ನಿಜ ಜೀವನದಲ್ಲಿ ವಿಶಾಲ್ ಹೀರೋ ಅಲ್ಲ, ವಿಲನ್: ರಮ್ಯಾ ಆರೋಪ

ತಮಿಳು ಚಿತ್ರರಂಗದ ನಾಯಕ ನಟ ವಿಶಾಲ್ ಅವರ ನಿರ್ಮಾಣ ಸಂಸ್ಥೆಗೆ ಮಹಿಳೆಯೊಬ್ಬರು 45 ಲಕ್ಷ ರೂ. ವಂಚಿಸಿರುವ ಪ್ರಕರಣ ಸುದ್ದಿಯಾಗಿತ್ತು. ವಿಶಾಲ್ ಒಡೆತನದ ವಿಶಾಲ್ ಫಿಲ್ಮ್ ಫ್ಯಾಕ್ಟರಿ (ವಿಎಫ್ಎಫ್) ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ರಮ್ಯಾ ಎಂಬಾಕೆ 45 ಲಕ್ಷ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

Recommended Video

Saroj Khan 8 ತಿಂಗಳ ಮಗಳ ಅಂತ್ಯಸಂಸ್ಕಾರ ಮುಗಿಸಿ ನೇರ ಶೂಟಿಂಗ್‌ಗೆ ಹೋಗಿದ್ದರು | Filmibeat Kannada

ಆದರೆ ರಮ್ಯಾ ಈಗ ವಿಶಾಲ್‌ಗೆ ತಿರುಗೇಟು ನೀಡಿದ್ದು, ನಟ ವಿಶಾಲ್ ನಿಜ ಜೀವನದಲ್ಲಿ ಹೀರೋ ಅಲ್ಲ, ಬದಲಿಗೆ ವಿಲನ್ ಎಂದು ಆರೋಪಿಸಿದ್ದಾರೆ.

ವಿಶಾಲ್ ಸಂಸ್ಥೆಯಲ್ಲಿ ಈ ರೀತಿಯ ಸನ್ನಿವೇಶ ಎದುರಾಗುತ್ತದೆ ಎನ್ನುವುದು ತಮಗೆ ತಿಳಿದಿತ್ತು. ಏಕೆಂದರೆ ಅಲ್ಲಿನ ಅನೇಕ ಅವ್ಯವಹಾರಗಳಿಗೆ ತಾವು ಸಾಕ್ಷಿಯಾಗಿದ್ದಾಗಿ ರಮ್ಯಾ ಹೇಳಿದ್ದಾರೆ. ತಮ್ಮನ್ನು ಕೆಲಸದಿಂದ ಕಿತ್ತು ಹಾಕಿ ಪೊಲೀಸರಿಗೆ ದೂರು ಕೂಡ ನೀಡಿರುವ ವಿಶಾಲ್ ವಿರುದ್ಧ ರಮ್ಯಾ ಅನೇಕ ಆರೋಪಗಳನ್ನು ಮಾಡಿದ್ದಾರೆ. ಮುಂದೆ ಓದಿ...

ಹೀರೋ ಅಲ್ಲ, ವಿಲನ್

ಹೀರೋ ಅಲ್ಲ, ವಿಲನ್

ವಿಶಾಲ್ ತಾವು ಇಷ್ಟಪಡದ ವ್ಯಕ್ತಿಗಳನ್ನು ಮುಗಿಸಿಬಿಡುವ ಅಭ್ಯಾಸ ಹೊಂದಿದ್ದಾರೆ. ಸಿನಿಮಾಗಳಲ್ಲಿ ಕಾಣಿಸುವಂತೆ ನಿಜಜೀವನದಲ್ಲಿ ಅವರು ಹೀರೋ ಅಲ್ಲ. ಆದರೆ ಅದಕ್ಕಿಂತಲೂ ಭಯಾನಕ ವಿಲನ್ ಎಂದು ರಮ್ಯಾ ಆರೋಪಿಸಿದ್ದಾರೆ.

ಅವ್ಯವಹಾರದ ದಾಖಲೆ

ಅವ್ಯವಹಾರದ ದಾಖಲೆ

ವಿಶಾಲ್ ಫಿಲ್ಮ್ ಫ್ಯಾಕ್ಟರಿಯಿಂದ ಯಾವುದೇ ಹಣ ದುರುಪಯೋಗ ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಲು ತಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ವಿಎಫ್ಎಫ್‌ನಲ್ಲಿ ಸುದೀರ್ಘ ಕಾಲದಿಂದ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ತಮಗೆ ಅರಿವಿತ್ತು. ಆದರೆ ಬಲವಂತವಾಗಿ ಸುಮ್ಮನಿರಿಸಲಾಗಿತ್ತು. ಮಹಿಳೆಯಾಗಿ ಈ ಅನ್ಯಾಯಗಳನ್ನು ಸಹಿಸಿಕೊಳ್ಳುವುದು ಬಹಳ ಕಷ್ಟವಾಗಿತ್ತು ಎಂದಿದ್ದಾರೆ.

ಹಲ್ಲೆ ಮಾಡಿಸಿದ್ದರು

ಹಲ್ಲೆ ಮಾಡಿಸಿದ್ದರು

ವಿಶಾಲ್ ಯಾರನ್ನು ಬೇಕಾದರೂ ಹೆದರಿಸಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ತಮಗೆ ಬೆದರಿಕೆ ಒಡ್ಡಿ ತಮ್ಮ ಕಾರನ್ನು ಕೂಡ ಕಿತ್ತುಕೊಂಡಿದ್ದಾರೆ. ವಿಶಾಲ್ ಅವರ ಮ್ಯಾನೇಜರ್ ಹರಿ ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಕೇಡಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದರು ಎಂದು ಆರೋಪಿಸಿದ್ದಾರೆ.

ಜೀವಕ್ಕೆ ಅಪಾಯವಿದೆ

ಜೀವಕ್ಕೆ ಅಪಾಯವಿದೆ

'ನನ್ನ ಜೀವಕ್ಕೆ ಅಪಾಯವಿದೆ. ಪೊಲೀಸರು ರಕ್ಷಣೆ ನೀಡಬೇಕು. ಈ ಪ್ರಕರಣದಲ್ಲಿ ನನ್ನನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ಸರ್ಕಾರ ಅಥವಾ ಸಾರ್ವಜನಿಕರಿಗೆ ಎಲ್ಲ ದಾಖಲೆಗಳನ್ನು ಬಹಿರಂಗಪಡಿಸಲು ಸಿದ್ಧ' ಎಂದು ರಮ್ಯಾ ಹೇಳಿದ್ದಾರೆ.

ಸ್ಟೇಷನ್ ಒಳಗೇ ಕೊಲ್ಲುತ್ತೇವೆ

ಸ್ಟೇಷನ್ ಒಳಗೇ ಕೊಲ್ಲುತ್ತೇವೆ

ರಮ್ಯಾ ಸಹೋದರ ರಾಜೇಶ್ ಕೂಡ ವಿಶಾಲ್ ವಿರುದ್ಧ ಆರೋಪಗಳನ್ನು ಮಾಡಿದ್ದು, ಪೊಲೀಸರಿಗೆ ದೂರು ನೀಡಿದರೆ ಸ್ಟೇಷನ್ ಒಳಗೇ ಕೊಂದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ರಮ್ಯಾ ವಿರುದ್ಧ ಸಾಕ್ಷ್ಯವಿದೆ

ರಮ್ಯಾ ವಿರುದ್ಧ ಸಾಕ್ಷ್ಯವಿದೆ

ರಮ್ಯಾ ಹಣ ದುರುಪಯೋಗಪಡಿಸಿಕೊಂಡಿರುವುದಕ್ಕೆ ತಮ್ಮ ಬಳಿ ಪುರಾವೆಗಳಿವೆ. ಅವರು ಪೊಲೀಸ್ ಠಾಣೆಗೆ ಹೋಗಿ ಹೇಳಿಕೆ ದಾಖಲಿಸಿದರೆ ತಾವೇನೂ ತಲೆಕೆಡಿಸಿಕೊಳ್ಳುವುದಿಲ್ಲ. ರಮ್ಯಾ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದರು. ಪೊಲೀಸ್ ಠಾಣೆಯಲ್ಲಿ ವಿವಾದ ಬಗೆಹರಿಸಿಕೊಳ್ಳಲು ಅವಕಾಶ ಕೂಡ ನೀಡಲಾಗಿತ್ತು ಎಂದು ವಿಶಾಲ್ ಮ್ಯಾನೇಜರ್ ಹರಿ ಹೇಳಿದ್ದಾರೆ.

ಸಂಸ್ಥೆಯಿಂದ ಎರಡು ಚಿತ್ರಗಳು

ಸಂಸ್ಥೆಯಿಂದ ಎರಡು ಚಿತ್ರಗಳು

ವಿಶಾಲ್ ಅವರ ವಿಎಫ್ಎಫ್ ನಿರ್ಮಾಣ ಸಂಸ್ಥೆಯಿಂದ ಎರಡು ಸಿನಿಮಾಗಳು ಸಿದ್ಧವಾಗುತ್ತಿವೆ. 'ಚಕ್ರ' ಚಿತ್ರದ ಟ್ರೇಲರ್‌ಅನ್ನು ಇತ್ತೀಚೆಗಷ್ಟೇ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇನ್ನೊಂದು ಚಿತ್ರ 'ತುಪ್ಪರಿವಾಲನ್ 2'ದಲ್ಲಿ ಕೂಡ ವಿಶಾಲ್ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Vishal Film Factory's ex accountant Ramya, who is facing fund misusing allegation has alleged that Vishal is not the hero, but a villain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X