"ನಟಿಯರು ಕುಡೀತಾರೆ..ನಶೆಯಲ್ಲಿರುತ್ತಾರೆ.. ಪಾರ್ಟಿ ಮಾಡ್ತಾರೆ.. ಹಾಗಂತ ಹಾಸಿಗೆ ಹಂಚಿಕೊಳ್ಳುತ್ತಾರಾ?"-'ಸೂರ್ಯಕಾಂತಿ' ನಟಿ ರೆಜಿನಾ
ದಕ್ಷಿಣ ಭಾರತದ ನಟಿಯರು ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳನ್ನು ಕೊಡುವುದಿಲ್ಲ. ತಮ್ಮ ವೃತ್ತಿ ಬದುಕಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ, ಕೆಲವೇ ಕೆಲವು ನಟಿಯರು ತಮ್ಮ ಮನಸ್ಸಿನಲ್ಲಿ ಇರೋದನ್ನು ನಿರ್ಭಯವಾಗಿ ಹೇಳುತ್ತಾರೆ. ಬೋಲ್ಡ್ ಕೆಮಂಟ್‌ಗಳನ್ನು ಮಾಡಿ ಚರ್ಚೆಯಲ್ಲಿ ಇರುತ್ತಾರೆ.
ಇಂತಹ ನಟಿಯರಲ್ಲಿ ತಮಿಳಿನ ಬಹುಭಾಷಾ ರೆಜಿನಾ ಕಸ್ಸಂದ್ರ. ರೆಜಿನಾ ಮೂಲತ: ತಮಿಳುನಾಡಿನವರು. 2005ರಲ್ಲಿಯೇ ತಮಿಳು ಚಿತ್ರರಂಗಕ್ಕೆ ಪೋಷಕ ಪಾತ್ರದಲ್ಲಿ ನಟಿಸುವ ಮೂಲಕ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾವೇ 'ಕಂದ ನಾಲ್ ಮುಧಲ್'. ಇಲ್ಲಿಂದ ಆರಂಭವಾದ ಈ ನಟಿಯ ಜರ್ನಿ ಬಾಲಿವುಡ್ ವೆಬ್ ಸೀರಿಸ್ ವರೆಗೂ ಬಂದು ನಿಂತಿದೆ.

ರೆಜಿನಾ ಕ್ಯಾಸೆಂಡ್ರಾ ಕನ್ನಡದ 'ಸೂರ್ಯಕಾಂತಿ' ಅನ್ನೋ ಸಿನಿಮಾದಲ್ಲಿ ನಟಿಸಿದ್ದಾರೆ. 'ಆ ದಿನಗಳು' ಸಿನಿಮಾದ ಹೀರೊ ಚೇತನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ತಮಿಳಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ ಬಳಿಕ ಸೀದಾ ಕನ್ನಡದಲ್ಲಿ ನಟಿಸಿದ್ದರು. ಆದರೆ, 'ಸೂರ್ಯಕಾಂತಿ' ಸಿನಿಮಾ ಕನ್ನಡದಲ್ಲಿ ಫ್ಲಾಪ್ ಆಗಿತ್ತು. ಇದೇ ನಟಿ ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿದ್ದರು. ಅದರಲ್ಲಿ "ನಟಿಯರು ಕುಡಿದರೆ, ನಶೆಯಲ್ಲಿದ್ದರೆ, ಹಾಸಿಗೆ ಹಂಚಿಕೊಳ್ಳುತ್ತಾರೆಯೇ?" ಎಂದು ಪ್ರಶ್ನೆ ಮಾಡಿದ್ದಾರೆ.
ರೆಜಿನಾ ಸಂದರ್ಶನದಲ್ಲಿ ಹೇಳಿದ್ದೇನು?
ರೆಜಿನಾ ಕಸ್ಸಂದ್ರ ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿದ್ದು, ಅದರಲ್ಲಿ ನಟಿಯರ ಬಗ್ಗೆ ಬೋಲ್ಡ್ ಹೇಳಿಕೆಯೊಂದನ್ನು ನೀಡಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿದೆ. ಈ ವೇಳೆ "ನಟಿಯರು ಕುಡಿದರೆ ಹಾಸಿಗೆ ಹಂಚಿಕೊಳ್ಳುತ್ತಾರೆಯೇ?" ಎಂದು ಬಹಿರಂಗವಾಗಿ ಪ್ರಶ್ನೆ ಮಾಡಿದ್ದಾರೆ. "ನಟಿಯರು ಕುಡಿಯುತ್ತಾರೆ.. ನಶೆಯಲ್ಲಿರುತ್ತಾರೆ.. ಪಾರ್ಟಿ ಮಾಡ್ತಾರೆ ಅಂತ ಆರೋಪ ಮಾಡುತ್ತಾರೆ. ಹೌದು ಅದು ನಿಜ" ಎಂದು ರೆಜಿನಾ ಹೇಳಿಕೆ ಕೊಟ್ಟಿದ್ದಾರೆ.
ನಟಿಯರು ಸಂಭ್ರಮಿಸುತ್ತಾರೆ
ನಟಿಯರು ಅಂತಹ ಲೈಫ್ ಅನ್ನು ಇಷ್ಟ ಪಡುತ್ತಾರೆ. ಪಾರ್ಟಿ ಮಾಡುತ್ತಾರೆ, ಕುಡೀತಾರೆ. ಹಾಗಂತ ಅವರ ನಡವಳಿಕೆಯನ್ನು ನೀವು ಪ್ರಶ್ನೆ ಮಾಡಲು ಸಾಧ್ಯವೇ? ಅಂತಹ ಮನಸ್ಥಿತಿ ಇರುವುದರಿಂದ ಎಲ್ಲವನ್ನೂ ಒಪ್ಪುತ್ತಾರೆ ಎಂದು ಹೇಗೆ ಭಾವಿಸುತ್ತೀರಿ. ಅದು ತಪ್ಪಾಗುದಿಲ್ಲವೇ? ನೀವು ಹಾಗೆ ಪ್ರಶ್ನೆ ಮಾಡಬಹುದೇ?" ಎಂದು ನಟಿ ರೆಜಿನಾ ಕಸ್ಸಂದ್ರ ಪ್ರಶ್ನೆ ಮಾಡಿದ್ದಾರೆ.

ಕುಡಿದ ಮಾತ್ರ ಹಾಸಿಗೆ ಹಂಚಿಕೊಳ್ಳುತ್ತಾರೆಯೇ?
ಇದೇ ಸಂದರ್ಶನದಲ್ಲಿ "ನಟಿಯೊಬ್ಬಳು ಕುಡಿದ ಮಾತ್ರಕ್ಕೆ ಹಾಸಿಗೆ ಹಂಚಿಕೊಳ್ಳುತ್ತಾಳೆ ಎನ್ನುವುದು ಅಸಂಬದ್ಧತೆಯ ಪರಮಾವಧಿ" ಎಂದು ರೆಜಿನಾ ಹೇಳಿದ್ದಾರೆ. ಅಷ್ಟೇ ಅಲ್ಲದೆ ಆಕೆ ಬಾಯ್‌ಫ್ರೆಂಡ್ ಜೊತೆ ಹಾಸಿ ಹಂಚಿಕೊಂಡ ಮಾತ್ರಕ್ಕೆ ಕೆಟ್ಟವಳಾಗುವುದಿಲ್ಲ. ಅದು ಅವರ ವೈಯಕ್ತಿಕ ಬದುಕು. ಅವರ ವೈಯಕ್ತಿಕ ಆಯ್ಕೆ" ಎಂದು ರೆಜಿನಾ ಕಸ್ಸಂದ್ರ ಹೇಳಿಕೆ ನೀಡಿದ್ದಾರೆ.
"ನಟಿಯರು ಅವರೊಂದಿಗೆ ಹೀಗೆ ಇರಬೇಕು.. ಇವರೊಂದಿಗೆ ಹಾಗೇ ಇರಬೇಕು ಎಂದು ಕಂಡೀಷನ್ ಹಾಕುವುದಕ್ಕೆ ನೀವ್ಯಾರು?.. ಆಕೆ ನೀವು ಇಷ್ಟ ಆಗದೆ ಇದ್ದರೆ, ಇಷ್ಟವಿಲ್ಲ ಎಂದು ಅರ್ಥ. ಆ ನಟಿಯ ಚಾರಿತ್ರ್ಯವನ್ನು ಆಧರಿಸಿ ಆಕೆಯ ಮೇಲೆ ಅತಿಕ್ರಮಣ ಮಾಡುವುದು ತಪ್ಪು" ಎಂದು ರೆಜಿನಾ ಕಸ್ಸಂಡ್ರ ಹೇಳಿಕೆ ಕೊಟ್ಟಿದ್ದಾಳೆ. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











