Rajinikanth: ಕೋಟಿ ಕೋಟಿ ಪಡೆಯೋ ರಜನಿ "ನಾನೀಗ ಶ್ರೀಮಂತನಾಗಿದ್ದೇನೆ" ಎಂದಿದ್ದೇಕೆ? ಈ ಹೇಳಿಕೆಯ ಗುಟ್ಟೇನು?

ಸೂಪರ್‌ಸ್ಟಾರ್ ರಜನಿಕಾಂತ್ ಭಾರತದ ಶ್ರೀಮಂತ ಸಿನಿಮಾ ನಟರಲ್ಲಿ ಒಬ್ಬರು. ವಿಶ್ವದ ಮೂಲೆ ಮೂಲೆಯಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಅಭಿಮಾನಿಗಳು ಇದ್ದಾರೆ. ಸೂಪರ್‌ಸ್ಟಾರ್ ಸಿನಿಮಾ ಬಾಕ್ಸಾಫೀಸ್‌ಗೆ ಎಂಟ್ರಿ ಕೊಟ್ಟರೆ ಮುಗೀತು ನೂರಾರು ಕೋಟಿ ಲೂಟಿ ಮಾಡುವುದರಲ್ಲಿ ಅನುಮಾನವೇ ಇಲ್ಲ.

ಇತ್ತೀಚೆಗೆ ತೆರೆ ಕಂಡ 'ಜೈಲರ್' ಸಿನಿಮಾವೇ ಸಾಕ್ಷಿ. ಇನ್ನೇನು ರಜನಿಕಾಂತ್ ಜಮಾನ ಮುಗಿದೇ ಹೋಯ್ತು ಅನ್ನುವಾಗಲೇ 'ಜೈಲರ್' ಅಂತಹ ಮೆಗಾ ಹಿಟ್ ಕೊಟ್ಟು ಮತ್ತೆ ಫೀನಿಕ್ಸ್ ನಂತೆಯೇ ಎದ್ದು ಬಂದಿದ್ದಾರೆ. 'ಜೈಲರ್' ಸಿನಿಮಾ ಕಾಲಿವುಡ್ ಬಾಕ್ಸಾಫೀಸ್‌ನಲ್ಲಿ 650 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಈ ಮೂಲಕ ಆಡಿಕೊಂಡವರ ಬಾಯಿ ಮುಚ್ಚಿಸಿದ್ದಾರೆ ರಜನಿಕಾಂತ್.

Viral Why Superstar Rajinikanth says now only i feel rich in Jailer Success meet

ಇತ್ತೀಚೆಗೆ 'ಜೈಲರ್‌' ಸಕ್ಸಸ್ ಮೀಟ್‌ನಲ್ಲಿ ರಜನಿಕಾಂತ್ "ನಾನೀಗ ಶ್ರೀಮಂತನಾಗಿದ್ದೇನೆ" ಎಂದು ಹೇಳಿದ್ದರು. ಅದೇ ಮಾತೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರೂ ರಜನಿಕಾಂತ್ ಈ ಮಾತು ಹೇಳಿದ್ದೇಕೆ? ಅಂತ ಚರ್ಚೆಯಾಗುತ್ತಿದೆ.

'ಜೈಲರ್‌'ಗೆ ರಜನಿ ಪಡೆದ ಸಂಭಾವನೆ ಎಷ್ಟು?

'ಜೈಲರ್‌'ಗೂ ಮುನ್ನ ಸೂಪರ್‌ಸ್ಟಾರ್ ರಜನಿಕಾಂತ್ ಎರಡು ಫ್ಲಾಪ್ ಸಿನಿಮಾಗಳನ್ನು ನೀಡಿದ್ದರು. ಆಗ ರಜನಿಕಾಂತ್ ಜಮಾನ ಮುಗೀತು ಮಾತಾಡಿದ್ದರು. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆಡಿಕೊಂಡಿದ್ದರು. ಆದರೆ, 'ಜೈಲರ್' ಆ ಎಲ್ಲಾ ಕಮೆಂಟ್‌ಗಳಿಗೆ ಬೀಗ ಹಾಕಿಸಿತ್ತು. ಇದೇ ಸಿನಿಮಾಗೆ ರಜನಿಕಾಂತ್ ಸುಮಾರು 100 ಕೋಟಿ ಸಂಭಾವನೆ ಪಡೆದಿದ್ದಾರೆ ಅಂತನೂ ವರದಿಯಾಗಿತ್ತು. ಈ ಮೂಲಕ ರಜನಿ ಮತ್ತೆ ಸಕ್ಸಸ್ ಟ್ರ್ಯಾಕ್‌ಗೆ ಮರಳಿದ್ದಾರೆ. ಇಷ್ಟೊಂದು ಸಂಭಾವನೆ ಪಡೆಯೋ ನಟ ನಾನೀಗ ಶ್ರೀಮಂತನಾಗಿದ್ದೇನೆ ಎಂದು ಹೇಳಿಕೆ ಕೊಟ್ಟಿದ್ದು ಯಾಕೆ ಅಂತ ಚರ್ಚೆಯಾಗುತ್ತಿದೆ.

ರಜನಿಯಿಂದ ಶ್ರೀಮಂತಿಕೆಯ ಮಾತೇಕೆ?

'ಜೈಲರ್‌' ಬಾಕ್ಸಾಫೀಸ್‌ನಲ್ಲಿ 650 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದರಿಂದ ವಿಜಯೋತ್ಸವನ್ನು ಆಚರಿಸಲಾಯಿತು. ಚಿತ್ರತಂಡದೊಂದಿಗೆ ರಜನಿಕಾಂತ್ ಕೂಡ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೂ ಮುನ್ನ ರಜನಿಕಾಂತ್‌ಗೆ ನಿರ್ಮಾಪಕ ಕಲಾನಿಧಿ ಮಾರನ್ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಬೆನ್ನಲ್ಲೇ ರಜನಿಕಾಂತ್ "ನಾನೀನ ಶ್ರೀಮಂತನಾಗಿದ್ದೇನೆ" ಎಂದು ಸಕ್ಸಸ್ ಮೀಟ್‌ನಲ್ಲಿ ಹೇಳಿಕೆ ನೀಡಿದ್ದರು. ಅದ್ಯಾಕೆ ಅನ್ನೋದು ಡೀ ಕೋಡ್ ಮಾಡುತ್ತಿದ್ದಾರೆ.

Viral Why Superstar Rajinikanth says now only i feel rich in Jailer Success meet

ಈ ಹೇಳಿಕೆ ಹಿಂದಿದೆ ದಶಕಗಳ ಕಥೆ?

ರಜನಿಕಾಂತ್ ನಾಯಕನಾಗಿ ನಟಿಸುವುದಕ್ಕಿಂತ ಮುನ್ನ ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಆ ವೇಳೆ ರಜನಿಕಾಂತ್ ಬಳಿ ಕಾರು ಇರಲಿಲ್ಲ. ನಿರ್ಮಾಣ ಸಂಸ್ಥೆ ಕಳುಹಿಸಿ ಕೊಡುತ್ತಿದ್ದ ಕಾರಿನಲ್ಲೇ ರಜನಿ ಪ್ರಯಾಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿ ಬಾರಿ ರಜನಿಯನ್ನು ಕೊನೆಯಲ್ಲಿ ಡ್ರಾಪ್ ಮಾಡುತ್ತಿದ್ದರು. ಇದು ರಜನಿ ಬೇಸರಕ್ಕೆ ಕಾರಣವಾಗಿತ್ತು. ಆ ಘಟನೆಯನ್ನು ಸಹೋದ್ಯೋಗಿ ಗೌಂಡಮಣಿ ಬಳಿ ರಜನಿ ಹೇಳಿಕೊಂಡಿದ್ದರು ಎಂದು ಯೂಟ್ಯೂಬರ್ ಅಂತಾನನ್ ತಮ್ಮ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.

ಕಾರು ಸಿಕ್ಕಾಗ ಮರುಕಳಿಸಿತಾ ನೆನಪು?

'ಜೈಲರ್' ಸಿನಿಮಾ ಗೆದ್ದಾಗ ನಿರ್ಮಾಪಕ ಕಲಾನಿಧಿ ಮಾರನ್ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಆ ಕಾರು ತನ್ನ ಕಳೆಯ ದಿನಗಳನ್ನು ನೆನಪಿಸಿರಬಹುದು. ಈ ಕಾರಣಕ್ಕಾಗಿಯೇ ರಜನಿಕಾಂತ್ "ನಾನೀಗ ಶ್ರೀಮಂತನಾಗಿದ್ದೇನೆ" ಎಂದು ಹೇಳಿರಬಹುದು ಎಂದು ದಶಕಗಳ ಹಿಂದಿನ ಘಟನೆಯನ್ನು ಯೂಟ್ಯೂಬರ್ ನೆನಪಿಸಿಕೊಂಡಿದ್ದಾರೆ.

More from Filmibeat

English summary
In Jailer success meet why Rajinikanth says that he is feeling rich now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X