ಪತ್ನಿ ಸಂಗೀತಾಗೆ ವಿಜಯ್ ಕೊಡಲು ಮುಂದಾಗಿದ್ದು ಹತ್ತಿಪ್ಪತ್ತು ಕೋಟಿ ಅಲ್ಲ; ರಾಜಿಯಾದ್ರೆ ಸಿಗೋದಿಷ್ಟು ಕೋಟಿ?

ದಳಪತಿ ವಿಜಯ್ ಜೋಷ್‌ನಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ತಮಿಳುನಾಡಿನ ಜನರು ಕೂಡ ವಿಜಯ್ ಎಂಟ್ರಿಗೆ ಬೆಂಬಲ ಸೂಚಿಸುತ್ತಿದ್ದರು. ತಮ್ಮ ವೃತ್ತಿ ಬದುಕಿನಲ್ಲಿ ಎಲ್ಲೂ ಕಪ್ಪು ಚುಕ್ಕೆ ಬಾರದೆ ಇರುವಂತೆ ನೋಡಿಕೊಂಡಿದ್ದರು. ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ, ಸಮಾಜಕ್ಕೆ ಸಂದೇಶ ನೀಡುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಜನಪ್ರಿಯತೆಯ ಹಿನ್ನೆಲೆಯಲ್ಲಿಯೇ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು.

ಇನ್ನೇ ತಮ್ಮದೇ ಸ್ವಂತ ರಾಜಕೀಯ ಪಕ್ಷ ಕಟ್ಟಿ ಈ ಬಾರಿ ಚುನಾವಣೆಗೆ ಧುಮಕಬೇಕು ಅಷ್ಟರಲ್ಲಿಯೇ ವಿಜಯ್ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಸರಿಯಾದ ಸಮಯಕ್ಕೆ ವಿಜಯ್ ಪತ್ನಿ ಸಂಗೀತಾ ವಿಚ್ಚೇದನದಲ್ಲೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದು ರಾಜಕೀಯವಾಗಿ ಬೆಳೆಯಬೇಕು ಅಂತಿರೋ ದಳಪತಿ ವಿಜಯ್‌ಗೆ ಹಿನ್ನೆಲೆಯಾಗಿದೆ. ಇಲ್ಲಿವರೆಗೂ ರಾಜಕೀಯ ಪಕ್ಷಗಳಿಗೆ ಒಳ್ಳೆಯ ಫೈಟ್ ಕೊಡಬಹುದೆಂಬ ಲೆಕ್ಕಾಚಾರವಿತ್ತು. ಅದೆಲ್ಲ ಈಗ ತಲೆ ಕೆಳಗಾಗಿದೆ.

Thalapathy Vijay ready to give Rs 250 crore to wife Sangeetha on this condition

ಸಂಗೀತಾ ತಮ್ಮ ದೂರಿನಲ್ಲಿ ವಿಜಯ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ತಮಿಳಿನ ಜನಪ್ರಿಯ ನಟಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆಂದು ಆರೋಪಿಸಲಾಗಿದೆ. ಇದು ವಿಜಯ್ ಮೇಲಿದ್ದ ಜನರ ಅಭಿಪ್ರಾಯ ಬದಲಾಗುವ ಸಾಧ್ಯತೆಯಿದೆ. ಹೀಗಾಗಿ ವಿಜಯ್ ಪತ್ನಿಯ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. ಒಂದು ಷರತ್ತಿನ ಮೇಲೆ ಬಾರೀ ದೊಡ್ಡ ಮೊತ್ತವನ್ನು ಪತ್ನಿಗೆ ನೀಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಹೌದು, ಪತ್ನಿ ಸಂಗೀತಾ ವಿಚ್ಚೇದನಕ್ಕೆ ಮುಂದಾಗುತ್ತಿದ್ದಂತೆ ವಿಜಯ್ ಜಾಣ ಇಟ್ಟಿದ್ದಾರೆ. ತನ್ನ ಆಪ್ತರನ್ನು ಮುಂದೆ ಬಿಟ್ಟಿ ಪತ್ನಿ ಸಂಗೀತಾ ಅವರೊಂದಿಗೆ ರಾಜಿ ಮಾತುಕಥೆ ನಡೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಧಾನದ ಮೂಲಕ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನು ಪತ್ನಿ ಸಂಗೀತಾ ವಿಚ್ಛೇದನದ ಹಾದಿ ಹಿಡಿಯುತ್ತಿದ್ದಂತೆ ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡದಂತೆ ಟಿವಿಕೆ ಪಕ್ಷದ ಮುಖಂಡರಿಗೆ ಮೌಖಿಕ ಆದೇಶ ನೀಡಲಾಗಿದೆ. ಇದೇ ಸಮಯದಲ್ಲಿ ದಳಪತಿ ವಿಜಯ್ ಕಡೆಯಿಂದ ರಾಜಿ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಪತ್ನಿ ಸಂಗೀತಾ, ಮಗ ಮತ್ತು ಮಗಳಿಗೆ ದೊಡ್ಡ ಮೊತ್ತದ ಹಣವನ್ನು ಒಂದು ಷರತ್ತಿನ ಮೇರೆಗೆ ನೀಡಿರುವುದಾಗಿ ವಿಜಯ್ ಹೇಳಿದ್ದಾರೆ ಎಂದು ವರದಿಯಾಗಿದೆ.

Thalapathy Vijay ready to give Rs 250 crore to wife Sangeetha on this condition

ವಿಜಯ್ ಬಳಿ ₹600 ಕೋಟಿ ಆಸ್ತಿಯಿದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಇದರಲ್ಲಿ ₹250 ಕೋಟಿ ನೀಡುವ ಬಗ್ಗೆ ಪ್ರಸ್ತಾಪ ಇಡಲಾಗಿದೆ ಎನ್ನಲಾಗಿದೆ. ಷರತ್ತು ಏನಂದ್ರೆ, ಸಂಗೀತಾ ಅವರು ತಮ್ಮ ವಿಚ್ಛೇದನದ ಅರ್ಜಿಯನ್ನು ಈ ಕೂಡಲೇ ಹಿಂಪಡೆಯಬೇಕು ಎಂಬುವುದು ವಿಜಯ್ ಅವರ ಪ್ರಮುಖ ಬೇಡಿಕೆ. ಈ ಸುದ್ದಿಯನ್ನು ತಮಿಳಿನ ಪ್ರಮುಖ ಸುದ್ದಿ ಮಾಧ್ಯಮ ಕುಮುದಂನಲ್ಲಿ ವರದಿ ಮಾಡಲಾಗಿದೆ. ವಿಜಯ್ ಹಾಗೂ ಸಂಗೀತಾ ಇಬ್ಬರ ರಾಜಿ ಮಾತುಕತೆಗಳ ಬಗ್ಗೆ ವರದಿ ಮಾಡಲಾಗಿದೆ. ಇನ್ನು ದಳಪತಿ ವಿಜಯ್ ಕಡೆಯ ಈ ಪ್ರಸ್ತಾಪಕ್ಕೆ ಸಂಗೀತಾ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಇನ್ನು ಸಂಗೀತಾ ತಮ್ಮ ವಿಚ್ಚೇದನದ ಅರ್ಜಿಯಲ್ಲಿ "ನನ್ನ ಪತಿ ವಿಜಯ್ ಜನಪ್ರಿಯ ನಟಿಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬುದನ್ನು ನಾನು 2021ರ ಏಪ್ರಿಲ್‌ನಲ್ಲಿಯೇ ಪತ್ತೆ ಹಚ್ಚಿದೆ. ಈ ಬಗ್ಗೆ ನಾನು ಪ್ರಶ್ನಿಸಿದಾಗ, ಆ ನಟಿಯೊಂದಿಗೆ ಸಂಪರ್ಕ ಕಡಿದುಕೊಳ್ಳುವುದಾಗಿ ವಿಜಯ್ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿದ ಬಳಿಕವೂ ತಮ್ಮ ಸಂಬಂಧವನ್ನು ಮುಂದುವರಿಸಿದರು. ಕಳೆದ ಎರಡು ವರ್ಷಗಳಿಂದ ನಾವಿಬ್ಬರೂ ಒಂದೇ ಮನೆಯಲ್ಲಿದರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ. ಅಗತ್ಯವಿದ್ದರೆ ಸೂಕ್ತ ಸಾಕ್ಷ್ಯಗಳನ್ನು ಒದಗಿಸುತ್ತೇನೆ." ಎಂದು ಸಂಗೀತಾ ವಿಚ್ಚೇದನದ ಅರ್ಜಿಯಲ್ಲಿ ಹೇಳಿದ್ದರು. ಸದ್ಯಕ್ಕೀಗ ವಿಜಯ್ ಅವರ ಕಡೆಯವರು ರಾಜಿ ಮಾತುಕತೆ ನಡೆದಿರೋ ಬಗ್ಗೆ ಸುದ್ದಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವುಗಳನ್ನು ಪಡೆದುಕೊಳ್ಳಲಿವೆ ಎಂಬುದನ್ನು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Thalapathy Vijay ready to give Rs 250 crore to wife Sangeetha on this condition.
Read more about: vijay divorce tamil actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X