'ವೆಟ್ಟೈಯಾನ್ ಡಿಸಾಸ್ಟರ್' ರಜನಿ ಸಿನಿಮಾ ಟ್ರೆಂಡ್ ಮಾಡ್ತಿರೋ ವಿಜಯ್ ಫ್ಯಾನ್ಸ್; ಇನ್ನೂ ಆರಿಲ್ಲ ದ್ವೇಷ!
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ವೆಟ್ಟೈಯಾನ್' ರಿಲೀಸ್‌ಗೆ ಸಜ್ಜಾಗಿ ನಿಂತಿದೆ. ನಾಳೆ (ಅಕ್ಟೋಬರ್ 10) ಈ ಸಿನಿಮಾ ವಿಶ್ವದಾದ್ಯಂತ ಅಬ್ಬರಿಸಲು ಸಜ್ಜಾಗಿ ನಿಂತಿದೆ. ಎಲ್ಲಾ ಕಡೆ ರಜನಿ ಸಿನಿಮಾ ಬೆಳ್ಳಂಬೆಳಗ್ಗೆಯಿಂದಲೇ ಪ್ರದರ್ಶನ ಕಾಣಲಿದೆ. ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಒಟ್ಟಿಗೆ ನಟಿಸಿರುವ ಈ ಸಿನಿಮಾ ರಿಲೀಸ್‌ಗೆ ಒಂದು ದಿನ ಇದೆ ಅನ್ನುವಾಗಲೇ ವಿಜಯ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತೆ ತೆಗೆದಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ವಿಜಯ್ ನಡುವೆ ಪೈಪೋಟಿ ಇದ್ದೇ ಇರುತ್ತೆ. ಯಾರ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋದನ್ನು ಅವರ ಅಭಿಮಾನಿಗಳು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರೆ. ಪ್ರತಿಬಾರಿಯಂತೆ ಈ ಬಾರಿ ಕೂಡ ಇವರಿಬ್ಬರ ಅಭಿಮಾನಿಗಳ ಮಧ್ಯೆ ಕಿತ್ತಾಟ ಶುರುವಾಗಿದೆ. ಇದ್ದಕ್ಕಿದ್ದ ಹಾಗೇ ಸೋಶಿಯಲ್ ಮೀಡಿಯಾದಲ್ಲಿ 'ವೆಟ್ಟೈಯಾನ್ ಡಿಸಾಸ್ಟರ್' ಅನ್ನೋ ಪದ ಟ್ರೆಂಡಿಂಗ್‌ನಲ್ಲಿದೆ.

ರಜನಿ ನಟಿಸಿದ 'ವೆಟ್ಟೈಯಾನ್' ಸಿನಿಮಾದ ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಅಲ್ಲಿಂದ ಸಿನಿಮಾ ಬಗ್ಗೆ ಕ್ರೇಜ್ ಕೊಂಚ ಮಟ್ಟಿಗೆ ಕಮ್ಮಿಯಾಗಿತ್ತು. ಅದನ್ನೇ ಇಟ್ಟುಕೊಂಡು ರಜನಿಕಾಂತ್ ಸಿನಿಮಾವನ್ನು ವಿಜಯ್ ಅಭಿಮಾನಿಗಳು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈ ಹಿಂದೆ ವಿಜಯ್ ಸಿನಿಮಾ ರಿಲೀಸ್ ಆದಾಗಲೂ ರಜನಿ ಫ್ಯಾನ್ಸ್ ಇದನ್ನೇ ಮಾಡಿದ್ದರು. ಅಸಲಿಗೆ ವೆಟ್ಟೈಯಾನ್ ಡಿಸಾಸ್ಟರ್ ಕಥೆಯೇನು? ತಿಳಿಯಲು ಮುಂದೆ ಓದಿ.
ದಳಪತಿ ವಿಜಯ್ ನಟಿಸಿದ 'ಗೋಟ್' (GOAT)ಸಿನಿಮಾ ರಿಲೀಸ್ ವೇಳೆ ತಮಿಳುನಾಡು ಸರ್ಕಾರ ವಿಶೇಷ ಪ್ರದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಬೆಳಗ್ಗೆ 9 ಗಂಟೆವರೆಗೂ ಮುನ್ನ ಸಿನಿಮಾ ಪ್ರದರ್ಶನ ಮಾಡಬಾರದು ಎಂದು ಹೇಳಿತ್ತು. ಆದ್ರೀಗ ರಜನಿಕಾಂತ್ ಸಿನಿಮಾ 'ವೆಟ್ಟೈಯಾನ್'ಗೆ ವಿಶೇಷ ಪ್ರದರ್ಶನ ಮಾಡುವುದಕ್ಕೆ ಅನುಮತಿ ನೀಡಿಲಾಗಿದೆ. ಎಲ್ಲಾ ಚಿತ್ರಮಂದಿರಗಳು ಸ್ಪೆಷಲ್ ಶೋ ಮಾಡುವುದಕ್ಕೆ ಅನುಮತಿ ನೀಡಿದೆ. ಇದು ದಳಪತಿ ವಿಜಯ್ ಅಭಿಮಾನಿಗಳ ನಿದ್ದೆ ಕೆಡಿಸಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಇಬ್ಬರು ಅಭಿಮಾನಿಗಳ ಕಿತ್ತಾಟ ಹೇಗಿದೆ ಅಂದರೆ, ರಜನಿ ಅಭಿಮಾನಿಗಳು ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾ ಫ್ಲಾಪ್ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅದೇ ಇನ್ನೊಂದು ಕಡೆ ಕಡೆ ದಳಪತಿ ವಿಜಯ್ ಅಭಿಮಾನಿಗಳು 'ವೆಟ್ಟೈಯಾನ್' ಸಿನಿಮಾವನ್ನು ಡಿಸಾಸ್ಟರ್ ಎಂಬ ಹ್ಯಾಶ್ ಟ್ಯಾಗ್ ಇಟ್ಟುಕೊಂಡು ಟ್ರೆಂಡ್ ಮಾಡುತ್ತಿದ್ದಾರೆ.
'ವೆಟ್ಟೈಯಾನ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಮಸ್ತ್ ಆಗಿದೆ ಎಂದು ಎಲ್ಲಾ ಸುದ್ದಿಯಾಗುತ್ತಿದೆ. ಸುಮಾರು ಆರು ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ ಎಂದು ವರದಿಯಾಗಿದೆ. ಆದರೆ, ವಿಜಯ್ ಅಭಿಮಾನಿಗಳು ಮಾತ್ರ 'ವೆಟ್ಟೈಯಾನ್' ಸಿನಿಮಾದ ಮೊದಲ ದಿನವೇ ಹೌಸ್‌ಫುಲ್ ಆಗಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ರಜನಿ ಸಿನಿಮಾಗೆ 6.5 ಲಕ್ಷದಷ್ಟು ಟಿಕೆಟ್‌ಗಳು ಸೇಲ್ ಆಗಿವೆ.
ದಳಪತಿ ವಿಜಯ್ ನಟಿಸಿದ 'ಲಿಯೋ' ಹಾಗೂ 'ಗೋಟ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಷ್ಟೊಂದು ಮೋಡಿ ಮಾಡಿಲ್ಲ. ಈ ವೇಳೆ ರಜನಿ ಫ್ಯಾನ್ಸ್ ವಿಜಯ್ ವಿರುದ್ಧ ಸೇಡುತ್ತಿರಿಸಿಕೊಂಡಿದ್ದರು. ಈಗ ವಿಜಯ್ ಫ್ಯಾನ್ಸ್ ಸರದಿ. ಆದರೆ, 'ವೆಟ್ಟೈಯಾನ್' ಬಿಡುಗಡೆಗೆ ಒಂದು ದಿನ ಇರುವಾಗಲೇ ಈ ಟ್ರೆಂಡಿಂಗ್ ಶುರು ಮಾಡಿದ್ದು, ಅವರ ಅಭಿಮಾನಿಗಳು ಆಕ್ರೋಶಕ್ಕೆ ಕಾರಣವಾಗಿದೆ.


Click it and Unblock the Notifications











