Vijay-Trisha: ಅಯ್ಯೋ ವಿಜಯ್ ಬರ್ತ್‌ಡೇಗೆ ವಿಶ್ ಮಾಡಿಲ್ಲ ತ್ರಿಶಾ? ನಟಿ ಮೌನದ ಹಿಂದೆ ಅಡಗಿದೆಯೇ ರಾಜತಾಂತ್ರಿಕ ನಡೆ?

ತಮಿಳುನಾಡಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಜೋಸೆಫ್ ವಿಜಯ್ ಸೇರಿಕೊಂಡಿದ್ದಾರೆ. ಇಷ್ಟು ದಿನ ನಟನಾಗಿ ಅಪಾರ ಅಭಿಮಾನಿಗಳನ್ನು ಸೆಳೆದಿದ್ದ ವಿಜಯ್, ಈಗ ತಮಿಳುನಾಡು ಮುಖ್ಯಮಂತ್ರಿಯಾಗಿ ಜನರ ಸೇವೆಗೆ ಮುಂದಾಗಿದ್ದಾರೆ. ಇವರ ಮೇಲೆ ತಮಿಳರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಿದ್ದಾರೆ. ಸಿಎಂ ಆಗಿರೋ ವಿಜಯ್‌ಗೆ ಇಂದು (ಜೂನ್ 22) ಹುಟ್ಟುಹಬ್ಬದ ಸಂಭಮ್ರ.

ವಿಜಯ್ ಹುಟ್ಟುಹಬ್ಬಕ್ಕೆ ಜಗತ್ತಿನ ಮೂಲೆ ಮೂಲೆಯಿಂದ ಶುಭಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರತಿ ವರ್ಷ ಅಭಿಮಾನಿಗಳು ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಆದರೆ, ಈ ಬಾರಿ ವಿಜಯ್ ಸಿಎಂ ಆಗಿದ್ದಾರೆ. ಹೀಗಾಗಿ ಸಿನಿಮಾ ಹಾಗೂ ರಾಜಕೀಯ ಎರಡೂ ವಲಯಗಳಿಂದಲೂ ವಿಜಯ್ ಅಭಿಮಾನದ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ಈ ಶುಭಾಶಯಗಳಲ್ಲಿ ಅತೀ ಮುಖ್ಯವಾಗಿ ಒಬ್ಬರದ್ದು ಮಾತ್ರ ಮಿಸ್ ಆಗಿದೆ. ಆ ಬಗ್ಗೆನೇ ಈಗ ಚರ್ಚೆ.

Trisha Krishnan didn t wish Vijay on his birthday sparks social media buzz

ಇತ್ತೀಚೆಗೆ ವಿಜಯ್ ವಿಚ್ಚೇದನ ಪ್ರಕರಣದ ಬಳಿಕ ತ್ರಿಶಾ ಹೆಸರು ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ವಿಜಯ್ ಹಾಗೂ ತ್ರಿಶಾ ಇಬ್ಬರೂ ಆತ್ಮೀಯರಾಗಿರೋದು ಕೆಲವರ ಕೆಂಗಣ್ಣಿಗೂ ಗುರಿಯಾಗಿತ್ತು. ಇಷ್ಟೇ ಅದ್ಮೇಲೂ ವಿಜಯ್-ತ್ರಿಶಾ ಇಬ್ಬರೂ ಒಟ್ಟಿಗೆ ಕೆಲ ಈವೆಂಟ್‌ಗಳಲ್ಲಿ ಕಾಣಿಸಿಕೊಂಡಿದ್ದು ಇನ್ನಷ್ಟು ಅಚ್ಚರಿಗೆ ಕಾರಣವಾಗಿತ್ತು. ಆದರೆ, ಪ್ರತಿ ವರ್ಷ ವಿಜಯ್ ಅವರ ಹುಟ್ಟುಹಬ್ಬಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ಶುಭ ಕೋರುತ್ತಿದ್ದ ಆಪ್ತ ಗೆಳತಿ ತ್ರಿಶಾ ಕೃಷ್ಣ ಈ ಬಾರಿ ಮೌನಕ್ಕೆ ಶರಣಾಗಿದ್ದಾರೆ. ಅದ್ಯಾಕೆ ಅನ್ನೋದೇ ಚರ್ಚೆ.

ವಿಶ್ ಇಲ್ಲ.. ಏನೂ ಇಲ್ಲ

ತಮಿಳುನಾಡು ಚುನಾವಣೆಗೂ ಮುನ್ನವೇ ವಿಜಯ್ ಹಾಗೂ ಸಂಗೀತಾ ಅವರ ವಿಚ್ಛೇದನದ ವಿಷಯ ಸದ್ದು ಮಾಡಿತ್ತು. ಚುನಾವಣೆಗೆ ಎಫೆಕ್ಟ್ ಆಗಬಹುದೆಂಬ ಅರಿವಿದ್ದರೂ ವಿಜಯ್-ತ್ರಿಶಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇನ್ನು ವಿಜಯ್ ಕಾರಿನಲ್ಲೇ ವೋಟ್ ಹಾಕಿ ಬಂದಿದ್ದರು ಅನ್ನೋ ಸುದ್ದಿನೂ ಓಡಾಡುತ್ತಿತ್ತು. ಹಾಗೇ ಸಿಎಂ ಆದ್ಮೇಲೂ ನಟ ಅಜಿತ್ ಕುಮಾರ್ ಅವರ ತಾಯಿ ನಿಧನರಾದಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹೀಗಿರುವಾಗ ಹುಟ್ಟುಹಬ್ಬಕ್ಕೆ ಯಾಕೆ ವಿಶ್ ಮಾಡಿಲ್ಲ ಅನ್ನೋದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.

Also Read
ಕೇವಲ 48 ಗಂಟೆ ; TVK ಸೇರಿದ 2 ದಿನದಲ್ಲೇ ವಿಜಯ್ ಪರ ಡಿವೋರ್ಸ್‌ಗೆ ವಕಾಲತ್ತು, ದಳಪತಿಯ ಆಸ್ಥಾನಕ್ಕೆ ಬಂದ ಈ ವಕೀಲೆ ಯಾರು ?
ಕೇವಲ 48 ಗಂಟೆ ; TVK ಸೇರಿದ 2 ದಿನದಲ್ಲೇ ವಿಜಯ್ ಪರ ಡಿವೋರ್ಸ್‌ಗೆ ವಕಾಲತ್ತು, ದಳಪತಿಯ ಆಸ್ಥಾನಕ್ಕೆ ಬಂದ ಈ ವಕೀಲೆ ಯಾರು ?

ಮೌನದ ಹಿಂದಿದೆಯೇ ರಾಜತಾಂತ್ರಿಕ ನಡೆ?

ವಿಜಯ್ ಹಾಗೂ ತ್ರಿಶಾ ಆತ್ಮೀಯರಾಗಿದ್ದಾರೆ. ಹೀಗಿದ್ದರೂ ವಿಜಯ್ ಹುಟ್ಟುಹಬ್ಬಕ್ಕೆ ತ್ರಿಶಾ ಬಹಿರಂಗ ಸಂದೇಶ ಕಳುಹಿಸದೇ ಇರಲು ವೈಯಕ್ತಿಕ ನಿರ್ಧಾರಗಳೇ ಕಾರಣ ಎನ್ನಲಾಗಿದೆ. ಇತ್ತೀಚೆಗೆ ವಿಜಯ್ ಜೊತೆ ಗುರುತಿಸಿಕೊಂಡಿದ್ದಕ್ಕೆ ತ್ರಿಶಾರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ತ್ರಿಶಾ ಕೃಷ್ಣನ್ ತಮ್ಮಷ್ಟಕ್ಕೆ ತಾವು ಇದ್ದು ಬಿಡೋದೇ ಸೂಕ್ತ ಅಂತ ನಿರ್ಧರಿಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ.

ಒಂದಾಗುತ್ತಿದ್ದಾರಾ ವಿಜಯ್-ಸಂಗೀತಾ?

ವಿಜಯ್ ಹಾಗೂ ಸಂಗೀತಾ ವಿಚ್ಚೇದನ ಪ್ರಕರಣ ದೇಶಾದ್ಯಂತ ಸುದ್ದಿಯಾಗುತ್ತಿದ್ದರೆ, ಇನ್ನೊಂದು ಕಡೆ ಒಂದಾಗುತ್ತಾರೆಂಬ ಮ್ಯಾಟರ್ ಕೂಡ ಹರಿದಾಡಿತ್ತು. ವಿಜಯ್ ಹಾಗೂ ಸಂಗೀತಾ ದಾಂಪತ್ಯದಲ್ಲಿ ಮತ್ತೆ ಮಧುರ ಒಡನಾಟ ಸೃಷ್ಟಿಯಾಗುತ್ತಿದೆ ಎಂದು ಹೇಳಾಗುತ್ತಿದೆ. ಇದು ತ್ರಿಶಾಗೆ ಗೊತ್ತಾಗಿರಬೇಕು. ತಮ್ಮಿಬ್ಬರ ಸ್ನೇಹ ವಿಜಯ್ ಕುಟುಂಬದ ನೆಮ್ಮದಿಗೆ ಭಂಗ ತರಬಾರದೆಂದು ತ್ರಿಶಾ ನಿರ್ಧರಿಸಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದರಲ್ಲಿ ಎಷ್ಟು ಸತ್ಯ ಇದೆಯೋ? ಇಲ್ಲ ಮ್ಯಾಟರ್ ಬೇರೆನೇ ಇದೆಯೋ? ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.

Trisha Krishnan didn t wish Vijay on his birthday sparks social media buzz

ಕೀರ್ತಿ ಸುರೇಶ್ ಕೂಡ ವಿಶ್ ಮಾಡಿಲ್ಲ

ಹಾಗಂತ ತ್ರಿಶಾ ಕೃಷ್ಣನ್ ಅಷ್ಟೇ ಅಲ್ಲ. ವಿಜಯ್‌ಗೆ ಆತ್ಮೀಯರಾಗಿದ್ದ ನಟಿ ಕೀರ್ತಿ ಸುರೇಶ್ ಕೂಡ ಹುಟ್ಟುಹಬ್ಬಕ್ಕೆ ಶುಭ ಕೋರಿಲ್ಲ. ವಿಜಯ್ ಹಾಗೂ ಕೀರ್ತಿ ಸುರೇಶ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರೂ ಆತ್ಮೀಯರಾಗಿದ್ದರು. ಆ ವೇಳೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದರು. ಕೀರ್ತಿ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಿದ್ಧರಾಗಿದ್ದಾಗ ವಿಜಯ್ ಹಾಗೂ ತ್ರಿಶಾ ಇಬ್ಬರೂ ಮದುವೆಗೆ ಹೋಗಿ ಶುಭ ಹಾರೈಸಿದ್ದರು. ಈಗ ಮತ್ತೆ ಶುಭಕೋರಿದರೆ, ಟ್ರೋಲ್ ಆಗಬಹುದೆಂಬ ಕಾರಣಕ್ಕೆ ಮೌನಕ್ಕೆ ಜಾರಿರಬಹುದು ಎನ್ನಲಾಗಿದೆ.

English summary
Trisha Krishnan didn't wish Vijay on his birthday sparks social media buzz. Another actress Keerthy Suresh also didn't wish Vijay.
Read more about: trisha vijay birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X