Coolie Teaser: ರಜನಿ 'ಕೂಲಿ' ಟೀಸರ್ ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ವೀವ್ಸ್ ಸಿಕ್ಕಿದೆ?
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 171ನೇ ಸಿನಿಮಾದ ಬಹುನಿರೀಕ್ಷಿತ ಟೀಸರ್ ರಿಲೀಸ್ ಆಗಿದೆ. 'ಜೈಲರ್' ಬಳಿಕ ಯಶಸ್ಸಿನ ಹೆಜ್ಜೆ ಇಟ್ಟಿರುವ ತಲೈವಾಗೆ ಕಾಲಿವುಡ್‌ನ ಡೈನಾಮಿಕ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಷ್ಟು ದಿನ ಟೈಟಲ್ ಟೀಸರ್‌ಗೆ ಕಾದು ಕೂತಿದ್ದರು ಥ್ರಿಲ್ ಆಗಿದ್ದಾರೆ.
ರಜನಿಯ 'ಕೂಲಿ' ಟೀಸರ್ ಕೇವಲ ತಮಿಳಿನಲ್ಲಷ್ಟೇ ಅಲ್ಲ. ನಾಲ್ಕು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ನಾಲ್ಕು ಭಾಷೆಯಲ್ಲೂ ಏಕಕಾಲಕ್ಕೆ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮಲಯಾಳಂ ಮಾತ್ರ ಮಿಸ್ ಆಗಿದೆ.

'ಕೂಲಿ' ನಾಲ್ಕು ಭಾಷೆಯ ಸಿನಿಮಾಗಿದ್ದರಿಂದ ನಿರೀಕ್ಷೆಗಳು ನಾಲ್ಕು ಪಟ್ಟು ಹೆಚ್ಚಾಗಿದೆ. ಇದರೊಂದಿಗೆ ಲೋಕೇಶ್ ಕನಕರಾಜ್ ನಾಲ್ಕು ಭಾಷೆಯಿಂದಲೂ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಅದಕ್ಕೂ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ನಾಲ್ಕು ಭಾಷೆಯ ಟೀಸರ್‌ಗೆ ಹೇಗಿದೆ ರೆಸ್ಪಾನ್ಸ್? ಸಿಕ್ಕಿರೋ ವೀವ್ಸ್ ಎಷ್ಟು? ತಿಳಿಯಲು ಮುಂದೆ ಓದಿ..
'ಕೂಲಿ' ತಮಿಳು ಟೀಸರ್
ರಜನಿಕಾಂತ್ ಫ್ಯಾನ್ಸ್‌ಗೆ 'ಕೂಲಿ' ಟೀಸರ್ ಹಬ್ಬದ ವಾತಾವರಣವನ್ನೇ ಸೃಷ್ಟಿಸಿದೆ. 'ಜೈಲರ್' ನೋಡಿ ಹುಚ್ಚೆದ್ದು ಕುಣಿದವರಿಗೆ 'ಲಾಲ್ ಸಲಾಂ' ನಿರಾಸೆಯನ್ನು ಉಂಟು ಮಾಡಿತ್ತು. ಆದ್ರೀಗ 'ಕೂಲಿ'ಯಲ್ಲಿ ರಜನಿಯ ಲುಕ್, ಸ್ಟೈಲ್, ಎಂಟ್ರಿಗೆ ಫ್ಯಾನ್ಸ್ ಮನಸೋತಿದ್ದಾರೆ. ಇದಕ್ಕೆ ಸಾಕ್ಷಿ ಅಂದ್ರೆ, ಟೀಸರ್‌ಗೆ ಸಿಕ್ಕಿರೋ ವೀವ್ಸ್. ಯೂಟ್ಯೂಬ್ ಬಿಡುಗಡೆಯಾಗಿರೋ 'ಕೂಲಿ'ಯ ತಮಿಳು ಟೀಸರ್‌ಗೆ ಕೇವಲ ನಾಲ್ಕು ಗಂಟೆಗಳಲ್ಲಿ 2.5 ಮಿಲಿಯನ್ ವೀವ್ಸ್ ಸಿಕ್ಕಿದೆ.

'ಕೂಲಿ' ಕನ್ನಡ ಟೀಸರ್
'ಜೈಲರ್'ಗೆ ಕರ್ನಾಟಕದಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಸುಮಾರು 30 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹೀಗಾಗಿ 'ಕೂಲಿ'ಯನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡುವುದಕ್ಕೆ ತಂಡ ನಿರ್ಧರಿಸಿದಂತಿದೆ. ಕನ್ನಡಿಗರಿಗೂ ಟೀಸರ್ ಏನೋ ಹಿಡಿಸಿದೆ. ಆದರೆ, ರಜನಿ ಕನ್ನಡದಲ್ಲೂ ಡಬ್ ಮಾಡಿಲ್ಲ ಅನ್ನೋ ಬೇಸರನೂ ಇದೆ. ಒಂದ್ಮೇಲೆ ಈ ರಜನಿ ಕನ್ನಡದಲ್ಲಿಯೇ ಡೈಲಾಗ್ ಬಿಟ್ಟಿದ್ದರೆ, ಯೂಟ್ಯೂಬ್‌ನಲ್ಲಿ ಚಿಂದಿ ಉಡಾಯಿಸಿಬಿಡುತ್ತಿತ್ತು. ಸದ್ಯ 'ಕೂಲಿ' ಕನ್ನಡ ಟೀಸರ್ ರಿಲೀಸ್ ಆದ ನಾಲ್ಕು ಗಂಟೆಗಳಲ್ಲಿ 27 ಸಾವಿರ ವೀವ್ಸ್ ಪಡೆದುಕೊಂಡಿತ್ತು.
'ಕೂಲಿ' ತೆಲುಗು ಟೀಸರ್
ಇನ್ನು 'ಕೂಲಿ' ತೆಲುಗು ಟೀಸರ್‌ಗೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು ವರ್ಷನ್ ನೋಡಿ ತೆಲುಗು ಫ್ಯಾನ್ಸ್ ಇಷ್ಟ ಪಟ್ಟಿದ್ದಾರೆ. ಟೀಸರ್ ರಿಲೀಸ್ ಆದ ಕೇವಲ 4 ಗಂಟೆಗಳಲ್ಲಿ ತೆಲುಗು ವರ್ಷನ್‌ಗೆ 4 ಲಕ್ಷದ 89 ಸಾವಿರ ವೀವ್ಸ್ ಸಿಕ್ಕಿದೆ.
'ಕೂಲಿ' ಹಿಂದಿ ಟೀಸರ್
ರಜನಿಕಾಂತ್‌ಗೆ ಹಿಂದಿ ಚಿತ್ರರಂಗ ಹೊಸತೇನಲ್ಲ. ಹಿಂದಿ ಭಾಷೆಯಲ್ಲೂ ರಜನಿ ನಟಿಸಿದ್ದಾರೆ. ಜೊತೆಗೆ 'ರೋಬೊ', '2.O','ದರ್ಬಾರ್', 'ಕಾಲ' ಅಂತಹ ಸಿನಿಮಾಗಳು ಹಿಂದಿಯಲ್ಲೂ ತೆರೆಕಂಡಿವೆ. ಜೊತೆಗೆ ಲೋಕೇಶ್ ಕನಕರಾಜ್ ಡೈರೆಕ್ಷನ್ ಆಗಿರುವುದರಿಂದ 'ಕೂಲಿ' ಬಗ್ಗೆ ಹಿಂದಿ ಬೆಲ್ಟ್‌ನಲ್ಲೂ ಕುತೂಹಲವಿದೆ. 'ಕೂಲಿ' ಹಿಂದಿ ವರ್ಷನ್‌ಗೆ ಬಿಡುಗಡೆಯಾದ ನಾಲ್ಕು ಗಂಟೆಗಳಲ್ಲಿ 1 ಲಕ್ಷದ 19 ಸಾವಿರ ವೀವ್ಸ್ ಪಡೆದುಕೊಂಡಿದೆ.


Click it and Unblock the Notifications











