"ತ್ರಿಶಾಗೆ ಗಂಡು-ಹೆಣ್ಣಿನ ಭೇದ-ಭಾವವಿಲ್ಲ..ಬಾರ್‌ನಲ್ಲಿ ಯಾರನ್ನಾದರೂ ಆಯ್ದುಕೊಳ್ಳುತ್ತಾರೆ"; ಸುಚಿತ್ರಾ ಗಂಭೀರ ಆರೋಪ
ದಳಪತಿ ವಿಜಯ್ ವಿಚ್ಚೇದನ ಪ್ರಕರಣ ಬೇರೆ ಬೇರೆ ಆಯಾಮದಲ್ಲಿ ಚರ್ಚೆಯಾಗುತ್ತಿದೆ. ವಿಜಯ್-ಸಂಗೀತ ಡಿವೋರ್ಸ್ ಮ್ಯಾಟರ್‌ಗೆ ವಿವಾದಾತ್ಮಕ ಗಾಯಕಿ ಸುಚಿತ್ರಾ ಎಂಟ್ರಿ ಕೊಟ್ಟಿದ್ದಾರೆ. ವಿಚಿತ್ರ ಅಂದರೆ, ವಿಜಯ್ ಬಗ್ಗೆ ಮಾತಾಡದೇ ಸುಚಿತ್ರಾ ನೇರವಾಗಿ ತ್ರಿಶಾ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಸುಚಿತ್ರಾ ನೀಡಿದ ಸಂದರ್ಶನದಲ್ಲಿ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಹಿನ್ನೆಲೆ ಗಾಯಕಿ ಸುಚಿತ್ರಾ ತಮಿಳಿನಲ್ಲಿ ಹಲವು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಒಂದು ಕಾಲದಲ್ಲಿ ಜನಪ್ರಿಯ ಗಾಯಕಿಯಾಗಿ ಗುರುತಿಕೊಂಡಿದ್ದರು. ಆದರೆ, ಸುಚಿ ಲೀಕ್ ವಿವಾದಾತ್ಮಕ ಪ್ರಕರಣದ ಬಳಿಕ ಚಿತ್ರರಂಗದಿಂದ ಹಿಂದೆ ಸರಿದರು. ಕೆಲವು ವರ್ಷಗಳ ಹಿಂದೆ 'ಸುಚಿ ಲೀಕ್ಸ್' ವಿವಾದದಲ್ಲಿ ಗಾಯಕಿ ಸುಚಿತ್ರಾ ಅವರ ಹೆಸರು ಸಿಕ್ಕಾಪಟ್ಟೆ ಚರ್ಚೆಯಲ್ಲಿ ಇತ್ತು. ಈ ವಿವಾದದ ಬಳಿಕ ಅವರ ಮಾಜಿ ಪತ್ನಿ ಸುಚಿತ್ರಾ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆಂದು ಆರೋಪಿಸಿದ್ದರು.

'ಸುಚಿ ಲೀಕ್ಸ್' ವಿವಾದದ ಬಳಿಕ ಗಾಯಕಿ ಸುಚಿತ್ರಾ ಒಂದಿಷ್ಟು ವರ್ಷಗಳ ಕಾಲ ಸೈಲೆಂಟ್ ಆಗಿದ್ದರು. ಆದರೆ, ಇತ್ತೀಚೆಗೆ ಮತ್ತೆ ಸಂದರ್ಶನಗಳ ಮೂಲಕ ತಮಿಳು ಚಿತ್ರರಂಗದ ಕೆಲವ ನಟ-ನಟಿಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅದರಲ್ಲೂ ವಿಜಯ್ ವಿಚ್ಛೇದನ ಪ್ರಕರಣದ ಬಳಿಕ ನಟಿಯರಾದ ತ್ರಿಶಾ ಮತ್ತು ರಮ್ಯಾ ಕೃಷ್ಣನ್ ಕುರಿತು ಸುಚಿತ್ರಾ ಕೊಟ್ಟ ಹೇಳಿಕೆಗಳು ದೊಡ್ಡ ಮಟ್ಟಕ್ಕೆ ಸಂಚಲನವನ್ನು ಸೃಷ್ಟಿಸಿದೆ. ಅದರಲ್ಲೂ "ತ್ರಿಶಾಗೆ ಗಂಡು-ಹೆಣ್ಣಿನ ಭೇದ-ಭಾವವಿಲ್ಲ" ಎಂದು ಹೇಳಿರೋದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ತಮಿಳುನಾಡಿನ ಹಲವು ಸ್ಟಾರ್‌ಗಳ ಮೇಲೆ ಆರೋಪಗಳ ಸುರಿಮಳೆಯನ್ನು ಸುರಿಸಿದ್ದರು. ಈಗ ತ್ರಿಶಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ವಿಜಯ್-ಸಂಗೀತಾ ವಿಚ್ಚೇದನದ ಪ್ರಕರಣದಲ್ಲಿ ನಟಿ ತ್ರಿಶಾ ಅವರನ್ನು ಎಳೆದು ತಂದಿದ್ದಾರೆ. ಅಲ್ಲದೇ ತ್ರಿಶಾರನ್ನೇ ಕಂಪ್ಲೀಟ್ ಆಗಿ ಟಾರ್ಗೆಟ್ ಮಾಡಿದ್ದಾರೆ. ಇತ್ತೀಚೆಗೆ ಸುಚಿತ್ರಾ ನೀಡಿದ ಸಂದರ್ಶನದಲ್ಲಿ ತ್ರಿಶಾ ಬಗ್ಗೆ ಮಾಡಿದ ಗಂಭೀರ ಆರೋಪಗಳು ಹೀಗಿವೆ.
"ತ್ರಿಶಾ ಬಾತ್‌ರೂಮ್‌ನ ಒಂದು ವಿಡಿಯೋ ಸೋರಿಕೆಯಾಗಿತ್ತು. ಅದನ್ನು ತ್ರಿಶಾ ಅವರೇ ಶೂಟಿಂಗ್ ಮಾಡಿದ್ದರು. ಅವರು ಆ ವಿಡಿಯೋವನ್ನು ಸಹ ನಟನೊಬ್ಬನಿಗೆ ಕಳುಹಿಸುವುದಕ್ಕೆ ಆ ವಿಡಿಯೋವನ್ನು ಶೂಟ್ ಮಾಡಿದ್ದರು." ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, " ತ್ರಿಶಾ ಹಲವು ಕಾಮದ ಪಾರ್ಟಿಗಳನ್ನು ಆಯೋಜಿಸುತ್ತಾರೆ. ಅವರಿಗೆ ಗಂಡು ಮತ್ತು ಹೆಣ್ಣು ಎಂಬ ಭೇದ ಭಾವವಿಲ್ಲ. ಬಾರ್‌ಗಳಿಗೆ ಹೋಗಿ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳುತ್ತಾರೆ." ಗಾಯಕಿ ಸುಚಿತ್ರಾ ಆರೋಪ ಮಾಡಿದ್ದಾರೆ.

ಇಲ್ಲಿಗೆ ಸುಚಿತ್ರಾ ಆರೋಪ ಮುಗಿದಿಲ್ಲ. "ಬೌದ್ಧ ಧರ್ಮದಂತೆ ನಟಿ ರಮ್ಯಾ ಕೃಷ್ಣನ್ ಜೊತೆ 'ಸೋಲ್ ಸಿಸ್ಟರ್' ಆಗಿ ಮದುವೆಯಾಗಿದ್ದಾರೆ. ರಹಸ್ಯವಾಗಿ ಚೀನಾದಿಂದ ಒಂದು ಹುಡುಗನನ್ನು ದತ್ತು ತೆಗೆದುಕೊಳ್ಳಲು ಚಿಂತಿಸುತ್ತಿದ್ದಾರೆ. ಅವರಿಗಾಗಿಯೇ ಒಂದು ರಹಸ್ಯ ಸಮಾಜ ಇದೆ. ತ್ರಿಶಾ ದೊಡ್ಡ ದುಷ್ಟ ಶಕ್ತಿ." ಎಂದೆಲ್ಲ ಸುಚಿತ್ರಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಆರೋಪ ಮಾಡಿದ್ದಾರೆ.


Click it and Unblock the Notifications











