GOAT ಸಿನಿಮಾದಲ್ಲೇ ಸುಳಿವು ನೀಡಿದ್ದರೇ ವಿಜಯ್? ವೈರಲ್ ಆಗ್ತಿದೆ TN 07 CM 2026 ಕಾರ್ ನಂಬರ್

ತಮಿಳುನಾಡಿನ ಚುನಾವಣೆ ದಳಪತಿ ವಿಜಯ್ ಜನಪ್ರಿಯತೆಯನ್ನು ಸಾಬೀತು ಮಾಡಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಘೋಷಣೆ ಮಾಡಿದ ಎರಡೇ ವರ್ಷಗಳಲ್ಲಿ ತಮಿಳುನಾಡಿನ ಗದ್ದುಗೆಯನ್ನು ಹಿಡಿದಿದೆ. 2026ರ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಸ್ಥಾನಗಳನ್ನು ಪಡೆದುಕೊಂಡಿದೆ. ಚೊಚ್ಚಲ ಪ್ರಯತ್ನದಲ್ಲಿಯೇ ಸುಮಾರು 108 ಸ್ಥಾನಗಳಲ್ಲಿ ವಿಜಯ್ ಪಕ್ಷ ಗೆದ್ದು ಬಂದಿದೆ. ಇದು ಸಾಮಾನ್ಯ ಸಾಧನೆಯೇನು ಅಲ್ಲ.

ಸಿಂಗಲ್ ಆಗಿ ಅಧಿಕಾರ ನಡೆಸುವ ವಿಜಯ್ ಕನಸು ನನಸಾಗದೇ ಹೋದರೂ ಅದು ದೊಡ್ಡ ಸಮಸ್ಯೆ ಏನು ಆಗುವುದಿಲ್ಲ. ಬಹುತೇಕ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ನಾಳೆ (ಮೇ 7) ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಾಗಿದ್ದಾರೆ. ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಹಳ ವರ್ಷಗಳ ಬಳಿಕ ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ವಿಜಯ್ ಹಲ್‌ಚಲ್ ಎಬ್ಬಿಸಿದ್ದಾರೆ.

Vijay hints in hinted at his political aspirations in GOAT movie with car number TN 07 CM 2026

ವಿಜಯ್ ಕೇವಲ ಎರಡು ವರ್ಷಗಳಲ್ಲಿ ಪಕ್ಷ ಸ್ಥಾಪನೆ ಮಾಡಿ ಅಧಿಕಾರಕ್ಕೆ ಬಂದರೇ? ಕೇವಲ ಅವರ ಜನಪ್ರಿಯತೆಯೇ ಗೆಲುವಿಕೆ ಕಾರಣವಾಯಿತೇ? ರಾಜಕೀಯ ಕ್ಷೇತ್ರದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ವಿಜಯ್ ಸಿಎಂ ಆಗುತ್ತಾರೆ ಎನ್ನುವಾಗಲೇ ಅವರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಹೊರ ಬೀಳುತ್ತಿವೆ. ಅದರಲ್ಲೂ ವಿಜಯ್ ನಟಿಸಿದ ಹಿಟ್ ಸಿನಿಮಾ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT) ಕಾರಿನ ನೋಂದಣಿ ಸಂಖ್ಯೆಯನ್ನು ವೈರಲ್ ಮಾಡಲಾಗುತ್ತಿದೆ. ಅಷ್ಟಕ್ಕೂ ಈ ನಂಬರ್ ಪ್ಲೇಟ್‌ನಲ್ಲಿ ಏನಿದೆ? ನೆಟ್ಟಿಗರು ಡಿಕೋಡ್ ಮಾಡಿದ್ದು ಏನು? ತಿಳಿಯುವುದಕ್ಕೆ ಮುಂದೆ ಓದಿ.

ಆಗ ತಾನೇ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ನಿರ್ಧರಿಸಿದ್ದರು. ಆ ವೇಳೆ ವಿಜಯ್ ಇನ್ನೂ ಸಿನಿಮಾದಲ್ಲಿ ನಟಿಸುತ್ತಿದ್ದರು. ಅದುವೇ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT). ಈ ಸಿನಿಮಾದಲ್ಲಿ ವಿಜಯ್ ಬಳಸುತ್ತಿದ್ದ ಕಾರಿನ ನಂಬರ್ ಪ್ಲೇಟ್‌ನ ಸಂಖ್ಯೆ ಈಗ ವೈರಲ್ ಆಗುತ್ತಿದೆ. ಆ ಕಾರಿನ ನಂಬರ್ ಪ್ಲೇಟ್ 'TN07 CM 2026' ಎಂದಿದೆ. ಆಗಲೇ ವಿಜಯ್ ತಮ್ಮ ರಾಜಕೀಯದ ಭವಿಷ್ಯವನ್ನು ಸೂಕ್ಷ್ಮವಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Also Read
ತಿರುಚ್ಚಿ ಕ್ಷೇತ್ರದಿಂದ ನಟಿ ತ್ರಿಷಾ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವುದು ಖಚಿತ; ಖ್ಯಾತ ಜ್ಯೋತಿಷಿ ಭವಿಷ್ಯ
ತಿರುಚ್ಚಿ ಕ್ಷೇತ್ರದಿಂದ ನಟಿ ತ್ರಿಷಾ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವುದು ಖಚಿತ; ಖ್ಯಾತ ಜ್ಯೋತಿಷಿ ಭವಿಷ್ಯ

ಈ ನಂಬರ್ ಪ್ಲೇಟ್‌ನಲ್ಲಿರುವ ಒಂದೊಂದು ಪದಕ್ಕೂ ಇಂದಿನ ವಿಜಯ್ ನಡೆಗೂ ಹೋಲಿಕೆಯಾಗುತ್ತಿದೆ. 'TN07 CM 2026' ಈ ನಂಬರ್ ಪ್ಲೇಟ್‌ನಲ್ಲಿ 'TN' ಅಂತ ತಮಿಳುನಾಡು, 07 ನಾಳೆ 9(ಮೇ 7) ಪ್ರಮಾಣ ವಚನ, CM- ಮುಖ್ಯಮಂತ್ರಿ, 2026- ಈ ವರ್ಷದ ಚುನಾವಣೆಯಲ್ಲಿ ಸಿಎಂ ಎಂದು ಅಭಿಮಾನಿಗಳೇ ಡಿಕೋಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಈ ನಂಬರ್ ಪ್ಲೇಟ್‌ನಲ್ಲಿ ಇರುವಂತೆ ವಿಜಯ್ ಮೇ 7ರಂದು ಪ್ರಮಾಣ ವಚನ ಸ್ವೀಕರಿಸುತ್ತಿರೋದು ವಿಶೇಷ.

Vijay hints in hinted at his political aspirations in GOAT movie with car number TN 07 CM 2026

ಸದ್ಯ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT) ಸಿನಿಮಾದ ಕಾರಿನ ನೋಂದಣಿ ಸಂಖ್ಯೆ ತಮಿಳುನಾಡಿನಲ್ಲಿ ಹಲ್‌ಚಲ್ ಎಬ್ಬಿಸಿದೆ. ವಿಜಯ್ ಸಿನಿಮೀಯ ಶೈಲಿಯಲ್ಲಿಯೇ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಆದರೆ, ಸಿಎಂ ಆಗಿ ಅವರ ಮುಂದಿನ ಹಾದಿ ಹೇಗಿರುತ್ತೆ? ಸವಾಲುಗಳು ಏನು? ತಮಿಳುನಾಡಿನಲ್ಲಿ ಕ್ರಾಂತಿ ಮಾಡುತ್ತಾತಾ? ದೀರ್ಘಕಾಲದವರೆಗೆ ಆಡಳಿತ ನಡೆಸುವಲ್ಲಿ ಯಶಸ್ವಿಯಾಗುತ್ತಾರಾ? ಅನ್ನೋ ಪ್ರಶ್ನೆ ರಾಜಕೀಯ ವಿಶ್ಲೇಷಕರ ಮುಂದಿದೆ.

ದಳಪತಿ ವಿಜಯ್ ಮೇ 7ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ ಅವರಿಗೆ ಸರ್ಕಾರ ರಚಿಸಲು ಅನುಮತಿಗಾಗಿ ಪತ್ರವನ್ನು ಬರೆದಿದ್ದಾರೆ. ಇಂದು (ಮೇ 6) ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕನ್ನು ಮಂಡಿಸಲಿದ್ದಾರೆ. ವಿಜಯ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೊಸ ಸಚಿವರು ಸಹ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ.

English summary
Vijay hints in hinted at his political aspirations in GOAT movie with car number TN 07 CM 2026.
Read more about: vijay politics tamil nadu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X