ವಿಜಯ್ ಸೇತುಪತಿಗೆ ವಿಲನ್ ಆದ ನಿರ್ದೇಶಕ ಗೌತಮ್ ವಾಸುದೇವ್ ಮೆನನ್
ವಿಜಯ್ ಸೇತುಪತಿ ಒಂದು ಸಿನಿಮಾದಲ್ಲಿ ಇದ್ದಾರೆ ಅಂದರೆ, ಆ ಸಿನಿಮಾಗೆ ಒಂದು ಸಿಗುವ ತಾಕತ್ತು ಬೇರೆ ಲೆವೆಲ್‌ನಲ್ಲಿ ಇರುತ್ತೆ. ಅದು ಎಂತಹದ್ದೇ ಪಾತ್ರವಿರಲಿ, ವಿಜಯ್ ಸೇತುಪತಿ ಸಲೀಸಾಗಿ ನಿಭಾಯಿಸಿ ಬಿಡುತ್ತಾರೆ. ಅದಕ್ಕೆ ಕೇವಲ ತಮಿಳುನಾಡಿನಲ್ಲಿ ಅಷ್ಟೇ ಅಲ್ಲ. ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡನಲ್ಲೂ ಈ ನಟನಿಗೆ ಭಾರಿ ಬೇಡಿಕೆ ಇದೆ. ಇತ್ತೀಚೆಗಂತೂ ಸೇತುಪತಿ ನಟಿಸುವ ಸಿನಿಮಾಗಳು ಪ್ಯಾನ್ ಇಂಡಿಯಾ ಪಟ್ಟಿಯಲ್ಲಿರುತ್ತವೆ.
ಈಗ ವಿಜಯ್ ಸೇತುಪತಿಯ ನಟಸುತ್ತಿರುವ 'ಮೈಕಲ್' ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದೆ. ವಿಜಯ್ ಸೇತುಪತಿ ಜೊತೆ ಸಂದೀಪ್ ಕಿಶನ್ ಅನ್ನುವ ಮತ್ತೊಬ್ಬ ನಟನೂ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಈ ಮೈಕಲ್ ತಂಡಕ್ಕೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಅವರೇ ತಮಿಳಿನ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಗೌತಮ್ ವಾಸುದೇವ್ ಮೆನನ್.

ನೆಗೆಟಿವ್ ಶೇಡ್‌ನಲ್ಲಿ ವಾಸುದೇವ್ ಮೆನನ್
ಸಂದೀಪ್ ಕಿಶನ್, ವಿಜಯ್ ಸೇತುಪತಿ ನಟಿಸುತ್ತಿರುವ 'ಮೈಕಲ್' ದಿನದಿಂದ ದಿನಕ್ಕೆ ಸದ್ದು ಮಾಡುತ್ತಿದೆ. ಇದೇ ಚಿತ್ರಕ್ಕೆ ಇದೀಗ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗೆ ನಟನಾಗಿಯೂ ಹೆಸರು ಮಾಡುತ್ತಿರುವ ಮೆನನ್ ಈ ಚಿತ್ರದಲ್ಲೂ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರತಂಡ ರಕ್ತಸಿಕ್ತ ಕೈ ಇರುವ ಒಂದು ಪೋಸ್ಟರ್ ರಿಲೀಸ್ ಮಾಡಿ, ತಂಡಕ್ಕೆ ಸ್ವಾಗತ ಕೋರಿದ್ದಾರೆ.

ನಿರ್ದೇಶನ-ನಟನೆ ಎರಡಕ್ಕೂ ಗೌತಮ್ ಸೈ
ಗೌತಮ್ ವಾಸುದೇವ್ ಮೆನನ್ ಈವರೆಗೂ ನೆಗೆಟಿವ್ ಶೇಡ್‌ಗಳಿರುವ ಪಾತ್ರಗಳಲ್ಲಿ ಮಿಂಚಿದ್ದೇ ಹೆಚ್ಚು. ಈಗ ಮೈಕಲ್ ಸಿನಿಮಾದಲ್ಲೂ ಅಂತಹದ್ದೇ ಒಂದು ಪಾತ್ರದಲ್ಲಿ ಮಿಂಚುತ್ತಿದ್ದಾರೆ. ನಿರ್ದೇಶನ ಹಾಗೂ ನಟ ಎರಡಕ್ಕೂ ಕೈ ಹಾಕಿರುವ ಗೌತಮ್ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹೀಗಾಗಿ ಮೈಕಲ್ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ವಿಜಯ್-ಗೌತಮ್ ಮುಖಾಮುಖಿ
'ಮೈಕಲ್' ಇದು ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣಗೊಳ್ಳಲಿದೆ. ಹೀಗಾಗಿ ಸಂದೀಪ್ ಕಿಶನ್, ವಿಜಯ್ ಸೇತುಪತಿ ಹಾಗೂ ಗೌತಮ್ ವಾಸುದೇವ್ ಮೆನನ್ ಈ ಸಿನಿಮಾದಲ್ಲಿ ಅದೆಂಥಾ ಜಾದು ಮಾಡುತ್ತಾರೆ ಅನ್ನುವುದನ್ನು ಸಿನಿಪ್ರೇಮಿಗಳು ಎದುರು ನೋಡುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ಸೆಟ್ಟೇರಲಿದೆ 'ಮೈಕಲ್'
'ಮೈಕಲ್' ಚಿತ್ರವನ್ನು ರಂಜಿತ್ ಜಯೆಕೊಡಿ ನಿರ್ದೇಶನ ಮಾಡುತ್ತಿದ್ದಾರೆ. ಮಾಸ್ ಆ್ಯಕ್ಷನ್ ಮತ್ತು ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇನ್ನೂ ಪ್ರಮುಖ ಪಾತ್ರಗಳ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಡಿಸೆಂಬರ್ನಿಂದ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಇದೆ.


Click it and Unblock the Notifications











