ಕಮಲ್ ಪುತ್ರಿ ಶ್ರುತಿ ಹಾಸನ್ ಜೊತೆ ರೊಮ್ಯಾನ್ಸ್: ಪತ್ನಿ ಪ್ರತಿಕ್ರಿಯೆ ಬಗ್ಗೆ ಲೋಕೇಶ್ ಯಾಕೆ ಬಾಯ್ಬಿಡಲಿಲ್ಲ?

ತಮಿಳು ಚಿತ್ರರಂಗ ಮತ್ತೊಬ್ಬ ಸ್ಟಾರ್ ನಿರ್ದೇಶಕ ಲೋಕೇಶ್ ಕನಕರಾಜ್. ಬೆಳ್ಳಿ ಪರದೆ ಮೇಲೆ ತನ್ನದೇ ಲೋಕ ಸೃಷ್ಟಿಸಿರುವ ನಿರ್ದೇಶಕನಿಗೆ ಸೂಪರ್‌ಸ್ಟಾರ್‌ಗಳಷ್ಟೇ ಬೇಡಿಕೆ ಇದೆ. ಇತ್ತೀಚೆಗೆ ದಳಪತಿ ವಿಜಯ್ ನಟಿಸಿದ್ದ 'ಲಿಯೋ' ಸಿನಿಮಾಗೆ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿದ್ದರು. ಆದರೆ, ಸಿನಿಮಾ ನಿರೀಕ್ಷಿಸಿದ ಮಟ್ಟ ತಲುಪಲಿಲ್ಲ. ಇದು ಬಿಟ್ಟರೆ ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳೆಲ್ಲವೂ ಹಿಟ್‌ ಲಿಸ್ಟ್ ಸೇರಿವೆ.

'ಲಿಯೋ' ಬಿಡುಗಡೆಗೂ ಮುನ್ನವೇ ಲೋಕೇಶ್ ಕನಕರಾಜ್ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಸದ್ಯಕ್ಕೀಗ ಲೋಕೇಶ್ ಅದೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಈ ಗ್ಯಾಪ್‌ನಲ್ಲಿ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅವರ ವಿಡಿಯೋ ಅಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲಿ ಶ್ರುತಿ ಹಾಸನ್ ಜೊತೆ ರೊಮ್ಯಾನ್ಸ್ ಮಾಡಿವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

What did the wife say about Lokesh Kanagaraj s romance with Shruti Haasan

'ಇನಿಮೇಲ್' ಎಂಬ ಆಲ್ಬಂ ಆ ಹಾಡಿಗೆ ಹೀರೊ ಲೋಕೇಶ್ ಕನಕರಾಜ್ ಅವರೇ. ಈ ಆಲ್ಬಂ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಲೋಕೇಶ್ ಹಾಗೂ ಶ್ರುತಿ ಹಾಸನ್ ಕೆಮಿಸ್ಟ್ರಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಕಾರಣಕ್ಕೆ ತಮಿಳು ಪತ್ರಕರ್ತರು ಈ ಹಾಡನ್ನು ನೋಡಿ ನಿಮ್ಮ ಪತ್ನಿಯ ಪ್ರತಿಕ್ರಿಯೆ ಏನಾಗಿತ್ತು? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಲೋಕೇಶ್ ಕೊಟ್ಟ ಉತ್ತರ ಹೀಗಿತ್ತು.

ಲೋಕೇಶ್ ಕನಕರಾಜ್ ನಿರ್ದೇಶನದ ಜೊತೆ ನಟನೆಯಲ್ಲೂ ಆಸಕ್ತಿ ಇಟ್ಟುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಹಸ ನಿರ್ದೇಶಕ ಅನ್ಬರಿವ್ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಲೋಕೇಶ್ ಕನಕರಾಜ್ ಹೀರೊ ಆಗಿ ನಟಿಸುತ್ತಿದ್ದಾರೆಂಬ ಸುದ್ದಿ ಹಬ್ಬಿತ್ತು. ಆದರೆ, ಅದೇನೋ ಸೆಟ್ಟೇರಲಿಲ್ಲ. ಬಳಿಕ ಆರ್‌ ಜೆ ಬಾಲಾಜಿಯವರ 'ಸಿಂಗಾಪುರ್ ಸಲೂನ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಶ್ರುತಿ ಹಾಸನ್ ಅಲ್ಬಂನಲ್ಲಿ 'ಇನಿಮೇಲ್'ನಲ್ಲಿ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ.

'ಇನಿಮೇಲ್' ಬಿಡುಗಡೆಗೂ ಮುನ್ನ ಲೋಕೇಶ್ ಕನಗರಾಜ್ ಹಾಗೂ ಶ್ರುತಿ ಹಾಸನ್ ಪತ್ರಕರ್ತರನ್ನು ಭೇಟಿ ಮಾಡಿದ್ದರು. ಅವರಲ್ಲಿ ಒಬ್ಬರು ಶ್ರುತಿ ಹಾಸನ್ ಜೊತೆ ನೀವು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ನಿಮ್ಮ ಪತ್ನಿ ಪ್ರತಿಕ್ರಿಯೆ ಏನಾಗಿತ್ತು? ಒಬ್ಬ ನಿರ್ದೇಶಕನಾಗಿ ನಿಮ್ಮ ಪತ್ನಿ ನೋಡಿದ್ದಾರೆ. ಅದೇ ನಟನಾಗಿ ಹೇಗೆ ಸ್ವೀಕರಿಸಿದ್ದಾರೆ? ಎಂದು ಪ್ರಶ್ನೆ ಹಾಕಿದ್ದರು.

What did the wife say about Lokesh Kanagaraj s romance with Shruti Haasan

ಈ ಪ್ರಶ್ನೆಗಳಿಗೆ ಲೋಕೇಶ್ ಕನಕರಾಜ್ ಉತ್ತರ ಕೊಡಲಿಲ್ಲ. ಅದು ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಂದ ದೂರುವಿರುತ್ತೇನೆ ಎಂದಿದ್ದಾರೆ. "ಮೊದಲಿನಿಂದಲೂ ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಂದ ದೂರವೇ ಉಳಿದಿದ್ದೇನೆ. ಈ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ಚಿತ್ರರಂಗಕ್ಕೆ ಬಂದ್ಮೇಲೆ ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದು ಬೇಡವೆಂದು ನಿರ್ಧರಿಸಿದ್ದೇನೆ ಎಂದಿದ್ದಾರೆ. ನೀವು ಮತ್ತು ನಾನು ನೇರವಾಗಿ ಸಂಪರ್ಕದಲ್ಲಿರುಬೇಕು. ಹೊಗಳಿಕೆಯಾಗಲಿ, ಟೀಕೆಯಾಗಲಿ ನಮ್ಮ ನಿಮ್ಮ ನಡುವೆ ಇರಬೇಕು. ನನ್ನ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬಾರದು ಎಂದು ನಾನು ಸ್ಪಷ್ಟವಾಗಿ ನಿರ್ಧರಿಸಿದ್ದೇನೆ" ಎಂದು ಲೋಕೇಶ್ ಕನಕರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯ ಲೋಕೇಶ್ ಕನಕರಾಜ್ 'ತಲೈವರ್ 171' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ 'ರೋಲೆಕ್ಸ್', 'ವಿಕ್ರಮ್ 2' ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಹೀಗಾಗಿ ಬಿಗ್ ಪ್ರಾಜೆಕ್ಟ್ ಸಿನಿಮಾಗಳು ಲೋಕೇಶ್ ಕನಕರಾಜ್ ಕೈಯಲ್ಲಿವೆ.

More from Filmibeat

English summary
Why Tamil movie director Lokesh Kanagaraj didn't answer about his wife related question:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X