ವಿಜಯ್ ಸೇತುಪತಿ ಹುಟ್ಟುಹಬ್ಬಕ್ಕೆ ಪ್ಯಾನ್ ಇಂಡಿಯಾ ಸಿನಿಮಾ 'ಮೈಕಲ್' ಪೋಸ್ಟರ್ ರಿಲೀಸ್: ತಾರೆಯರಿಂದ ಶುಭಾಶಯ

ಭಾರತೀಯ ಚಿತ್ರರಂಗ ಕಂಡ ಅತ್ಯುನ್ನತ ನಟ ವಿಜಯ್ ಸೇತುಪತಿ. ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರೇಮಿಗಳ ಮನಸ್ಸು ಗೆದ್ದ ವಿಜಯ್ ಸೇತುಪತಿ ಇಂದು 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮಿಳು ನಟ ಮಕ್ಕಳ್ ಸೆಲ್ವನ್ ಬರ್ತ್‌ಡೇಗೆ ಅವರ ಪ್ಯಾನ್ ಇಂಡಿಯಾ ಸಿನಿಮಾ 'ಮೈಕಲ್' ತಂಡ ಹೊಚ್ಚ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.

ವಿಜಯ್ ಸೇತುಪತಿ ತನ್ನ ಅಭಿನಯದಿಂದ, ಸಿನಿಮಾಗಳ ಆಯ್ಕೆಯಿಂದ ಇಡೀ ಭಾರತೀಯ ಚಿತ್ರರಂಗದ ಮನಗೆದ್ದವರು. ದಕ್ಷಿಣದಿಂದ ಉತ್ತರದವರೆಗೂ ವಿಜಯ್ ಸೇತುಪತಿ ಸಿನಿಮಾಗಳಿಗೆ ಅಭಿಮಾನಿಗಳು ಇದ್ದಾರೆ. ತಮಿಳು, ತೆಲುಗು ಸೇರಿದಂತೆ ಈಗ ಹಿಂದಿ ಭಾಷೆಯಲ್ಲೂ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಬ್ಯುಸಿ ಇರುವ ನಟರಲ್ಲಿ ಮಕ್ಕಳ್ ಸೆಲ್ವನ್ ಕೂಡ ಒಬ್ಬರು. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟನಿಗೆ ಚಿತ್ರರಂಗದ ಗಣ್ಯರು ಶುಭಾಶಗಳನ್ನು ತಿಳಿಸಿದ್ದಾರೆ.

ಸೇತುಪತಿಗೆ ಶುಭ ಕೋರಿದ ಕಮಲ್ ಹಾಸನ್

ವಿಜಯ್ ಸೇತುಪತಿ ಹುಟ್ಟುಹಬ್ಬಕ್ಕೆ ಕಮಲ್ ಹಾಸನ್ ಶುಭ ಕೋರಿದ್ದಾರೆ. ಸದ್ಯ ವಿಜಯ್ ಸೇತುಪತಿ ಹಾಗೂ ಕಮಲ್ ಹಾಸನ್ ಒಟ್ಟಿಗೆ ವಿಕ್ರಮ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. "ವಿಜಯ್ ಸೇತುಪತಿ ಮಾರುಕಟ್ಟೆಯನ್ನು ಹುಡುಕಿಕೊಂಡು ಹೋಗವುದಿಲ್ಲ. ಇವರು ಒಬ್ಬ ಸ್ವತಂತ್ರವಾಗಿ ಹುಡುಕಲ್ಪಡುವ ನಟ. ಮುಂದಿನ ಪೀಳಿಯ ಹೀರೊಗಳಿಗೆ ಬೇಕಾಗಿರುವ ಪ್ರಮುಖ ನಟ. ಅವರ ಹುಡುಕಾಟ ಮತ್ತು ಧೈರ್ಯ ಖಂಡಿಯಾ ವ್ಯರ್ಥವಾಗುವುದಿಲ್ಲ. ನನ್ನ ಸಹೋದರನಿಗೆ ಹೃದಯದಿಂದ ಹುಟ್ಟುಹಬ್ಬದ ಶುಭಾಶಯಗಳು" ಎಂದು ಕಮಲ್ ಹಾಸನ್ ಟ್ವಿಟ್ಟರ್‌ನಲ್ಲಿ ಪತ್ರ ಬರೆದಿದ್ದಾರೆ.

ನಿರ್ದೇಶಕ ವಿಘ್ನೇಶ್‌ರಿಂದ ಶುಭಾಶಯ

ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಸಿವನ್ ಕೂಡ ಶುಭಾಶಗಳನ್ನು ತಿಳಿಸಿದ್ದಾರೆ. ವಿಜಯ್ ಸೇತುಪತಿ ಸಿನಿಮಾ ಕರಿಯರ್‌ಗೆ ಟರ್ನಿಂಗ್ ಪಾಯಿಂಟ್ ಕೊಟ್ಟ ಸಿನಿಮಾ 'ನಾನುಂ ರೌಡಿ ಧಾನ್'. ಈ ಚಿತ್ರ ನಿರ್ದೇಶಕ ವಿಘ್ನೇಶ್ ಸಿವನ್. ನಯನಾತಾರಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿಂದ ವಿಘ್ನೇಶ್ ಹಾಗೂ ವಿಜಯ್ ಸೇತುಪತಿ ನಡುವಿನ ಒಡನಾಟ ಮುಂದುವರೆದಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ವಿಘ್ನೇಶ್ ಫೋಟೊಗಳನ್ನು ಹಂಚಿಕೊಂಡು ಶುಭಕೋರಿದ್ದಾರೆ.

ಸೇತುಪತಿ ಹುಟ್ಟುಹಬ್ಬಕ್ಕೆ ಮೈಕಲ್ ಪೋಸ್ಟರ್

ಸೇತುಪತಿ ಹುಟ್ಟುಹಬ್ಬಕ್ಕೆ ಮೈಕಲ್ ಪೋಸ್ಟರ್

ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಇಂದು (ಜನವರಿ 16) 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ಸೇತುಪತಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಮೈಕಲ್' ಚಿತ್ರತಂಡ ಅವರ ಅಭಿಮಾನಿಗಳಿಗೆ ಹೊಚ್ಚ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಸಂದೀಪ್ ಕಿಶನ್ ಮತ್ತು ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಈಗಾಗಲೇ ಕುತೂಹಲ ದುಪ್ಪಟ್ಟಾಗಿದೆ.

ಕನ್ನಡದಲ್ಲೂ 'ಮೈಕಲ್' ರಿಲೀಸ್

ಕನ್ನಡದಲ್ಲೂ 'ಮೈಕಲ್' ರಿಲೀಸ್

'ಮೈಕಲ್' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ. ಇದರೊಂದಿಗೆ ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗುತ್ತಿದ್ದು, ವಿಜಯ್ ಸೇತುಪತಿ ಕನ್ನಡದಲ್ಲಿಯೇ ಡಬ್ ಮಾಡುತ್ತಾರಾ? ಅನ್ನುವ ಕುತೂಹಲವಿದೆ. ಶ್ರೀ ವೆಂಕಟೇಶ್ವರ ಸಿನಿಮಾಸ್ ಮಾಸ್ ಸಿನಿಮಾ 'ಮೈಕಲ್' ನಿರ್ಮಾಣವಾಗುತ್ತಿದೆ. ರಂಜಿತ್ ಜೆಯಕೊಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ವಿಜಯ್ ಸೇತುಪತಿಯ ಕನ್ನಡ ಅಭಿಮಾನಿಗಳು ಈ ಸಿನಿಮಾಗಾಗಿ ಕಾದು ಕೂತಿದ್ದಾರೆ.

More from Filmibeat

English summary
Vijay Sethupathi 44th Birthday Pan India movie michael team released new poster. Also Kollywood celebrities wished Makka Selvan Vijay Sethupathi a very happy birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X