Vijay Vs Ajith: 9 ವರ್ಷಗಳ ಬಳಿಕ ವಿಜಯ್ Vs ಅಜಿತ್: ದಳಪತಿ ಫಸ್ಟ್ ರಿಯಾಕ್ಷನ್ ಏನು?

ದಕ್ಷಿಣ ಭಾರತದಲ್ಲಿ ಸ್ಟಾರ್ ವಾರ್ ಅನ್ನೋದು ನಡೀತಾನೇ ಇರುತ್ತೆ. ಹಾಗಂತ ಅಭಿಮಾನಿಗಳಿಗೆ ಇದು ಹೊಸತೇನು ಅಲ್ಲ. ಅದರಲ್ಲೂ ತಮಿಳು ಚಿತ್ರರಂಗದಲ್ಲಿ ಸೂಪರ್‌ಸ್ಟಾರ್‌ಗಳ ಕ್ಲ್ಯಾಶ್ ನಡೀತಾನೇ ಇರುತ್ತೆ.

ಸಿನಿಮಾ ಅಂತ ಬಂದಾಗ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅಭಿಮಾನಿಗಳ ನಡುವೆ ಕ್ಲ್ಯಾಶ್ ಆಗಿದೆ. ಹಾಗೇ ದಳಪತಿ ವಿಜಯ್ ಹಾಗೂ ಅಜಿತ್ ಕುಮಾರ್ ಅಭಿಮಾನಿಗಳ ಮಧ್ಯೆ ಸಿನಿಮಾ ವಿಚಾರದಲ್ಲಿ ಟಾಕ್ ಫೈಟ್ ನಡೆಯುತ್ತಲೇ ಇರುತ್ತೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಅಭಿಮಾನಿಗಳು ಕಿತ್ತಾಡುತ್ತಲೇ ಇರುತ್ತಾರೆ.

ಈಗ ಮತ್ತೊಮ್ಮೆ ದಳಪತಿ ವಿಜಯ್ ಸೇತುಪತಿ ಹಾಗೂ ಅಜಿತ್ ಕುಮಾರ್ ಇಬ್ಬರ ಸಿನಿಮಾಗಳೂ ಹೆಚ್ಚು ಕಡಿಮೆ ಒಂದೇ ದಿನ ಬಿಡುಗಡೆಯಾಗುತ್ತೆ ಅನ್ನೋ ಸುದ್ದಿ ಓಡಾಡುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ದಳಪತಿ ವಿಜಯ್ ಪ್ರತಿಕ್ರಿಯೆ ಏನಾಗಿತ್ತು? ಅನ್ನೋ ಡಿಟೈಲ್ಸ್ ಇಲ್ಲಿದೆ.

ಪೊಂಗಲ್‌ನಲ್ಲಿ 'ವಿಜಯ್ Vs ಅಜಿತ್'

ಪೊಂಗಲ್‌ನಲ್ಲಿ 'ವಿಜಯ್ Vs ಅಜಿತ್'

ದಳಪತಿ ವಿಜಯ್ ಹಾಗೂ ಅಜಿತ್ ಕುಮಾರ್ ಇಬ್ಬರೂ ತಮಿಳು ಚಿತ್ರರಂಗದ ಬಿಗ್ ಸ್ಟಾರ್‌ಗಳೇ. ಇಬ್ಬರ ಸಿನಿಮಾಗಳೂ ಕೂಡ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತವೆ. ಕೋಟಿ ಕೋಟಿ ಹಣವನ್ನು ಲೂಟಿ ಮಾಡುತ್ತವೆ. ಸದ್ಯ ದಳಪತಿ ವಿಜಯ್ ಅಭಿನಯದ 'ವಾರಿಸು' ಹಾಗೂ ಅಜಿತ್ ಕುಮಾರ್ ಸಿನಿಮಾ 'ಥುನಿವು' ಬಿಡುಗಡೆ ಸಜ್ಜಾಗಿ ನಿಂತಿದೆ. ಮೂಲಗಳ ಈ ಎರಡೂ ಸಿನಿಮಾಗಳೂ 2023 ಜನವರಿ ತಿಂಗಳಲ್ಲಿ 'ಪೊಂಗಲ್' ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಇಬ್ಬರ ಅಭಿಮಾನಿಗಳೂ ಈ ಬಿಗ್ ಕ್ಲ್ಯಾಶ್‌ ಅನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

9 ವರ್ಷಗಳ ಬಳಿಕ ಮುಖಾಮುಖಿ

9 ವರ್ಷಗಳ ಬಳಿಕ ಮುಖಾಮುಖಿ

ದಳಪತಿ ವಿಜಯ್ ಹಾಗೂ ಅಜಿತ್ ಕುಮಾರ್ ಇಬ್ಬರ ಸಿನಿಮಾಗಳು ಈ ಹಿಂದೆ ಒಂದೇ ದಿನ ರಿಲೀಸ್ ಆಗಿತ್ತು. 2014 ಜನವರಿ 10 ರಂದು ದಳಪತಿ ವಿಜಯ್ ನಟಿಸಿದ್ದ 'ಜಿಲ್ಲಾ' ಹಾಗೂ ಅಜಿತ್ ನಟನೆಯ 'ವೀರಂ' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದವು. ಆಗ 'ಜಿಲ್ಲಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟೇನು ಜಾದು ಮಾಡಿರಲಿಲ್ಲ. ಅಜಿತ್ ಕುಮಾರ್ ಸಿನಿಮಾ 'ವೀರಂ' ಗೆದ್ದು ಬೀಗಿತ್ತು. ಈಗ 9 ವರ್ಷಗಳ ಬಳಿಕ ಮತ್ತೆ ವಿಜಯ್ ಹಾಗೂ ಅಜಿತ್ ಸಿನಿಮಾ ಮತ್ತೆ ಯುದ್ಧಕ್ಕೆ ಇಳಿಯುತ್ತಿದೆ. 'ವಾರಿಸು' ಹಾಗೂ 'ಥುನಿವು' ಈ ಎರಡೂ ಸಿನಿಮಾಗಳಲ್ಲಿ ಯಾವುದು ಗೆಲ್ಲುತ್ತೆ ಅನ್ನೋ ಕುತೂಹಲವಿದೆ. ಈ ಕ್ಲ್ಯಾಶ್ ಬಗ್ಗೆ ವಿಜಯ್ ಪ್ರತಿಕ್ರಿಯೆ ಹೇಗಿತ್ತು? ಅನ್ನೋದನ್ನು ನಟ ಶ್ಯಾಮ್ ರಿವೀಲ್ ಮಾಡಿದ್ದಾರೆ.

ವಿಜಯ್ ಪ್ರತಿಕ್ರಿಯೆ ಏನು?

ವಿಜಯ್ ಪ್ರತಿಕ್ರಿಯೆ ಏನು?

ಇತ್ತೀಚೆಗೆ ತಮಿಳು ನಟಿ ಶ್ಯಾಮ್ ಸಂದರ್ಶನವೊಂದರಲ್ಲಿ ದಳಪತಿ ವಿಜಯ್ ಪ್ರತಿಕ್ರಿಯೆ ಏನಾಗಿತ್ತು? ಅನ್ನೋದನ್ನು ತಿಳಿಸಿದ್ದಾರೆ. 'ವಾರಿಸು' ಸಿನಿಮಾದಲ್ಲಿ ಶ್ಯಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್‌ಗೆ ಅಜಿತ್ ಸಿನಿಮಾ 'ಥುನಿವು' ಕೂಡ ರಿಲೀಸ್ ಆಗುತ್ತಿದೆ ಅನ್ನೋದು ತಿಳಿಯುತ್ತಿದಂತೆ ಖುಷಿ ವ್ಯಕ್ತಪಡಿಸಿದ್ದರು. " ಹೇ ಜಾಲಿ.. ಅಜಿತ್ ನನ್ನ ಸ್ನೇಹಿತ.. ಎರಡೂ ಸಿನಿಮಾ ಒಟ್ಟಿ ರಿಲೀಸ್ ಆಗಲಿ. ಥುನಿವು ಹಾಗೂ ನಮ್ಮ ಸಿನಿಮಾ ಎರಡೂ ಗೆಲ್ಲಲಿ" ಎಂದು ದಳಪತಿ ವಿಜಯ್ ಹೇಳಿದ್ದಾಗಿ ತಿಳಿಸಿದ್ದಾರೆ.

ಎರಡೂ ಸಿನಿಮಾಗಳ ಹೈಲೈಟ್ ಏನು?

ಎರಡೂ ಸಿನಿಮಾಗಳ ಹೈಲೈಟ್ ಏನು?

ದಳಪತಿ ವಿಜಯ್ ಹಾಗೂ ವಂಶಿ ಕಾಂಬಿನೇಷನ್‌ ಸಿನಿಮಾ 'ವಾರಿಸು'. ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ವಿಜಯ್ ವಾರಿಸು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸುತ್ತಿದ್ದಾರೆ. ಇನ್ನೊಂದು ಕಡೆ ಅಜಿತ್ ಸಿನಿಮಾವನ್ನು ಹೆಚ್ ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ. ಕೆಲವು ಮೂಲಗಳ ಪ್ರಕಾರ, ಇಲ್ಲಿ ಅಜಿತ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Thalapathy Vijay reacts to Ajith kumar starrer Thunivu and Varisu Movie Clash, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X