ವಿಜಯ್ ಬಳಿ 883 ಗ್ರಾಂ, ಪತ್ನಿ ಬಳಿ 3,132 ಗ್ರಾಂ ಚಿನ್ನ; ಇದರ ಮೌಲ್ಯ ಕೇಳಿ ಬೆಚ್ಚಿಬಿದ್ದ ತಮಿಳಿಗರು

ದಳಪತಿ ವಿಜಯ್ ದಕ್ಷಿಣ ಭಾರತದ ಶ್ರೀಮಂತ ನಟ ಅನ್ನೋದು ಈಗ ಸಾಬೀತಾಗಿದೆ. ಇದೇ ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದಿರುವ ವಿಜಯ್ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಪೆರಂಬೂರು ಹಾಗೂ ತಿರುಚಿರಾಪಲ್ಲಿ ಪೂರ್ವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಿದ್ದಾರೆ. ನಿನ್ನೆಯಷ್ಟೇ (ಮಾರ್ಚ್ 29) ವಿಜಯ್ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದ್ದರು. ಅದರ ಬೆನ್ನಲ್ಲೇ ಇಂದು (ಮಾರ್ಚ್ 30) ಪೆರಂಬೂರಲ್ಲಿ ನಾಮಪತ್ರ ಸಲ್ಲಿಸಿದ್ದರು.

ವಿಜಯ್ ಒಂದು ಸಿನಿಮಾದಲ್ಲಿ ನೂರು ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಾರೆಂದು ವರದಿಗಳಾಗಿದ್ದವು. ಹೀಗಾಗಿ ವಿಜಯ್ ಒಳ್ಳೆ ಆಸ್ತಿ ಸಂಪಾದನೆ ಮಾಡಿರಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಇಲ್ಲಿವರೆಗೂ ಅಧಿಕೃತವಾಗಿ ವಿಜಯ್ ಈ ಬಗ್ಗೆ ಎಲ್ಲೂ ರಿವೀಲ್ ಮಾಡಿರಲಿಲ್ಲ. ಆದ್ರೀಗ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದರಿಂದ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಬಗೆಗಿನ ಪೂರ್ಣ ವಿವರನ್ನು ಸಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ವಿಜಯ್ ತಮ್ಮ ಬಳಿ ಇರುವ ಆಸ್ತಿಯ ಮೌಲ್ಯವನ್ನು ಘೋಷಿಸಿದ್ದಾರೆ.

Vijay has 883 gram gold and wife Sangeetha has 3 132 gram gold revealed in affidavit

ಹೆಚ್ಚು ಕಡಿಮೆ 700 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿರುವ ವಿಜಯ್ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಐಷಾರಾಮಿ ಕಾರು, ಬಂಗಲೆ, ಎಸ್ಟೇಟ್ ಇವೆಲ್ಲವೂ ಗಮನ ಸೆಳೆದಿದ್ದರೂ, ವಿಜಯ್ ಹಾಗೂ ಅವರ ಪತ್ನಿ ಬಳಿ ಇರುವ ಚಿನ್ನ ಹಾಗೂ ವಜ್ರದ ಮೌಲ್ಯವನ್ನು ಕಂಡು ದಂಗಾಗಿ ಹೋಗಿದ್ದಾರೆ. ಅಷ್ಟಕ್ಕೂ ಇಬ್ಬರ ಬಳಿ ಎಷ್ಟು ಮೊತ್ತದ ಚಿನ್ನ ಹಾಗೂ ವಜ್ರವಿದೆ ಅನ್ನೋದನ್ನು ನೋಡುವುದಾರೇ,

ಸಂಗೀತಾ ಪತಿ ವಿಜಯ್ ವಿರುದ್ಧ ವಿಚ್ಛೇದನ ಪ್ರಕರಣವನ್ನು ದಾಖಲಿಸಿದ್ದರು. ಇಲ್ಲಿಂದ ಇಬ್ಬರ ದಾಂಪತ್ಯ ಜೀವನದ ಬಗ್ಗೆ ಅವರ ಬೆಂಬಲಿಗರಲ್ಲಿ ಆತಂಕ ಸೃಷ್ಟಿಯಾಗಿತ್ತು. ಪರಿಸ್ಥಿತಿ ಹೀಗಿದ್ದರೂ, ವಿಜಯ್ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಪತ್ನಿ ಸಂಗೀತಾ ಬಳಿಕ ಇರುವ ಚಿನ್ನಾಭರಣ ಹಾಗೂ ವಜ್ರದ ಒಡವೆಗಳ ಬಗ್ಗೆ ಅಚ್ಚರಿಯ ಮಾಹಿತಿಯನ್ನು ನೀಡಿದ್ದಾರೆ.

Vijay has 883 gram gold and wife Sangeetha has 3 132 gram gold revealed in affidavit

'ತಮಿಳು ವೆಟ್ರಿ ಕಳಗಂ' ಪಕ್ಷದ ಅಧ್ಯಕ್ಷ ವಿಜಯ್ ತಮ್ಮ ಬಳಿ 883 ಗ್ರಾಂ ಚಿನ್ನಾಭರಣ ಎಂದು ಘೋಷಿಸಿಕೊಂಡಿದ್ದಾರೆ. ಹಾಗೇ ಪತ್ನಿ ಸಂಗೀತಾ ಬಳಿ 3,132 ಗ್ರಾಂ ಚಿನ್ನಾಭರಣ, 134.91 ಕ್ಯಾರೆಟ್ ವಜ್ರದ ಒಡವೆಗಳು ನಮೂದಿಸಿದ್ದಾರೆ. ಈ ಪಟ್ಟಿ ಹೊರಬೀಳುತ್ತಿದ್ದಂತೆ ತಮಿಳಿಗರು ಲೆಕ್ಕ ಹಾಕುವುದಕ್ಕೆ ಶುರು ಮಾಡಿದ್ದಾರೆ. ಸದ್ಯ ಚೆನ್ನೈನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 13 ಸಾವಿರ ಇದೆ ಎಂದು ಅಂದಾಜಿಸಲಾಗಿದ್ದು, ಅದರ ಆಧಾರದ ಮೇಲೆ ವಿಜಯ್ ಬಳಿಕ 1.23 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಸಂಗೀತ ಬಳಿಕ 4.07 ಕೋಟಿ ರೂ. ಮೌಲ್ಯದ ಹಾಗೂ 1 ಕೋಟಿ ರೂ. ಮೌಲ್ಯದ ವಜ್ರದ ಒಡವೆಗಳು ಇದೆ ಎಂದು ಅಂದಾಜಿಸಲಾಗಿದೆ.

ತಮಿಳುನಾಡಿನಲ್ಲಿ ಬಾಕ್ಸಾಫೀಸ್ ಕಿಂಗ್ ಆಗಿ ಮೆರೆದಿರುವ ವಿಜಯ್ ಆಸ್ತಿಯ ಮೌಲ್ಯವನ್ನು ಕಂಡು ತಮಿಳುನಾಡಿನ ಜನ ಹೌಹಾರಿದ್ದಾರೆ. ತಮ್ಮ ಆಸ್ತಿ ವಿವರಗಳ ಜೊತೆ ಪತ್ನಿ ಸಂಗೀತಾ ಹೆಸರಿನಲ್ಲಿರುವ ಚಿನ್ನಾಭರಣ ಮತ್ತು ವಜ್ರಗಳ ಬಗ್ಗೆನೂ ಮಾಹಿತಿ ನೀಡಿದ್ದಾರೆ. ವಿಚ್ಚೇದನದ ಪ್ರಕರಣದ ಸಮಯದಲ್ಲಿಯೂ ವಿಜಯ್ ಪತ್ನಿಯ ಹೆಸರಿನಲ್ಲಿರುವ ಚಿನ್ನಾಭರಣದ ಮಾಹಿತಿ ಬಹಿರಂಗಪಡಿಸಿದ್ದು, ಚರ್ಚೆಯಲ್ಲಿದೆ.

More from Filmibeat

English summary
Vijay has 883 gram gold and wife Sangeetha has 3,132 gram gold revealed in affidavit.
Read more about: vijay sangeetha gold
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X