ವಿಚ್ಚೇದನದ ಪ್ರಕರಣದ ಬೆನ್ನಲ್ಲೇ ಮದುವೆ ಫೋಟೊ ನೀಡಿದ ಫ್ಯಾನ್; ವಿಜಯ್ ರಿಯಾಕ್ಷನ್‌ ಏನಂದ್ಕೊಳ್ಬೇಕು?

ತಮಿಳುನಾಡಿನಲ್ಲಿ ಏಪ್ರಿಲ್ 23ಕ್ಕೆ ವಿಧಾನ ಸಭಾ ಚುನಾವಣೆ ನಡೆಯುತ್ತಿದೆ. ಇಲ್ಲಿವರೆಗೂ ಡಿಎಂಕೆ ಹಾಗೂ ಎಐಎಡಿಎಂಕೆ ಮಧ್ಯೆ ಫೈಟ್ ಇರುತ್ತಿತ್ತು. ಆದ್ರೀಗ ಮೂರನೇ ಪಕ್ಷ ಪೈಪೋಟಿ ನೀಡುವುದಕ್ಕೆ ಅಖಾಡಕ್ಕೆ ಇಳಿದಿದೆ. ಅದುವೇ ದಳಪತಿ ವಿಜಯ್ ನಟನೆಯ ತಮಿಳಗ ವೆಟ್ರಿ ಕಳಗಂ (TVK) ಪಕ್ಷ. ಈ ಬಾರಿ ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ವಿಜಯ್ ಇದೇ ಮೊದಲ ಬಾರಿ ತಮ್ಮ ಟಿವಿಕೆ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಪೆರಂಬೂರು ಹಾಗೂ ತಿರ್ಚಿ ಪೂರ್ವ ಈ ಎರಡು ಕ್ಷೇತ್ರಗಳಲ್ಲಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಒಂದು ಕಡೆ ತನ್ನ ಎರಡು ಕ್ಷೇತ್ರಗಳು.. ಇನ್ನೊಂದು ಕಡೆ ತನ್ನ ಪಕ್ಷದಿಂದ ಸ್ಪರ್ಧೆಗೆ ಇಳಿದಿರುವ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕಿದೆ. ಹೀಗಾಗಿ ವಿಜಯ್ ಒಂದ ಕ್ಷಣವನ್ನು ಬಿಡದೆ ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ.

Vijay gave thumbs up which fan gave photo frame with his Wife Sangeetha and Vijayakanth

ಈ ಪ್ರಚಾರದ ವೇಳೆ ವಿಜಯ್‌ಗೆ ಒಂದೊಂದು ದಿನ ಒಂದೊಂದು ಅನುಭವ ಆಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಪ್ರಚಾರದ ಭಾಗವಾಗಿ ಸೈಕಲ್‌ ಸವಾರಿ ಮಾಡುತ್ತಿದ್ದ ವೇಳೆ ಅಭಿಮಾನಿಯೊಬ್ಬರು ವಿಜಯ್ ಬರುವ ದಾರಿಯಲ್ಲಿ ಹೂವನ್ನು ಎಸೆದಿದ್ದರು. ಆ ವೇಳೆ ಭಯ ಬಿದ್ದ ವಿಜಯ್ ಹೆದರಿ ಓಡಿದ್ದರು. ಇಂದು ಪ್ರಚಾರ ಸಭೆಯ ವೇಳೆ ಮತ್ತೊಂದು ಸನ್ನಿವೇಶ ನಡೆದಿದೆ. ವಿಜಯ್ ಮದುವೆ ಫೋಟೊವನ್ನು ಅಭಿಮಾನಿ ಕೊಟ್ಟಿದ್ದಾನೆ. ಅದಕ್ಕೆ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ.

ದಳಪತಿ ವಿಜಯ್‌ಗೆ ಇದು ಮೊದಲ ಚುನಾವಣೆ. ಹೀಗಾಗಿ ತುಂಬಾ ನಾಜೂಕಾಗಿ ಹೆಜ್ಜೆ ಹಾಕಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರ ದಾಂಪತ್ಯ ಜೀವನ ಬೀದಿಗೆ ಬಂದಿತ್ತು. ದಿಢೀರನೇ ವಿಜಯ್ ಪತ್ನಿ ಸಂಗೀತಾ ಕೋರ್ಟ್ ಮೆಟ್ಟಿಲೇರಿ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಇಲ್ಲಿಂದ ವಿಜಯ್‌ಗೆ ಇದ್ದ ಜನ ಬೆಂಬಲದಲ್ಲಿ ಕೊಂಚ ಮಟ್ಟಿಗೆ ಕಮ್ಮಿ ಆಗಿದೆ ಎಂದು ಹೇಳಲಾಗುತ್ತಿದೆ.

Also Read
ಅಭಿಮಾನಿ ಎಸೆದ ಹೂವನ್ನು ಬಾಂಬ್‌ ಎಂದುಕೊಂಡು ಎದ್ನೋ ಬಿದ್ನೋ ಎಂದು ಓಡಿ ಹೋದ ವಿಜಯ್
ಅಭಿಮಾನಿ ಎಸೆದ ಹೂವನ್ನು ಬಾಂಬ್‌ ಎಂದುಕೊಂಡು ಎದ್ನೋ ಬಿದ್ನೋ ಎಂದು ಓಡಿ ಹೋದ ವಿಜಯ್

ಕೌಟುಂಬಿಕ ನ್ಯಾಯಾಲದಯಲ್ಲಿ ವಿಜಯ್ ಪತ್ನಿ ಸಂಗೀತಾ ವಿಚ್ಚೇದನಕ್ಕೆ ಅರ್ಜಿಯನ್ನು ಸಲ್ಲಿಸುತ್ತಿದ್ದಂತೆ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಈ ಪ್ರಕರಣ ಈಗ ಕೋರ್ಟ್ ಅಂಗಳದಲ್ಲಿ ಇದೆ. ಚುನಾವಣೆಗೂ ಮುನ್ನವೇ ಕೋರ್ಟ್‌ನಲ್ಲಿ ಮತ್ತೊಂದು ವಿಚಾರಣೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ವಿಜಯ್ ಹಾಗೂ ದಾಂಪತ್ಯ ಜೀವನ ಸಂಕಷ್ಟದಲ್ಲಿದೆ. ಈ ಮಧ್ಯೆ ಚುನಾವಣಾ ಪ್ರಚಾರ ಮಾಡುವಾಗ ಅಭಿಮಾನಿಯೊಬ್ಬ ವಿಜಯ್ ಹಾಗೂ ಸಂಗೀತಾ ಇಬ್ಬರ ಮದುವೆ ಫೋಟೊವನ್ನು ನೀಡಿದ್ದಾನೆ. ಅದಕ್ಕೆ ವಿಜಯ್ ದಳಪತಿ ಪ್ರತಿಕ್ರಿಯೆ ನೀಡಿದ್ದು, ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವಿಜಯ್ ತಮಿಳುನಾಡಿನಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ರಸ್ತೆ ಬದಿಯಲ್ಲಿ ಅಭಿಮಾನಿಯೊಬ್ಬ ವಿಜಯ್, ಪತ್ನಿ ಸಂಗೀತಾ ಹಾಗೂ ದಿವಗಂತ ನಟ ವಿಜಯಕಾಂತ್ ಅವರಿದ್ದ ಫೋಟೊವನ್ನು ಫ್ರೇಮ್ ಹಾಕಿಸಿ ಹಿಡಿದು ನಿಂತಿದ್ದ. ಅದನ್ನು ದೂರದಿಂದಲೇ ಗುರುತಿಸಿದ್ದ ವಿಜಯ್ ಕೈ ಮಾಡಿ ನೀಡುವಂತೆ ಸೂಚಿಸಿದ್ದರು. ಬಳಿಕ ತನ್ನ ಬಾಡಿಗಾರ್ಡ್ ಹತ್ತಿರ ಆ ಫೋಟೊವನ್ನು ಎತ್ತಿಕೊಂಡು ಜನರಿಗೆ ತೋರಿಸಿ ಹೆಬ್ಬರಳಿನ ಮೂಲಕ ಸಮ್ಮತಿಯನ್ನು ಸೂಚಿಸಿದ್ದರು.

ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಜಯ್ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿರೋ ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ನಟನ ಸಂಸಾರ ಮತ್ತೆ ಸರಿ ಹೋಗಿರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿಜಯ್ ಹಾಗೂ ಸಂಗೀತಾ ನಡುವೆ ಸಂಧಾನ ನಡೆದು, ಎಲ್ಲವೂ ಸರಿ ಹೋಗಿರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ವಿಜಯ್ ವಿಚ್ಚೇದನದ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವವರೆಗೂ ಈ ಪ್ರಶ್ನೆ ಉತ್ತರ ಸಿಗೋದು ಅನುಮಾನ.

More from Filmibeat

English summary
Vijay gave thumbs up which fan gave photo frame with his Wife Sangeetha and Vijayakanth.
Read more about: vijay photo fan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X