Maharaja China Box Office:ವಿಜಯ್ ಸೇತುಪತಿ ಸಿನಿಮಾ ನೋಡಿ ತಲೆಕೆಡಿಸಿಕೊಂಡ ಚೀನಿಯರು; 3ನೇ ದಿನದ ಗಳಿಕೆ ಎಷ್ಟು?

ಭಾರತ ಹಾಗೂ ಚೀನಾ ನಡುವಿನ ಸಂಬಂಧ ಸಹಜ ಸ್ಥಿತಿಗೆ ಮರಳಿದೆ. ಆ ಬಳಿಕ ಭಾರತದ ಮೊದಲ ಸಿನಿಮಾ ಚೀನಾದಲ್ಲಿ ತೆರೆಕಂಡಿದೆ. ಅದುವೇ ವಿಜಯ್ ಸೇತುಪತಿ ನಟನೆಯ 'ಮಹಾರಾಜ'. ಚೀನಾದ ಬಾಕ್ಸಾಫೀಸ್‌ನಲ್ಲಿ ಈ ತಮಿಳು ಸಿನಿಮಾಗೆ ಅನಿರೀಕ್ಷಿತ ಪ್ರತಿಕ್ರಿಯೆ ಸಿಗುತ್ತಿದೆ. ಅಲ್ಲಿ ರಿಲೀಸ್ ಆದ ದಿನದಿಂದ ಚೀನಿಯರು ಮುಗಿಬಿದ್ದು ಸಿನಿಮಾ ನೋಡುವುದಕ್ಕೆ ಶುರು ಮಾಡಿದ್ದಾರೆ.

'ಮಹಾರಾಜ' ಸಿನಿಮಾವನ್ನು ಚೀನಾದ ಬೇರೆ ಬೇರೆ ಏರಿಯಾಗಳಲ್ಲಿ ರಿಲೀಸ್ ಮಾಡಲಾಗಿದೆ. ಸುಮಾರು 40 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಜಯ್ ಸೇತುಪತಿ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಪ್ರೀಮಿಯರ್ ಶೋನಲ್ಲಿ 'ಮಹರಾಜ' ಸಿನಿಮಾ ನೋಡಿ ಚೀನಿಯರು ಥ್ರಿಲ್ ಆಗಿದ್ದರು. ಹೀಗಾಗಿ ಮೊದಲ ದಿನವೂ ಸೇರಿದಂತೆ ವೀಕೆಂಡ್‌ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.

Vijay Sethupathi Tamil Movie Maharaja China Day 3 Box Office Collection Report

ನಿನ್ನೆ ಭಾನುವಾರ (ಡಿಸೆಂಬರ್ 1) ಕೂಡ 'ಮಹಾರಾಜ' ಸಿನಿಮಾ ಕಲೆಕ್ಷನ್ ಅದ್ಭುತವಾಗಿದೆ. ಮತ್ತೆ ಭಾರತೀಯ ಸಿನಿಮಾಗಳನ್ನು ಚೀನಾದಲ್ಲಿ ರಿಲೀಸ್ ಮಾಡುವುದಕ್ಕೆ ಹೊಸ ಹುರುಷು ಬಂದಂತಾಗಿದೆ. 'ಮಹಾರಾಜ'ಗೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿದ ಭಾರತೀಯ ಸಿನಿಮಾಗಳು ಚೀನಾ ಬಾಕ್ಸಾಫೀಸ್‌ಗೆ ಲಗ್ಗೆ ಇಡುವ ಸಾಧ್ಯತೆಯಿದೆ. ಸದ್ಯ ಮೂರನೇ ದಿನ 'ಮಹಾರಾಜ' ಚೀನಾದಲ್ಲಿ ಗಳಿಸಿದ್ದೆಷ್ಟು? ಮೂರು ದಿನಗಳ ಒಟ್ಟಿ ಕಲೆಕ್ಷನ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

3ನೇ ದಿನವೂ 'ಮಹಾರಾಜ'ನೇ ಕಿಂಗ್

ವೀಕೆಂಡ್‌ನಲ್ಲಿ ಚೀನಾದಲ್ಲಿ ರಿಲೀಸ್ ಆಗಿರುವ ತಮಿಳು ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆ ನಿರೀಕ್ಷೆ ಸುಳ್ಳಾಗಿಲ್ಲ. ವಿಜಯ್ ಸೇತುಪತಿಯ ಸಿನಿಮಾ ಚೀನಿಯರಿಗೆ ಇಷ್ಟ ಆಗಿದೆ. ಈ ಕಾರಣಕ್ಕೆ ವೀಕೆಂಡ್‌ನಲ್ಲಿ ರೆಸ್ಪಾನ್ಸ್ ಸೂಪರ್‌ ಆಗಿದೆ. 3ನೇ ದಿನ ಚೀನಾದಲ್ಲಿ 7.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಇಂಡಸ್ಟ್ರೀ ಟ್ರೇಡ್ ಟ್ರ್ಯಾಕರ್ sacnilk ವರದಿ ಮಾಡಿದೆ.

3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ವಿಜಯ್ ಸೇತುಪತಿಯ 'ಮಹಾರಾಜ' ಸಿನಿಮಾಗೆ ಭಾರತದಲ್ಲೂ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಪ್ರೇಯ್ಡ್ ಪ್ರೀಮಿಯರ್ ಶೋನೂ ಸೇರಿ ಮೂರು ದಿನಗಳ ಕಲೆಕ್ಷನ್ 27 ಕೋಟಿ ರೂಪಾಯಿ ದಾಟಿದೆ. ಪೇಯ್ಡ್ ಪ್ರೀಮಿಯರ್‌ನಿಂದ 5.40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ಮೊದಲ ದಿನ 4.60 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನ 9.30 ಕೋಟಿ ರೂಪಾಯಿ ಗಳಿಕೆ ಕಂಡು ಹೊಸ ಭರವಸೆ ಮೂಡಿಸಿತ್ತು. ಹಾಗೇ ಮೂರನೇ ದಿನ 7.50 ಕೋಟಿ ರೂಪಾಯಿ ಸೇರಿ 27 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

Vijay Sethupathi Tamil Movie Maharaja China Day 3 Box Office Collection Report

'ಮಹಾರಾಜ' ಒಟ್ಟು ಕಲೆಕ್ಷನ್ ಎಷ್ಟು?

ವಿಜಯ್ ಸೇತುಪತಿ 'ಮಹಾರಾಜ' ಭಾರತದ ಬಾಕ್ಸಾಫೀಸ್‌ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತ್ತು. ತಮಿಳುನಾಡಿನಲ್ಲಿ ಈ ಸಿನಿಮಾ ಅತೀ ಹೆಚ್ಚು ಕಲೆಕ್ಷನ್ ಮಾಡಿತ್ತು. ಭಾರತದಲ್ಲಿ ಈ ಸಿನಿಮಾ ಸುಮಾರು 106 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಚೀನಾದಲ್ಲಿಯೂ ಅಬ್ಬರಿಸುತ್ತಿರುವುದರಿಂದ 'ಮಹಾರಾಜ' ಸಿನಿಮಾದ ವರ್ಲ್ಡ್‌ ವೈಡ್ ಕಲೆಕ್ಷನ್ 133 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹೀಗೆ ಮುಂದುವರೆದರೆ 150 ಕೋಟಿ ರೂಪಾಯಿ ದಾಟುವ ಎಲ್ಲಾ ಸಾಧ್ಯತೆಗಳು ಕೂಡ ಇದೆ.

ವಿಜಯ್ ಸೇತುಪತಿಗೆ ಮೆಚ್ಚುಗೆ

'ಮಹಾರಾಜ' ಸಿನಿಮಾದ ಹೈಲೈಟ್ ಅಂದರೆ ವಿಜಯ್ ಸೇತುಪತಿ. ಇವರ ನಟನೆಗೆ ತಮಿಳು ಮಂದಿ ಅಷ್ಟೇ ಎಲ್ಲಾ ಭಾಷೆಯ ಸಿನಿಮಾ ಪ್ರೇಮಿಗಳು ಮೆಚ್ಚಿಕೊಂಡಿದ್ದರು. ಅಪ್ಪ ಮಗಳ ಬಾಂಧವ್ಯ. ಮಗಳಿಗಾದ ಅನ್ಯಾಯದ ವಿರುದ್ಧ ಹೋರಾಡುವ ಅಸಹಾಯಕ ತಂದೆ ಸಿನಿಮಾದ ಕೊನೆಯಲ್ಲಿ ಹೇಗೆ ಗೆಲ್ಲುತ್ತಾನೆ ಅನ್ನೋದೇ ಮನಕಲುಕುವಂತಿತ್ತು. ವಿಜಯ್ ಸೇತುಪತಿ, ಅನುರಾಗ್ ಕಶ್ಯಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಿತಿಲನ್ ಸ್ವಾಮಿನಾಥನ್ ನಿರ್ದೇಶನ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿತ್ತು.

More from Filmibeat

English summary
Vijay Sethupathi Tamil Movie Maharaja China Day 3 Box Office Collection Report
Read more about: vijay sethupathi box office china
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X