"ಪ್ರೀತಿಯೇ ಸರ್ವಸ್ವ ಅಲ್ಲ.. ಪ್ರೀತಿ ಇಲ್ಲದಿದ್ರೆ ಯಾವುದಕ್ಕೂ ಅರ್ಥವಿಲ್ಲ"; ತ್ರಿಶಾ ಪೋಸ್ಟ್‌ನ ಗುಟ್ಟೇನು?
ಒಂದ್ಕಡೆ ತಮಿಳುನಾಡು ಚುನಾವಣೆಯಾದರೆ, ಇನ್ನೊಂದು ಕಡೆ ವಿಜಯ್ ಹಾಗೂ ತ್ರಿಶಾ ಬಗ್ಗೆ ರೂಮರ್. ಚುನಾವಣೆಯ ಸಮಯದಲ್ಲಿ ತಮಿಳುನಾಡು ಮಂದಿಗೆ ಎರಡೆರಡು ಕುತೂಹಲ. ಈ ಬಾರಿ ತಮಿಳುನಾಡು ವಿಧಾನ ಸಭಾ ಚುನಾವಣೆಗೆ ವಿಜಯ್ ಪಕ್ಷ ಟಿವಿಕೆ ಸ್ಪರ್ಧೆ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಚುನಾವಣೆಯನ್ನು ಫೇಸ್ ಮಾಡುತ್ತಿದ್ದರೂ, ಒಂಟಿಯಾಗಿ ಅಖಾಡಕ್ಕೆ ಇಳಿದಿದೆ. ಹೀಗಾಗಿ ಈ ಪಕ್ಷದ ಮೇಲೆ ಕುತೂಹಲವಿದೆ.
ಇನ್ನೊಂದು ಕಡೆ ಚುನಾವಣೆ ಸಮಯದಲ್ಲಿಯೇ ವಿಜಯ್ ಪತ್ನಿ ಸಂಗೀತಾ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಸದ್ಯ ಈ ಪ್ರಕರಣ ಈಗ ನ್ಯಾಯಾಲಯದಲ್ಲಿ ಇದೆ. ವಿಜಯ್‌ಗೆ ಒಂದ್ಕಡೆ ಚುನಾವಣೆಯ ಟೆನ್ಷನ್ ಆದರೆ, ಇನ್ನೊಂದು ಕಡೆ ವಿಚ್ಚೇದನ ತಲೆ ಬಿಸಿ. ಎರಡೂ ಒಟ್ಟೊಟ್ಟಿಗೆ ಎದುರಾಗಿದೆ. ಕಳೆದ ಕೆಲವು ದಿನಗಳಿಂದ ಇದೇ ವಿಷಯಕ್ಕೆ ತಮಿಳುನಾಡಿನಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

ಈ ಗ್ಯಾಪ್‌ನಲ್ಲಿ ನಟಿ ತ್ರಿಶಾ ಕೃಷ್ಣನ್ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರೀತಿಯ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದು ಯಾರಿಗೆ? ಯಾರ ಬಗ್ಗೆ? ಏನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. ವಿಜಯ್ ಹಾಗೂ ಸಂಗೀತಾ ವಿಚ್ಚೇದನ ಹಾಗೂ ವಿಜಯ್-ತ್ರಿಶಾ ಅಫೇರ್ ಕುರಿತ ವದಂತಿಗಳಿಗೆ ಇದು ಮತ್ತಷ್ಟು ಪುಷ್ಠಿ ಕೊಟ್ಟಂತೆ ಇದೆ. ಈ ಪೋಸ್ಟ್‌ನ ಅರ್ಥ ಹುಡುಕುವುದರಲ್ಲಿ ಸಿನಿಮಾ ಹಾಗೂ ರಾಜಕೀಯ ವಲಯ ಬ್ಯುಸಿಯಾಗಿದೆ.
ವಿಜಯ್ ಪತ್ನಿ ಸಂಗೀತಾ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲಿಂದ ವಿಜಯ್ ಸಂಸಾರದಲ್ಲಿ ಬಿರುಕು ಬಿಟ್ಟಿರೊ ಸುದ್ದಿ ಹೊರಬಿದ್ದಿದೆ. ಇದರ ಹಿನ್ನೆಲೆಯಲ್ಲಿಯೇ ವಿಜಯ್ ಜೊತೆ ನಟಿ ತ್ರಿಶಾ ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲೂ ಮದುವೆ ಸಮಾರಂಭಕ್ಕೆ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಬಂದಿದ್ದು, ಅವರಿಬ್ಬರ ನಡುವಿನ ವದಂತಿಗಳಿಗೆ ಮತ್ತಷ್ಟು ಪುಷ್ಠಿ ಕೊಟ್ಟಿತ್ತು. ಈಗ ಇದ್ದಕ್ಕಿದ್ದ ಹಾಗೇ ತ್ರಿಶಾ ಪ್ರೀತಿ ಬಗ್ಗೆ ಹಾಕಿದ ಇನ್‌ಸ್ಟಾ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ತ್ರಿಶಾ ಹಂಚಿಕೊಂಡ ಇನ್‌ಸ್ಟಾ ಸ್ಟೋರಿ ಹೀಗಿದೆ. "Love is not everything and yet everything is meaningless without love" ಎಂದಿದ್ದಾರೆ. ಅಂದರೆ, "ಪ್ರೀತಿಯೇ ಸರ್ವಸ್ವ ಅಲ್ಲ. ಆದರೆ, ಪ್ರೀತಿ ಇಲ್ಲದಿದ್ದರೆ ಯಾವುದಕ್ಕೂ ಅರ್ಥವಿಲ್ಲ" ಎಂಬುದು ಅವರ ಪೋಸ್ಟ್‌ನ ಅರ್ಥ. ಸದ್ಯ ಈ ಪೋಸ್ಟ್‌ನ ಅರ್ಥವನ್ನು ಡಿಕೋಡ್ ಮಾಡಲಾಗುತ್ತಿದೆ. ವಿಜಯ್ ಮನಸ್ಸಿನಲ್ಲಿ ಪತ್ನಿ ಸಂಗೀತಾ ಬಗ್ಗೆ ಪ್ರೀತಿ ಇಲ್ಲ ಎಂದು ಹೇಳುತ್ತಿದ್ದಾರಾ? ಇಲ್ಲಾ, ಅವರಿಬ್ಬರ ಪ್ರೀತಿಯ ಬಗ್ಗೆ ಸುಳಿವು ನೀಡುತ್ತಿದ್ದಾರಾ ಅನ್ನೋದನ್ನು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ.

ಇನ್ನು ವಿಜಯ್ ಹಾಗೂ ತ್ರಿಶಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಎಲ್ಲೂ ಬಹಿರಂಗ ಪಡಿಸಿಲ್ಲ. ಹಾಗೇ ವಿಜಯ್ ಪತ್ನಿ ಕೂಡ ವಿಚ್ಚೇದನಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಮ್ಮ ಪತಿಗೆ ಮತ್ತೊಬ್ಬ ನಟಿಯೊಂದಿಗೆ ಸಂಬಂಧವಿದೆ ಎಂದು ಉಲ್ಲೇಖ ಮಾಡಿದ್ದಾರೆ. ಅಲ್ಲಿಂದ ಇವರಿಬ್ಬರ ನಡುವಿನ ಸಂಬಂಧಕ್ಕೆ ಮತ್ತಷ್ಟು ರೆಕ್ಕೆ ಪುಕ್ಕಗಳು ಬಂದಿವೆ. ಇದು ತಮಿಳುನಾಡಿನಾದ್ಯಂತ ಚರ್ಚೆ ಹುಟ್ಟಾಕಿದೆ.
ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಕ್ಕೆ ಟೀಕೆಗೆ ಗುರಿಯಾಗಿದ್ದರು. ತಮಿಳು ಚಿತ್ರರಂಗದ ಗಣ್ಯರೇ ಕಿಡಿಕಾರಿದ್ದರು. ಅಲ್ಲದೇ ಇದು ವಿಜಯ್ ಅವರ ರಾಜಕೀಯ ನಡೆಗೆ ಹಿನ್ನೆಡೆಯಾಗಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದರು. ಏನೇ ಇದ್ದರೂ ವಿಜಯ್ ಸದ್ಯಕ್ಕೀಗ ರಾಜಕೀಯದ ಕಡೆಗೆ ಗಮನ ಹರಿಸಿದ್ದಾರೆ. ಪೆರಂಬೂರು ಹಾಗೂ ತಿರುಚಿ ಪೂರ್ವ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದಾರೆ. ಚುನಾವಣೆ ಗೆಲ್ಲಲೇ ಬೇಕು ಅಂತ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಏನೇ ಇದ್ದರೂ, ತ್ರಿಶಾ ಇನ್‌ಸ್ಟಾ ಸ್ಟೋರಿ ಮತ್ತೆ ಚರ್ಚೆಯನ್ನಂತೂ ಹುಟ್ಟಾಕಿದೆ.


Click it and Unblock the Notifications














