Thalapathy Vijay: ಪುತ್ರನನ್ನು ಅಖಾಡಕ್ಕಿಳಿಸಿದ ದಳಪತಿ ವಿಜಯ್.. ಲೈಕಾಗೆ ಜೇಸನ್ ಸಂಜಯ್ ಚೊಚ್ಚಲ ಸಿನಿಮಾ!
ದಳಪತಿ ವಿಜಯ್ ಈಗ ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಿವೆ. ವಿಜಯ್ ಹಾಗೂ ತ್ರಿಶಾ ಡೇಟಿಂಗ್ ರೂಮರ್ ಸದ್ದು ಮಾಡುತ್ತಿದೆ. ಪತ್ನಿ ಸಂಗೀತಾಗೆ ವಿಚ್ಚೇದನ ನೀಡುತ್ತಾರೆ ಅನ್ನೋ ಬಗ್ಗೆ ಸುದ್ದಿಗಳು ಓಡಾಡುತ್ತಿವೆ. ಆದರೆ, ವಿಜಯ್ ಅಭಿಮಾನಿಗಳು ಇದೆಲ್ಲಾ ಗಾಳಿ ಸುದ್ದಿ ನಂಬಬೇಡಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಾರಿ ಹೇಳುತ್ತಿದ್ದಾರೆ.
ಇತ್ತ ದಳಪತಿ ವಿಜಯ್ ವೈಯಕ್ತಿಕ ಸುದ್ದಿ ಹರಿದಾಡುತ್ತಿದ್ದರೆ, ಅತ್ತ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ವಿಜಯ್ ಪುತ್ರ ಜೇಸನ್ ಸಂಜಯ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀರೊ ಪುತ್ರ ಹೀರೊನೇ ಆಗುತ್ತಾನೆ ಅನ್ನೋ ಸಂಪ್ರದಾಯಕ್ಕೆ ಅಪ್ಪ-ಮಗ ಇಬ್ಬರೂ ಬ್ರೇಕ್ ಹಾಕಿದ್ದಾರೆ.

ಹೌದು, ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ವಿಜಯ್ ಪುತ್ರ ಜೇಸನ್ ಸಂಜಯ್ ಜೊತೆ ಕೈ ಜೋಡಿಸುತ್ತಿದೆ. ಈಗಾಗಲೇ ಇಬ್ಬರ ನಡುವೆ ಅಗ್ರಿಮೆಂಟ್ ಕೂಡ ಆಗಿದೆ. ಈ ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.
ಹೀರೊ ಅಲ್ಲ.. ಡೈರೆಕ್ಟರ್.. ವಿಜಯ್ ಪುತ್ರ
ದಕ್ಷಿಣ ಭಾರತೀಯ ಚಿತ್ರರಂಗದ ದಿಗ್ಗಜ ದಳಪತಿ ವಿಜಯ್ ಸಿನಿಮಾಗಳಲ್ಲಿ ಇನ್ನೂ ನಟಿಸುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮತ್ತೊಮ್ಮೆ ಮಾಸ್ ಅವತಾರವೆತ್ತಿ 'ಲಿಯೋ' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ವೇಳೆ ದಳಪತಿ ವಿಜಯ್ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ, ಹೀರೊ ಆಗ ಪರಿಚಯ ಮಾಡುತ್ತಿಲ್ಲ. ಬದಲಾಗಿ ನಿರ್ದೇಶಕನಾಗಿ ಎಂಟ್ರಿ ಕೊಡಿಸುತ್ತಿದ್ದಾರೆ. ಇದು ವಿಜಯ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಲೈಕಾ ಜೊತೆ ವಿಜಯ್ ಪುತ್ರನ ಸಿನಿಮಾ
ದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ಚೊಚ್ಚಲ ನಿರ್ದೇಶನದ ಸಿನಿಮಾಗೆ ಲೈಕಾ ಪ್ರೊಡಕ್ಷನ್ ಮಾಲೀಕ ಸುಭಾಷ್ ಕರಣ್ ಸಾಥ್ ಕೊಡುತ್ತಿದ್ದಾರೆ. ಲೈಕಾ ಇತ್ತೀಚೆಗೆ ಹೊಸಬರಿಗೆ ಹೆಚ್ಚು ಅವಕಾಶಗಳನ್ನು ನೀಡುತ್ತಿದೆ. ಜೇಸನ್ ಸಂಜಯ್ ಕೇಳಿದ ಕಥೆ ಲೈಕಾ ಸಂಸ್ಥೆಗೆ ಇಷ್ಟ ಆಗಿತ್ತು. ಈ ಕಾರಣಕ್ಕೆ ಜೇಸನ್ ಜೊತೆ ಸಿನಿಮಾ ಮಾಡುವುದಕ್ಕೆ ಲೈಕಾ ಮುಂದೆ ಬಂದಿದೆ. " ಜೇಸನ್ ಕಥೆ ನನಗೆ ಸಿನಿಮೀಯ ಅನುಭವ ನೀಡಿದ್ದರಿಂದ ಈ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿದ್ದೇವೆ. ಈ ಸಿನಿಮಾದಲ್ಲಿ ಉದಯೋನ್ಮಖ ಕಲಾವಿದರ ನಟಿಸುತ್ತಿದ್ದಾರೆ" ಎಂದು ಸುಭಾಷ್‌ಕರಣ್ ಹೇಳಿದ್ದಾರೆ.
ವಿದೇಶದಲ್ಲಿ ಜೇಸನ್ ತರಬೇತಿ
ದಳಪತಿ ವಿಜಯ್ ಪುತ್ರ ವಿದೇಶದಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿಯೇ ವಿದ್ಯಾಭ್ಯಾಸ ಮುಗಿಸಿರೋದು ವಿಶೇಷ. ಲಂಡನ್‌ನಲ್ಲಿ ಸ್ಕ್ರೀನ್ ಪ್ಲೇ ವಿಷಯದಲ್ಲಿ ಬಿಎ ಪಡೆದಿದ್ದಾರೆ. ಆ ಬಳಿಕ ಟೊರೊಂಟೋ ಫಿಲ್ಮ್ ಸ್ಕೂಲ್‌ನಲ್ಲಿ ಫಿಲ್ಮ್ ಪ್ರೊಡಕ್ಷನ್ ಡಿಪ್ಲೋಮಾ ಮಾಡಿದ್ದಾರೆ. ಹೀಗಾಗಿ ಸಿನಿಮಾದ ಸ್ಕ್ರೀನ್ ಪ್ಲೇ ಹಾಗೂ ನಿರ್ದೇಶನದಲ್ಲಿ ತರಬೇತಿ ಪಡೆದುಕೊಂಡೇ ಅಖಾಡಕ್ಕೆ ಇಳಿಯುತ್ತಿದ್ದಾರೆ.
"ಈ ಅವಕಾಶ ಬಳಸಿಕೊಳ್ಳುವೆ"-ಜೇಸನ್
ಲೈಕಾ ಜೊತೆ ಸಿನಿಮಾಗೆ ಸಹಿ ಮಾಡಿರೋ ಜೇಸನ್ ಸಂಜಯ್ ವಿಜಯ್ ಚೊಚ್ಚಲ ನಿರ್ದೇಶನ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ. ಸದ್ಯ ಲೈಕಾ ಪ್ರೊಡಕ್ಷನ್ ಜೊತೆ ಸಹಿ ಮಾಡಿದ್ದು, ಮುಂದಿನ ದಿನಗಳಲ್ಲಿ ಸಿನಿಮಾದ ಬಗ್ಗೆ ಮಾಹಿತಿ ನೀಡಲಿದ್ದಾರೆ. " ನಾನು ನಿರ್ದೇಶಕನಾಗುವ ನನ್ನ ಕನಸುಗಳನ್ನು ಈಡೇರಿಸಲು ಉತ್ತಮ ಬೆಂಬಲವನ್ನು ನೀಡಿದಕ್ಕೆ ಧನ್ಯವಾದಗಳು. ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ" ಎಂದು ಜೇಸನ್ ಸಂಜಯ್ ಹೇಳಿದ್ದಾರೆ.


Click it and Unblock the Notifications











