GOAT Box Office Day 8: 8ನೇ ದಿನ ಕರ್ನಾಟಕದಲ್ಲಿ 'ಗೋಟ್' ಆರ್ಭಟ ಹೇಗಿದೆ? ಕಡಿಮೆ ಆಯ್ತಾ? ಜಾಸ್ತಿ ಆಯ್ತಾ?

'ದಿ ಗ್ರೇಟೆಸ್ಟ್ ಆಫ್ ಆಲ್‌ ಟೈಮ್' (GOAT) ದಳಪತಿ ವಿಜಯ್ ಸಿನಿಮಾ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ರಾಜಕೀಯದ ಕಡೆ ಮುಖ ಮಾಡಿರುವ ವಿಜಯ್ ಇನ್ನೊಂದು ಸಿನಿಮಾದಲ್ಲಿ ಮಾತ್ರ ನಟಿಸುತ್ತಾರೆ. ಈ ಕಾರಣಕ್ಕೆ ವಿಜಯ್ ಫ್ಯಾನ್ಸ್ ಹಾಗೂ ತಮಿಳಿನ ಪ್ರೇಕ್ಷಕರಿಂದ 'ಗೋಟ್' ಅದ್ಭುತ ರೆಸ್ಪಾನ್ಸ್ ಸಿಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಎರಡನೇ ವಾರಕ್ಕೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಡಬ್ ಹೊಡೆದಿದೆ.

'ಗೋಟ್' ರಿಲೀಸ್ ಆದ ಮೊದಲ ನಾಲ್ಕು ದಿನ ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಆಗಿತ್ತು. ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಹೊಸ ಇತಿಹಾಸವನ್ನು ಸೃಷ್ಟಿ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ. ಎರಡನೇ ವಾರಕ್ಕೆ 'ಗೋಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿಧಾನವಾಗಿ ಮುಗ್ಗರಿಸುತ್ತಲೇ ಇತ್ತು.

Thalapathy Vijay movie GOAT box office collection day 8 Karnatara report

ಮೊದಲ ವಾರ ಮುಗಿಯುವುದರೊಳಗೆ 'ಗೋಟ್' ವಿಶ್ವದಾದ್ಯಂತ ಸುಮಾರು 300 ಕೋಟಿ ರೂಪಾಯಿಯನ್ನು ಬಾಕ್ಸಾಫೀಸ್‌ನಲ್ಲಿ ಕಲೆ ಹಾಕಿತ್ತು. ಆದರೆ, 5ನೇ ದಿನದಿಂದ ಪ್ರೇಕ್ಷಕರನ್ನು ಥಿಯೇಟರ್‌ ಇನ್ನಷ್ಟು ಕಡೆಗೆ ಎಳೆದಿದ್ದರೆ, ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ದಾಖಲೆಯಬಹುದಾಗಿತ್ತು. ಇನ್ನು ಕರ್ನಾಟಕದಲ್ಲಿ ಈ ಸಿನಿಮಾ ಡಿಸೆಂಟ್ ಕಲೆಕ್ಷನ್ ಮಾಡಿದ್ದು, ವಿತರಕರಿಗೆ ನಷ್ಟ ಆಗಿಲ್ಲ ಅಂತ ಚರ್ಚೆಯಾಗುತ್ತಿದೆ. ಇನ್ನು 8ನೇ ದಿನವೂ ಕಲೆಕ್ಷನ್ ಡ್ರಾಪ್ ಆಗಿದ್ದು, ಇಂದಿನಿಂದ ಏರಿಕೆ ಆಗುವ ನಿರೀಕ್ಷೆಯಿದೆ.

'ಗೋಟ್' 8ನೇ ದಿನ ಕರ್ನಾಟಕ ಕಲೆಕ್ಷನ್

ದಳಪತಿ ವಿಜಯ್ ಸಿನಿಮಾಗೆ ಕರ್ನಾಟಕದಲ್ಲೂ ಒಳ್ಳೆಯ ಮಾರ್ಕೆಟ್ ಇದೆ. ಹಿಂದಿನಿಂದಲೂ ಇವರ ಸಿನಿಮಾಗಳು ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಬರುತ್ತಿದೆ. ಆದರೆ, ಈ ಬಾರಿ ನಿರೀಕ್ಷೆ ಮಾಡಿದ ಮಟ್ಟಿಗೆ ಆಗಿಲ್ಲ. ಮೊದಲ ನಾಲ್ಕು ದಿನಗಳಲ್ಲಿ ವಿತರಕರಿಗೆ ಬಂದ ಲಾಭವೇ ಗಟ್ಟಿ ಎನ್ನಲಾಗಿದೆ. ಆದರೂ, ಕರ್ನಾಟಕದಲ್ಲಿ 8ನೇ ದಿನದ ಕಲೆಕ್ಷನ್ 80 ರಿಂದ 85 ಲಕ್ಷ ರೂಪಾಯಿ ಎಂದು ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಿದ್ದಾರೆ.

Thalapathy Vijay movie GOAT box office collection day 8 Karnatara report

8 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಗೋಟ್' ಕರ್ನಾಟಕದಲ್ಲಿ ಸುಮಾರು 300 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಮೊದಲ ನಾಲ್ಕು ದಿನ 25.4 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೆ, ಇನ್ನು ನಾಲ್ಕು ದಿನಗಳಲ್ಲಿ ಆಗಿದ್ದು, ಬರೀ 4 ಕೋಟಿ ರೂಪಾಯಿ. ಇಲ್ಲಿವರೆಗೂ ಒಟ್ಟಿ 29 ಕೋಟಿ ರೂಪಾಯಿಯಿಂದ 30 ಕೋಟಿಯ ಆಸುಪಾಸಿನಲ್ಲಿ ಕಲೆಕ್ಷನ್ ಆಗಿದೆ ಎಂದು ಕರ್ನಾಟಕದ ವಿತರಕರು ಹಾಕಿರುವ ಲೆಕ್ಕ. 'ಗೋಟ್' ಟೀಮ್ ಇನ್ನೂ ಕರ್ನಾಟಕದ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊರ ಹಾಕಿಲ್ಲ.

ಭಾರತದಾದ್ಯಂತ ಹೇಗಿದೆ ಕಲೆಕ್ಷನ್ ?

ವೆಂಕಟ್ ಪ್ರಭು ನಿರ್ದೇಶನದ ಈ ಸಿನಿಮಾ ತೆಲುಗು, ಹಿಂದಿ ಹಾಗೂ ಕೇರಳದ ಪ್ರೇಕ್ಷಕರು ಆಸಕ್ತಿ ತೋರಿಲ್ಲ. ಒಂದು ವೇಳೆ ಈ ರಾಜ್ಯಗಳಲ್ಲೂ ಸಿನಿಮಾ ಕಲೆಕ್ಷನ್ ದುಪ್ಪಟ್ಟಾಗಿದ್ದರೆ, ಹೊಸ ದಾಖಲೆ ಸೃಷ್ಟಿಯಾಗುತ್ತಿತ್ತು. ಇನ್ನು ಎಂಟನೇ ದಿನ ಭಾರತದಾದ್ಯಂತ ಕೇವಲ 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು Sacnilk ಲೆಕ್ಕ ಕೊಟ್ಟಿದೆ. ಈ ಮೂಲಕ ಭಾರತದಲ್ಲಿ 'ಗೋಟ್' ಗಳಿಸಿದ್ದು, 177.75 ಕೋಟಿ ರೂಪಾಯಿ.

ವಿಶ್ವದಾದ್ಯಂತ ಹೇಗಿದೆ ಕಲೆಕ್ಷನ್?

ಓವರ್‌ಸೀಸ್ ಮಾರ್ಕೆಟ್‌ನಲ್ಲಿ 'ಗೋಟ್' ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಲ್ಲಿವರೆಗೂ ಸುಮಾರು 135 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಒಟ್ಟು 342.68 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಈ ವಾರಾಂತ್ಯದಲ್ಲಿ 'ಗೋಟ್' 350 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ.

More from Filmibeat

English summary
Thalapathy Vijay movie GOAT box office collection day 8 Karnatara report:
Read more about: vijay box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X