ಸೂಪರ್ ಸ್ಟಾರ್ ನಟನ ಚಿತ್ರದಿಂದ ವಿಜಯ್ ಸೇತುಪತಿಗೆ ಆಫರ್?
ಭಾರತೀಯ ಸಿನಿಪ್ರಪಂಚದಲ್ಲಿ ಬೇಡಿಕೆಯ ನಟ ಎನಿಸಿಕೊಂಡಿರುವ ವಿಜಯ್ ಸೇತುಪತಿಗೆ ಈಗ ಮತ್ತೊಂದು ದೊಡ್ಡ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದೆ ಎಂಬ ಸುದ್ದಿ ವರದಿಯಾಗಿದೆ.
ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ನಟಿಸುತ್ತಿರುವ 'ವಿಕ್ರಂ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ವಿಜಯ್ ಸೇತುಪತಿ ಅವರನ್ನು ಸಂಪರ್ಕ ಮಾಡಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
'ಮಾಸ್ಟರ್' ಸಿನಿಮಾ ಖ್ಯಾತಿಯ ನಿರ್ದೇಶಕ ಲೋಕೇಶ್ ಕನಕರಾಜ್ 'ವಿಕ್ರಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಚುನಾವಣೆ ಮುಗಿಯುತ್ತಿದ್ದಂತೆ ಪ್ರಾಜೆಕ್ಟ್ ಆರಂಭಿಸಿದ್ದಾರೆ.

ಈ ಸಿನಿಮಾದಲ್ಲಿ ಕಮಲ್ ಹಾಸನ್ ಎದುರು ವಿಲನ್ ಪಾತ್ರಕ್ಕೆ ವಿಜಯ್ ಸೇತುಪತಿ ಅವರನ್ನು ಕರೆತರುವ ಪ್ಲಾನ್ ಮಾಡಲಾಗಿತ್ತು. ಸದ್ಯಕ್ಕೆ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸೇತುಪತಿ ಸಂದರ್ಶನವೊಂದಲ್ಲಿ ಹೇಳಿಕೊಂಡಿದ್ದಾರೆ.
ಕಮಲ್ ಹಾಸನ್ ನಾಯಕರಾಗಿರುವ ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಸಹ ನಟಿಸುತ್ತಿದ್ದಾರೆ. ಈ ಕಾಂಬಿನೇಷನ್ ಜೊತೆ ವಿಜಯ್ ಸೇತುಪತಿಯೂ ಒಟ್ಟುಗೂಡಿದರೆ ಈ ಪ್ರಾಜೆಕ್ಟ್ ಬಹಳ ವಿಶೇಷವಾಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಾವುದೇ ಅನುಮಾನವಿಲ್ಲ.
ರಾಜ್ ಕಮಲ್ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರ ಸಂಪೂರ್ಣವಾದ ಥ್ರಿಲ್ಲರ್ ಕಥೆಯಾಗಿದೆ. ಮೊದಲ ಸಲ ಲೋಕೇಶ್ ಕನಕರಾಜ್ ಮತ್ತು ಕಮಲ್ ಹಾಸನ್ ಒಟ್ಟಿಗೆ ಕೆಲಸ ಮಾಡ್ತಿದ್ದು, ಅಷ್ಟೇ ಕುತೂಹಲ ಮೂಡಿಸಿದೆ.
Recommended Video
ಸದ್ಯ, ಸೇತುಪತಿ ಕೈಯಲ್ಲಿ ಹತ್ತಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳಿವೆ. ಇಷ್ಟೆಲ್ಲಾ ಚಿತ್ರಗಳ ನಡುವೆ ವಿಕ್ರಂ ಸಿನಿಮಾಗಾಗಿ ಡೇಟ್ ಸಮಸ್ಯೆಯಾಗದಿದ್ದರೆ ಖಂಡಿತಾ ನಟಿಸುತ್ತೇನೆ ಎಂದು ಸೇತುಪತಿ ತಿಳಿಸಿದ್ದಾರೆ.


Click it and Unblock the Notifications











