GOAT Box Office Day 6: 6ನೇ ದಿನ ವಿಜಯ್ ಸಿನಿಮಾ 'ಗೋಟ್' ಕಲೆಕ್ಷನ್‌ ಎಷ್ಟು? ಕರ್ನಾಟಕದಲ್ಲಿ ಹೇಗಿದೆ ಗಳಿಕೆ?

ದಳಪತಿ ವಿಜಯ್ ಸಿನಿಮಾ 'ಗೋಟ್' (GOAT) ತೆರೆಕಂಡು ಇಂದಿಗೆ 7ನೇ ದಿನ. ಮೊದಲ ನಾಲ್ಕು ದಿನ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ 'ಗೋಟ್' ಭರ್ಜರಿ ಕಲೆಕ್ಷನ್ ಮಾಡಿತ್ತು. ಅದರಲ್ಲೂ ಕರ್ನಾಟಕದಲ್ಲಿ ಸಿನಿಮಾದ ಕಲೆಕ್ಷನ್ ಕಮ್ಮಿಯೇನು ಇರಲಿಲ್ಲ. ಕನ್ನಡ ಸೂಪರ್‌ಸ್ಟಾರ್ ಸಿನಿಮಾಗಳು ಕಲೆಕ್ಷನ್ ಮಾಡುವಷ್ಟೇ ಇಲ್ಲೂ ಗಳಿಕೆ ಕಂಡಿದೆ. ಆದರೆ, ಮೊದಲ ಸೋಮವಾರದಿಂದ ಸಿನಿಮಾ ಗಳಿಕೆಯಲ್ಲಿ ಭಾರೀ ಇಳಿಕೆ ಕಂಡಿದೆ.

ದಳಪತಿ ಡಬಲ್ ರೋಲ್‌ನಲ್ಲಿ ನಟಿಸಿದ ಈ ಸಿನಿಮಾ ಪ್ರೇಕ್ಷಕರಿಗೆ ಕಿಕ್ ಕೊಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದ್ಯಾಕೋ ಸಿನಿಪ್ರಿಯರಿಗೆ ಈ ಸಿನಿಮಾ ಅಷ್ಟಾಗಿ ಹಿಡಿಸಿದಂತೆ ಕಾಣುತ್ತಿಲ್ಲ. ಅಲ್ಲದೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಪ್ರೇಕ್ಷಕರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದಕ್ಕೆ ಆಸಕ್ತಿ ತೋರದೆ ಇರಬಹುದು.

Thalapathy Vijay movie GOAT box office collection day 6 Karnatara report

'ಗೋಟ್' ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿತ್ತು. ವೆಂಕಟ್ ಪ್ರಭು ನಿರ್ದೇಶಿಸಿದ ಈ ಸಿನಿಮಾವನ್ನು ಎಜಿಎಸ್ ಎಂಟರ್‌ಟೈನ್ಮೆಂಟ್ ಸಂಸ್ಥೆ ನಿರ್ಮಾಣ ಮಾಡಿತ್ತು. ಇನ್ನು ದಳಪತಿ ವಿಜಯ್ ಜೊತೆ ಪ್ರಭುದೇವ, ಪ್ರಶಾಂತ್ ಅಂತಹ ದಿಗ್ಗಜರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೂ, ಎರಡನೇ ವಾರಕ್ಕೆ ಈ ಸಿನಿಮಾ ಯಾಕೋ ಡಲ್ ಹೊಡೆದಿದೆ. ಹಾಗಿದ್ದರೆ, ಕರ್ನಾಟಕದಲ್ಲಿ 6ನೇ ದಿನದ ಕಲೆಕ್ಷನ್ ಹೇಗಿದೆ? ತಿಳಿಯಲು ಮುಂದೆ ಓದಿ.

'ಗೋಟ್' 6ನೇ ದಿನದ ಕಲೆಕ್ಷನ್ ಹೇಗಿದೆ?

ದಳಪತಿ ವಿಜಯ್ ಸಿನಿಮಾ 'ಗೋಟ್' 6ನೇ ದಿನಕ್ಕೆ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಡ್ರಾಪ್ ಆಗಿದೆ. ಭಾರತದಾದ್ಯಂತ ಎಲ್ಲಾ ಭಾಷೆಯಲ್ಲೂ ಈ ಸಿನಿಮಾ ಡ್ರಾಪ್ ಕಂಡಿದೆ. ಆದರೆ, ವೀಕೆಂಡ್‌ಗೆ ಮತ್ತೆ ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಾಣುವ ನಿರೀಕ್ಷೆಯಿದೆ. ಇನ್ನು 6ನೇ ದಿನ ಅಂದರೆ, ನಿನ್ನೆ (ಸೆಪ್ಟೆಂಬರ್ 10)ಕರ್ನಾಟಕದಲ್ಲಿ ಕೇವಲ 1 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂಬುದು ವಿತರಕರ ಲೆಕ್ಕ. ಇಲ್ಲಿವರೆಗೂ ಅತೀ ಕಡಿಮೆ ಗಳಿಕೆಯನ್ನು ಬಾಕ್ಸಾಫೀಸ್‌ನಲ್ಲಿ ದಾಖಲಿಸಿದೆ.

6 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಗೋಟ್' ಕರ್ನಾಟಕದಲ್ಲಿ ಮೊದಲ ನಾಲ್ಕು ದಿನ ಭರ್ಜರಿ ಕಲೆಕ್ಷನ್ ಮಾಡಿತ್ತು. ಸುಮಾರು 300 ಅಧಿಕ ಸ್ಕ್ರೀನ್‌ಗಳಲ್ಲಿ 'ಗೋಟ್' ಸಿನಿಮಾ ತೆರೆಕಂಡಿತ್ತು. ಮೊದಲ ದಿನ 12.8 ಕೋಟಿ ರೂಪಾಯಿ, ಎರಡನೇ ದಿನ 4 ಕೋಟಿ ರೂಪಾಯಿ, ಮೂರನೇ ದಿನ 4.1 ಕೋಟಿ ರೂಪಾಯಿ, 4ನೇ ದಿನ 4.6 ಕೋಟಿ ರೂಪಾಯಿ, 5ನೇ ದಿನ 1.3 ಕೋಟಿ ರೂಪಾಯಿ ಹಾಗೂ 6ನೇ ದಿನ 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, 27.8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್ಸ್. ಆದರೆ, ಕರ್ನಾಟಕದ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

Thalapathy Vijay movie GOAT box office collection day 6 Karnatara report

ಭಾರತದಲ್ಲಿ 6ನೇ ದಿನದ ಕಲೆಕ್ಷನ್ ಎಷ್ಟು?

ಇನ್ನು ಭಾರತದಾದ್ಯಂತ ದಳಪತಿ ವಿಜಯ್ ಸಿನಿಮಾ 'ಗೋಟ್' ಕಲೆಕ್ಷನ್ ಮತ್ತೆ ಶೇ.29ರಷ್ಟು ಡ್ರಾಪ್ ಆಗಿದೆ. ಸೋಮವಾರ 'ಗೋಟ್' ಕೇವಲ 14.75 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಅದೇ ಮಂಗಳವಾರ ಅಂದರೆ, ನಿನ್ನೆ (ಸೆಪ್ಟೆಂಬರ್ 10) ಈ ಸಿನಿಮಾದ ಕಲೆಕ್ಷನ್ 10.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಆರು ದಿನಗಳಲ್ಲಿ ಈ ಸಿನಿಮಾ ಭಾರತದ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು 162.25 ಕೋಟಿ ರೂಪಾಯಿ ಎಂದು ವರದಿಯಾಗಿದೆ.

₹300 ಕೋಟಿ ಕ್ಲಬ್ ಸೇರಿದ 'ಗೋಟ್'

'ಗೋಟ್' ವಿಶ್ವದಾದ್ಯಂತ ಮೊದಲ ಐದು ದಿನಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಕೇವಲ ಐದೇ ದಿನಕ್ಕೆ ಈ ಸಿನಿಮಾ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ 300 ಕೋಟಿ ಕ್ಲಬ್ ಸೇರಿದ ಕಂಡ ವಿಜಯ್ ಎರಡನೇ ಸಿನಿಮಾ ಆಗಿದೆ. ಅದಕ್ಕೂ ಮೊದಲು 'ಲಿಯೋ' ಕೂಡ 300 ಕೋಟಿ ರೂಪಾಯಿಯ ಗಡಿ ದಾಟಿತ್ತು. ಸದ್ಯ ಸಿನಿಮಾ ತಂಡ 400 ಕೋಟಿ ಗಳಿಕೆ ಮಾಡಬಹುದೆಂದು ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಆದರೆ, ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ದುಪ್ಪಟ್ಟು ಆಗಬೇಕಿದೆ.

More from Filmibeat

English summary
Thalapathy Vijay movie GOAT box office collection day 6 Karnatara report:
Read more about: vijay box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X