'ಕಳೆದ 20 ವರ್ಷಗಳಲ್ಲಿ ಇಂತಹ ಕಥೆ ಕೇಳಿಲ್ಲ': ಈ ನಿರ್ದೇಶಕನ ಸ್ಟೋರಿಗೆ ದಳಪತಿ ವಿಜಯ್ ಫಿದಾ
ತೆಲುಗು ಚಿತ್ರರಂಗ ಟಾಪ್ ನಿರ್ಮಾಪಕ ದಿಲ್ ರಾಜು ತಮಿಳಿನ ದಳಪತಿ ವಿಜಯ್‌ಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ವಂಶಿ ವಿಜಯ್‌ಗಾಗಿ ಸ್ಕ್ರೀಪ್ಟ್ ರೆಡಿ ಮಾಡಿಟ್ಟುಕೊಂಡಿದ್ದಾರೆ. ವಂಶಿ ಆಯ್ಕೆ ಮಾಡಿಕೊಂಡಿರುವ ಕಥೆ ಸಾರ್ವಜನಿಕರ ಜೀವನಕ್ಕೆ ತೀರಾ ಹತ್ತಿರವಾಗಿದ್ದು, ದಳಪತಿ ವಿಜಯ್ ಈ ಪಾತ್ರಕ್ಕೆ ಸೂಕ್ತ ವ್ಯಕ್ತಿ ಎಂದು ಚಿತ್ರರಂಗ ಅಭಿಪ್ರಾಯ ಪಟ್ಟಿದೆ. ಇತ್ತ ವಿಜಯ್‌ಗೂ ಈ ಸಿನಿಮಾದ ಕಥೆ ತುಂಬಾನೇ ಇಷ್ಟ ಆಗಿದೆ.
ದಳಪತಿ ವಿಜಯ್ ಬಂದ ಕಥೆಗಳನ್ನೆಲ್ಲಾ ಒಪ್ಪಿಕೊಳ್ಳುವುದಿಲ್ಲ. ಕಥೆ ಗಟ್ಟಿಯಾಗಿದ್ದರೆ ಮಾತ್ರ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುತ್ತಾರೆ. ವಿಜಯ್ ನಟಿಸಿದ ಕಳೆದ ನಾಲ್ಕು ಸಿನಿಮಾಗಳು ಸಮಾಜದ ಸಮಸ್ಯೆಗಳಿಗೆ ತೀರಾ ಹತ್ತಿರವಿದೆ. ತಮ್ಮ ಸಿನಿಮಾದಲ್ಲಿ ಪ್ರಬುದ್ಧವಾದ ಸಂದೇಶವನ್ನು ಸಾರುತ್ತಿದ್ದಾರೆ. ಹೀಗಾಗಿ ಅವರ ಮುಂದಿನ ಸಿನಿಮಾ ಇಂತಹ ಗಂಭೀರವಾದ ವಿಷಯವಿರಬೇಕು ಎಂದು ಬಯಸುತ್ತಾರೆ. ಇಂತಹದ್ದೊಂದು ಕಥೆ ವಂಶಿ ಹೇಳಿದ್ದು. ಅದನ್ನು ದಳಪತಿ ನಿರ್ದೇಶಕರನ್ನು ಹೊಗಳಿಕೊಂಡಾಡಿದ್ದಾರೆ.

20 ವರ್ಷಗಳಲ್ಲಿ ಇಂತಹ ಕಥೆ ಕೇಳಿಲ್ಲ
ದಳಪತಿ ವಿಜಯ್‌ಗೆ ಸಿನಿಮಾ ಮಾಡುವುದು ದಿಲ್ ರಾಜು ಕನಸಿನ ಕೂಸು. ಈ ಕಾರಣಕ್ಕೆ ಉತ್ತಮ ಕಥೆಯನ್ನು ಹುಡುಕುತ್ತಿದ್ದರು. ಇದೇ ವೇಳೆ ನಿರ್ದೇಶಕ ವಂಶಿ, ವಿಜಯ್‌ಗೆ ಕಥೆ ಹೇಳಿದ್ದರು. ಈ ಕಥೆಯನ್ನು ಕೇಳಿ ದಳಪತಿ ವಿಜಯ್ ಮೂಕವಿಸ್ಮಿತರಾಗಿದ್ದಾರೆ. " ಕಳೆದ 20 ವರ್ಷಗಳಲ್ಲಿ ನಾನು ಇಂತಹ ಅದ್ಭುತ ಕಥೆಯನ್ನು ಕೇಳಿಯೇ ಇರಲಿಲ್ಲ." ಎಂದು ತಮ್ಮ ಭಾವನೆಯನ್ನು ಹೊರಹಾಕಿದ್ದಾರೆ. ಈಗ ಕುತೂಹಲವೇನಂದರೆ, ವಂಶಿ ಅದೆಂತಹ ಕಥೆ ಹೇಳಿದ್ದಾರೆ? ಅನ್ನುವುದು ವಿಜಯ್ ಅಭಿಮಾನಿಗಳನ್ನು ಕಾಡುತ್ತಿದೆ.

ವಿಜಯ್ ನಟನೆಯ 66ನೇ ಸಿನಿಮಾ
ವಂಶಿ ಕಥೆ ಮೆಚ್ಚಿಕೊಂಡಿರುವ ದಳಪತಿ ವಿಜಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಜಯ್ ನಟನೆ ಅಂದ್ಮೇಲೆ ಇದು ದುಬಾರಿ ಬಜೆಟ್ ಸಿನಿಮಾ ಅನ್ನುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಸ್ಮಾಲ್ ಬಜೆಟ್ ಸಿನಿಮಾ ಮಾಡಿ,ಹೆಚ್ಚು ಹಣ ಗಳಿಸುವ ದಿಲ್ ರಾಜು ಈ ಬಾರಿ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಕಾರಣಕ್ಕೆ ವಿಜಯ್- ವಂಶಿ ಕಾಂಬಿನೇಷನ್ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಅಲ್ಲದೆ ಇದು ದಳಪತಿ ವಿಜಯ್ ಅಭಿನಯದ 66ನೇ ಸಿನಿಮಾ.

ದೀಪಾವಳಿ ಹಬ್ಬಕ್ಕೆ ಸಿನಿಮಾ ರಿಲೀಸ್
ನಿರ್ದೇಶಕ ವಂಶಿ ಶೂಟಿಂಗ್‌ಗೆ ಬೇಕಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಾರ್ಚ್ ತಿಂಗಳಿಂದ ಸಿನಿಮಾವನ್ನು ಚಿತ್ರೀಕರಣ ಮಾಡಲು ವಂಶಿ ಹರಸಾಹಸ ಪಡುತ್ತಿದ್ದಾರೆ. ಎಷ್ಟೇ ಕಷ್ಟ ಆದರೂ, ದೀಪಾವಳಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡಲೇಬೇಕು ಅಂತ ವಂಶಿ ಪಣ ತೊಟ್ಟಿದ್ದಾರೆ. ಒಂದು ವೇಳೆ ಕೊರೊನಾ ಹಾವಳಿ ಹೆಚ್ಚಾದರೆ, ಇನ್ನೂ ಹೆಸರಿಡದ ಈ ಸಿನಿಮಾವನ್ನು 2023ರ ಸಂಕ್ರಾಂತಿಗೆ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

ರಾಮ್ ಚರಣ್-ಶಂಕರ್ ಚಿತ್ರಕ್ಕೆ ಟಕ್ಕರ್
ಸಿನಿಮಾ ಅಂದರೆ ಹಾಗೆನೇ. ಅಂದುಕೊಂಡ ಸಮಯಕ್ಕೆ ಶೂಟಿಂಗ್ ಮುಗಿಯುವುದಿಲ್ಲ. ಚಿತ್ರೀಕರಣದ ವೇಳೆ ಏನಾದರೂ ಯಡವಟ್ಟುಗಳು ಆಗುತ್ತಲೇ ಇರುತ್ತವೆ. ಒಂದು ವೇಳೆ ಈ ಸಿನಿಮಾ ಕೂಡ ತಡವಾಗಿ ಮುಂದಿನ ವರ್ಷ ಸಂಕ್ರಾಂತಿ ಬಿಡುಗಡೆ ಮಾಡಲು ಮುಂದಾದರೆ, ರಾಮ್ ಚರಣ್-ಶಂಕರ್ ಚಿತ್ರಕ್ಕೆ ಏಟು ಬೀಳಲಿದೆ. ಮೂಲಗಳ ಪ್ರಕಾರ ರಾಮ್ ಚರಣ್ ಹಾಗೂ ಶಂಕರ್ ಜೋಡಿಯ ಸಿನಿಮಾ 2023 ಸಂಕ್ರಾಂತಿ ರಿಲೀಸ್‌ಗೆ ಸಜ್ಜಾಗಿದೆ.


Click it and Unblock the Notifications











