ಮಗಳ 2ನೇ ಮದುವೆಗೆ ರಜನಿಕಾಂತ್ ಅಸಮಧಾನ? ಪುತ್ರಿ ಐಶ್ವರ್ಯಾ ಹೊಸ ಪೋಸ್ಟ್‌ ನೀಡಿದ ಸುಳಿವೇನು?

ರಜನಿಕಾಂತ್ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್. ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಇನ್ನೊಂದು ಕಡೆ ಭಾರತದ ಮೋಸ್ಟ್ ಪವರ್‌ಫುಲ್ ವ್ಯಕ್ತಿಗಳಲ್ಲಿ ಇವರು ಕೂಡ ಒಬ್ಬರು. ಆದರೆ, ಇವರ ಮಕ್ಕಳ ವಿಚಾರದಲ್ಲಿ ತಲೈವಾಗೆ ಯಾಕೋ ನೆಮ್ಮದಿನೇ ಇಲ್ಲದಂತಾಗಿದೆ.

ರಜನಿಕಾಂತ್ ಪುತ್ರಿ ಐಶ್ವರ್ಯಾ ಮದುವೆಯಾದ 18 ವರ್ಷಗಳ ಬಳಿಕ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದರು. ಕಾಲಿವುಡ್ ಸ್ಟಾರ್ ನಟ ಧನುಷ್ ಮದುವೆಯಾಗಿದ್ದ ಐಶ್ವರ್ಯಾ ದಾಂಪತ್ಯ ಮುರಿದು ಬಿದ್ದಿದ್ದು ತಂದೆ ರಜನಿಕಾಂತ್‌ ಬೇಸರಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದಷ್ಟೇ ರಜನಿಕಾಂತ್ ಇಬ್ಬರನ್ನೂ ಒಂದು ಮಾಡಲು ಮುಂದಾಗಿದ್ದರು ಎಂದು ವರದಿಯಾಗಿತ್ತು.

Viral Aishwarya Rajinikath New post gave clarity on her second marriage

ಈ ಮಧ್ಯೆ ಐಶ್ವರ್ಯಾ ರಜನಿಕಾಂತ್ ಎರಡನೇ ಮದುವೆ ಸಜ್ಜಾಗುತ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಿದ್ದವು. ಯುವನಟನೊಂದಿಗೆ ಐಶ್ವರ್ಯಾ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ರಜನಿಕಾಂತ್ ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಎರಡನೇ ಮದುವೆ, ರಜನಿಕಾಂತ್ ಮಾಲ್ಡೀವ್ಸ್ ಪ್ರವಾಸ ಎಲ್ಲದಕ್ಕೂ ತಳುಕು ಹಾಕಲಾಗಿತ್ತು. ಈಗ ಐಶ್ವರ್ಯಾ ರಜನಿಕಾಂತ್ ಒಂದು ಪೋಸ್ಟ್‌ ಮೂಲಕ ಎರಡನೇ ಮದುವೆ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಎರಡನೇ ಮದುವೆ ಒಲವು ತೋರಿದ್ದಾರಾ ರಜನಿ?

ವಿಚ್ಛೇದನದ ಬಳಿಕ ರಜನಿಕಾಂತ್ ಎರಡನೇ ಮದುವೆ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದೆ. ಚೆನ್ನೈನ ರೆಸಾರ್ಟ್‌ನಲ್ಲಿ ತಮಿಳಿನ ಯುವನಟನೊಂದಿಗೆ ಐಶ್ವರ್ಯಾ ಕಾಣಿಸಿಕೊಂಡಿದ್ದೇ ಇಷ್ಟಕ್ಕೆಲ್ಲ ಕಾರಣವಾಗಿತ್ತು. ಶೀಘ್ರದಲ್ಲೇ ಇಬ್ಬರು ಮದುವೆ ಆಗುತ್ತಾರೆ ಅಂತಲೂ ವರದಿಯಾಗಿತ್ತು. ಈ ಸುದ್ದಿ ಹೊರಬೀಳುತ್ತಿದ್ದಂತೆ ಸೂಪರ್‌ಸ್ಟಾರ್ ಮಾಲ್ಡೀವ್ಸ್‌ ಕಡೆಗೆ ಪಯಣ ಬೆಳೆಸಿದ್ದರು. ಈ ಎರಡೂ ಘಟನೆಗಳಿಗೂ ತಳುಕು ಹಾಕಲಾಗಿತ್ತು. ಇನ್ನೊಂದು ತಮಿಳಿನ ವಿವಾದಾತ್ಮಕ ಹಿರಿಯ ಪತ್ರಕರ್ತ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹೊಸ ಬಾಂಬ್ ಸಿಡಿಸಿದ್ದರು.

Viral Aishwarya Rajinikath New post gave clarity on her second marriage

ಮಗಳೊಂದಿಗೆ ರಜನಿಕಾಂತ್ ಜಗಳ?

ಐಶ್ವರ್ಯಾ ಎರಡನೇ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸೂಪರ್‌ಸ್ಟಾರ್ ರಜನಿಕಾಂತ್ ಅಸಮಧಾನಗೊಂಡಿದ್ದಾರೆ. ಅದರಲ್ಲೂ ಯುವನಟನೊಂದಿಗೆ ಐಶ್ವರ್ಯಾ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ಬೇಸರ ಹೊರಹಾಕಿದ್ದರು. ಅಲ್ಲದೆ ಮಗಳಿಗೆ ಎರಡನೇ ಮದುವೆ ಬೇಡ ಎಂದು ಒತ್ತಾಯಿಸಿದ್ದರು. ಮಗಳು ಹಠ ಹಿಡಿದಾಗ ರಜನಿಕಾಂತ್ ಒಬ್ಬರೇ ಬೇಸರದಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದರು ಎಂದು ಬೈಲ್ವಾನ್ ರಂಗನಾಥನ್ ವರದಿ ಮಾಡಿದ್ದರು.

ಪತ್ರಕರ್ತನ ಪ್ರಕಾರ ರಜನಿಕಾಂತ್ ಅಭಿಪ್ರಾಯವೇನು?

ಪುತ್ರಿ ಐಶ್ವರ್ಯಾ ವಿರುದ್ಧ ಅಸಮಧಾನ ಹೊರ ಹಾಕಿ ರಜನಿಕಾಂತ್ ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲದೆ ಮಗಳಿಗೆ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರು. ಮಕ್ಕಳ ಬಗ್ಗೆ ಧನುಷ್‌ಗೆ ಪ್ರೀತಿ ಬಂದೇ ಬರುತ್ತೆ. ಹಿಂತಿರುಗಿ ಬರುತ್ತಾರೆ ಎಂದು ಹೇಳಿದ್ದಾರೆಂದು ಬೈಲ್ವಾನ್ ರಂಗನಾಥನ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದರು. ಮಗಳ ವಿರುದ್ಧ ತಂದೆ ಆಕ್ರೋಶ ಹೊರಹಾಕಿದ್ದಾರೆ ಅನ್ನೋ ವಿಷಯ ಹೊರಬೀಳುತ್ತಿದ್ದಂತೆ ಐಶ್ವರ್ಯಾ ಮಾಡಿದ ಒಂದು ಪೋಸ್ಟ್ ಸ್ಪಪ್ಟತೆ ನೀಡಿದ್ದಾರೆ ಎನ್ನಲಾಗಿದೆ.

ಐಶ್ವರ್ಯಾ ಪೋಸ್ಟ್‌ನಲ್ಲಿ ಏನಿದೆ?

ಇತ್ತೀಚೆಗೆ ರಜನಿಕಾಂತ್ ಅಭಿನಯದ 'ಜೈಲರ್' ಸಿನಿಮಾದ ಆಡಿಯೋ ರಿಲೀಸ್ ಆಗಿತ್ತು. ಈ ವೇಳೆ ತಂದೆಯೊಂದಿಗೆ ಆತ್ಮೀಯತೆಯಿಂದ ತೆಗೆದ ಫೋಟೊಗಳನ್ನು ಐಶ್ವರ್ಯಾ ರಜನಿಕಾಂತ್ ಶೇರ್ ಮಾಡಿಕೊಂಡಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಈ ಮೂಲಕ ತನ್ನ ಹಾಗೂ ತಂದೆ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟತೆ ನೀಡಿರಬಹುದೆಂದು ಚರ್ಚೆಯಾಗುತ್ತಿದೆ. ಇದೂವರೆಗೂ ಬಂದ ಸುದ್ದಿಗಳೆಲ್ಲ ಊಹಾಪೋಹಗಳು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

More from Filmibeat

English summary
Aishwarya Rajinikath New post gave clarity on her second marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X