40ರ ನಾಯಕಿ ಜೊತೆ 70ರ ಕಮಲ್ ಲಿಪ್‌ಲಾಕ್; ಮತ್ತೊಬ್ಬ ನಾಯಕಿ ಜೊತೆ ರೊಮ್ಯಾನ್ಸ್!

ಸಿನಿಮಾಗಳಲ್ಲಿ ಲಿಪ್‌ಲಾಕ್‌ ಸನ್ನಿವೇಶಗಳು ಹೊಸದೇನು ಅಲ್ಲ. ನಿಜ ಜೀವನದಲ್ಲಿ ನಡೆಯುವ ಎಲ್ಲವನ್ನು ತೆರೆಮೇಲೆ ತರುವ ಪ್ರಯತ್ನ ನಡೆಯುತ್ತದೆ. ಲಿಪ್‌ಲಾಕ್‌ ಸನ್ನಿವೇಶಗಳಲ್ಲಿ ನಟಿಸೋಕೆ ಕೆಲ ನಟ-ನಟಿಯರು ಒಪ್ಪುವುದಿಲ್ಲ. ಸದ್ಯ 40ರ ನಟಿ ಜೊತೆ 70ರ ಕಮಲ್ ಹಾಸನ್ ಲಿಪ್‌ಲಾಕ್ ವೀಡಿಯೋ ವೈರಲ್ ಆಗ್ತಿದೆ.

ಕಮಲ್ ಹಾಸನ್ ಈ ಹಿಂದೆ ಕೂಡ ಕೆಲ ಸಿನಿಮಾಗಳಲ್ಲಿ ನಾಯಕಿಯರ ತುಟಿಗೆ ತುಟಿ ಒತ್ತಿದ್ದಾರೆ. ಇದೀಗ 'ಥಗ್ ಲೈಫ್' ಚಿತ್ರದಲ್ಲಿ ಇಬ್ಬರು ನಾಯಕಿಯರ ಜೊತೆ ಮಿಂಚಿದ್ದಾರೆ. ಚಿತ್ರದಲ್ಲಿ ಕಮಲ್ ಪತ್ನಿ ಪಾತ್ರದಲ್ಲಿಅಭಿರಾಮಿ ನಟಿಸಿದ್ದಾರೆ. ನಾಯಕಿಯಾಗಿ ಮತ್ತೊಂದು ಪಾತ್ರದಲ್ಲಿ ತ್ರಿಷಾ ಕೂಡ ಇದ್ದಾರೆ. ಅದು ಹೇಗೆ ಎನ್ನುವುದನ್ನು ತೆರೆಮೇಲೆಯೇ ನೋಡಿ ತಿಳಿದುಕೊಳ್ಳಬೇಕಿದೆ.

Thug Life Trailer Kamal Haasan and Abirami liplock scene goes viral

ಮಣಿರತ್ನಂ ಹಾಗೂ ಕಮಲ್ ಕ್ರೇಜಿ ಕಾಂಬಿನೇಷನ್‌ನಲ್ಲಿ 'ಥಗ್ ಲೈಫ್' ಚಿತ್ರ ಮೂಡಿ ಬಂದಿದೆ. ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅದರ ಬೆನ್ನಲ್ಲೇ ಅಫೀಶಿಯಲ್ ಟ್ರೈಲರ್ ಬಂದು ಸದ್ದು ಮಾಡ್ತಿದೆ. ಚಿತ್ರದಲ್ಲಿ ಕಮಲ್ ಎದುರು ಮತ್ತೊಂದು ಮುಖ್ಯ ಪಾತ್ರದಲ್ಲಿ ಸಿಂಬು ನಟಿಸಿದ್ದಾರೆ. ಇಬ್ಬರ ನಡುವಿನ ಜಿದ್ದಾಜಿದ್ದಿಯೇ ಚಿತ್ರದ ಕಥೆ.

'ಥಗ್ ಲೈಫ್' ಚಿತ್ರದಲ್ಲಿ ಅಭಿರಾಮಿ ತುಟಿಗೆ ಕಮಲ್ ಹಾಸನ್ ತುಟಿ ಒತ್ತಿದ್ದಾರೆ. 40 ವರ್ಷದ ಅಭಿರಾಮಿ ಜೊತೆ 70ರ ಕಮಲ್ ಹಾಸನ್ ತುಟಿ ಬೆರೆಸಿರುವುದಕ್ಕೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಕಮಲ್‌ ಹಾಸನ್‌ಗೆ ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಕೆಲವರು ನಟನ ಬೆಂಬಲಕ್ಕೆ ನಿಂತಿದ್ದಾರೆ.

"ಕಥೆ ಡಿಮ್ಯಾಂಡ್ ಮಾಡಿದರೆ ಲಿಪ್‌ಲಾಕ್‌ ಸನ್ನಿವೇಶಗಳಲ್ಲಿ ನಟಿಸಿದರೆ ತಪ್ಪೇನು? ನಟಿ- ನಿ ಇಬ್ಬರಿಗೂ ಅಭ್ಯಂತರ ಇಲ್ಲ ಎಂದಮೇಲೆ ಯಾಕೆ ಮಾಡಬಾರದು?" ಎಂದು ಕಮಲ್ ಬಪ ಬ್ಯಾಟ್ ಬೀಸಿದ್ದಾರೆ. "ನಮ್ಮಲ್ಲಿ ಕೆಲವರ ಸಮಸ್ಯೆ ಇದೆ. ಕಿಸ್ಸಿಂಗ್ ಸೀನ್, ಇಂಟಿಮೆಂಟ್ ಸೀನ್‌ಗಳ ಕಡೆ ಫೋಕಸ್ ಮಾಡಿ ಇಡೀ ಟ್ರೈಲರ್ ಅನ್ನು ಬಿಟ್ಟುಬಿಡುತ್ತಾರೆ. ಅದಕ್ಕೆಲ್ಲಾ ಹೆಚ್ಚಿನ ಗಮನ ಕೊಡುವುದು ಬಿಡಬೇಕು" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮಣಿರತ್ನಂ ನಿರ್ದೇಶನದ ಸಿನಿಮಾ ಆಗಿರುವುದರಿಂದ ಎಮೋಷನಲ್ ಸನ್ನಿವೇಶಗಳನ್ನು ಬಹಳ ಚೆನ್ನಾಗಿ ಕಟ್ಟಿಕೊಡುತ್ತಾರೆ. ಅಂಥದ್ದೇ ಇದು ಒಂದು ಸನ್ನಿವೇಶ ಇರಬಹುದು. ಅದೇ ಕಾರಣಕ್ಕೆ ಅಭಿರಾಮಿ ಕೂಡ ಒಪ್ಪಿರುತ್ತಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ 'ವಿರುಮಾಂಡಿ' ಚಿತ್ರದಲ್ಲಿ ಕಮಲ್ ಹಾಗೂ ಅಭಿರಾಮಿ ಒಟ್ಟಿಗೆ ನಟಿಸಿದ್ದರು. ಆ ಚಿತ್ರದಲ್ಲಿ ಕೂಡ ಇಬ್ಬರೂ ಲಿಪ್‌ಲಾಕ್ ರೀತಿಯ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದರು.

ಕಮಲ್ ಹಾಸನ್ ಲಿಪ್‌ಲಾಕ್ ಸನ್ನಿವೇಶಗಳಲ್ಲಿ ನಟಿಸಿರೋದು ಇದೇ ಮೊದಲೇನಲ್ಲ. ಮಹಾನದಿ ಚಿತ್ರದಲ್ಲಿ ನಾಯಕಿ ಸುಕನ್ಯಾ ಜೊತೆ ತುಟಿಗೆ ತುಟಿ ಸೇರಿಸಿದ್ದರು. 'ಕುರುತೈ ಪುನಲ್' ಚಿತ್ರದಲ್ಲಿ ಗೌತಮಿ ಹಾಗೂ 'ಹೇ ರಾಮ್' ಚಿತ್ರದಲ್ಲಿ ರಾಣಿ ಮುಖರ್ಜಿ ಜೊತೆ ಲಿಪ್‌ಲಾಕ್ ಮಾಡುವ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದರು.

36 ವರ್ಷಗಳ ಬಳಿಕ ಕಮಲ್ ಹಾಸನ್ ಹಾಗೂ ಮಣಿರತ್ನಂ ಒಟ್ಟಿಗೆ ಜೈ ಜೋಡಿಸಿದ್ದಾರೆ. ಜೂನ್ 5ಕ್ಕೆ 'ಥಗ್‌ ಲೈಫ್' ಸಿನಿಮಾ ಬಿಡುಗಡೆ ಆಗಲಿದೆ. ಕಮಲ್ ಹಾಸನ್ ಹಾಗೂ ಮಣಿರತ್ನಂ ಕೂಡ ಈ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಆಗಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.

ಚಿತ್ರದಲ್ಲಿ ಸಿಂಬು ಪಾತ್ರಕ್ಕೂ ಹೆಚ್ಚಿನ ಮಹತ್ವ ಇದೆ. ಇಬ್ಬರ ನಡುವೆ ಜಿದ್ದಾಜಿದ್ದಿ ಕಾಳಗ ಕೂಡ ನಡೆಯಲಿದೆ. ಸದ್ಯ ಬಿಡುಗಡೆ ಆಗಿರುವ ಟ್ರೈಲರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು 'ಥಗ್‌ ಲೈಫ್' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
Kamal Haasan and Abirami lip lock scene in Thug Life movie, trailer Released
Read more about: kamal haasan maniratnam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X