Rajinikanth: "ನಾವು ಆಡಿದ ಮಾತು ಸಿನಿಮಾದಲ್ಲಿರುವ ಸಾಧ್ಯತೆಯಿದೆ".. ರಜನಿ ಭೇಟಿ ಬಳಿಕ ಮಲೇಷ್ಯಾ ಪ್ರಧಾನಿ ಹೇಳಿಕೆ!

'ಜೈಲರ್' ಸಿನಿಮಾ ಮೆಗಾ ಹಿಟ್ ಆಗುತ್ತಿದ್ದಂತೆ ಸೂಪರ್‌ಸ್ಟಾರ್ ರಜನಿಕಾಂತ್ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಹಿಮಾಲಯದಿಂದ ಶುರುವಾಗಿದ್ದ ಪಯಣ ಇನ್ನೂ ನಿಂತಿಲ್ಲ. ಒಂದೊಂದು ದಿನ ಒಂದೊಂದು ಕಡೆ ರಜನಿಕಾಂತ್ ಪ್ರತ್ಯಕ್ಷ ಆಗುತ್ತಿದ್ದಾರೆ.

ಹಿಮಾಲಯದಿಂದ ಸೀದಾ ಉತ್ತರ ಪ್ರದೇಶ, ಮಧ್ಯೆ ಪ್ರದೇಶಕ್ಕೂ ಭೇಟಿ ಕೊಟ್ಟಿದ್ದರು. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ರನ್ನು ಭೇಟಿಯಾಗಿದ್ದರು. ಆ ಬಳಿಕ ಬೆಂಗಳೂರಿಗೆ ಬಂದಿದ್ದರು. ಬಿಎಂಟಿಸಿ ಡಿಪೋಗೆ ಹೋಗಿ ಅಲ್ಲಿನ ಸಿಬ್ಬಂದಿ ಜೊತೆ ಕೆಲ ಕಾಲ ಅವರೊಂದಿಗೆ ಕಾಲ ಕಳೆದಿದ್ದರು.

rajinikanth-malaysia-prime-minster-anwar-ibrahim

ಈಗ 171ನೇ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ರಜನಿಕಾಂತ್ ಮಲೇಷ್ಯಾದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಅಷ್ಟೇ ಅಲ್ಲ ಮಲೇಷ್ಯಾ ಪ್ರಧಾನಿಯನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ರಜನಿಕಾಂತ್ ಮಲೇಷ್ಯಾ ಪ್ರಧಾನಿಯನ್ನು ಭೇಟಿಯಾಗಿದ್ದು ಯಾಕೆ? ಭೇಟಿ ಬಳಿಕ ಮಲೇಷ್ಯಾ ಪ್ರಧಾನಿ ಹೇಳಿದ್ದೇನು? ತಿಳಿಯಲು ಮುಂದೆ ಓದಿ...

ಮಲೇಷ್ಯಾದಲ್ಲಿ ಸೂಪರ್‌ಸ್ಟಾರ್

ಎರಡು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳನ್ನು ನೀಡಿದ ಬಳಿಕ ರಜನಿಕಾಂತ್‌ಗೆ ಮೆಗಾ ಸಕ್ಸಸ್ ಸಿನಿಮಾವೊಂದು ಸಿಕ್ಕಿದೆ. ಇದೇ ಖುಷಿಯಲ್ಲಿ ರಜನಿಕಾಂತ್ ಮತ್ತೆ ಫುಲ್ ಆಕ್ಟೀವ್ ಆಗಿದ್ದಾರೆ. ಸದ್ಯ ಮಲೇಷ್ಯಾದಲ್ಲಿರುವ ಸೂಪರ್‌ಸ್ಟಾರ್ ಅಲ್ಲಿ ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಕೆಲವು ಕಾಲ ಚರ್ಚೆ ಮಾಡಿದ್ದಾರೆ. ಅದರ ಫೋಟೊ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಜನಿ ಭೇಟಿ ಬಗ್ಗೆ ಮಲೇಷ್ಯಾ ಪ್ರಧಾನಿ ಹೇಳಿದ್ದೇನು?

ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಕೆಲವು ಗಂಟೆಗಳ ಕಾಲ ಚರ್ಚೆ ಮಾಡಿದ್ದರು. ಚರ್ಚೆಯ ಬಳಿಕ ಪ್ರತಿಕ್ರಿಯೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. " ಫಿಲ್ಮ್ ಸ್ಟಾರ್ ರಜನಿಕಾಂತ್ ಏಷ್ಯಾ ಹಾಗೂ ಅಂತರಾಷ್ಟ್ರೀಯ ಕಲಾ ಪ್ರಪಂಚದಲ್ಲಿ ಜನಪ್ರಿಯ ಹೆಸರು. ಇವರು ಮಲೇಷ್ಯಾಗೆ ಭೇಟಿ ಕೊಟ್ಟಿದ್ದರು. ಜನರ ಕಷ್ಟ ಮತ್ತು ಸಂಕಟಗಳಿಗೆ ನಾನು ಮಾಡಿದ ಹೋರಾಟವನ್ನು ಅವರು ಗೌರವಿಸಿದ್ದನ್ನು ನಾನು ಪ್ರಶಂಸಿಸುತ್ತೇನೆ." ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹೇಳಿದ್ದಾರೆ.

ನಾವಾಡಿದ ಮಾತು ಸಿನಿಮಾದಲ್ಲಿರಬಹುದು!

ಇದೇ ವೇಳೆ ಪ್ರಧಾನಿ ಮಂತ್ರಿ ಅನ್ವರ್ ಇಬ್ರಾಹಿಂ " ಸಮಾಜದ ಬಗ್ಗೆ ನಾವು ಮಾಡಿದ ಚರ್ಚೆ ರಜನಿಯ ಭವಿಷ್ಯದ ಸಿನಿಮಾಗಳಲ್ಲಿ ಇರುವ ಸಾಧ್ಯತೆಯಿದೆ. ಸಿನಿಮಾರಂಗದಲ್ಲಿ ಅವರ ಜರ್ನಿ ಮುಂದುವರೆಯಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ" ಎಂದು ಮಲೇಷ್ಯಾ ಪ್ರಧಾನಿ ಹೇಳಿದ್ದಾರೆ. ಈ ಮಧ್ಯೆ ಇಬ್ಬರ ಭೇಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಕುತೂಹಲದಿಂದ ನೋಡಲಾಗುತ್ತಿದೆ.

ರಜನಿ 171ನೇ ಸಿನಿಮಾ ಘೋಷಣೆ

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ 650 ಕೋಟಿ ರೂಪಾಯಿ ಲೂಟಿ ಮಾಡಿದೆ. ಇದಾದ ಬಳಿಕ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ 'ಲಾಲ್ ಸಲಾಂ' ಸಿನಿಮಾ ಬಿಡುಗಡೆಯಾಗಬೇಕಿದೆ. ಜೈ ಭೀಮ್ ನಿರ್ದೇಶಕ ಜ್ಞಾನವೇಲು ಸಿನಿಮಾ ಒಪ್ಪಿಕೊಂಡಿದ್ದಾರೆ. ಹಾಗೇ ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿರುವ 171ನೇ ಸಿನಿಮಾ ಕೂಡ ಅನೌನ್ಸ್ ಆಗಿದೆ.

More from Filmibeat

English summary
Superstar Rajinikanth met Malaysia Prime Minster Anwar Ibrahim
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X