Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಕ್ಸಾಫೀಸ್‌ನಲ್ಲಿ ಕಾದಾಟಕ್ಕೆ ವಿಜಯ್ ಸೇತುಪತಿ ವಿರುದ್ಧ ನಿಂತ 'FIR' : ಗೆಲ್ಲೋರು ಯಾರು?
ತಮಿಳು ಚಿತ್ರರಂಗಕ್ಕೆ ಜನವರಿ ತಿಂಗಳು ದುರಂತ ಎಂದು ಸಾಬೀತಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅಜಿತ್ ಕುಮಾರ್ ಅಭಿನಯದ ಸಿನಿಮ 'ವಲಿಮೈ' ಬಿಡುಗಡೆಯಾಗಬೇಕಿತ್ತು. ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡಲೇಬೇಕು ಅಂತ ಬೋನಿ ಕಪೂರ್ ತುದಿಗಾಲಲ್ಲಿ ನಿಂತಿದ್ದರು. ಆದರೆ, ಕೊರೊನಾ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಈ ಎಲ್ಲಾ ಆಸೆಗಳಿಗೂ ತಣ್ಣೀರು ಎರಚಿತ್ತು. ಹೀಗಾಗಿ ತಮಿಳು ಚಿತ್ರರಂಗದಲ್ಲಿ ಒಂದೇ ಒಂದು ಬಿಗ್ ಸಿನಿಮಾವನ್ನೂ ಬಿಡುಗಡೆ ಮಾಡಲಿಲ್ಲ.
ಕೊರೊನಾ ಕಾಟದಿಂದ ಶೇ. 50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದ್ದು ಹಾಗೂ ವೀಕೆಂಡ್‌ಗಳಲ್ಲಿ ಚಿತ್ರಮಂದಿರಕ್ಕೆ ಬಂದ್ ಆಗಿದ್ದು ತಮಿಳು ಚಿತ್ರರಂಗಕ್ಕೆ ದೊಡ್ಡ ಪೆಟ್ಟು ಕೊಟ್ಟಿತ್ತು. ಹೀಗಾಗಿ ಚಿಕ್ಕ -ಪುಟ್ಟ ಸಿನಿಮಾಗಳು ರಿಲೀಸ್ ಆಗಿದ್ದವು ಅಷ್ಟೇ. ಆದ್ರೀಗ ಕೊರೊನಾ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ವಿಜಯ್ ಸೇತುಪತಿ ಹಾಗೂ ವಿಷ್ಣು ವಿಶಾಲ್ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿ ನಿಂತಿದೆ.
ವಿಜಯ್ ಸೇತುಪತಿ ಸಿನಿಮಾ ಫೆಬ್ರವರಿ 11ಕ್ಕೆ ರಿಲೀಸ್
ಬಹಳ ದಿನಗಳಿಂದ ವಿಜಯ್ ಸೇತುಪತಿ ಸಿನಿಮಾ ಬಿಡುಗಡೆಗಾಗಿ ಕಾದು ಕೂತಿತ್ತು. 'ಕಾಕಾ ಮೊಟ್ಟೈ' ಸಿನಿಮಾ ನಿರ್ದೇಶಿಸಿದ್ದ ಎಂ ಮಣಿಕಂದನ್ ನಿರ್ದೇಶಿಸಿದ್ದ 'ಕಡೈಸಿ ವಿವಸಾಯಿ' ಸಿನಿಮಾ ರಿಲೀಸ್‌ಗೆ ತುದಿಗಾಲಲ್ಲಿ ನಿಂತಿತ್ತು. ಆದರೆ, ಕೊರೊನಾ ಕಾರಣದಿಂದ ಹಲವು ಬಾರಿ ಈ ಸಿನಿಮಾವನ್ನು ಮುಂದೂಡಲಾಗಿತ್ತು. ಆರಂಭದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ವಿಜಯ್ ಸೇತುಪತಿಯ ಪಾತ್ರವನ್ನು ವಿಸ್ತರಿಸಲಾಯಿತು. ಹೀಗಾಗಿ ಈ ಸಿನಿಮಾ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ.
ಅಂದಹಾಗೆ ವಿಜಯ್ ಸೇತುಪತಿ ನಟನೆಯ ಈ ಸಿನಿಮಾ ಫೆಬ್ರವರಿ 11ರಂದು ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈಗಾಗಲೇ ಚಿತ್ರತಂಡ ಬಿಡುಗಡೆ ದಿನವನ್ನೂ ಘೋಷಣೆ ಮಾಡಿದೆ. ನಟನೆ ಅನುಭವವೇ ಇಲ್ಲದ ರೈತ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜೊತೆ ವಿಜಯ್ ಸೇತುಪತಿ ಹಾಗೂ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ವಿಜಯ್ ಸೇತುಪತಿ ಸಿನಿಮಾಗೆ FIR ಟಕ್ಕರ್
ವಿಜಯ್ ಸೇತುಪತಿಯ 'ಕಡೈಸಿ ವಿವಸಾಯಿ' ಜೊತೆ ತಮಿಳಿನ ಮತ್ತೊಬ್ಬ ನಟ ವಿಷ್ಣು ವಿಶಾಲ್ ಅಭಿನಯದ ಎಫ್‌ಐಆರ್ ಕೂಡ ಫೆಬ್ರವರಿ 11ರಂದು ಬಿಡುಗಡೆಯಾಗಲಿದೆ. ವಿಷ್ಣು ವಿಶಾಲ್ ನಿರ್ಮಿಸಿರುವ ಸಿನಿಮಾವಿದು. ಫೆಬ್ರವರಿ 11ರಂದು ಈ ಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಆ್ಯಕ್ಷನ್ ಥ್ರಿಲ್ಲರ್ ಶೈಲಿಯ ಈ ಚಿತ್ರಕ್ಕೆ ಮನು ಆನಂದ್ ನಿರ್ದೇಶನ ಮಾಡಿದ್ದಾರೆ.

ಸಾಮಾನ್ಯ ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ಬಿಂಬಿಸಲಾಗುತ್ತೆ. ಆ ವೇಳೆ ತಾನು ಭಯೋತ್ಪಾದಕನಲ್ಲ ಎಂಬುದನ್ನು ಹೇಗೆ ಸಾಬೀತು ಮಾಡುತ್ತಾನೆ ಎಂಬುದನ್ನು ಈ ಸಿನಿಮಾದ ಕಥೆ. ಈ ಸಿನಿಮಾದಲ್ಲಿ ವಿಷ್ಣು ವಿಶಾಲ್ ಇರ್ಫಾನ್ ಅಹ್ಮದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೆಮಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ, ವಿಷ್ಣು ವಿಶಾಲ್, ಸಿಕ್ಸ್ ಪ್ಯಾಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿಷ್ಣು ವಿಶಾಲ್ ಜೊತೆ ಮಂಜಿಮ್ ಮೋಹನ್, ರೆಬಾ ಮೋನಿಕಾ ಜಾನ್, ರೈಜ್ ವಿಲ್ಸನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದಲ್ಲಿ ಗೌತಮ್ ಮೆನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಫ್‌ಐಆರ್ ಚಿತ್ರವನ್ನು ಸುಮಾರು 80 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು, ಹೈದರಾಬಾದ್, ಕೊಚ್ಚಿ, ದೆಹಲಿ ಸೇರಿದಂತೆ ಕೊಲಂಬೊದಲ್ಲಿ ಚಿತ್ರೀಕರಿಸಲಾಗಿದೆ. 'ಎಫ್ ಐ ಆರ್' ಸಿನಿಮಾವನ್ನು ತೆಲುಗು ಹಾಗೂ ತಮಿಳಿನಲ್ಲಿ ಫೆಬ್ರವರಿ 11ರಂದು ಬಿಡುಗಡೆಯಾಗಲಿದೆ.