ಅರ್ಜುನ್ ಸರ್ಜಾ ಮಗಳ ಮದುವೆ ಯಾವಾಗ? ಐಶ್ವರ್ಯಾ ಕೈ ಹಿಡಿಯಲಿರೊ ಉಮಾಪತಿ ತಂದೆ ಹೇಳಿದ್ದೇನು?

ಬಹುಭಾಷಾ ನಟ ಅರ್ಜುನ್ ಸರ್ಜಾ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್ ನಟಿಸುತ್ತಿರುವ 'ಲಿಯೋ' ಸಿನಿಮಾದಲ್ಲಿ ಆಕ್ಷನ್ ಕಿಂಗ್ ಲುಕ್ ನೋಡಿ ಸಿನಿಮಾ ಪ್ರೇಮಿಗಳು ಥ್ರಿಲ್ ಆಗಿದ್ದಾರೆ. ವಿಜಯ್ ಹಾಗೂ ಅರ್ಜುನ್ ಸರ್ಜಾ ಮುಖಾ ಮುಖಿ ಆಗುವುದನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

ಅರ್ಜುನ್ ಸರ್ಜಾ ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿದ್ದರೂ, ಅತ್ತ ವೈಯಕ್ತಿಕ ಜೀವನಕ್ಕೂ ಅಷ್ಟೇ ಗಮನ ಹರಿಸುತ್ತಿದ್ದಾರೆ. ಈಗಾಗಲೇ ಮೊದಲ ಪುತ್ರಿ ಐಶ್ವರ್ಯಾ ಮದುವೆ ಬಗ್ಗೆನೂ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಅರ್ಜುನ್ ಸರ್ಜಾ ಕುಟುಂಬ ಅಥವಾ ವರನ ಫ್ಯಾಮಿಲಿ ಮುಕ್ತವಾಗಿ ಮಾತಾಡಿರಲಿಲ್ಲ.

Thambi Ramaiah first reaction on his son Umapathy and Arjuna Sarja daughter Aishwarya Marriage

ಕೆಲವು ದಿನಗಳಿಂದ ಐಶ್ವರ್ಯಾ ಅರ್ಜುನ್ ಹಾಗೂ ತಮಿಳಿನ ಜನಪ್ರಿಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಮದುವೆ ಬಗ್ಗೆನೇ ಸುದ್ದಿ ಓಡಾಡಿತ್ತು. ಆದರೆ, ಇದೇ ಮೊದಲ ಬಾರಿಗೆ ಭಾವಿ ಮಾವ ತಂಬಿ ರಾಮಯ್ಯ ಈ ಮಧ್ಯೆ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ಮದುವೆ ಡೇಟ್, ಐಶ್ವರ್ಯಾ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ಅಷ್ಟಕ್ಕೂ ಏನು ಹೇಳಿದ್ದಾರೆ ಅಂತ ತಿಳಿಯಲು ಮುಂದೆ ಓದಿ.

ಐಶ್ವರ್ಯಾ ಅರ್ಜುನ್- ಉಮಾಪತಿ ಮದುವೆ

ಇದೇ ವರ್ಷ ಜೂನ್ ತಿಂಗಳಲ್ಲಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ಸುದ್ದಿ ಬ್ರೇಕ್ ಆಗಿತ್ತು. ತಮಿಳಿನ ಜನಪ್ರಿಯರ ಹಾಸ್ಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಜೊತೆ ಜೊತೆ ಹಸೆಮಣೆ ಏರುತ್ತಿದ್ದಾರೆ. 2024ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಅನ್ನೋ ಸುದ್ದಿ ಹರಿದಾಡಿತ್ತು. ಈ ಸುದ್ದಿ ಸದ್ದು ಮಾಡಿದ್ದರೂ, ಎರಡೂ ಕುಟುಂಬದವರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಈಗ ಸಂದರ್ಶವೊಂದರಲ್ಲಿ ಉಮಾಪತಿ ತಂದೆ ತಂಬಿ ರಾಮಯ್ಯ ಇದೇ ಮೊದಲ ಬಾರಿಗೆ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Thambi Ramaiah first reaction on his son Umapathy and Arjuna Sarja daughter Aishwarya Marriage

ಮದುವೆ ಬಗ್ಗೆ ತಂಬಿ ರಾಮಯ್ಯ ಹೇಳಿದ್ದೇನು?

ಉಮಾಪತಿ ಹಾಗೂ ಐಶ್ವರ್ಯಾ ಮದುವೆ ಬಗ್ಗೆ ಮಾತುಕತೆ ನಡೆಯುತ್ತಿರೋದನ್ನು ತಮಿಳು ನಟ ತಂಬಿ ರಾಮಯ್ಯ ರಿವೀಲ್ ಮಾಡಿದ್ದಾರೆ. ಸದ್ಯ ಅರ್ಜುನ್ ಸರ್ಜಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳು ಮುಗಿದ ಬಳಿಕ ಮದುವೆ ಬಗ್ಗೆ ಚರ್ಚೆಯಾಗುತ್ತೆ. ಅಲ್ಲದೆ ಮದುವೆ ಡೇಟ್ ಬಗ್ಗೆ ನಿರ್ಧಾರ ಆಗುತ್ತೆ ಎಂದು ತಂಬಿ ರಾಮಯ್ಯ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಐಶ್ವರ್ಯಾ ಇನ್ನೊಬ್ಬಳು ಮಗಳಿದ್ದಂತೆ

"ಮದುವೆ ಅಂದರೆ, ಮನೆಯವರೆಲ್ಲರೂ ಖುಷಿಯಾಗಿ ಇರಬೇಕು. ಐಶ್ವರ್ಯಾ ನಮಗೆ ಇನ್ನೊಬ್ಬ ಮಗಳು ಇದ್ದಂತೆ. ನಮ್ಮ ಮಗ ಉಮಾಪತಿ ನನ್ನ ಬಳಿ ನೇರವಾಗಿ ಬಂದು ಐಶ್ವರ್ಯಾರನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿದ. ಮಕ್ಕಳ ಖುಷಿಯೇ ಮುಖ್ಯ. ನಾವೂ ಅವರ ಪ್ರೀತಿಯನ್ನು ಒಪ್ಪಿದ್ದೇವೆ. ಅರ್ಜುನ್ ಸರ್ಜಾ ಹಾಗೂ ಕುಟುಂಬ ಕೂಡ ಒಪ್ಪಿದೆ. ಅರ್ಜುನ್ ಸರ್ಜಾ ಅವರ ಸಿನಿಮಾ ಮುಗಿದ ಬಳಿಕ ಮದುವೆ ನಡೆಯಲಿದೆ" ಎಂದು ತಂಬಿ ರಾಮಯ್ಯ ರಿವೀಲ್ ಮಾಡಿದ್ದಾರೆ.

ಐಶ್ವರ್ಯಾ-ಉಮಾಪತಿ ನಡುವೆ ಪ್ರೀತಿ ಹುಟ್ಟಿದ್ದೇಗೆ?

ಜೀ ಟಿವಿ ದುಬಾರಿ ರಿಯಾಲಿಟಿ ಶೋ 'ಸರ್ವೈವಲ್‌'ನಲ್ಲಿ ಉಮಾಪತಿ ರಾಮಯ್ಯ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಅರ್ಜುನ್ ಸರ್ಜಾ ನಿರೂಪಕರಾಗಿ ಭಾಗವಹಿಸಿದ್ದರು. ಈ ವೇಳೆ ಐಶ್ವರ್ಯಾ ತಂದೆಯನ್ನು ನೋಡಲು ಸೆಟ್ಟಿಗೆ ಬರುತ್ತಿದ್ದರು. ಆ ವೇಳೆ ಉಮಾಪತಿ ಪರಿಚಯ ಆಗಿತ್ತು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬಳಿಕ ಪ್ರೀತಿ ಹುಟ್ಟಿತ್ತು. ಈಗ ಮನೆಯವರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

More from Filmibeat

English summary
Thambi Ramaiah reaction on his son Umapathy marriage with Aishwarya Arjun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X