Madhagajaraja Box Office Day 2: ನಡುಗುವ ಕೈಯಿಂದಲೇ ವಿಶಾಲ್ ಸಿನಿಮಾ ಪ್ರಚಾರ; 2ನೇ ದಿನವೂ ನಿಲ್ಲದ ಓಟ

12 ವರ್ಷಗಳ ಬಳಿಕ ತಮಿಳಿನಲ್ಲಿ ನಿರ್ಮಾಣ ಆದ ಸಿನಿಮಾ ರಿಲೀಸ್ ಆಗಿದೆ. ಅದುವೇ ವಿಶಾಲ್, ವರಲಕ್ಷ್ಮಿ ಶರತ್‌ಕುಮಾರ್, ಅಂಜಲಿ ಹಾಗೂ ಸಂತಾನಂ ನಟನೆಯ ಸಿನಿಮಾ 'ಮದಗಜರಾಜ'. ಖುಷ್ಬೂ ಪತಿ ಸಿ.ಸುಂದರ್ ನಿರ್ದೇಶಿಸಿದ ಈ ಸಿನಿಮಾ ಹಲವು ಕಾರಣಗಳಿಂದ ಬಿಡುಗಡೆಯಾಗಿರಲಿಲ್ಲ. ಕೊನೆಗೂ ದಶಕಗಳ ಬಳಿಕ ಈ ಸಿನಿಮಾ ಬಿಡುಗಡೆಯಾಗಿದೆ.

ವಿಶಾಲ್ ಸಿನಿಮಾ 'ಮದಗಜರಾಜ'ಗೆ ಮೊದಲ ದಿನ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಆಕ್ಷನ್ ಕಮ್ ಕಾಮಿಡಿ ಸಿನಿಮಾ ಫಸ್ಟ್ ಡೇ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದಷ್ಟೇ ಅಲ್ಲದೆ, ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. 12 ವರ್ಷಗಳ ಬಳಿಕವೂ ಚಿತ್ರತಂಡ ಒಂದಾಗಿ ಬಂದು ಸಿನಿಮಾವನ್ನು ಪ್ರಚಾರ ಮಾಡುವುದಕ್ಕೆ ಮುಂದಾಗಿತ್ತು. ಇದೇ ವೇಳೆನೇ ವಿಶಾಲ್ ಆರೊಗ್ಯದ ಬಗ್ಗೆನೂ ಚರ್ಚೆಯಾಗಿತ್ತು.

Vishal Varalakshmi Sarathkumar film Madhagajaraja box office day 2 collection report

'ಮದಗಜರಾಜ' ಸಿನಿಮಾದ ಪ್ರಚಾರಕ್ಕೆ ಬಂದಿದ್ದ ವಿಶಾಲ್ ಕೈಗಳು ನಡುಗುತ್ತಿದ್ದವು. ಮಾತಾಡುವುದಕ್ಕೂ ಪರದಾಡುತ್ತಿದ್ದರು. ಈ ವೇಳೆ ಸಿನಿಮಾ ಬಗ್ಗೆ ಚರ್ಚೆ ಆಗುವುದಕ್ಕಿಂತ ವಿಶಾಲ್ ಅನಾರೋಗ್ಯ ಸದ್ದು ಮಾಡಿದ್ದೇ ಹೆಚ್ಚು. ಹೀಗಾಗಿ ಸಿನಿಮಾ ಬಗ್ಗೆ ಹೆಚ್ಚೇನೂ ನಿರೀಕ್ಷೆಗಳು ಇರಲಿಲ್ಲ. ಆದರೆ, ರಿಲೀಸ್ ಆದ ಬಳಿಕ ಆ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿದೆ. ಎರಡನೇ ದಿನವೂ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸಖತ್ ಆಗಿಯೇ ಕಲೆಕ್ಷನ್ ಮಾಡಿದೆ.

ವಿಶಾಲ್ ಕೈ ಹಿಡಿದ ತಮಿಳಿಗರು

ತಮಿಳುನಾಡಿನಲ್ಲಿ 'ಮದಗಜರಾಜ' ಸಿನಿಮಾ ಸದ್ದು ಮಾಡುತ್ತಿದೆ. ಸಂಕ್ರಾಂತಿ ಹಬ್ಬಕ್ಕೆಂದು ರಿಲೀಸ್ ಆದ ಸಿನಿಮಾಗಳಲ್ಲಿ ವಿಶಾಲ್ ಸಿನಿಮಾಗೆ ಹೆಚ್ಚು ಪ್ರತಿಕ್ರಿಯೆ ಸಿಗುತ್ತಿದೆ. ಸುಗ್ಗಿ ಹಬ್ಬದ ಸಂಭ್ರಮದಲ್ಲಿ ತಮಿಳಿಗರು ಥಿಯೇಟರ್ ಕಡೆ ಮುಖ ಮಾಡುತ್ತಿದ್ದಾರೆ. 12 ವರ್ಷದ ಹಿಂದಿನ ಸಿನಿಮಾ ಅನ್ನೋದನ್ನು ಮರೆದು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡುವುದೇ ಕಡಿಮೆ ಆಗಿರುವಾಗ, 12 ವರ್ಷದ ಹಿಂದೇನೆ ರಿಲೀಸ್ ಆಗಬೇಕಿದ್ದ ವಿಶಾಲ್ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.

2ನೇ ದಿನ 'ಮದಗಜರಾಜ' ಕಲೆಕ್ಷನ್

ಇಂದಿನ ಪೀಳಿಗೆಗೆ 'ಮದಗಜರಾಜ' ಸಿನಿಮಾ ಹಿಡಿಸಬಹುದೇ ಎಂಬ ಅನುಮಾನಕ್ಕೆ ತೆರೆಬಿದ್ದಿದೆ. ಎರಡನೇ ದಿನವೂ ಕಲೆಕ್ಷನ್ ಚೆನ್ನಾಗಿಯೇ ಇತ್ತು. ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಅಪ್‌ಡೇಟ್ ಮಾಡುವ ವೆಬ್‌ ಸೈಟ್ ಸ್ಯಾಕ್ನಿಲ್ಕ್.ಕಾಮ್ ವರದಿ ಪ್ರಕಾರ, ವಿಶಾಲ್ ಸಿನಿಮಾ ಎರಡನೇ ದಿನವೂ ಸುಮಾರು 3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ ಕಲೆಕ್ಷನ್ ಡ್ರಾಪ್ ಆಗಬಹುದು ಅನ್ನೋ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ ತಲೆಕೆಳಗಾಗಿದೆ.

Vishal Varalakshmi Sarathkumar film Madhagajaraja box office day 2 collection report

ಇಲ್ಲಿವರೆಗೂ ಎಷ್ಟು ಕಲೆಕ್ಷನ್?

ಟ್ರೇಡ್ ಎಕ್ಸ್‌ಪರ್ಟ್‌ಗಳು 'ಮದಗಜರಾಜ' ಮೊದಲ ದಿನದ ಕಲೆಕ್ಷನ್ 5 ಕೋಟಿ ರೂಪಾಯಿ ಅಂದರೆ, ಸ್ಯಾಕ್ನಿಲ್ಕ್ ವೆಬ್‌ ಸೈಟ್ ಮೂರು ಕೋಟಿ ರೂಪಾಯಿ ಎಂದು ಹೇಳಿದೆ. ಹೀಗಾಗಿ ಮೊದಲ ದಿನ ಕಲೆಕ್ಷನ್ ಅಲ್ಲಿ ಗೊಂದಲವಿದೆ. ಆದರೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಹೀಗಿದ್ದರೂ, ಟ್ರೇಡ್‌ ಎಕ್ಸ್‌ಪರ್ಟ್‌ಗಳ ಕಲೆಕ್ಷನ್ ತೆಗೆದುಕೊಂಡರೆ, ಮೊದಲ ದಿನ 5 ಕೋಟಿ ರೂಪಾಯಿ ಹಾಗೂ ಎರಡನೇ ದಿನ ಮೂರು ಕೋಟಿ ರೂಪಾಯಿ ಗಳಿಕೆ ಕಂಡಿದೆ. ಒಟ್ಟು ಎಂಟು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

'ಮದಗಜರಾಜ'ನಿಗೆ ಕಾಂಪಿಟೇಷನ್

ವಿಶಾಲ್, ವರಲಕ್ಷ್ಮಿ ಶರತ್‌ಕುಮಾರ್, ಅಂಜಲಿ ಹಾಗೂ ಸಂತಾನಂ ನಟಿಸಿರುವ ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಈ ಸಿನಿಮಾಗೆ ಕಾಂಪಿಟೇಷನ್ ಕೂಡ ಇದೆ. ರಾಮ್ ಚರಣ್ ಸಿನಿಮಾ 'ಗೇಮ್ ಚೇಂಜರ್' ಹಾಗೂ ಬಾಲಕೃಷ್ಣ ಸಿನಿಮಾ 'ಡಾಕು ಮಹಾರಾಜ್' ಈ ಕಾಂಪಿಟೇಷನ್ ಕೊಡುವ ಬಹುದು. ಆದರೆ, ಇದು ಆಂಧ್ರ ತೆಲಂಗಾಣ ರಾಜ್ಯದಲ್ಲಷ್ಟೇ. ಅದು ಬಿಟ್ಟರೆ, ತಮಿಳಿನಲ್ಲಿ ಈ ಸಿನಿಮಾಗೆ ಈ ವಾರ ಕಾಂಪಿಟೇಷನ್ ಅನ್ನೋದು ಇಲ್ಲ.

Disclaimer: ಈ ಅಂಕಿ ಅಂಶಗಳನ್ನು ಬೇರೆ ಮೂಲಗಳಿಂದ ಸಂಗ್ರಹಿಸಿದ್ದು, ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.

More from Filmibeat

English summary
Vishal, Varalakshmi Sarathkumar film Madhagajaraja box office day 2 collection report;
Read more about: vishal box office kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X