"ನನಗೆ 14 ವರ್ಷಗಳಿಂದ ಗೊತ್ತು.. ಆತ ಕಿಡ್ನಾಪರ್ ಅಲ್ಲ.. ಅಪ್ಪನ ಮುಂದೆ ಪ್ರಪೋಸ್ ಮಾಡಿದ್ದ" ಭಾವಿ ಪತಿ ಬಗ್ಗೆ ವರಲಕ್ಷ್ಮಿ

ತಮಿಳು ಚಿತ್ರರಂಗದ ಜನಪ್ರಿಯ ನಟ ಶರತ್ ಕುಮಾರ್ ತಮ್ಮ ಪುತ್ರಿಯನ್ನು ಮದುವೆ ಮಾಡುವುದಕ್ಕೆ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪುತ್ರಿ ವರಲಕ್ಷ್ಮಿ ಶರತ್ ಕುಮಾರ್ ಕೂಡ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. 38 ವರ್ಷದ ಈ ನಟಿ ಇತ್ತೀಚೆಗಷ್ಟೇ ನಿಶ್ವಿತಾರ್ಥ ಮಾಡಿಕೊಂಡಿದ್ದರು.

ವರಲಕ್ಷ್ಮಿ ಶರತ್‌ಕುಮಾರ್ ಇತ್ತೀಚೆಗೆ ತನ್ನ ಬಾಯ್‌ಫ್ರೆಂಡ್ ನಿಕೋಲಾಯ್ ಸಚ್‌ದೇವ್ ಜೊತೆ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶೀಘ್ರದಲ್ಲೇ ಮದುವೆ ಕೂಡ ಆಗಲಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್ ಇತ್ತೀಚೆಗಷ್ಟೇ ತಮ್ಮ ಮದುವೆ, ಭಾವಿ ಪತಿ ಹಾಗೂ ಅವರ ಬ್ಯುಸಿನೆಸ್ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

Varalakshmi said that her future husband nicholai is proposed in front of her father

ವರಲಕ್ಷ್ಮಿ ಶರತ್‌ಕುಮಾರ್‌ ಹುಟ್ಟಿದ್ದು ಬೆಂಗಳೂರಿನಲ್ಲಿ ಬಳಿಕ ಶಿಕ್ಷಣ ತಮಿಳುನಾಡಿನಲ್ಲಿ ಆಗಿತ್ತು. ಕನ್ನಡದಲ್ಲೂ ಕಿಚ್ಚ ಸುದೀಪ್ ನಟಿಸಿದ ಬಚ್ಚನ್ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಕಿಚ್ಚನ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ನಿಶ್ಚಿತಾರ್ಥದ ಬಳಿಕ ಕಿಚ್ಚ ಸುದೀಪ್ ಕುಟುಂಬದೊಂದಿಗೆ ಬಾವಿ ಪತಿ ನಿಕೋಲಾಯ್ ಹಾಗೂ ವರಲಕ್ಷ್ಮಿ ಕಾಣಿಸಿಕೊಂಡಿದ್ದರು.

ವರಲಕ್ಷ್ಮಿ ತನ್ನ ಮದುವೆ ಬಗ್ಗೆ ಸಂದರ್ಶನಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರೇ ವಿನ: ಭಾವಿ ಪತಿ ನಿಕೋಲಾಯ್ ಸಚ್‌ದೇವ್ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಆದ್ರೀಗ ನೀಡಿದ ಸಂದರ್ಶನದಲ್ಲಿ ತನ್ನ ತಂದೆ ಶರತ್ ಕುಮಾರ್ ಮುಂದೆನೇ ತಮಗೆ ಭಾವಿ ಪತಿ ನಿಕೋಲಾಯ್ ಪ್ರಮೋಸ್ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್ ಹಾಗೂ ವಿಶಾಲ್ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹಬ್ಬಿತ್ತು. ಆದರೆ, ಇಬ್ಬರೂ ಈ ಸುದ್ದಿಯನ್ನು ತಿರಸ್ಕರಿಸಿದ್ದರು. ಬಳಿಕ ವರಲಕ್ಷ್ಮಿ ನಿಕೊಲಾತ್ ಸಚ್‌ದೇವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ವಂದತಿಗಳಿಗೆ ತೆರೆ ಎಳೆದಿದ್ದರು. ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೂ ಕಾಲಿಡುತ್ತಿದ್ದಾರೆ. ಇದೇ ವೇಳೆ 14 ವರ್ಷಗಳಿಂದ ನಿಕೊಲಾಯ್‌ರನ್ನು ಬಲ್ಲೆ ಎಂದು ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ವರಲಕ್ಷ್ಮಿ ತನ್ನ ಭಾವಿ ಪತಿ ನಿಕೊಲಾಯ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭಾವಿ ಪತಿ ನಿಕೊಲಾಯ್ ಸಚ್‌ದೇವ್ ತಂದೆ ಆರ್ಟ್ ಗ್ಯಾಲರಿಯನ್ನು ನಡೆಸುತ್ತಿದ್ದರು. ಕಳೆದ 30 ವರ್ಷಗಳಿಂದ ಈ ವ್ಯಾಪಾರ ಮಾಡುತ್ತಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಹೀಗಾಗಿ ನಿಕೋಲಾಯ್ ತನ್ನ 16 ನೇ ವಯಸ್ಸಿನಲ್ಲೇ ಈ ಉದ್ಯಮಕ್ಕೆ ಬಂದಿದ್ದಾಗಿ ವರಲಕ್ಷ್ಮಿ ಹೇಳಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ "ಆರ್ಟ್ ಗ್ಯಾಲರಿಯನ್ನು ಕಳ್ಳಸಾಗಾಣಿಕೆಯ ವ್ಯಾಪಾರ ಎಂದು ತಿಳಿಯಬೇಡಿ. ಇಲ್ಲಿ ಕಲಾತ್ಮಕ ಮತ್ತು ದುಬಾರಿ ವಸ್ತುಗಳ ಮಾರಾಟ ಆಗುತ್ತೆ. ಆತ ಕಿಡ್ನಾಪರ್ ಅಲ್ಲ. ನಾನು ನಿಕೊಲಾಯ್ ಅವರನ್ನು 14 ವರ್ಷಗಳಿಂದ ಬಲ್ಲೆ. ನನ್ನ ತಂದೆ ಶರತ್‌ಕುಮಾರ್ ಮುಂದೆ ನಿಕೊಲಾಯ್ ನನಗೆ ಪ್ರಪೋಸ್ ಮಾಡಿದ್ದ." ಎಂದು ವರಲಕ್ಷ್ಮಿ ಹೇಳಿದ್ದಾರೆ.

More from Filmibeat

English summary
Varalakshmi said that her future husband nicholai is proposed in front of her father
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X