Don't Miss!
- News
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ: ತಂದೆ ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Technology
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಮಲ್ ಹಾಸನ್ 'ವಿಕ್ರಂ' ಮೊದಲ ದಿನದ ಗಳಿಸಿದ್ದೆಷ್ಟು?
ನಟ ಕಮಲ್ ಹಾಸನ್ ಅಭಿನಯದ ವಿಕ್ರಂ ಭರ್ಜರಿಯಾಗಿ ಪ್ರದರ್ಶನ ಆಗುತ್ತಿದೆ. ಕಲಮ್ ಹಾಸನ್ ಈ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಅದೇ ಹಳೇ ಸ್ಟೈಲ್‌ನಲ್ಲಿ ರಗಡ್ ಲುಕ್ ನಲ್ಲಿ 'ವಿಕ್ರಂ' ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ ನಟ ಕಮಲ್ ಹಾಸನ್. 'ವಿಕ್ರಂ' ಕಮಲ್ ಹಾಸನ್‌ಗೆ ಹೇಳಿಮಾಡಿಸಿದ ಸಿನಿಮಾ ಎನ್ನುತ್ತಿದ್ದಾರೆ.
ನಿರೀಕ್ಷೆ ಮಟ್ಟವನ್ನು ಮೀರಿ 'ವಿಕ್ರಂ' ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ಲೊಕೇಶ್ ಕನಕರಾಜ್ ನಿರ್ದೇಶನದ ಪರಿಗೆ ಜನ ಸೈ ಎನ್ನುತ್ತಿದ್ದಾರೆ.
Vikram
Movie
Review:
ಕಮಲ್
ಹಾಸನ್
ಅದ್ಭುತ
ಕಮ್ಬ್ಯಾಕ್
Recommended Video

ನಟ ಕಮಲ್ ಹಾಸನ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಗ್ಯಾಪ್ ಬಳಿಕ ಬಂದಿರುವ ಕಮಲ್ ಹಾಸನ್ ಅಭಿಮಾನಿಗಳಿಗೆ ತಮ್ಮ ಪಾತ್ರದ ಮೂಲಕ ಕಿಕ್ ಕೊಟ್ಟಿದ್ದಾರೆ. ಮಗನಿಗಾಗಿ ಹೋರಾಡುವ ಕಮಲ್ ಹಾಸನ್ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿ ಬಿಟ್ಟಿದೆ. ಮೊದಲ ದಿನದ ಓಪನಿಂಗ್ ಪಡೆದುಕೊಂಡಿರುವ ಸಿನಿಮಾದ ಕಲೆಕ್ಷನ್ ಎಷ್ಟು ಎನ್ನುವುದನ್ನು ಮುಂದೆ ಓದಿ...

ಮೊದಲ ದಿನ 40 ಕೋಟಿ ಗಡಿದಾಟಿದ ವಿಕ್ರಂ!
ಇನ್ನು 'ವಿಕ್ರಂ' ಮೊದಲ ದಿನ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದು. ಉತ್ತಮ ಗಳಿಕೆ ಕಂಡಿದೆ. ತಮಿಳುನಾಡಿನಲ್ಲಿ 20 ಕೋಟಿ ಗಳಿಕೆ ಕಂಡಿರುವ 'ವಿಕ್ರಂ' ವಿಶ್ವಾದ್ಯಂತ ಮೊದಲ ದಿನ 45 ಕೋಟಿ ಗಳಿಕೆ ಕಂಡಿದೆ. ವಿಕ್ರಂ ಮೊದಲ ದಿನ ಸುಮಾರು 30 ಕೋಟಿ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು ಆದರೆ ಇದೀಗ 45 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ.
Vikram
First
Review
:
ಕಮಲ್
ಹಾಸನ್
'ವಿಕ್ರಂ'
ಸೂಪರ್
ಆ್ಯಕ್ಷನ್
ಥ್ರಿಲ್ಲರ್:
ಇಲ್ಲಿದೆ
ಮೊದಲ
ವಿಮರ್ಶೆ!

ರಿಲೀಸ್‌ಗೂ ಮೊದಲೇ 200ಕೋಟಿ ಗಳಿಕೆ!
ಏನು ವಿಕ್ರಂ ಸಿನಿಮಾ ರಿಲೀಸ್ ಮುನ್ನವೇ 200 ಕೋಟಿ ಗಳಿಕೆ ಕಂಡಿದೆ. ವಿಕ್ರಂ ಸಿನಿಮಾದ ಪ್ರೀ ರಿಲೀಸ್ ಬ್ಯುಜಿನೆಸ್ ಇಷ್ಟು ದೊಡ್ಡ ಗಳಿಕೆ ಮೂಲಕ ದಾಖಲೆ ಬರೆದಿದೆ. ನಟ ಕಮಲ್ ಹಾಸನ್ ವೃತ್ತಿ ಜೀವನದಲ್ಲಿ ರಿಲೀಸ್‌ಗೂ ಮೊದಲೇ 200 ರೂ. ಕೋಟಿ ಗಳಿಕೆ ಕಂಡಿದೆ.

'ವಿಕ್ರಂ' ಚಿತ್ರದಲ್ಲಿ ಅದ್ಭುತ ಕಲಾವಿದರ ಬಳಗ!
ವಿಕ್ರಂ ಸಿನಿಮಾದ ನಾಯಕ ನಟ ಕಮಲ್ ಹಾಸನ್, ಆದರೆ ಇದರ ಯಶಸ್ಸಿನ ಕೀರ್ತಿ ಅವರಿಗೆ ಮಾತ್ರ ಸಲ್ಲುವುದಿಲ್ಲ. ಏಕೆಂದರೆ ಚಿತ್ರದಲ್ಲಿ, ವಿಜಯ್ ಸೇತುಪತಿ, ಫಹಾದ್ ಫಾಸಿಲ್, ಸೂರ್ಯ ಅಂತಹ ಘಟಾನುಘಟಿ ಕಲಾವಿದರು ಇದ್ದಾರೆ. ವಿಜಯ್ ಸೇತುಪತಿ ನಟ ಸೂರ್ಯ ವಿಲನ್ ಪಾತ್ರಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಮಲಯಾಳಂ ನಟ ಪೃಥ್ವಿ ರಾಜ್ ಪಾತ್ರ ಜನರ ಮನಸ್ಸಲ್ಲಿ ಉಳಿದು ಬಿಡುತ್ತದೆ.

ಈ ಚಿತ್ರಕ್ಕೆ ಕೈದಿ ಚಿತ್ರದ ಲಿಂಕ್ ಇದೆ!
ಈ ಹಿಂದೆ ತಮಿಳಿನಲ್ಲಿ ಬಂದಿದ್ದ ಕೈದಿ ಸಿನಿಮಗೂ, ವಿಕ್ರಂ ಸಿನಿಮಾಗೂ ಸಣ್ಣ ನಂಟಿದೆ. ಇನ್ನು ಸಿನಿಮಾದ ಕ್ಲೈಮಾಕ್ಸ್ ನಲ್ಲಿ ನಟ ಸೂರ್ಯ ಕಾಣಿಸಿಕೊಳ್ಳುತ್ತಾರೆ. ಮತ್ತು ಕಾರ್ತಿ ಕೂಡ ಚಿತ್ರದಲ್ಲಿದ್ದಾರೆ. ನಟ ಸೂರ್ಯ ಇಡೀ ಸಿನಿಮಾದಲ್ಲಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಆತನ ಪಾತ್ರದ ಹೆಸರು ಮಾತ್ರ ಪ್ರತಿಧ್ವನಿಸುತ್ತಾ ಇರುತ್ತದೆ. ಕ್ಲೈಮಾಕ್ಸನಲ್ಲಿ ಬರುವ ಒಂದು ನಿಮಿಷದಲ್ಲಿ ಸೂರ್ಯ ಅಬ್ಬರಿಸಿ ಬಿಟ್ಟಿದ್ದಾರೆ. ಸದ್ಯ ವಿಕ್ರಂ ಸಿನಿಮಾ ನೋಡಿದವರಿಗೆ ಮುಂದಿನ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.