"ನಯನತಾರಾ ಜೊತೆ ಸಿಂಹ ಬೇಟೆಯಾಡಿದಂತೆ ಬದುಕು ನಡೆಸುತ್ತಿದ್ದೇನೆ"; ಪತಿ ವಿಘ್ನೇಶ್ ಶಿವನ್

ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮ್ಯಾರೇಜ್ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಇಬ್ಬರು ಮಕ್ಕಳೊಂದಿಗೆ ಖುಷಿಯಾಗಿದ್ದಾರೆ. ಸಿನಿಮಾ ಹಾಗೂ ಫ್ಯಾಮಿಲಿ ಕಡೆಗೆ ಗಮನ ಹರಿಸಿದ್ದಾರೆ. ಫ್ರೀ ಇದ್ದಾಗ ಇಬ್ಬರು ಮಕ್ಕಳೊಂದಿಗೆ ದೇಶ-ವಿದೇಶವನ್ನು ಸುತ್ತಾಡುತ್ತಾ ಬದುಕಿನ ಸುಂದರ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದಾರೆ.

ನಯನತಾರ ಕೂಡ ಲವ್ ಬ್ರೇಕಪ್ ಬಳಿಕ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಡೇಟಿಂಗ್ ಮಾಡುತ್ತಿದ್ದರು. ಒಂದಿಷ್ಟು ವರ್ಷ ಇಬ್ಬರೂ ಒಬ್ಬರನ್ನೊಬ್ಬರು ಅರಿತುಕೊಂಡ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಇಬ್ಬರೂ ಒಬ್ಬರನ್ನೊಬ್ಬರು ಹೇಗೆ ಅರ್ಥ ಮಾಡಿಕೊಂಡಿದ್ದಾರೆ? ಇಬ್ಬರ ನಡುವೆ ಸಾಮರಸ್ಯವಿದೆಯೇ? ಈ ಪ್ರಶ್ನೆಗಳಿಗೆ ಇತ್ತೀಚೆಗೆ ಹುಲಿ ಬೇಟೆಯನ್ನು ಉದಾಹರಣೆ ಕೊಟ್ಟು ವಿವರಿಸಿದ್ದಾರೆ.

Vignesh Shivan reveals unique life philosophy with Nayanthara after marriage

ವಿಘ್ನೇಶ್ ಶಿವನ್ ನಿರ್ದೇಶಿಸಿದ 'ಲವ್ ಇನ್ಶೂರೆನ್ಸ್ ಕಂಪೆನಿ' ರಿಲೀಸ್ ಆಗಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನ ವಿಘ್ನೇಶ್ ಶಿವನ್ ಭರ್ಜರಿ ಪ್ರಚಾರ ಮಾಡಿದ್ದರು. ಈ ವೇಳೆ ನಯನತಾರಾ ಮದುವೆ ಆದ್ಮೇಲೆ ತಮ್ಮ ಬದುಕು ಹೇಗಿದೆ? ಅನ್ನೋದನ್ನು ರಿವೀಲ್ ಮಾಡಿದ್ದರು. 'ಸಿಂಹ ಬೇಟೆಯಾಡುವಂತೆ ಬದುಕುತ್ತಿದ್ದೇನೆ' ಎಂದು ಹೇಳಿಕೊಂಡಿದ್ದರು. ಹಾಗೇ 265:100 ಅನುಪಾತದ ಲೆಕ್ಕವನ್ನು ಕೊಟ್ಟಿದ್ದರು. ಅಸಲಿಗೆ ಇವರ ಈ ಲೆಕ್ಕಾಚಾರದ ಅರ್ಥವೇನು? ತಿಳಿಯವುದಕ್ಕೆ ಮುಂದೆ ಓದಿ.

'ಲವ್ ಇನ್ಶೂರೆನ್ಸ್ ಕಂಪೆನಿ' ಮೂಲಕ ವಿಘ್ನೇಶ್ ಶಿವನ್ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಪ್ರದೀಪ್ ರಂಗನಾಥನ್, ಕೃತಿ ಶೆಟ್ಟಿ, ಎಸ್.ಜೆ. ಸೂರ್ಯ, ಸೀಮನ್ ಜೊತೆಗೆ ಇನ್ನೂ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 'ಲವ್ ಇನ್ಶೂರೆನ್ಸ್ ಕಂಪೆನಿ'ಗೆ ಅನಿರುದ್ಧ್ ಸಂಗೀತ ನೀಡಿದ್ದು, ಇದೊಂದು ಯುವ ಸಮುದಾಯವನ್ನು ಆಕರ್ಷಿಸುವ ಕಥೆಯಾಗಿದೆ. ಬಹುತೇಕ ಯುವ ನಟರನ್ನೇ ಹೊಂದಿರುವ ಈ ಸಿನಿಮಾ ರಿಲೀಸ್ ಆದ ಮೊದಲ 5 ದಿನಗಳಲ್ಲಿ ಸುಮಾರು ₹44 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎನ್ನಲಾಗಿದೆ.

ಇದೇ ಸಿನಿಮಾದ ಪ್ರಚಾರಕ್ಕಾಗಿ ನಿರ್ದೇಶಕ ವಿಘ್ನೇಶ್ ಶಿವನ್ ಯುಟ್ಯೂಬ್ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ನಯನತಾರಾರನ್ನು ವಿವಾಹವಾದ ಬಳಿಕ ಬದುಕು ಹೇಗಿದೆ ಅನ್ನೋದನ್ನು ವಿಘ್ನೇಶ್ ಶಿವನ್ ರಿವೀಲ್ ಮಾಡಿದ್ದಾರೆ. "ನಾನು ಮತ್ತು ನಯನತಾರಾ ಪ್ರೀತಿಸುತ್ತಿದ್ದ ಸಮಯದಲ್ಲೇ ಒಂದು ನಿರ್ಧಾರ ತೆಗೆದುಕೊಂಡಿದ್ವಿ. ಅದನ್ನೇ ಇಲ್ಲಿವರೆಗೂ ಪಾಲಿಸಿಕೊಂಡು ಬರುತ್ತಿದ್ದೇವೆ. ಸಿಂಹ ಬೇಟೆಯಾಡಿದಂತೆ ಬದುಕಬೇಕು ಎನ್ನುವುದು ನಮ್ಮ ನಿರ್ಧಾರವಾಗಿತ್ತು. ಅಂದರೆ, ವರ್ಷದ 365 ದಿನಗಳಲ್ಲಿ 265 ದಿನಗಳು ಕೆಲಸ ಮಾಡಬೇಕು. ಆದರೆ ಉಳಿದ 100 ದಿನಗಳ ಕಾಲ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ನಮಗಾಗಿ ಸಮಯ ನೀಡಬೇಕು" ಎಂದು ವಿಘ್ನೇಶ್ ಹೇಳಿಕೊಂಡಿದ್ದಾರೆ.

Vignesh Shivan reveals unique life philosophy with Nayanthara after marriage

ತಮ್ಮ ವೈವಾಹಿಕ ಜೀವನವನ್ನು ಸಿಂಹ ಬೇಟೆಗೆ ಹೋಲಿದಿದ್ದೇಕೆ? ಅನ್ನೋದನ್ನು ಹೇಳಿಕೊಂಡಿದ್ದಾರೆ. "ಕಾಡಿನಲ್ಲಿ ಸಿಂಹ ಬೇಟೆಯಾಡಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತೆ. ಆ ನಂತರ ಅದರ ಮುಂದೆ ನಾವು ಹೋಗಿ ನಿಂತರೂ ಸಹ ಅದು ನಮ್ಮನ್ನು ಬೇಟೆಯಾಡುವುದಿಲ್ಲ. ಏಕೆಂದರೆ, ಅದು ಈಗಾಗಲೇ ಬೇಟೆಯಾಡಿ ಹಸಿವನ್ನು ನೀಗಿಸಿಕೊಂಡಿರುತ್ತೆ. ನಾವು ಕೂಡ ಹಾಗೆಯೇ ಬದುಕಬೇಕು." ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

ನಯನತಾರಾ ಜೊತೆಗಿನ ಜೀವನಶೈಲಿಯನ್ನು ಇನ್ನಷ್ಟು ವಿವರವಾಗಿ ರಿವೀಲ್ ಮಾಡಿದ್ದಾರೆ. "ನಮಗೆ ಏನೆಲ್ಲಾ ಬೇಕೋ ಅದನ್ನು ಆ 265 ದಿನಗಳಲ್ಲಿ ಪಡೆದುಕೊಳ್ಳಬೇಕು. ಉಳಿದ 100 ದಿನಗಳನ್ನು ನಮಗಾಗಿ ಮಾತ್ರವೇ ಮೀಸಲಿಡಬೇಕು. ಇದನ್ನು ನಾವು ಡೇಟಿಂಗ್ ಮಾಡುತ್ತಿದ್ದ ಸಮಯದಿಂದಲೂ ಪಾಲಿಸುತ್ತಿದ್ದೇವೆ. ಹಾಗಂತ ಇದಕ್ಕೆಲ್ಲ ಶ್ರೀಮಂತರಾಗಿರಬೇಕು ಅಥವಾ ಕೋಟ್ಯಾಧಿಪತಿಗಳಾಗಿರಬೇಕು ಎಂದೇನಿಲ್ಲ. 265 ದಿನಗಳಲ್ಲಿ ನಾವು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ. ಅದರಿಂದ ಗಳಿಸಿದ ಹಣವನ್ನು ಆ 100 ದಿನಗಳಲ್ಲಿ ಖರ್ಚು ಮಾಡುತ್ತೇವೆ. ಮತ್ತೆ 265 ದಿನಗಳು ಮತ್ತೆ ಹಣ ಗಳಿಸಲು ಕೆಲಸ ಮಾಡುತ್ತೇವೆ." ಎಂದು ವಿಘ್ನೇಶ್ ಶಿವನ್ ತಮ್ಮ ಹಾಗೂ ನಯನತಾರಾ ಅವರ ಲೈಫ್ ಫಿಲಾಸಫಿಯನ್ನು ರಿವೀಲ್ ಮಾಡಿದ್ದಾರೆ.

English summary
Vignesh Shivan reveals unique life philosophy with Nayanthara after marriage.
Read more about: nayanthara marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X