"ಮೇ.. ಮೀ ಸೀಸನ್ ಅಧಿಕೃತವಾಗಿ ಶುರುವಾಯ್ತು" ತಮಿಳುನಾಡು ಫಲಿತಾಂಶಕ್ಕೂ ಮುನ್ನ ತ್ರಿಶಾ ಪೋಸ್ಟ್.. ಏನಿದರ ಗುಟ್ಟು?
ಈ ಬಾರಿಯ ಪಂಚ ರಾಜ್ಯ ಚುನಾವಣೆ ಕುತೂಹಲವನ್ನು ಮೂಡಿಸುತ್ತಿದೆ. ಒಂದ್ಕಡೆ ಪಶ್ಚಿಮ ಬಂಗಾಳ, ಇನ್ನೊಂದು ಕಡೆ ತಮಿಳುನಾಡು. ಈ ಎರಡೂ ರಾಜ್ಯಗಳ ಚುನಾವಣೆ ಮೇಲೆ ಇಡೀ ದೇಶವೇ ಕಣ್ಣು ಇಟ್ಟಿದೆ. ಈ ಎರಡೂ ರಾಜ್ಯಗಳ ಚುನಾವಣೆ ಫಲಿತಾಂಶ ಮಹತ್ವದ್ದು ಆಗಿದೆ. ಅದರಲ್ಲೂ ತಮಿಳುನಾಡು ಚುನಾವಣೆ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಅದಕ್ಕೆ ಕಾರಣ ದಳಪತಿ ವಿಜಯ್ ಪಕ್ಷ ಟಿವಿಕೆ.
ಈ ಬಾರಿ ತಮಿಳುನಾಡು ಚುನಾವಣೆಯಲ್ಲಿ ಮೂರು ಪಕ್ಷಗಳು ಅಖಾಡದಲ್ಲಿವೆ. ಇಲ್ಲಿವರೆಗೂ ಡಿಎಂಕೆ, ಎಐಡಿಎಂಕೆ ನಡುವೆ ಅಧಿಕಾರಕ್ಕಾಗಿ ಪೈಪೋಟಿ ನಡೆಯುತ್ತಿತ್ತು. ಆದರೆ, ಈ ವಿಧಾನ ಸಭೆ ಚುನಾವಣೆಯಲ್ಲಿ ನಟ ವಿಜಯ್ ತಮ್ಮ ಟಿವಿಕೆ ಪಕ್ಷದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈಗ ಹೊರಬಿದ್ದಿರೋ ಎಕ್ಸಿಟ್ ಪೋಲ್‌ನ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ವಿಜಯ್ ಪಕ್ಷ ಟಿವಿಕೆಗೆ ಹೆಚ್ಚು ಸೀಟ್‌ಗಳು ಬರುತ್ತವೆಂದು ಹೇಳಿದೆ.

ಒಂದ್ಕಡೆ ಈ ಬಗ್ಗೆನೇ ಚರ್ಚೆ ಆಗುತ್ತಿರುವಾಗಲೇ ನಟಿ ತ್ರಿಶಾ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಈಗ ತ್ರಿಶಾ ಮಾಡಿದ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ನಟಿ ತ್ರಿಶಾ ಮಾಡಿದ ಪೋಸ್ಟ್ ಅನ್ನು ದಳಪತಿ ವಿಜಯ್ ಅಭಿಮಾನಿಗಳು ಡಿಕೋಡ್ ಮಾಡುತ್ತಿದ್ದಾರೆ. ತ್ರಿಶಾ ಪೋಸ್ಟ್‌ಗೂ, ತಮಿಳುನಾಡು ಫಲಿತಾಂಶಕ್ಕೂ ಏನಾದರೂ ಲಿಂಕ್ ಇದೆಯಾ? ಎಂದು ತಲೆಕೆಡಿಸಿಕೊಂಡಿದ್ದಾರೆ.
ತ್ರಿಶಾ ಮಾಡಿದ ಪೋಸ್ಟ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕೂ ಒಂದು ಕಾರಣವಿದೆ. ಈಗಾಗಲೇ ನಟಿ ತ್ರಿಶಾ ಹಾಗೂ ವಿಜಯ್ ನಡುವೆ ಸಾಕಷ್ಟು ವದಂತಿಗಳು ಹಬ್ಬಿವೆ. ತ್ರಿಶಾ ಕ್ಯಾಮರಾ ಮುಂದೆ ಪ್ರತ್ಯಕ್ಷ ಆದರೆ ಸಾಕು ಏನಾದರೂ ಒಂದು ಸುದ್ದಿ ಸೃಷ್ಟಿಯಾಗುತ್ತೆ. ವಿಶೇಷ ಅಂದರೆ, ಅದು ವಿಜಯ್‌ಗೆ ಸುತ್ತಿ ಬಳಸಿಕೊಂಡು ಬಂದು ತಗಲಾಕಿಕೊಳ್ಳುತ್ತೆ. ಈಗ ತ್ರಿಶಾ ಮಾಡಿರೋ ಪೋಸ್ಟ್ ಕೂಡ ಅದೇ ರೀತಿಯಿದೆ. ಅಷ್ಟಕ್ಕೂ ಅವರು ಏನು ಪೋಸ್ಟ್ ಮಾಡಿದ್ದಾರೆಂದು ನೋಡುವುದಾರೇ..
ಮೇ ತಿಂಗಳು ತ್ರಿಶಾಗೆ ಸ್ಪೆಷಲ್. ಯಾಕಂದ್ರೆ ಇದೇ ಮೇ 4 ರಂದು ಬಹುಭಾಷಾ ನಟಿ ತ್ರಿಶಾ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ಹುಟ್ಟುಹಬ್ಬಕ್ಕೆ ಇನ್ನೂ ನಾಲ್ಕೈದು ದಿನ ಇರುವಾಗಲೇ ಸೆಲೆಬ್ರೆಷನ್ ಶುರುವಾಗಿದೆ. ತ್ರಿಶಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬ್ಯಾಕ್ ಮಾಡರ್ನ್ ಡ್ರೆಸ್‌ನಲ್ಲಿರುವ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರ ಜೊತೆಗೆ ಮೇ (ಮಿ) ಸೀಸನ್ ಅಧಿಕೃತವಾಗಿ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದು ವಿಜಯ್ ಅಭಿಮಾನಿಗಳ ನಿದ್ದೆ ಕೆಡಿಸಿದೆ.
ಯಾಕಂದ್ರೆ, ತ್ರಿಶಾ ಹುಟ್ಟುಹಬ್ಬದ ದಿನವೇ ತಮಿಳುನಾಡು ಚುನಾವಣೆಯ ಫಲಿತಾಂಶ ಪ್ರಕಟ ಆಗಲಿದೆ. ಅದೇ ದಿನ ವಿಜಯ್ ರಾಜಕೀಯ ಭವಿಷ್ಯ ಕೂಡ ನಿರ್ಧಾರ ಆಗಲಿದೆ. ತಮಿಳುನಾಡಿನ ಜನತೆ ವಿಜಯ್‌ಗೆ ಸಾಥ್ ಕೊಟ್ಟಿದ್ದಾರಾ? ಇಲ್ವಾ ಅನ್ನೋದು ನಿರ್ಧಾರ ಆಗಲಿದೆ. ಸದ್ಯ ಎಲ್ಲರ ಕಣ್ಣು ಚುನಾವಣೆ ಫಲಿತಾಂಶದ ಮೇಲಿದೆ. ಆದರೆ ವಿಜಯ್ ಅಭಿಮಾನಿಗಳಿಗೆ ಮಾತ್ರ ತ್ರಿಶಾ ಫೋಸ್ಟ್ ಇನ್ನೇನು ವಿವಾದವನ್ನು ಸೃಷ್ಠಿ ಮಾಡುತ್ತೋ ಅನ್ನೋ ಆತಂಕ. ಇನ್ನೊಂದು ಕಡೆ ಈ ಪೋಸ್ಟ್‌ನ ಹಿನ್ನೆಲೆಯೇನು? ಅನ್ನೋದನ್ನು ಡಿಕೋಡ್ ಮಾಡುತ್ತಿದ್ದಾರೆ.
ತ್ರಿಶಾ ಮಾಡಿರೋ ಪೋಸ್ಟ್ ತಮ್ಮ ಹುಟ್ಟುಹಬ್ಬದ ಬಗ್ಗೆನೋ? ಇಲ್ಲಾ ವಿಜಯ್ ಬಗ್ಗೆನೋ ಅಂತ ಕನ್ಫ್ಯೂಸ್ ಆಗಿದ್ದಾರೆ. ಕೆಲವರು ತ್ರಿಶಾ ಈ ಪೋಸ್ಟ್ ಬೇಕಿತ್ತಾ? ಅಂತ ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ಮತ್ತೊಂದು ವಿವಾದ ಸೃಷ್ಟಿ ಮಾಡ್ಬೇಡಮ್ಮ ಎಂದೂ ಕಾಮೆಂಟ್ ಹಾಕುತ್ತಿದ್ದಾರೆ. ಆದರೆ, ಇಬ್ಬರ ಫ್ಯಾನ್ಸ್ ಮಾತ್ರ ತ್ರಿಶಾ ಮುಂದಿನ ಡಿಸಿಎಂ ಎಂದು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಮತ್ತೆ ಕೆಲವರು ಸಿಎಂ ಹೆಂಡ್ತಿ ಎಂದೂ ಹೇಳಿದ್ದಾರೆ. ಒಟ್ನಲ್ಲಿ ತ್ರಿಶಾ ಪೋಸ್ಟ್ ಸಂಚಲವನ್ನಂತೂ ಸೃಷ್ಟಿಸಿದೆ.


Click it and Unblock the Notifications
