ನಂದಿನಿ ಪಾತ್ರಕ್ಕೆ ಪಟ್ಟು ಹಿಡಿದಿದ್ದ ತ್ರಿಶಾ: ಮಣಿರತ್ನಂ ಒಂದೇ ಒಂದು ಮಾತಿಗೆ ಕುಂದವೈ ಪಾತ್ರ ಮಾಡಿದ್ದೇಕೆ?

ಕಾಲಿವುಡ್‌ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಪೊನ್ನಿಯಿನ್ ಸೆಲ್ವನ್ 2'. ಮಣಿರತ್ನಂ ನಿರ್ದೇಶಿಸಿದ ಈ ಸಿನಿಮಾ ಈಗಾಗಲೇ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಅದ್ಧೂರಿ ಸೆಟ್ಟು, ಪವರ್‌ಫುಲ್ ಡೈಲಾಗ್, ದುಬಾರಿ ಸ್ಟಾರ್ ಕಾಸ್ಟ್ ಎಲ್ಲವೂ ಸಿನಿಪ್ರಿಯರನ್ನು ಸೆಳೆಯುತ್ತಿದೆ.

ಕಲ್ಕಿ ಕೃಷ್ಣಮೂರ್ತಿ ರಚಿಸಿದ ಕೃತಿಯನ್ನು ಆಧರಿಸಿದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಸೆಟ್ಟೇರಿತ್ತು. ಇದೇ ಕಥೆಯನ್ನು ತೆರೆಮೇಲೆ ತರೋದಕ್ಕೆ ಅದೆಷ್ಟೋ ಮಂದಿ ಹರಸಾಹಸ ಪಟ್ಟಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಆ ಕೆಲಸವನ್ನೀಗ ಮಣಿರತ್ನಂ ಮಾಡಿ ಮುಗಿಸಿದ್ದಾರೆ.

Trisha ask Nandini role in Ponniyin Selvan 2 Maniratnam Says Only Aishwarya Rai Can Do

ಚಿಯಾನ್ ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ ಬಚ್ಚನ್, ತ್ರಿಶಾ ಕೃಷ್ಣನ್ ಸೇರಿದಂತೆ ದೊಡ್ಡ ಸ್ಟಾರ್‌ಕಾಸ್ಟ್ ಸಿನಿಮಾವಿದು. 'ಪಿಎಸ್‌ 2' ರಿಲೀಸ್ ಆಗುತ್ತಿದ್ದಂತೆ ಐಶ್ವರ್ಯಾ ರೈ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಐಶ್ವರ್ಯಾ ರೈಗೆ ಸಿನಿಪ್ರಿಯರು ಭೇಷ್ ಎನ್ನುತ್ತಿದ್ದಾರೆ. ಆದರೆ, ಈ ಪಾತ್ರದ ಮೇಲೆ ಮೊದಲು ತ್ರಿಶಾ ಕಣ್ಣಿಟ್ಟಿದ್ದರು. ಮಣಿರತ್ನಂ ಬಳಿಕ ಹೋಗಿ ಇದೇ ಪಾತ್ರ ಬೇಕು ಅಂತಾನೂ ಹೇಳಿದ್ದರು. ಆಮೇಲೆ ಏನಾಯ್ತು? ಮುಂದೆ ಓದಿ?

ನಂದಿನಿ ಪಾತ್ರ ಬೇಕು ಎಂದಿದ್ದ ತ್ರಿಶಾ

'ಪೊನ್ನಿಯಿನ್ ಸೆಲ್ವನ್ 2' ಸಿನಿಮಾದ ಜೀವಾಳವೇ ನಂದಿನಿ ಪಾತ್ರ. ಇಲ್ಲಿ ಐಶ್ವರ್ಯಾ ರೈ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ನಂದಿನಿ ಹಾಗೂ ಮಂದಾಕಿನಿ ಎರಡೂ ಪಾತ್ರಗಳಲ್ಲೂ ಮಾಜಿ ವಿಶ್ವಸುಂದರಿ ಗಮನ ಸೆಳೆದಿದ್ದಾರೆ. ಆದರೆ, ಈ ಸಿನಿಮಾ ಆರಂಭ ಆಗುವುದಕ್ಕೂ ಮುನ್ನ ಈ ರೋಲ್ ಮೇಲೆ ಕಣ್ಣಿಟ್ಟಿದ್ದು ಕೃಷ್ಣ ಸುಂದರಿ ತ್ರಿಶಾ ಕೃಷ್ಣನ್.

Trisha ask Nandini role in Ponniyin Selvan 2 Maniratnam Says Only Aishwarya Rai Can Do

ತ್ರಿಶಾ ಕೃಷ್ಣನ್ ಅದ್ಭುತ ನಟಿ ಇದರಲ್ಲಿ ಎರಡು ಡೌಟೇ ಇಲ್ಲ. ಕಥೆ ಕೇಳಿದ ಬಳಿಕ ತ್ರಿಶಾಗೆ ನಂದಿನ ಪಾತ್ರ ಬೇಕು ಅಂತ ಅನಿಸಿತ್ತು. ಆ ಕಾರಣಕ್ಕೆ ಸೀದಾ ಮಣಿರತ್ನಂ ಬಳಿ ಹೋಗಿ ಐಶ್ವರ್ಯಾ ರೈಗೆ ಕೊಟ್ಟಿರೋ ನಂದಿನಿ ಪಾತ್ರ ತನಗೆ ಬೇಕು ಅಂತ ಹೇಳಿದ್ದರಂತೆ. ಆದರೂ, ನಂದಿನಿ ಪಾತ್ರ ತ್ರಿಶಾಗೆ ಸಿಗಲೇ ಇಲ್ಲ.

"ಐಶ್ವರ್ಯಾ ರೈ ಮಾತ್ರ ಮಾಡಲು ಸಾಧ್ಯ"

'ಪೊನ್ನಿಯಿನ್ ಸೆಲ್ವನ್ 2' ಸಿನಿಮಾದಲ್ಲಿ ತ್ರಿಶಾ ಕೃಷ್ಣನ್, ಮಹಾರಾಣಿ ಕುಂದವೈ ಪಾತ್ರದಲ್ಲಿ ನಟಿಸಿದ್ದಾರೆ. ಒಮ್ಮೆ ಮಣಿರತ್ನಂ ಬಳಿ ಹೋಗಿ ನಂದಿನಿ ಪಾತ್ರವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಮಣಿರತ್ನಂ ನಂದಿನಿ ಪಾತ್ರಕ್ಕೆ ಐಶ್ವರ್ಯಾ ರೈ ಅವರಿಂದ ಮಾತ್ರ ನ್ಯಾಯ ಒದಗಿಸಲು ಸಾಧ್ಯವೆಂದು ಹೇಳಿದ್ದರು.

"ನಾನು ಆ ಪಾತ್ರದಲ್ಲಿ ನಟಿಸಲು ತುಂಬಾನೇ ಇಷ್ಟಪಟ್ಟಿದ್ದೆ" ಎಂದು ತ್ರಿಶಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಹೀಗಾಗಿ ಮಣಿರತ್ನಂ ಆಫೀಸ್‌ಗೆ ಹೋದಾಗಿ ಈ ಪಾತ್ರದ ಬಗ್ಗೆ ಕೇಳಿದ್ದರು. ಆಗ ಮಣಿರತ್ನಂ " ಈ ಸಿನಿಮಾಗೆ ಮೊದಲು ಆಯ್ಕೆ ಮಾಡಿದ್ದೇ ನಂದಿನಿ ಪಾತ್ರ" ಎಂದು ಹೇಳಿ ತ್ರಿಶಾ ಆಸೆಗೆ ತಣ್ಣೀರು ಎರಚಿದ್ದರು.

ತ್ರಿಶಾ VS ಐಶ್ವರ್ಯಾ ರೈ

'ಪೊನ್ನಿಯಿನ್ ಸೆಲ್ವನ್ 2' ಸಿನಿಮಾದಲ್ಲಿ ತ್ರಿಶಾ ಹಾಗೂ ಐಶ್ವರ್ಯಾ ರೈ ಪಾತ್ರಗಳೇ ಹೈಲೈಟ್. ಕುಂದವೈ ಪಾತ್ರದಲ್ಲಿ ತ್ರಿಶಾ, ನಂದಿನಿ ಪಾತ್ರದಲ್ಲಿ ಐಶ್ವರ್ಯಾ ರೈ ನಟಿಸಿದ್ದಾರೆ. ಇಬ್ಬರೂ ಕಟ್ಟಾ ವಿರೋಧಿಗಳಾಗಿ ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತಾರೆ.

'ಪೊನ್ನಿಯಿನ್ ಸೆಲ್ವನ್ 2' ಏಪ್ರಿಲ್ 28ಕ್ಕೆ ರಿಲೀಸ್ ಆಗಿತ್ತು. ಬಿಡುಗಡೆಯಾದ ಮೂರು ದಿನಗಳಲ್ಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಕಲೆಹಾಕಿದೆ. ಮಲ್ಟಿಸ್ಟಾರರ್ ಸಿನಿಮಾಗೆ ತಮಿಳು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಐಶ್ವರ್ಯಾ ರೈ ಪಾತ್ರವನ್ನು ಹೊಗಳಿಕೊಂಡಾಡುತ್ತಿದ್ದಾರೆ.

More from Filmibeat

English summary
Trisha ask Nandini role in Ponniyin Selvan 2 Maniratnam Says Only Aishwarya Rai Can Do, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X