ಚುನಾವಣೆಗೂ ಮುನ್ನ ಚೆನ್ನೈನಲ್ಲಿ ಆಸ್ತಿ ಮಾರಿ, ಆಸ್ಟ್ರೇಲಿಯಾ ಆಸ್ತಿ ಖರೀಸಿದರೇ ವಿಜಯ್-ತ್ರಿಶಾ? ಏನಿದು ಹೊಸ ಆರೋಪ?

ತಮಿಳುನಾಡು ಚುನಾವಣಾ ಅಖಾಡಕ್ಕೆ ಸಜ್ಜಾಗಿದೆ. ಸುಡು ಬಿಸಿಲನ ನಡುವೆಯೂ ರಾಜಕೀಯರ ಮುಖಂಡರು ಅಖಾಡಕ್ಕೆ ಇಳಿದು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ವಿರೋಧಿ ಪಕ್ಷಕ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗ 'ತಮಿಳಕ ವೆಟ್ರಿ ಕಳಗಂ' ಪಕ್ಷ ಕಟ್ಟಿ ಅಖಾಡಕ್ಕೆ ಇಳಿಯುತ್ತಿರುವ ದಳಪತಿ ವಿಜಯ್ ವಿರುದ್ಧ ತೀವ್ರ ಟೀಕೆಗಳನ್ನು ಮಾಡಲಾಗುತ್ತಿದೆ.

ವಿಜಯ್ ವಿಚ್ಚೇದನ ಪ್ರಕರಣದ ಬಳಿಕ ನಟಿ ತ್ರಿಶಾ ಹೆಸರು ತಳುಕು ಹಾಕಿಕೊಂಡಿದ್ದು, ವಿರೋಧಿಗಳಿಗೆ ಟೀಕೆ ಮಾಡುವುದಕ್ಕೆ ಬಿಸಿ ಬಿಸಿ ಆಹಾರವಾಗಿಬಿಟ್ಟಿದೆ. ಅದರಲ್ಲೂ ಇತ್ತೀಚೆಗೆ 'ನಾಮ್ ತಮಿಳರ್ ಕಚ್ಚಿ' ಪಕ್ಷದ ಸದಸ್ಯ ಮತ್ತು ಯೂಟ್ಯೂಬರ್ ಸಾಟ್ಟೆ ದುರೈಮುರುಗನ್ ಮಾಡಿದ ಆರೋಪ ತಮಿಳುನಾಡಿನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.

Vijay and Trish Brought property in Australia NTK Durai Murugan fresh allegation

ದಳಪತಿ ವಿಜಯ್ ಹಾಗೂ ಅವರ ಪಕ್ಷದ ರಾಜಕೀಯ ಚಟುವಟಿಕೆಗಳನ್ನು ದೊರೈ ಮುರುಗನ್ ಟೀಕೆ ಮಾಡುತ್ತಲೇ ಇದ್ದಾರೆ. ತಮ್ಮದೇ ಶೈಲಿಯಲ್ಲಿ ಟೀಕಿಸುತ್ತಿರುವ ದೊರೈ ಮುರುಗನ್ ಜನಪ್ರಿಯತೆ ಗಳಿಸಿದ್ದಾರೆ. ಈಗಾಗಲೇ ಇವರು ಮಾಡಿದ ಟೀಕೆಗಳು ಡಿಜಿಟಲ್ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗ ವಿಜಯ್ ಚೆನ್ನೈನಲ್ಲಿರುವ ತಮ್ಮ ಆಸ್ತಿಯನ್ನು ಮಾರಿ, ಆಸ್ಟ್ರೇಲಿಯಾದಲ್ಲಿ ಆಸ್ತಿ ಖರೀದಿ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಹಾಗೇ ತ್ರಿಶಾ ಕೂಡ ಪಕ್ಕದಲ್ಲಿಯೇ ಆಸ್ತಿ ಖರೀದಿ ಮಾಡಿದ್ದಾರೆಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಎಲ್ಲಾ ಪಕ್ಷಗಳ ಅಖಾಡಕ್ಕೆ ಇಳಿದಿವೆ. ಇತ್ತೀಚೆಗೆ ದೊರೈ ಮುರುಗನ್ ತಮ್ಮ 'ನಾಮ್ ತಮಿಳರ್ ಕಚ್ಚಿ' ಪರವಾಗಿ ಪ್ರಚಾರ ಮಾಡುತ್ತಿದ್ದರು. ಈ ವೇಳೆ ದೊರೈ ಮುರುಗನ್ ನಟ ವಿಜಯ್ ಹಾಗೂ ನಟಿ ತ್ರಿಶಾ ಬಗ್ಗೆ ಕೊಟ್ಟ ಹೇಳಿಕೆಗಳು ಅನೇಕರಿಗೆ ಆಘಾತ ತಂದಿದೆ.

ದೊರೈಮುರುಗನ್ ಹೇಳಿರುವ ಪ್ರಕಾರ, ವಿಜಯ್ ಕೆಲವು ತಿಂಗಳ ಹಿಂದೆ ಚೆನ್ನೈನಲ್ಲಿದ್ದ ಕೆಲವು ಆಸ್ತಿಗಳನ್ನು ಸೇಲ್ ಮಾಡಿದ್ದಾರೆ. ಇದನ್ನು ರಾಜಕೀಯ ಮುಖಂಡರು ಕೂಡ ಟೀಕಿಸಿದ್ದರು. ಆಗ ಕೆಲವರು ಚುನಾವಣಾ ವೆಚ್ಚಕ್ಕಾಗಿ ಈ ಆಸ್ತಿಗಳನ್ನು ಮಾರಾಟ ಮಾಡಿರಬಹುದೆಂದು ವಿಜಯ್ ಬೆಂಬಲಕ್ಕೆ ನಿಂತಿದ್ದರು. ಆದರೆ, ದೊರೈ ಮುರುಗನ್ ಮಾತ್ರ ವಿಜಯ್ ಚೆನ್ನೈನ ಆಸ್ತಿಗಳನ್ನು ಮಾರಿ ಆಸ್ಟ್ರೇಲಿಯಾದಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ, ದಳಪತಿ ವಿಜಯ್ ಖರೀದಿಸಿರುವ ಭೂಮಿಯ ಪಕ್ಕದಲ್ಲೇ ನಟಿ ತ್ರಿಶಾಗೂ ಆಸ್ತಿ ಖರೀದಿ ಮಾಡಿದ್ದಾರೆಂದು ದೊರೈ ಮುರುಗನ್ ಆರೋಪಿಸಿದ್ದಾರೆ. ಇಲ್ಲಿಗೆ ನಿಂತಿಲ್ಲ. ಒಂದು ವೇಳೆ ವಿಜಯ್ ಈ ಆರೋಪಗಳನ್ನು ನಿರಾಕರಿಸಿದರೆ, ಆಸ್ತಿ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ರಿಲೀಸ್ ಮಾಡುವುದಕ್ಕೆ ಸಿದ್ಧ ಎಂದು ಸವಾಲು ಕೂಡ ಹಾಕಿದ್ದಾರೆ. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ತಮಿಳುನಾಡಿನಲ್ಲಿ ವಿಜಯ್ ಬಗ್ಗೆ ಇಷ್ಟೆಲ್ಲ ಆರೋಪಗಳು ಕೇಳಿ ಬಂದರೂ, 'ತಮಿಳಗ ವೆಟ್ರಿ ಕಳಗಂ' ಪಕ್ಷದ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಜಯ್ ಕೂಡ ಇನ್ನೂ ತಿರುಗೇಟು ಕೊಡುವ ಪ್ರಯತ್ನ ಕೂಡ ಮಾಡಿಲ್ಲ. ಆದರೆ, ವಿಜಯ್ ಬೆಂಬಲಿಗರು ಮಾತ್ರ ಇದೆಲ್ಲ ರಾಜಕೀಯ ದ್ವೇಷದಿಂದ ಮಾಡುತ್ತಿರೋ ಟೀಕೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಇಂತಹ ಸುಳ್ಳು ಸುದ್ದಿಗಳಿಗೆ 'ತಮಿಳಗ ವೆಟ್ರಿ ಕಳಗಂ' ಪಕ್ಷವಾಗಲಿ, ನಟ ವಿಜಯ್ ಆಗಲಿ ಉತ್ತರಿಸುವ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಏನೇ ಇದ್ದರೂ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷಕ್ಕೆ ಜನರು ಹೇಗೆ ಬೆಂಬಲಿಸುತ್ತಾರೆ ಅನ್ನೋದು ನೋಡಬೇಕಿದೆ.

English summary
Vijay and Trish Brought property in Australia NTK Durai Murugan fresh allegation. Also claimed that he can produce documents.
Read more about: vijay trisha tamil nadu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X