ಮೊದಲ ಸಿನಿಮಾ ನಿರ್ದೇಶಕನಿಗೆ ಆಮಂತ್ರಣ: ಲೇಡಿ ಸೂಪರ್‌ಸ್ಟಾರ್ ಜೊತೆ ಪೋಸ್ ಕೊಟ್ಟ ವರಲಕ್ಷ್ಮಿ

ದಕ್ಷಿಣ ಭಾರತದ ನಟಿ ವರಲಕ್ಷ್ಮಿ ಶರತ್ ಕುಮಾರ್ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಮುಂದಿನ ತಿಂಗಳು ವರಲಕ್ಷ್ಮಿ ಶರತ್ ಕುಮಾರ್ ಉದ್ಯಮಿ ನಿಕೊಲಾಯ್ ಸಚ್‌ದೇವ್ ಅವರನ್ನು ವರಿಸಲಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಇವರೊಂದಿಗೆ ವರಲಕ್ಷ್ಮಿಯ ನಿಶ್ಚಿತಾರ್ಥ ನಡೆದಿತ್ತು. ಹೀಗಾಗಿ ಈಗ ಚಿತ್ರರಂಗ ಸಹೋದ್ಯೋಗಿಗಳಿಗೆ, ರಾಜಕೀಯ ಮುಖಂಡರಿಗೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದಾರೆ.

ವರಲಕ್ಷ್ಮಿ ಶರತ್‌ಕುಮಾರ್ ಈಗಾಗಲೇ ಅನೇಕ ಗಣ್ಯರು ಹಾಗೂ ರಾಜಕೀಯ ಮುಖಂಡರನ್ನು ತಮ್ಮ ಕುಟುಂಬದೊಂದಿಗೆ ಭೇಟಿಯಾಗಿ ಮದುವೆಯ ಆಮಂತ್ರಣಗಳನ್ನು ನೀಡುತ್ತಿದ್ದಾರೆ. ಸದ್ಯಕ್ಕೀಗ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಆಹ್ವಾನ ನೀಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Vignesh Shivan and Nayanthara invited by Varalakshmi Sarathkumar on her marriage

ತಮಿಳು ನಟ ಶರತ್‌ಕುಮಾರ್ ಮಾಜಿ ಪತ್ನಿಗೆ ಜನಿಸಿದ ವರಲಕ್ಷ್ಮಿ ಶರತ್‌ಕುಮಾರ್ ಅವರಿಗೀಗ 39 ವರ್ಷ. ನಿಶ್ವಿತಾರ್ಥಕ್ಕೂ ಮುನ್ನ ವರಲಕ್ಷ್ಮಿ ಶರತ್‌ಕುಮಾರ್ ಹೆಸರು ವಿಶಾಲ್ ಜೊತೆ ತಳುಕು ಹಾಕಿಕೊಂಡಿತ್ತು. ಆದರೆ, ನಿಕೊಲಾಯ್ ಸಚ್‌ದೇವ್ ಜೊತೆ ನಿಶ್ಚಿತಾರ್ಥವಾದ ಬಳಿಕ ಈ ಗಾಳಿ ಸುದ್ದಿಗಳಿಗೆಲ್ಲ ಬ್ರೇಕ್ ಬಿದ್ದಿದೆ.

ನಿಕೊಲಾಯ್ ಸಚ್‌ದೇವ್ ಈಗಾಗಲೇ ಮದುವೆ ಆಗಿ, ವಿಚ್ಛೇದನವನ್ನು ಪಡೆದಿದ್ದಾರೆ. ಹಲವು ವರ್ಷಗಳಿಂದ ವರಲಕ್ಷ್ಮಿ ಶರತ್‌ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು. ಬಳಿಕ ಇಬ್ಬರೂ ಪೋಷಕರನ್ನು ಒಪ್ಪಿಸಿ ಈಗ ಅದ್ಧೂರಿಯಾಗಿ ಮದುವೆಯಾಗಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಅವರ ನಿಶ್ಚಿತಾರ್ಥವನ್ನು ಕೂಡ ಮುಂಬೈನಲ್ಲಿ ನೆರವೇರಿತ್ತು.

ಈಗ ತನ್ನ ವೃತ್ತಿ ಬದುಕಿನ ಮೊದಲ ನಿರ್ದೇಶಕ ವಿಘ್ನೇಶ್ ಶಿವನ್ ಅವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ. ತಮಿಳಿನ 'ಪೋಡಾ ಪೋಡಿ' ಸಿನಿಮಾದಲ್ಲಿ ಸಿಂಬು ಜೊತೆ ವರಲಕ್ಷ್ಮಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಹಾಗೇ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾರನ್ನು ಮದುವೆಗೆ ಆಹ್ವಾನ ನೀಡಿದ್ದಾರೆ. ಈ ವೇಳೆ ರಾಧಿಕಾ ಶರತ್‌ಕುಮಾರ್ ಕೂಡ ಜೊತೆಯಲ್ಲಿಇದ್ದರು.

Vignesh Shivan and Nayanthara invited by Varalakshmi Sarathkumar on her marriage

ತಮಿಳು ವರಲಕ್ಷ್ಮಿ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮದುವೆ ಆಮಂತ್ರಣ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ತಮಿಳುನಾಡಿನ ಸಿಎಂ ಎಂ.ಕೆ ಸ್ಟ್ಯಾಲಿನ್, ಕನಿಮೋಳಿ ಸೇರಿದಂತೆ ಹಲವರಿಗೆ ಆಹ್ವಾನವನ್ನು ನೀಡಿದ್ದಾರೆ. ಜೊತೆಗೆ ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಸೇರಿದಂತೆ ನಟ ಸಿದ್ಧಾರ್ಥ್‌ಗೂ ಆಹ್ವಾನ ನೀಡಿದ್ದಾರೆ.

ವರಲಕ್ಷ್ಮಿ ಶರತ್‌ಕುಮಾರ್ ನಟ ಸಿದ್ಧಾರ್ಥ್ ಮನೆಗೆ ತೆರಳಿ ಅವರನ್ನು ಭೇಟಿ ಮಾಡಿ ಮದುವೆಯ ಆಮಂತ್ರಣ ನೀಡಿದ್ದಾರೆ. ಈ ವೇಳೆ ಸಿದ್ಧಾರ್ಥ್ ನಟಿ ವರಲಕ್ಷ್ಮಿಯವರೊಂದಿಗೆ ಪೋಸ್ ಕೊಟ್ಟಿರುವ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಹಾಗೇ ನಟ ಸಿಂಬು ಹಾಗೂ ವಿಶಾಲ್ ಅವರನ್ನೂ ಮದುವೆ ಆಹ್ವಾನ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ತಮಿಳಿನ ಹಿರಿಯ ನಟ ಶರತ್‌ಕುಮಾರ್ ಅವರ ಪುತ್ರಿ ಮದುವೆ ಆಗಿರುವುದರಿಂದ ಅದ್ಧೂರಿಯಾಗಿ ಮದುವೆ ನಡೆಯಲಿದೆ. ತಮಿಳುನಾಡಿನಲ್ಲಿ ಜನಪ್ರಿಯ ಕುಟುಂಬ ಆಗಿರುವುದರಿಂದ ಸಿನಿಮಾ, ರಾಜಕೀಯ ಕ್ಷೇತ್ರದಿಂದ ಅನೇಕರು ಮದುವೆಗೆ ಬರಲಿದ್ದಾರೆ. ಇತ್ತ ವರಲಕ್ಷ್ಮಿ ಶರತ್‌ಕುಮಾರ್ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸುತ್ತಿರುವುದರಿಂದ ಎಲ್ಲಾ ಭಾಷೆಯಿಂದಲೂ ಸೆಲೆಬ್ರಿಟಿಗಳು ಮದುವೆ ಬರುವ ಸಾಧ್ಯತೆಯಿದೆ.

More from Filmibeat

English summary
Varalakshmi Sarathkumar invited Nayanthara and Vignesh Shivan for her marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X