ಕಲ್ಲಾಕುರಿಚಿಗೆ ದೌಡಾಯಿಸಿದ್ದ ದಳಪತಿ ವಿಜಯ್; ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು 'ಬೀಸ್ಟ್'

ಇಡೀ ತಮಿಳುನಾಡು ಆತಂಕದಲ್ಲಿದೆ. ಇಲ್ಲಿನ ಕಲ್ಲಾಕುರಿಚಿ ಜಿಲ್ಲೆಯ ಕರುಣಾಪುರಂನಲ್ಲಿ ವಿಷಪೂರಿತ ಮಧ್ಯವನ್ನು ಸೇವಿಸಿ ಸಾವುಗಳು ಸಂಭವಿಸಿವೆ. ಈ ಘಟನೆ ನಡೆದ ಆರಂಭದಲ್ಲಿಯೇ ಸುಮಾರು 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಬಗ್ಗೆ ಸುದ್ದಿಯಾಗಿತ್ತು. ಈಗ ಸುಮಾರು 100ಕ್ಕೂ ಅಧಿಕ ಮಂದಿಯನ್ನು ಕಲ್ಲಾಕುರಿಚಿ ಸರ್ಕಾರಿ ಆಸ್ಪತ್ರೆ ಹಾಗೂ ಪುದುಚೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.

ವಿಷ ಮಧ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಇಂದು (ಜೂನ್ 21) ಬೆಳಿಗ್ಗೆ ವರದಿಯಲ್ಲಿ ಸಾವಿನ ಸಂಖ್ಯೆ 45ಕ್ಕೆ ಏರಿಕೆ ಆಗಿದೆ ಎಂದು ವರದಿಯಾಗಿವೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವಿಷಪೂರಿತ ಮದ್ಯ ಸೇವಿಸಿ ಮೃತಪಟ್ಟ ಕುಟುಂಬಗಳಿಗೆ ತಮಿಳುನಾಡು ಸರ್ಕಾರ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.

Thalapthy vijay visits kallakurichi offers support to hooch tragedy victims

ಈ ಘಟನೆ ಸಂಭವಿಸುತ್ತಿದ್ದಂತೆ ತಮಿಳುನಾಡಿನ ಸ್ಟಾರ್ ನಟ ದಳಪತಿ ವಿಜಯ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ವಿಷಪೂರಿತ ಮದ್ಯ ಸೇವಿಸಿ, ಆಸ್ಪತ್ರೆಗೆ ದಾಖಲಾದವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ತಮಿಳುನಾಡು ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ತಮಿಳುನಾಡು ಸರ್ಕಾರದ ನಿರ್ಲಕ್ಷ್ಯವೇ ಇಷ್ಟಕ್ಕೆಲ್ಲಾ ಕಾರಣವೆಂದು ತಮಿಳುನಾಡು ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷನಾಗಿರುವ ದಳಪತಿ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಳಪತಿ ವಿಜಯ್ ಇತ್ತೀಚೆಗಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಇನ್ನೆರಡು ಎರಡು ಸಿನಿಮಾಗಳನ್ನು ಮುಗಿಸಿದ ಬಳಿಕ ರಾಜಕೀಯದಲ್ಲಿ ಸಕ್ರಿಯವಾಗಿ ಧುಮುಕುವುದಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ತಮಿಳುನಾಡು ವೆಟ್ರಿ ಕಳಗಂ ಪಕ್ಷವನ್ನು ಕಟ್ಟಿದ್ದಾಗಿದೆ. ಹೀಗಾಗಿ ಜನರೊಂದಿಗೆ ಬರೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿಜಯ್ ನಿನ್ನೆ (ಜೂನ್ 20) ಬೆಳಗ್ಗೆ ಕಲ್ಲಾಕುರಿಚಿ ಅಕ್ರಮಮದ್ಯ ದುರಂತವನ್ನು ಖಂಡಿಸಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

"ಕಲ್ಲಕುರಿಚಿ ಜಿಲ್ಲೆಯ ಕರುಣಾಪುರಂ ಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಸುದ್ದಿ ಅತೀವ ದುಃಖ ತಂದಿದೆ. ಇದು ನಿಜಕ್ಕೂ ಹೃದಯ ವಿದ್ರಾವಕ ದೃಶ್ಯ. ಮೃತರ ಕುಟುಂಬಗಳಿಗೆ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ಚಿಕಿತ್ಸೆ ಪಡೆಯುತ್ತಿರುವವರ ಚೇತರಿಕೆಗೆ ದೇವರಲ್ಲಿ ಪ್ರಾರ್ಥಿಸುತ್ತೇನೆ." ಎಂದು ದಳಪತಿ ವಿಜಯ್ ಹೇಳಿಕೆಕೊಟ್ಟಿದ್ದಾರೆ.

Thalapthy vijay visits kallakurichi offers support to hooch tragedy victims

ಹಾಗೆಯೇ "ಕಳೆದ ವರ್ಷ ಇಂತಹದ್ದೇ ಘಟನೆ ನಡೆದಿತ್ತು. ಆ ವೇಳೆ ಕೂಡ ಅನೇಕರು ಜೀವವನ್ನು ಕಳೆದುಕೊಂಡಿದ್ದರು. ಆ ದುರಂತದಿಂದ ಹೊರ ಬರುವುದಕ್ಕೂ ಮುನ್ನವೇ ಮತ್ತೆ ಅಂತಹದ್ದೇ ಘಟನೆ ನಡೆದಿದೆ. ಇದು ತಮಿಳುನಾಡು ಸರ್ಕಾರ ಆಡಳಿತದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು,'' ಎಂದು ದಳಪತಿ ವಿಜಯ್ ಆಕ್ರೋಶ ಹೊರಹಾಕಿದ್ದಾರೆ.

ನಿನ್ನೆ (ಜೂನ್ 20) ಕಲ್ಲಾಕುರಿಚಿ ಸರ್ಕಾರಿ ಆಸ್ಪತ್ರೆಗೆ ದುನಿಯಾ ವಿಜಯ್ ತೆರಳಿದ್ದಾರೆ. ವಿಷ ಮಿಶ್ರಿತ ಮದ್ಯ ಸೇವಿಸಿ ಆಸ್ಪತ್ರೆಗೆ ದಾಖಲಾದವರನ್ನು ಖುದ್ದಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಈ ಮೂಲಕ ದಳಪತಿ ವಿಜಯ್ ನಿಧಾನವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ.

More from Filmibeat

English summary
Thalapthy vijay visits kallakurichi offers support to hooch tragedy victims
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X