'ಜನನಾಯಗನ್' ಚಿತ್ರದಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಗೊತ್ತಾ, ತೆರೆಮೇಲೆ ಹೊಸ ಅನುಭವ ನೀಡಲಿದೆ; ವೆಂಕಟ್

ದಳಪತಿ ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಬೆಂಗಳೂರಿನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಈಗಾಗಲೇ ಸಿನಿಮಾ ಪೈರಸಿ ಆಗಿದ್ದರೂ ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಚಿತ್ರದಲ್ಲಿ ಒಂದಷ್ಟು ಬದಲಾವಣೆ ಮಾಡಿರುವುದಾಗಿ ನಿರ್ಮಾಪಕ ವೆಂಕಟ್ ಕೊನಂಕಿ ಹೇಳಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಜನನಾಯಗನ್' ಸಿನಿಮಾ ನಿರ್ಮಾಣ ಮಾಡಿದೆ. ಆದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಅಂತಿಮವಾಗಿ ಸಿನಿಮಾ ಬಿಡುಗಡೆಗೆ ಅಣಿಯಾಗಿದೆ. 3 ತಿಂಗಳ ಹಿಂದೆ ಆನ್ಲೈನ್‌ನಲ್ಲಿ ಲೀಕ್ ಆಗಿ ಕೋಟ್ಯಂತರ ಜನ ನೋಡಿದ ಮೇಲೆ ಸಿನಿಮಾ ಬಿಡುಗಡೆ ಆಗಿರುತ್ತಿರುವುದು ಇದೇ ಮೊದಲು ಅನ್ನಿಸುತ್ತದೆ. ಈ ಹಿಂದೆ ಕೂಡ ಕೆಲ ಸಿನಿಮಾಗಳು ಇದೇ ರೀತಿ ಲೀಕ್ ಆಗಿದ್ದವು. ಆದರೂ ಕೂಡಲೇ ಸಿನಿಮಾ ರಿಲೀಸ್ ಮಾಡಿ ನಷ್ಟದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಆದರೆ 'ಜನನಾಯಗನ್' ವಿಚಾರದಲ್ಲಿ ಎಲ್ಲವೂ ಹೊಸದು ಎನ್ನುವಂತಾಗಿದೆ.

There are lot of Modifications and additions to Vijay s JanaNayagan Says producer Venkat konanki

ಈಗಾಗಲೇ ಸಿನಿಮಾ ಲೀಕ್ ಆಗಿರುವುದರಿಂದ ಒಂದಷ್ಟು ಬದಲಾವಣೆ ಮಾಡಿ ಹೊಸ ರೂಪದಲ್ಲಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಮುಂದಾಗಿದೆ. ಈ ವಿಚಾರವನ್ನು ಸ್ವತಃ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸ್ಥಾಪಕ, ನಿರ್ಮಾಪಕ ವೆಂಕಟ್ ಕೊನಂಕಿ ಸ್ಪಷ್ಟಪಡಿಸಿದ್ದಾರೆ. NDTV TV ವಾಹಿನಿ ಸಂದರ್ಶನದಲ್ಲಿ ಅವರ ಮಾತನಾಡಿದ್ದಾರೆ. "ಚಿತ್ರದಲ್ಲಿ ಸಾಕಷ್ಟು ಬದಲಾವಣೆ, ಹೊಸ ದೃಶ್ಯಗಳ ಸೇರ್ಪಡೆ ಮಾಡಿದ್ದೇವೆ. ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ಹೊಸ ಅನುಭವ ಸಿಗಲಿದೆ. ಒಂದಷ್ಟು ಹಾಡುಗಳನ್ನು ಸೇರಿಸಿದ್ದೀವಿ. ವರ್ಷದ ಆರಂಭದಲ್ಲೇ ಸಿನಿಮಾ ಬರಬೇಕಿತ್ತು. ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ ಈಗ ಬಿಡುಗಡೆ ಆಗುತ್ತಿದೆ" ಎಂದು ತಿಳಿಸಿದ್ದಾರೆ.

Also Read
ಅಪ್ಪ ವಿಜಯ್ ಸ್ಥಾನ ತುಂಬಲು ಸಜ್ಜಾದ ಜೇಸನ್ ಸಂಜಯ್; ಅಭಿಮಾನಿಗಳಿಗೆ ಗುಡ್‌ನ್ಯೂಸ್
ಅಪ್ಪ ವಿಜಯ್ ಸ್ಥಾನ ತುಂಬಲು ಸಜ್ಜಾದ ಜೇಸನ್ ಸಂಜಯ್; ಅಭಿಮಾನಿಗಳಿಗೆ ಗುಡ್‌ನ್ಯೂಸ್

40 ಸೆಕೆಂಡ್ ದೃಶ್ಯ ಸೇರ್ಪಡೆ

ಇತ್ತೀಚೆಗೆ 'ಜನನಾಯಗನ್' ಸಿನಿಮಾ ಸೆನ್ಸಾರ್ ಮುಗಿಸಿತ್ತು. ಬಳಿಕ 40 ಸೆಕೆಂಡ್‌ಗಳ ಹೊಸ ದೃಶ್ಯ ಸೇರಿಸಿ ಮತ್ತೊಮ್ಮೆ ಸೆನ್ಸಾರ್ ಮಾಡಿಸಿರುವುದಾಗಿ ಹೇಳಲಾಗಿತ್ತು. ವಿಜಯ್ ಸಿಎಂ ಆಗಿ ಅಧಿಕಾರ ನಡೆಸುವ ಸಣ್ಣ ಝಲಕ್ ಅನ್ನು ಕೂಡ ಚಿತ್ರದಲ್ಲಿ ಸೇರಿಸಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಚಿತ್ರತಂಡ ಮುಂದಾಗಿದೆ. ಇನ್ನು ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ತಮಿಳುನಾಡಿ ಸಿಎಂ ವಿಜಯ್ ಎಂದು ಹಾಕಿದ್ದಾರೆ.

300 ಕೋಟಿ ಬಜೆಟ್ ಸಿನಿಮಾ

'ಜನನಾಯಗನ್' ಬರೋಬ್ಬರಿ 300 ಕೋಟಿ ರೂ.ಗೂ ಅಧಿಕ ಬಜೆಟ್ ಸಿನಿಮಾ. ನಟ ವಿಜಯ್ ಚಿತ್ರದಲ್ಲಿ ನಟಿಸಲು 200 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಇದು ವಾರ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ಕೇಳಿದಷ್ಟು ಸಂಭಾವನೆ ನಿರ್ಮಾಪಕರು ಕೊಟ್ಟಿದ್ದಾರೆ. ಹಾಗಾಗಿ ಸಹಜವಾಗಿಯೇ ಬಜೆಟ್ ಹೆಚ್ಚಾಗಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡುವ ನಿರೀಕ್ಷೆ ಕೂಡ ಇದೆ.

ಅಡ್ವಾನ್ಸ್ ಬುಕ್ಕಿಂಗ್

ಚೆನ್ನೈಗಿಂತ ಮೊದಲು ಬೆಂಗಳೂರಿನಲ್ಲಿ 'ಜನನಾಯಗನ್' ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಜುಲೈ 23ರಂದು ಬೆಳಗ್ಗೆ 6 ಗಂಟೆಗೆ ಹಲವು ಕಡೆಗಳಲ್ಲಿ ಶೋಗಳು ಆಯೋಜನೆಯಾಗಿದೆ. ಬುಕ್ಕಿಂಗ್ ಶುರುವಾಗುತ್ತಿದ್ದಂತೆ ಅಭಿಮಾನಿಗಳು ಟಿಕೆಟ್‌ ಕಾಯ್ದಿರಿಸಲು ಮುಗಿಬಿದ್ದಿದ್ದಾರೆ. ಕೆಲವೇ ಗಂಟೆಗಳಲ್ಲಿ ಸಾವಿರಾರು ಟಿಕೆಟ್ಸ್ ಬುಕ್ ಆಗಿದೆ. ಕೆಲವೇ ಗಂಟೆಗಳಲ್ಲಿ 1 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿದೆ.

Recommended For You
Jananayagan Censor: ಸೆನ್ಸಾರ್ ಮುಗಿಸಿದ 'ಜನನಾಯಗನ್'; ಯಾವೆಲ್ಲಾ ದೃಶ್ಯಗಳಿಗೆ ಕತ್ತರಿ ಬಿತ್ತು, ಇಲ್ಲಿದೆ ಲಿಸ್ಟ್
Jananayagan Censor: ಸೆನ್ಸಾರ್ ಮುಗಿಸಿದ 'ಜನನಾಯಗನ್'; ಯಾವೆಲ್ಲಾ ದೃಶ್ಯಗಳಿಗೆ ಕತ್ತರಿ ಬಿತ್ತು, ಇಲ್ಲಿದೆ ಲಿಸ್ಟ್

ಟಿಕೆಟ್ ದರ

ಸಿನಿಮಾ ಈಗಾಲೇ ಲೀಕ್ ಆಗಿದ್ದರೂ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಚಿತ್ರಮಂದಿರದವರು ಇದರ ಲಾಭ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ 'ಜನನಾಯಗನ್' ಸಿನಿಮಾ ಟಿಕೆಟ್ ದರ 1000 ರೂ. ಗಡಿ ದಾಟಿದೆ. ಗುರುವಾರ ಬೆಳಗ್ಗೆ 6 ಗಂಟೆ ಶೋ ಟಿಕೆಟ್ ದರ 800 ರೂ. ಹಾಗೂ 1000 ರೂ. ನಿಗದಿ ಪಡಿಸಲಾಗಿದೆ. ಆದರೂ ಅಭಿಮಾನಿಗಳು ಟಿಕೆಟ್ ಬುಕ್ ಮಾಡುತ್ತಿದ್ದಾರೆ.

Read more about: vijay kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X