Vijay Rally Tragedy: ವಿಜಯ್ ರ‍್ಯಾಲಿ ದುರಂತ; ವಿಡಿಯೋ ಶೇರ್ ಮಾಡಿ ದಿಢೀರನೇ ಡಿಲೀಟ್ ಮಾಡಿದ್ದೇಕೆ ನಟಿ ತ್ರಿಶಾ?
ತಮಿಳುನಾಡಿನ ಕರೂರಿನ ಜನರು ನಿಜಕ್ಕೂ ಆಘಾತಕ್ಕೆ ಒಳಗಾಗಿದ್ದಾರೆ. ಇಂತಹದ್ದೊಂದು ಘಟನೆ ನಡೆಯುತ್ತೆ ಅನ್ನೋ ಚಿಕ್ಕದೊಂದು ಸುಳಿವು ಯಾರಿಗೂ ಇರಲಿಲ್ಲ. ನಟ ಹಾಗೂ ತಮಿಳಿಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ವಿಜಯ್ ಆಯೋಜಿಸಿದ್ದ ರಾಜಕೀಯ ಸಮಾವೇಶ ದುರಂತದಲ್ಲಿ ಅಂತ್ಯವಾಗಿದೆ. ಕಾಲ್ತುಳಿತಕ್ಕೆ ಸುಮಾರು 39 ಮಂದಿ ಜನರು ಸಾವನ್ನಪ್ಪಿದ್ದಾರೆ. ಈ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.
ಇಲ್ಲಿವರೆಗೂ ಕರೂರಿನ ಈ ದುರಂತದಲ್ಲಿ ಸುಮಾರು 39ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಈ ಸಮಾವೇಶದಲ್ಲಿ 50ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಈ ಘಟನೆ ನಡೆದ ಕ್ಷಣದಿಂದ ವಿಜಯ್ ಹಾಗೂ ಅವರ ಪಕ್ಷದ ಕಾರ್ಯಕರ್ತರನ್ನು ವಿರುದ್ಧ ಅಸಮಧಾನದ ಹೊಗೆ ಎದ್ದೇಳುತ್ತಲೇ ಇದೆ.

ಸೋಶಿಯಲ್ ಮೀಡಿಯಾದಲ್ಲಿ ಈ ದುರಂತವನ್ನು ಖಂಡಿಸಲಾಗುತ್ತಿದೆ. ಈ ಘಟನೆಯ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನೂರು ವಿಡಿಯೋಗಳು ಹರಿದಾಡುತ್ತಿವೆ. ಅದರಲ್ಲಿ ಲೋಗೇಶ್ ಬಾಲಚಂದ್ರನ್ ಎಂಬುವವರು ಈ ದುರಂತದ ಕುರಿತಾಗಿ ಒಂದು ವಿಡಿಯೋವನ್ನು ಮಾಡಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಆ ವಿಡಿಯೋವನ್ನು ನಟಿ ತ್ರಿಶಾ ಕೂಡ ಪೋಸ್ಟ್ ಮಾಡಿದ್ದರು. ಆದರೆ, ಕ್ಷಣಮಾತ್ರದಲ್ಲಿ ಅದು ಡಿಲೀಟ್ ಆಗಿದೆ.
ಈ ದುರಂತದಲ್ಲಿ ಪುರುಷರು-ಮಹಿಳೆಯರ ಜೊತೆಗೆ 10 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಸಂಬಂಧ ಲೋಗೇಶ್ ಬಾಲಚಂದ್ರನ್ ಎಂಬುವವರು ಈ ಘಟನೆ ಕುರಿತು ವಿಡಿಯೋ ಮಾಡಿದ್ದರು. ಇದರಲ್ಲಿ ಕುರೂರು ದುರಂತದಲ್ಲಿ ಮಕ್ಕಳ ಸಾವನ್ನಪ್ಪಿರುವ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆ ವಿಡಿಯೋವನ್ನು ನಟಿ ತ್ರಿಶಾ ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು.
ಲೇಗೇಶ್ ಮಾಡಿರುವ ವಿಡಿಯೋದಲ್ಲಿ ಏನಿದೆ ಅಂತ ನೋಡುವುದಾರೇ, "ಈ ರಾಜಕೀಯ ಸಮಾವೇಶದಲ್ಲಿ ಮಕ್ಕಳಿಗೆ ಏನು ಕೆಲಸ? ಚಿಕ್ಕ ಪುಟ್ಟ ಮಕ್ಕಳನ್ನು ರಾಜಕೀಯ ಸಮಾವೇಶಗಳಿಗೆ ಕರೆದುಕೊಂಡು ಬರುತ್ತೀರಾ? ನೀವು ವಿಜಯ್ ಅವರ ಎಷ್ಟೇ ದೊಡ್ಡ ಅಭಿಮಾನಿಯಾಗಿದ್ದರೂ ಸರಿ. ಇಂತಹ ಸಮಾರಂಭಗಳಲ್ಲಿ ಮಕ್ಕಳು ಯಾಕೆ ಬರಬೇಕು? ಇನ್ನೂ ಎಷ್ಟು ಜೀವಗಳನ್ನು ಕಳೆದುಕೊಳ್ಳುತ್ತೀರಿ?" ಎಂದು ಪ್ರಶ್ನೆ ಮಾಡಿದ್ದರು.
ಇಷ್ಟೇ ಅಲ್ಲದೆ, "ಸೂಪರ್‌ಸ್ಟಾರ್‌ಗಳು ಬೀದಿಗೆ ಇಳಿದರೆ ಖಂಡಿತಾವಾಗಿಯೂ ದೊಡ್ಡ ಮಟ್ಟದಲ್ಲಿ ಜನರು ಸೇರುತ್ತಾರೆ. 18 ವರ್ಷಕ್ಕಿಂತ ಮೇಲ್ಪಟ್ಟವರು ಸ್ವಂತ ಬುದ್ದಿಯಿಂದ ಹೋಗುತ್ತೀರಿ. ಆದರೆ, ಮಕ್ಕಳನ್ನು ಯಾಕೆ ಕರೆದುಕೊಂಡು ಹೋಗಬೇಕು? ರಾಜಕೀಯ ಸಿನಿಮಾ ಅಲ್ಲ ಅನ್ನೋದ್ಯಾವಾಗ ಅರ್ಥ ಆಗುತ್ತೋ ಆಗ ಎಲ್ಲವೂ ಬದಲಾಗುತ್ತೆ" ಎಂದು ನೆಟ್ಟಿಗ ಲೋಗೇಶ್ ಬಾಲಚಂದ್ರನ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು.
ಈ ವಿಡಿಯೋವನ್ನು ನಟಿ ತ್ರಿಶಾ ಕೂಡ ಶೇರ್ ಮಾಡಿದ್ದರು. ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ನಟಿ ಆ ಪೋಸ್ಟ್ ಅನ್ನು ಶೇರ್ ಮಾಡಿದ್ದು ಏಕೆ? ಯಾರ ಒತ್ತಡಕ್ಕೆ ಡಿಲೀಟ್ ಮಾಡಿದ್ರು? ಈ ಎಲ್ಲಾ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.
ವಿಜಯ್ ದಳಪತಿ ಈ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮೃತ ಕುಟುಂಬಗಳಿಗೆ ₹20 ಲಕ್ಷ ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಗಾಯಗೊಂಡವರಿಗೆ ತಲಾ ಎರಡು ಲಕ್ಷ ಹಣವನ್ನು ನೀಡುವುದಾಗಿ ಹೇಳಿದ್ದಾರೆ. ಇದರ ಜೊತೆ ಮೃತ ಕುಟುಂಬಕ್ಕೆ ಸಂದೇಶವನ್ನೂ ರವಾನೆ ಮಾಡಿದ್ದಾರೆ. "ಕುಟುಂಬಗಳಿಗಾದ ನಷ್ಟದ ಮುಂದೆ ಇದು ದೊಡ್ಡ ಮೊತ್ತವಲ್ಲ. ಹೀಗಿದ್ದರೂ, ಇಂತಹ ಸಮಯದಲ್ಲಿ ನಿಮ್ಮೊಂದಿಗೆ ಮಾನಸಿಕವಾಗಿ ನಿಲ್ಲುವುದು ನಿಮ್ಮ ಕುಟುಂಬದ ಒಬ್ಬ ಸದಸ್ಯನಾಗಿ ನನ್ನ ಕರ್ತವ್ಯ. ಹಾಗೇ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನನ್ನ ಎಲ್ಲಾ ಸಹೋದರರು ಕೂಡ ಶೀಘ್ರವಾಗಿ ಗುಣಮುಖರಾಗಿ ಮನೆಗೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಚಿಕಿತ್ಸೆ ಪಡೆಯುತ್ತಿರುವ ಸಹೋದರರಿಗೆ ತಮಿಳುಗ ವೆಟ್ರಿ ಕಳಗಂ ಪಕ್ಷ ಖಂಡಿತಾ ಸಹಾಯ ಮಾಡುತ್ತದೆ" ಎಂದು ವಿಜಯ್ ಭಾವುಕರಾಗಿ ಮಾತಾಡಿದ್ದಾರೆ.


Click it and Unblock the Notifications











