ಕಮಲ್ ಹಾಸನ್ ನಟನೆಯ 'ವಿಕ್ರಮ್' ಚಿತ್ರದ ಟ್ರೈಲರ್ ಔಟ್
ಬಹು ಭಾಷಾ ನಟ ಕಮಲ್ ಹಾಸನ್ ನಟನೆಯ ಬಹುನೀರಿಕ್ಷಿತ ಚಿತ್ರ 'ವಿಕ್ರಮ್' ಸಿನಿಮಾದ ಟ್ರೈಲರ್ ಇಂದು (ಮೇ 15) ರಿಲೀಸ್ ಆಗಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ನೋಡಿದ ಫ್ಯಾನ್ಸ್ ಕಮಲ್ ಹಾಸನ್ ನಟನೆಗೆ ತಲೆದೂಗಿದ್ದಾರೆ.
ಲೋಕೇಶ್ ಕನಗರಾಜ್'ವಿಕ್ರಮ್' ಸಿನಿಮಾಗೆ ನಿರ್ದೇಶನ ಮಾಡಿದ್ದು, ಈ ಸಿನಿಮಾ ಸೆಟ್ಟೇರಿದಾಗಿನಿಂದ ಈ ಚಿತ್ರದ ಬಗ್ಗೆ ಭಾರೀ ಚರ್ಚೆ ಕುತೂಹಲ ಮೂಡಿತ್ತು. ಈ ಮೊದಲು ಚಿಕ್ಕ ಟೀಸರ್ ಮೂಲಕವೇ ಪ್ರೇಕ್ಷಕರ ಕೌತಕವನ್ನು ದುಪ್ಪಟ್ಟು ಮಾಡಿತ್ತು. ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳಿದ್ದು, ಯುವಕರನ್ನು ಸೆಳೆಯುವ ಪ್ರಯತ್ನಕ್ಕೆ ಚಿತ್ರತಂಡ ಕೈ ಹಾಕಿದೆ. ಸದ್ಯ ಟ್ರೈಲರ್‌ನಲ್ಲಿರುವ ಮಾಸ್ ದೃಶ್ಯಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದು, ಕಮಲ್ ಹಾಸನ್‌ಗೆ ಜೈ ಎಂದಿದ್ದಾರೆ.
ಇನ್ನು 'ವಿಕ್ರಮ್' ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ನಂತಹ ಘಟಾನುಘಟಿ ತಾರ ಬಳಗವೇ ಇದೆ. ಟ್ರೈಲರ್‌ನಲ್ಲಿ ಆಕ್ಷನ್ ದೃಶ್ಯಗಳನ್ನು ಹೆಚ್ಚಾಗಿ ತೋರಿಸಿದ್ದು, ಕಮಲ್ ಹಾಸನ್ ಫುಲ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಸ್ ಪ್ರೇಕ್ಷಕರಿಗೂ ಸಿನಿಮಾ ಭರ್ಜರಿ ಟ್ರೀಟ್ ನೀಡಲಿದ್ದು, ಈಗಾಗಲೇ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯ್ಯೂಟೂಬ್‌ನಲ್ಲಿ 10 ಮಿಲಿಯನ್‌ಗಿಂತಲೂ ಅಧಿಕ ಬಾರಿ ವೀಕ್ಷಣೆ ಪಡೆದಿದೆ.

ಕಮಲ್ ಹಾಸನ್ , ಆರ್ ಮಹೇಂದ್ರನ್ ಅವರು 'ವಿಕ್ರಮ್' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಈ ಚಿತ್ರಕ್ಕಿದೆ. ಗಿರೀಶ್ ಛಾಯಾಗ್ರಹಣ ಕೂಡ ಟ್ರೈಲರ್‌ನಲ್ಲಿ ಗಮನ ಸೆಳೆಯುತ್ತಿದೆ. ಜೂನ್ 3 ರಂದು ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದ್ದು, ಬಾಕ್ಸಾಫೀಸ್ ಧೂಳೆಬ್ಬಿಸುವ ಸಾಧ್ಯತೆ ಇದೆ. ಈಗಾಗಲೇ 'ವಿಕ್ರಮ್' ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಲಿದೆ ಎಂದು ಸಿನಿ ಪಂಡಿತರು ಊಹಿಸಿದ್ದಾರೆ. ಆ ಮಟ್ಟಿಗೆ ಈ ಸಿನಿಮಾ ಕ್ರೇಜ್ ಮೂಡಿಸಿದೆ. ಸಿನಿಮಾದ ಟ್ರೈಲರ್ ನೋಡಿದ ಕಮಲ್ ಹಾಸನ್ ಅಭಿಮಾನಿಗಳು ಥ್ರಿಲ್ ಆಗಿದ್ದು, ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಕಾತುರರಾಗಿದ್ದಾರೆ.

ಒಂದಷ್ಟು ದಿನ ರಾಜಕೀಯದಲ್ಲಿ ಸುದ್ದಿಯಾಗುತ್ತಿದ್ದ ಕಮಲ್ ಹಾಸನ್ ರಾಜಕೀಯವನ್ನು ಪಕ್ಕಕ್ಕೆ ಇಟ್ಟು, ಈಗ ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಹೀಗಾಗಿ 'ವಿಕ್ರಮ್' ಸಿನಿಮಾ ಮೇಲಿನ ನೀರಿಕ್ಷೆ ಸಿನಿಪ್ರಿಯರಿಗೂ ಹೆಚ್ಚಾಗಿದ್ದು, ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಈ ಬಾರಿ ಕಮಲ್ ಹಾಸನ್ ಕೂಡ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು, ಸಿನಿ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.


Click it and Unblock the Notifications











