ಮದ್ವೆಗೂ ಮುನ್ನ ತಾಯಿಯಾಗಿದ್ದ 'ದಿ ವಿಲನ್' ನಟಿ: ಗ್ಯಾಪ್ ಕೊಟ್ಟು ತಮಿಳು ಚಿತ್ರರಂಗ ಎಂಟ್ರಿ
ಇಂಗ್ಲೆಂಡ್ ಮೂಲದ ನಟಿ ಆಮಿ ಜಾಕ್ಸನ್ ಭಾರತದಲ್ಲಿ ತುಂಬಾನೇ ಫೇಮಸ್. ಅದರಲ್ಲೂ ದಕ್ಷಿಣ ಭಾರತದಲ್ಲಂತೂ ಇನ್ನೂ ಫೇಮಸ್. ತಮಿಳು ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸುತ್ತಿದ್ದ ಈ ನಟಿಯನ್ನು ಜೋಗಿ ಪ್ರೇಮ್ ಕನ್ನಡ ಸಿನಿಮಾಗೂ ಕರೆದುಕೊಂಡು ಬಂದಿದ್ದರು.
'ದಿ ವಿಲನ್' ಸಿನಿಮಾ ಮೂಲಕ ಕನ್ನಡಿಗರೂ ಚಿರಪರಿಚಿತರಾದ ಆಮಿ ಜಾಕ್ಸನ್ ಒಂದಿಷ್ಟು ದಿನ ಯಾವುದೇ ಸಿನಿಮಾದಲ್ಲೂ ನಟಿಸಲ್ಲ. 2018ರಲ್ಲಿ ತೆರೆಕಂಡ ಕನ್ನಡ ಸಿನಿಮಾ 'ದಿ ವಿಲನ್' ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ '2.0'ದಲ್ಲಿ ನಟಿಸಿದ್ದೇ ಕೊನೆ. ಅಲ್ಲಿಂದ ವೈಯಕ್ತಿಕ ಕಾರಣಗಳಿಂದ ಆಮಿ ಜಾಕ್ಸನ್ ದೂರವೇ ಇದ್ದರು.

ಬ್ರಿಟಿಷ್ ನಟಿ ಆಮಿ ಜಾಕ್ಸನ್ ಇಂಗ್ಲೆಂಡಿನ ಹೊಟೇಲ್ ಉದ್ಯಮಿ ಆಂಡ್ರಿಯಾಸ್ ಪನಾಯೊಟೌ ಅವರ ಪುತ್ರ ಜಾರ್ಜ್ ಪನಾಯೊಟೌ ಜೊತೆ ಡೇಟಿಂಗ್ ಮಾಡುತ್ತಿದ್ದರು. 2015ರಿಂದ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು. 2019ರಲ್ಲಿ ಜಾರ್ಜ್ ಪನಾಯೊಟೌ ನಟಿ ಆಮಿ ಜಾಕ್ಸನ್‌ಗೆ ಪ್ರಪೋಸ್ ಮಾಡಿದ್ದರು. ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಇವರಿಗೆ ಗಂಡು ಮಗು ಜನಿಸಿತ್ತು. ಆದರೆ, 2022ರಲ್ಲಿ ಈ ಜೋಡಿ ಬೇರೆ ಆಯ್ತು. ಈಗ ಆಮಿ ಜಾಕ್ಸನ್ ಬ್ರಿಟಿಷ್ ನಟ ಎಡ್ ವೆಸ್ಟ್ವಿಕ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
ಸಿನಿಮಾಗೆ ಮತ್ತೆ ಕಮ್‌ಬ್ಯಾಕ್
ಆಮಿ ಜಾಕ್ಸನ್ ಕಳೆದ ಕೆಲವು ದಿನಗಳಿಂದ ಹೊಸ ಬಾಯ್ ಫ್ರೆಂಡ್ ಜೊತೆ ದೇಶ ಸುತ್ತಿದ್ದರು. ಬ್ರಿಟಿಷ್ ನಟ ಎಡ್ ವೆಸ್ಟ್ವಿಕ್ ಜೊತೆ ಬೇರೆ ಬೇರೆ ಕಡೆ ಕಾಣಿಸಿಕೊಂಡಿದ್ದರು. 2018ರಲ್ಲಿ ಕೊನೆಯದಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಆಮಿ ಜಾಕ್ಸನ್ ನಟನೆಯಿಂದಲೂ ಬ್ರೇಕ್ ತೆಗೆದುಕೊಂಡಿದ್ದರು.
ಈಗ ಆಮಿ ಜಾಕ್ಸನ್ ಮತ್ತೆ ತಮಿಳು ಸಿನಿಮಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ '2.0' ಬಳಿಕ ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಅದುವೇ 'ಮಿಷನ್:ಚಾಪ್ಟರ್-1'. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಕ್ಷನ್ ಸಿನಿಮಾ ಮೂಲಕ ಆಮಿ ಜಾಕ್ಸನ್ ಮತ್ತೆ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

'ಮಿಷನ್:ಚಾಪ್ಟರ್-1' ಹೈಲೈಟ್ ಏನು?
'ಮಿಷನ್:ಚಾಪ್ಟರ್-1' ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ತಮಿಳಿನ ಸ್ಟಾರ್ ನಟ ಅರುಣ್ ವಿಜಯ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಮಿಷನ್:ಚಾಪ್ಟರ್-1' ಸಿನಿಮಾವನ್ನು ಸುಮಾರು 70 ದಿನದಲ್ಲಿ ಚೆನ್ನೈ ಹಾಗೂ ಲಂಡನ್‌ನಲ್ಲಿ ಶೂಟಿಂಗ್ ಮಾಡಿ ಮುಗಿಸಿದೆ. ಕೋಟಿಗಟ್ಟಲೆ ಹಣವನ್ನು ಸೆಟ್ಟಿಗೆ ಸುರಿದು ಶೂಟಿಂಗ್ ಮಾಡಿದ್ದು, ಅರುಣ್ ವಿಜಯ್ ಅದ್ಭುತ ಸ್ಟಂಟ್ ಮಾಡಿದ್ದಾರೆ.
ಆಮಿ ಜಾಕ್ಸನ್ ಜೊತೆ ಮಲಯಾಳಂ ನಟಿ ನಿಮಿಷಾ ಸಜಯನ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಭರತ್ ಬೋಪಣ್ಣ, ವಿರಾಜ್, ಅಭಿ ಹಾಸನ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 'ಮಿಷನ್:ಚಾಪ್ಟರ್-1' ಸಿನಿಮಾಗೆ ಜಿವಿ ಪ್ರಕಾಶ್ ಕುಮಾರ್ ಮ್ಯೂಸಿಕ್ ಹಾಕಿದ್ದಾರೆ. ವಿಜಯ್ ಪವರ್‌ಫುಲ್ ಡೈಲಾಗ್ ಇದೆ. ಶೀಘ್ರದಲ್ಲಿಯೇ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.
ರಿಲೀಸ್ ಮಾಡುತ್ತಿದೆ ಲೈಕಾ ಪ್ರೊಡಕ್ಷನ್
'ಮಿಷನ್: ಚಾಪ್ಟರ್ 1' ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಪವರ್‌ಪ್ಯಾಕ್ ಆಕ್ಷನ್ ಸಿನಿಮಾವನ್ನು ತಮಿಳುನಾಡಿನ ದೊಡ್ಡ ನಿರ್ಮಾಣ ಸಂಸ್ಥೆ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿದೆ.
ಲೈಕಾ ಸಂಸ್ಥೆ ಈಗಾಗಲೇ 'ಇಂಡಿಯನ್' ,'ಖೈದಿ ನಂಬರ್ 150', '2.0', 'ದರ್ಬಾರ್' ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಇದೀಗ ಲೈಕಾ ಮಿಷನ್:ಚಾಪ್ಟರ್ 1 ಸಿನಿಮಾವನ್ನು ವಿಶ್ವಾದ್ಯಂತ ರಿಲೀಸ್ ಮಾಡುತ್ತಿದೆ. 'ಪೊನ್ನಿಯಿನ್ ಸೆಲ್ವನ್-2', 'ಇಂಡಿಯನ್-2', 'ಲಾಲ್ ಸಲಾಂ' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.


Click it and Unblock the Notifications











