹಾಗೂ ಭಾನುವಾರ 4.6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಕೊಟ್ಟಿದ್ದಾರೆ.

ನಾಲ್ಕನೇ ದಿನ ಕಲೆಕ್ಷನ್ ಹೇಗಿದೆ?

'ಗೋಟ್' ಸಿನಿಮಾ ಭಾರತದಾದ್ಯಂತ ನಿನ್ನೆ (ಸೆಪ್ಟೆಂಬರ್ 8) ಉತ್ತಮ ಗಳಿಕೆ ಮಾಡಿದೆ. ನಾಲ್ಕನೇ ದಿನ ಭಾರತದಾದ್ಯಂತ ಈ ಸಿನಿಮಾ 34.2 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಇದರಲ್ಲಿ ತಮಿಳು ವರ್ಷನ್ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಹಿಂದಿ ವರ್ಷನ್ 2.7 ಕೋಟಿ ರೂಪಾಯಿ ಹಾಗೂ ತೆಲುಗು ವರ್ಷನ್ 1.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.

ವಿಶ್ವದಾದ್ಯಂತ 'ಗೋಟ್' ಕಲೆಕ್ಷನ್ ಎಷ್ಟು?

380 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿದ್ದ 'ಗೋಟ್' ಸಿನಿಮಾ ಮೊದಲ ನಾಲ್ಕು ದಿನಗಳಲ್ಲಿಯೇ 300 ಕೋಟಿ ರೂಪಾಯಿ ಸಮೀಪಿಸಿದೆ. ಕೇವಲ ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ ಈ ಸಿನಿಮಾ 285 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇನ್ನೊಂದು ದಿನದಲ್ಲಿ ಈ ಸಿನಿಮಾ 300 ಕೋಟಿ ಕ್ಲಬ್ ಸೇರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Thalapathy Vijay movie GOAT box office collection day 4 Karnatara report
Read more about: vijay box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X